ರಚನಾ ವಿಜ್ಞಾನ 9 ಪಾಠ ಉಷ್ಣ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪಾಠ - ಉಷ್ಣ

I. ಕಲಿಕಾಂಶಗಳು / ಪರಿಕಲ್ಪನೆಗಳು

1) ಉಷ್ಣದ ಪರಿಕಲ್ಪನೆ

2) ಉಷ್ಣದ ಸ್ವಭಾವ

3) ಉಷ್ಣದಿಂದಾಗುವ ವ್ಯಾಕೋಚನ ಮತ್ತು ಅದರ ವಿಧಗಳು

4) ಘನದ ವ್ಯಾಕೋಚನೆಯ ಅನ್ವಯಗಳು.

5) ರೇಖೀಯ ವ್ಯಾಕೋಚನೆಯ ಸಹಾಯಾಂಕದ ಪರಿಕಲ್ಪನೆ

6) ವಿಶಿಷ್ಟೋಷ್ಣದ ವ್ಯಾಖ್ಯೆ

7) ನೀರಿನ ವಿಶಿಷ್ಟೋಷ್ಣ ಹೆಚ್ಚಾಗಿರುವುದರ ಪ್ರಯೋಜನಗಳು

8) ವಿಶಿಷ್ಟೋಷ್ಣಕ್ಕೆ ಸಂಬಂಧಿಸಿದ ಸರಳ ಲೆಕ್ಕಗಳು.

9) ದ್ರವದ ಗುಪೆÇ್ತೀಷ್ಣ ಹಾಗೂ ಆವೀಕರಣ ಗುಪೆÇ್ತೀಷ್ಣದ ವ್ಯಾಖ್ಯೆ



II. ಮನನ ಮಾಡಿಕೊಳ್ಳಲೇಬೇಕಾದ ಅಂಶಗಳು

1) ಉಷ್ಣದ ಅಂತರಾಷ್ಟ್ರೀಯ ಏಕಮಾನದ ಹೆಸರು.

2) ಘನಗಳಲ್ಲಿ ಕಂಡುಬರಬಹುದಾದ ಉಷ್ಣ ವ್ಯಾಕೋಚನಗಳು

3) ಉಷ್ಣ ನೀಡಿಕೆಯಿಂದ ವಸ್ತುವಿನಲ್ಲಾಗುವ ತಾಪ ಏರಿಕೆ ಯಾವ ಯಾವ ಅಂಶಗಳನ್ನೊಳಗೊಂಡಿದೆ.

4) ಉಷ್ಣ ಸಂರಕ್ಷಣೆಯ ನಿಯಮ.

5) ವಿಶಿಷ್ಟೋಷ್ಣಕ್ಕಿರುವ ಸೂತ್ರ

6) ತಾಪದಲ್ಲಿ ಉಂಟಾಗುವ ಬದಲಾವಣೆಯ ವಸ್ತು ಗಳಿಸಿದ ಅಥವಾ ಕಳೆದುಕೊಂಡ ಉಷ್ಣ ಪರಿಮಾಣಕ್ಕೆ ನೇರ ಅನುಪಾತದಲ್ಲಿಯೂ, ವಸ್ತುವಿನ ರಾಶಿಗೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ.

7) ಗುಪೆÇ್ತೀಷ್ಣದ ಏಕಮಾನ.

8) ದ್ರವ್ಯ ಗುಪೆÇ್ತೀಷ್ಣ ಮತ್ತು ಆವೀ ಗುಪೆÇ್ತೀಷ್ಣದ ವಿವರಣೆ

9) ಆವೀಕರಣ ಮತ್ತು ಕುದಿಯುವಿಕೆಗಿರುವ ವ್ಯತ್ಯಾಸಗಳು

10) ಗುಪೆÇ್ತೀಷ್ಣದ ಅನ್ವಯ.

mಣ

S =



III. ಪಾಠದ ಪೂರ್ವ ಸಿದ್ಧತೆ

1) ಘನದ ವ್ಯಾಕೋಚನೆಯ ಪ್ರಾತ್ಯಕ್ಷಿಕೆ ನೀಡಲು ಬೇಕಾದ ಸಾಮಗ್ರಿಗಳಾದ ಬಿಗಿಯಾದ ಮುಚ್ಚಳವಿರುವ ಬಾಟಲ್ ಮತ್ತು ಬಿಸಿನೀರನ್ನು ಸಂಗ್ರಹಿಸುವುದು.

2) ಉಷ್ಣವನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಗೊಳಿಸುವುದನ್ನು ಪ್ರತಿನಿಧಿಸುವ ಚಿತ್ರಗಳನ್ನು ಸಂಗ್ರಹಿಸುವುದು (ಹಬೆ ಎಂಜಿನ್, ಪೆಟ್ರೋಲ್ ಎಂಜಿನ್ ಮುಂತಾದವು)

3) ಅನಿಲಗಳಲ್ಲಿನ ವ್ಯಾಕೋಚನವನ್ನು ಪ್ರದರ್ಶಿಸಲು ಬೇಕಾದ ವಸ್ತುಗಳು- ಒಂದು ಗಾಜಿನ ಬಾಟಲ್, ಬಲೂನ್ ಮತ್ತು ಬಿಸಿನೀರನ್ನು ಸಂಗ್ರಹಿಸುವುದು.


Iಗಿ. ಕಲಿಕೆಯನ್ನು ಅನುಕೂಲಿಸುವ ವಿಧಾನ :

ಗುಂಪು ಚಟುವಟಿಕೆ

1) ಮಕ್ಕಳನ್ನು ಸೂಕ್ತ ಗುಂಪುಗಳಾಗಿ ವಿಂಗಡಿಸಿ, ಪ್ರತಿಗುಂಪಿಗೆ ಒಂದೊಂದು ಪರಿಕಲ್ಪನೆಗಳನ್ನು ಕೊಡುವುದು, ಮತ್ತು ಅದನ್ನು ಗುಂಪಿನಲ್ಲಿ ಚರ್ಚೆ ಮಾಡಲು ಹೇಳುವುದು. ನಂತರ ಕಲಿಕಾಂಶಗಳನ್ನೊಳಗೊಂಡ ಒಂದು ಚಾರ್ಟ್ ತಯಾರಿಸಲು ಹೇಳುವುದು.

ಪರಿಕಲ್ಪನೆಗಳು : ಘನ ವ್ಯಾಕೋಚನ, ದ್ರವ್ಯ ವ್ಯಾಕೋಚನ, ನೀರಿನ ಗರಿಷ್ಠ ವಿಶಿಷ್ಟೋಷ್ಣದ ಪರಿಣಾಮ.

ಪ್ರಯೋಗ ಮತ್ತು ವಿಶ್ಲೇಷಣೆ

ಬೇಕಾಗುವ ಸಾಮಗ್ರಿಗಳು : ಒಂದು ಪ್ರನಾಳ, ಬರ್ಫ ತುಂಡುಗಳು, ತಾಪಮಾಪಕ

ವಿಧಾನ : ಪ್ರನಾಳದಲ್ಲಿ ಬರ್ಫ ತುಂಡುಗಳನ್ನು ತುಂಬುವುದು. ಒಂದು ತಾಪಮಾಪಕದ ಸಹಾಯದಿಂದ, ಬರ್ಫದ ತಾಪವನ್ನು ಗುರುತಿಸಿಕೊಳ್ಳುವುದು.

ಪ್ರನಾಳವನ್ನು ನಿಧಾನವಾಗಿ ಕಾಯಿಸುವುದು ಹಾಗೂ ಬರ್ಫ್ ಕರಗಿ ನೀರಾಗಿ ಅದರ ತಾಪ 300ಅ ಆಗುವವರೆಗೂ, ಪ್ರತಿ ಅರ್ಧ ನಿಮಿಷಕ್ಕೆ ತಾಪವನ್ನು ಗುರುತಿಸಿಕೊಳ್ಳುವುದು.

ಈ ಮಾಹಿತಿಯಿಂದ ತಾಪ-ಕಾಲ ನಕ್ಷೆಯನ್ನು ತಯಾರಿಸಲು ಹೇಳುವುದು. (ಚಿತ್ರ 3.11 ಪುಟ ಸಂಖ್ಯೆ 51 ರಲ್ಲಿ ತೋರಿಸಿರುವಂತೆ) ನಕ್ಷೆಯ ಸಹಾಯದಿಂದ, ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಲು ಹೇಳುವುದು.


1) ನಕ್ಷೆಯ ಯಾವ ಭಾಗವು ಬರ್ಫ ದ್ರವಿಸುವಾಗಿನ ಸ್ಥಿತಿಯನ್ನು ಸೂಚಿಸುತ್ತದೆ.

2) ಬರ್ಫಕ್ಕೆ ಉಷ್ಣ ನೀಡಿಕೆ ಆಗುತ್ತಿದ್ದರೂ, ತಾಪ ಏರದಿರುವಿಕೆಯನ್ನು ಸೂಚಿಸುವ ನಕ್ಷೆ ಭಾಗವನ್ನು ಗುರುತಿಸಿ.

3) ಈ ಪ್ರಯೋಗದ ಕಲಿಕಾಂಶ ಏನು?


Iಗಿ. ಕಲಿಕಾ ಚಟುವಟಿಕೆಗಳು

ಪ್ರಾತ್ಯಕ್ಷಿಕ ವಿಧಾನ, ಗುಂಪು ಚಟುವಟಿಕೆ, ಪ್ರಯೋಗ ಮತ್ತು ವಿಶ್ಲೇಷಣೆ

ಗಿ. ಮೌಲ್ಯಮಾಪನ

1) ಉಷ್ಣ ವ್ಯಾಕೋಚನವನ್ನು ನಮ್ಮ ದಿನನಿತ್ಯ ಜೀವನದಲ್ಲಿ ಹೇಗೆ ಬಳಸಿಕೊಂಡಿದ್ದೇವೆ ಎಂಬುದನ್ನು ಎರಡು ಉದಾಹರಣೆಯ ಮೂಲಕ ವಿವರಿಸಿ.

2) ಉಷ್ಣಕ್ಕೆ ಕೆಲಸ ಮಾಡುವ ಸಾಮಥ್ರ್ಯವಿದೆಯೇ? ಇದನ್ನು ಉದಾಹರಣೆ ಮೂಲಕ ವಿವರಿಸಿ.

3) ರೇಖೀಯ ವ್ಯಾಕೋಚನ ಸಹಾಯಾಂಕದ ಮೌಲ್ಯವನ್ನು ತಿಳಿಯುವುದರಿಂದ ಏನು ಪ್ರಯೋಜನ? ಇದನ್ನು ಕಾರ್ಯತಃ ಎಲ್ಲಿ ಅನ್ವಯಿಸಬಹುದು?

4) ನೀರಿನ ಅಸಂಗತ ವ್ಯಾಕೋಚನ ಜಲಚರಗಳಿಗೆ ಒಂದು ವರ? ವಿವರಿಸಿ

5) ಕಾರಿನ ರೇಡಿಯೇಟರ್‍ನಲ್ಲಿ ನೀರನ್ನು ತಂಪುಕಾರಿಯಾಗಿ ಬಳಸುತ್ತಾರೆ ಏಕೆ?