ಮಾಡ್ಯೂಲ್‌-೧-ಪರಿಚಯದ ಹೊಸ ಹೆಜ್ಜೆ ಭಾಗ-೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಾರಾಂಶ

ಈ ಮಾಡ್ಯೂಲ್‌ ಅನ್ನು ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಲವಲವಿಕೆಯ ಚಟುವಟಿಕೆಗಳು ಅವರಿಗೆ ನಮ್ಮ ಕಾರ್ಯಕ್ರಮದ ಮೇಲೆ ಉತ್ಸುಕತೆ ಮೂಡುವಂತೆ ಮಾಡಲು ಸಹಕರಿಸುತ್ತವೆ.

ಊಹೆಗಳು

1) ಎಲ್ಲಾ ಮಾಡ್ಯೂಲ್‌ಗಳಿಗೆ ಸಾಮಾನ್ಯ ಕಾರಣಗಳು

1) ಹಿಂದಿನ ತರಗತಿಯಲ್ಲಿ ಶಿಕ್ಷಕರು ಶಿಕ್ಷಿಸಿದ್ದರೆ ಕಿಶೋರಿಯರು ಸಪ್ಪೆಯಾಗಿರಬಹುದು.

2) ಅವರಿಗೆ ನಿಶ್ಯಕ್ತಿ ಇರಬಹುದು (ತಿಂಡಿ ತಿನ್ನದೆ ಬಂದಿರಬಹುದು , ಅನಾರೋಗ್ಯ, ಮುಟ್ಟಾಗಿರಬಹುದು)

2) ಒಟ್ಟು ಸಮಯ - ೮೦ ನಿಮಿಷಗಳು

3) ಒಟ್ಟು ಕಿಶೋರಿಯರ ಸಂಖ್ಯೆ - ೩೬

4) ಭಾಷೆ

1) ಬೋಧನಾ ಮಾಧ್ಯಮ – ಕನ್ನಡ

2) ಕಿಶೋರಿಯರು ವಿವಿಧ ಭಾಷಾ ಹಿನ್ನಲೆಗಳಿಂದ ಬಂದಿರಬಹುದು. ತೆಲುಗು, ತಮಿಳು, ಉರ್ದು ಇತ್ಯಾದಿ.

5) ಕಿಶೋರಿಯರು ಬಡತನದ ಕೆಳಗಿನ ಅಥವಾ ಮೇಲಿನ ರೇಖೆಗಳಿಗೆ ಸೇರಿರುವವರಿರಬಹುದು (BPL or APL).

6) ಕೆಲವು ಕಿಶೋರಿಯರು :  

1) ಏಕ ಪೋಷಕ ಕುಟುಂಬಗಳಿಂದ ಬಂದಿರಬಹುದು

2) ಋತುಕಾಲಿಕ ವಲಸಿಗರ ಕುಟುಂಬಗಳಿಂದ ಬಂದಿರಬಹುದು.

3) ಅಮ್ಮ ಅಥವಾ ಅಪ್ಪ ವಿವಾಹೇತರ ಸಂಬಂಧವನ್ನು ಹೊಂದಿರಬಹುದು. ಇದರಿಂದ ಕಿಶೋರಿಯರಿಗೆ ಮುಜುಗರ ಹಾಗು ಕೀಳರಿಮೆ ಇರಬಹುದು. ಹಾಗಾಗಿ ಅವರು ತಮ್ಮ ಕೌಟುಂಬಿಕ ವಿಷಯಗಳನ್ನು ಮಾತಾಡಲು ಹಿಂಜರಿಯಬಹುದು (ಈ ವಿಷಯದ ಬಗ್ಗೆ ಒಬ್ಬರಿಗಿಂತ ಹೆಚ್ಚು ಶಾಲಾ ಮುಖ್ಯೋಪಾಧ್ಯಾಯರು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಹಂಚಿಕೊಂಡಿದ್ದಾರೆ).

4) ಅಮ್ಮ ಅಥವಾ ಅಪ್ಪ ಮಾಡುವ ವೃತ್ತಿಯ ಬಗ್ಗೆ ನಾಚಿಕೆ ಇರಬಹುದು.

7) ಕೆಲವಷ್ಟು ಕಿಶೋರಿಯರು ಮನೆಯಲ್ಲಿ/ಹೊರಗೆ ಹಲವು ರೀತಿಯ ಶೋಷಣೆಗಳಿಗೆ ಒಳಗಾಗುತ್ತಿರಬಹುದು.

8) ಕೆಲವು ಕಿಶೋರಿಯರು ಶಾಲೆಗೆ ಬರುವ ಮುನ್ನ ಮನೆಯ ಆರ್ಥಿಕ ಪರಿಸ್ಥಿತಿಗೆ ಸಹಾಯ ಮಾಡಲು ವಿವಿಧ ವೃತ್ತಿಗಳನ್ನು ಮಾಡುತ್ತಿರಬಹುದು  ಅಥವಾ ಅವರ ಅಪ್ಪ ಅಮ್ಮಂದಿರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿರಬಹುದು.

9) ಶಾಲೆಗೆ ಕಿಶೋರಿಯರು ನಡೆದು/ಬಸ್ಸಿನಲ್ಲಿ/ಪೋಷಕರ ಜೊತೆ ದ್ವಿಚಕ್ರ ವಾಹನಗಳಲ್ಲಿ ಬರಬಹುದು.    ಅದರಿಂದ ನಮ್ಮ ಚರ್ಚೆಯ ಮೇಲೆ ಪರಿಣಾಮ ಬೀರಬಹುದು.

10) ಹಿಂದಿನ ತರಗತಿಯ ಒಳ್ಳೆಯ ಪಾಠ/ಅನುಭವ ಕಿಶೋರಿಯರ ಉತ್ಸಾಹ ಹೆಚ್ಚಿಸುವಂತೆ ಮಾಡಬಹುದು.

11) ಬಸ್ಸಿನ ಸಮಸ್ಯೆಯಿಂದ ಕೆಲವು ಕಿಶೋರಿಯರು ಶಾಲೆಗೆ ತಡವಾಗಿ ಬರಬಹುದು, ನಮ್ಮ ತರಗತಿಯೆ ಮೊದಲ ತರಗತಿ ಆಗಿರಬಹುದು (ಗಂಗಾ ಮೇಡಮ್‌ರವರ ಹಂಚಿಕೆಯ ಪ್ರಕಾರ)

12) ಹಿಂದಿನ ತರಗತಿಯಲ್ಲಿ ಕಹಿ ಅನುಭವವಾಗಿರುವುದರಿಂದ ಕಿಶೋರಿಯರು ನಿರುತ್ಸಾಹಿಗಳಾಗಿರಬಹುದು.

13) ಕಿಶೋರಿಯರ ವಿಭಿನ್ನ ಕಲಿಕಾ ಶೈಲಿಗಳ ಬಗ್ಗೆ ನಮ್ಮ ಗಮನವಿರಬೇಕು.

1) ನ್ಯೂನ್ಯತೆಗಳು - ಭಾಷೆಯನ್ನು ಬರೆಯಲು, ಓದಲು ಬರುವುದಿಲ್ಲ ಅಥವಾ ಕಲಿಕಾ ತೊಂದರೆ.

2) ಪೂರಕ ಅಂಶಗಳು - ಭಾಷಾ ಗ್ರಹಿಕೆ, ತಂತ್ರಜ್ಞಾನದ ಒಲವು, ಸೃಜನಶೀಲರು, ಉತ್ಸುಕ ಕಿಶೋರಿಯರು.

14) ಆಂಗ್ಲ ಮಾಧ್ಯಮವಾದ್ದರಿಂದ ಅವರಿಗೆ ಒತ್ತಡ ಹೆಚ್ಚಿರಬಹುದು. ಇಲ್ಲಿ ಪೋಷಕರ ಭಾಗವಹಿಸುವಿಕೆ ಹೆಚ್ಚಿರಬಹುದು.

15) ಆಂಗ್ಲ ಮಾಧ್ಯಮದಲ್ಲಿ ಇದ್ದೇವೆ ಎಂಬ ಹೆಮ್ಮೆ ಇರಬಹುದು.

16) ಅವರಿಗೆ ನಮ್ಮ ಮುಖ ಪರಿಚಯವಿರಬಹುದು.

17) ಬೇರೆ ಶಾಲೆಗಳ ಅನುಭವದ ಆಧಾರದ ಮೇಲೆ ಹೇಳುವುದಾದರೆ ಇಲ್ಲಿ ಗೈರು ಹಾಜರಿಗಳು ಹೆಚ್ಚು/ಕಡಿಮೆ ಇರಬಹುದು.

18) ಈಗಾಗಲೇ ಶೈಕ್ಷಣಿಕ ವರ್ಷ ಅರ್ಧ ಮುಗಿದಿರುವುದರಿಂದ ಅವರಿಗೆ ಪರಸ್ಪರ ಪರಿಚಯ ಚೆನ್ನಾಗಿರಬಹುದು, ಬೇರೆ ಬೇರೆ ಶಾಲೆಗಳಿಂದ ಬಂದಿರುವವರ ನಡುವೆ ಒಳ್ಳೆಯ ಬಾಂಧವ್ಯವಿರಬಹುದು.  

ಉದ್ದೇಶಗಳು

1. ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು.

2. ತಂತ್ರಜ್ಞಾನದ ಬಗ್ಗೆ ಆಸಕ್ತರನ್ನಾಗಿಸುವುದು ಹಾಗು ಅದರ ಸುತ್ತಲ ಕ್ಲಿಷ್ಟಕರ ಚಿತ್ರಣವನ್ನು ಹೋಗಲಾಡಿಸಿ ಸರಳಗೊಳಿಸುವುದು.

3. ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು.

ಪ್ರಕ್ರಿಯೆ

ನಮಸ್ಕಾರ ಎಂದು ಹೇಳುತ್ತಾ ಮಾತುಕಥೆಯನ್ನು ಆರಂಭಿಸುತ್ತೇವೆ. ತಂಡದ ಪರಿಚಯ ಮಾಡಿಕೊಳ್ಳುತ್ತೇವೆ. ೧೦ ನಿಮಿಷಗಳು

ಕಟ್ಟುಪಾಡುಗಳನ್ನು ಹೇಳುತ್ತೇವೆ. ೧೦ ನಿಮಿಷಗಳು

ಒಬ್ಬ ಫೆಸಿಲಿಟೇಟರ್‌ ಕಿಶೋರಿಯರ ಪರಿಚಯದ ಚಟುವಟಿಕೆಯನ್ನು ಮಾಡುತ್ತಾರೆ.  ಈ ಚಟುವಟಿಕೆಯಲ್ಲಿ ಕಿಶೋರಿಯರು  ತಮ್ಮ ಬಲಭಾಗಕ್ಕೆ ಇರುವವರ ಹೆಸರು, ಅವರ ನೆಚ್ಚಿನ ಹೀರೋ, ನೆಚ್ಚಿನ ಅಡಿಗೆ, ಇಷ್ಟದ ಆಟ ಯಾವುದು? ಎಂಬ ಪ್ರಶ್ನೆಗಳ ಮೂಲಕ ಪರಿಚಯ ಮಾಡಿಕೊಳ್ಳುತ್ತಾರೆ.

ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯ.  ಇದು ಮಾಮೂಲಿ ಪಠ್ಯ ವಿಷಯಗಳ ತರಗತಿಯಲ್ಲ ಎಂದು ತಿಳಿಸುವುದು

ಇದಾದ ನಂತರ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಉತ್ತರಿಸಿ ನಮ್ಮ ಮಾತುಕತೆಯನ್ನು ಮುಗಿಸುತ್ತೇವೆ. ೨೦ ನಿಮಿಷಗಳು

ಬೇಕಾದ ಸಂಪನ್ಮೂಲಗಳು

◦ ಕ್ಯಾಮೆರ ಹಾಗು ಟ್ರೈಪಾಡ್‌ 

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು - ೨

ಒಟ್ಟು ಸಮಯ

೪೦ ನಿಮಿಷಗಳು

ಇನ್‌ಪುಟ್‌ಗಳು

• ಡಿಜಿಟಲ್‌ ಕಥೆ