ಪ್ರವೇಶದ್ವಾರ:ವಿಜ್ಞಾನ/ಪೀಠಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ವಿಜ್ಞಾನವು, ನಾವು ಇಂದು ಜ್ಞಾನದ ಒಂದು ಭಾಗವಾಗಿ ಪರಿಗಣಿಸುವ ಶಾಸ್ತ್ರದ ಆಕಾರದಲ್ಲಿ ತುಂಬ ಹೊಸದು, ಕೇವಲ ಕೆಲವು ನೂರು ವರ್ಷ ಹಳೆಯದು. ನಮಗೆ ತಿಳಿದಿರುವ ವಿಜ್ಞಾನವು ನಮ್ಮ ದೈನಂದಿನ ಜೀವನದ ಸಂಗತಿಗಳು ಮತ್ತು ವಿವರಣೆಗಳಿಗೆ ಸಂಬಂಧಿಸಿದೆ. ಯಾವ ವಿಧದಲ್ಲಿ ವಿಜ್ಞಾನ ಒಂದು ಪ್ರಕ್ರಿಯೆ ಆಗಿದೆ ಮತ್ತು ಹೇಗೆ ಅದು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಬೇಕಾದ ಒಂದು ಅಧ್ಯಯನದ ವಿಷಯವಾಗಿದೆ ಎಂದು ಪರಿಶೀಲಿಸುವ ಅಗತ್ಯವಿದೆ. ವಿಜ್ಞಾನವು ವಿಭಿನ್ನವಾದ ಒಂದು ಸಾಹಸಯಾತ್ರೆಯಾಗಲು ಕಾರಣವಾದ ವ್ಯಾಸಂಗ ಮತ್ತು ಅಭ್ಯಾಸದ ಆ ಅಂಶಗಳು ಯಾವುವು? ವಿಜ್ಞಾನದ ಅಭ್ಯಾಸದ ಮೇಲೆ ಪ್ರಭಾವ ಬೀರುವ ಸಾಮಾಜಿಕ ಕ್ರಿಯಾ-ಶಾಸ್ತ್ರಗಳು ಯಾವುವು? ವಿಜ್ಞಾನದ ಮಿತಿಗಳೇನು? ಈ ಪ್ರಶ್ನೆಗಳನ್ನು ಒಬ್ಬ ವಿಜ್ಞಾನದ ವಿದ್ಯಾರ್ಥಿಯು ಪರಿಗಣಿಸಬೇಕಾಗುತ್ತದೆ. ಹಲವು ಬಾರಿ ವಿಜ್ಞಾನವೆಂದರೆ ವಿಜ್ಞಾನವನ್ನು ಒಂದು ವಿಷಯವನ್ನಾಗಿ ಕಲಿಯುವುದೆಂದು ತಿಳಿಯಲಾಗುತ್ತದೆ ಹಾಗೂ ಇದು ವಿಜ್ಞಾನದ ಕಲಿಕೆ, ಬೋಧನೆ ಹಾಗೂ ವೈಜ್ಞಾನಿಕ ಚಿಂತನೆಯನ್ನು ಅಭಿವೃದ್ಧಿಪಡಿಸಲು ಮತ್ತು ವಿಜ್ಞಾನವನ್ನು ರೂಢಿಗತಗೊಳಿಸಲು ವಿದ್ಯಾರ್ಥಿಯನ್ನು ತಯಾರಿಸಲು ಅಳವಡಿಸಬೇಕಾದ ಶಿಕ್ಷಣಶಾಸ್ತ್ರವನ್ನು ಒಳಗೊಂಡಿರುತ್ತದೆ. ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಎರಡು ಕ್ಷೇತ್ರಗಳಲ್ಲಿ ಸಂಪನ್ಮೂಲಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹಂಚಿಕೊಳ್ಳಲು ಇದು ಒಂದು ಪ್ರವೇಶದ್ವಾರವಾಗಿದೆ.