ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩ ನೇ ಸಾಲು: ೩ ನೇ ಸಾಲು:     
=ಹಿನ್ನೆಲೆ/ಸಂದರ್ಭ=
 
=ಹಿನ್ನೆಲೆ/ಸಂದರ್ಭ=
 +
'ಮಲೆನಾಡಿನ ಚಿತ್ರಗಳು' ಕಥಾ ಸರಣಿಯ ಮುನ್ನುಡಿಯಿಂದ<br>
 +
ಒಂದು ದಿನ ಸಾಯಂಕಾಲ ನಾನು ಶ್ರೀಮಾನ್ ವೆಂಕಣ್ಣಯ್ಯನವರೊಡನೆ ಕುಕ್ಕನಹಳ್ಳಿ ಕರೆಯ ಮೇಲೆ ವಾಯು ವಿಹಾರಕ್ಕಾಗಿ ಹೋಗಿದ್ದಾಗ ಯಾವುದೋ ಮಾತು ಬಂದು ಮಲೆನಾಡಿನ ಕೆಲವು ಅನುಭವಗಳನ್ನು ಹೇಳತೊಡಗಿದೆ. ಜೊತೆಯಲ್ಲಿ ತೀ.ನಂ.ಶ್ರೀ., ಡಿ.ಎಲ್.ನ, ಮೊದಲಾದ ಮಿತ್ರರೂ ಇದ್ದರು. ನಾವೆಲ್ಲರೂ ಹುಲುಸಾಗಿ ಹಸುರು ಹೊಮ್ಮಿ ಬೈಗುಗೆಂಪಿನ ಬಿಸಿಲಿನಲ್ಲಿ ಸುಮನೋಹರವಾಗಿದ್ದ ಕೆರೆಯಂಚನ ಬಯಲಿನಲ್ಲಿ ಕುಳಿತಿದ್ದೆವು. ಮೆಲ್ಲೆಲರು ಸುಖದಾಯಕವಾಗಿ ತೀಡುತ್ತಿತ್ತು. ಬಹಳ ಹೊತ್ತು ಕತೆ ಹೇಳಿದೆ. ಅವರೂ ಸಾವಧಾನದಿಂಧ, ಅದಕ್ಕಿಂತಲೂ ಹೆಚ್ಚಾಗಿ ವಿಶ್ವಾಸದಿಂದ ಆಲಿಸಿದರು. ಎಲ್ಲ ಮುಗಿದ ಮೇಲೆ ವೆಂಕಣ್ಣಯ್ಯನವರು ಆ ಅನುಭವಗಳನ್ನು ಬರೆದರೆ ಚೆನ್ನಾಗಿರುತ್ತದೆ ಎಂದು ಸೂಚನೆ ಕೊಟ್ಟರು. ಚಿತ್ರಗಳನ್ನು ‘ಪ್ರಬುದ್ಧ ಕರ್ಣಾಟಕ’ದಲ್ಲಿ ಅಚ್ಚು ಹಾಕಿಸಬಹುದೆಂದೂ ಉತ್ತೇಜನ ಕೊಟ್ಟರು. ನಾನು ಒಪ್ಪಿಕೊಂಡು ಕೆಲವು ಚಿತ್ರಗಳನ್ನು ಬರೆದು ಅವರಿಗೆ ಓದಿದೆ. “ನೀವು ಬಾಯಲ್ಲಿ ಹೇಳುತ್ತಿದ್ದಾಗ ಇದ್ದ ಸ್ವಾರಸ್ಯ ಈ ಚಿತ್ರಗಳಲ್ಲಿ ಇಲ್ಲ” ಎಂದರು. ನನಗೂ ಹಾಗೆಯೆ ತೋರಿತು. ಸಜೀವವಾದ ವಾಣಿಯೂ ಮುಖ ನಯನ ಅಂಗಗಳ ಅಭಿನಯವೂ ಮಾಡುವ ಕೆಲಸವನ್ನು ನಿರ್ಜೀವವಾದ ಲೇಖಣಿ ಮಾಡಬಲ್ಲುದೆ? ಆದರೆ ಆಲಿಸುವವರಲ್ಲಿ ವಿಶ್ವಾಸವಿದ್ದರೆ ಮೃದಲ್ಲಿಯೂ ಶ್ವಾಸವಾಡುತ್ತದೆ!<br>
 +
ಕುವೆಂಪು ೧೯ – ೬ – ೭೭<br>
 +
ಮೈಸೂರು,<br>
 
'ಅನ್ನಕ್ಕಿಂತಲೂ ಅಭ್ಯಂಜನವೇ ಶ್ರೇಷ್ಠ' ಎನ್ನುವುದು ನಮ್ಮ ಹಿರಿಯರ ಧ್ಯೇಯೋಕ್ತಿಯಾಗಿತ್ತು. ಅಭ್ಯಂಜನ ಮಾಡಿ ಮಾಡಿ ದೇಹ ಸ್ವಲ್ಪ ಸ್ಥೂಲತೆಯ ಕಡೆಗೆ ಒಲೆದಿತ್ತು. ವಾರಕ್ಕೊಂದು ಅಭ್ಯಂಜನ ಮಾಡುತ್ತಿದ್ದರೆ ಅಮೃತತ್ವ ಲಭಿಸುವುದೆಂದು ಅವರು ತಿಳಿದಿದ್ದಂತೆ ತೋರುತ್ತದೆ.ಅಂತಹ ಒಂದು ವಿಷಯವನ್ನು ಕುವೆಂಪುರವರು ತಮ್ಮ ಲಲಿತ ಪ್ರಬಂಧದ ಒಂದು ಉದಾಹರಣೆಯೊಂದಿಗೆ ಸುಲಲಿತವಾಗಿ ವಿವರಿಸಿದದ್ದಾರೆ.