ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
d
+
=== ಉದ್ದೇಶ ===
 +
 
 +
* ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯಮಾಡಿ, ಅದರಲ್ಲಿ ಒಂದು ವರ್ಷವಿಡೀ ಪ್ರತಿವಾರ ನಾವು ಜೊತೆಯಾಗಿ ಕಲಿಯುವ /ಕಲಿಸುವ ಅವಕಾಶದ ಬಗ್ಗೆ  ಖುಷಿ ಮತ್ತು ಉತ್ಸಾಹ ಮೂಡುವಂತೆ ಮಾಡುವುದು.  
 +
* ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾತನಾಡುವುದು
 +
 
 +
=== ಪ್ರಕ್ರಿಯೆ ===
 +
ಕುಶಲೋಪರಿಯ ಮೂಲಕ ಮಾತುಕತೆಯನ್ನು ಶುರು ಮಾಡುವುದು.
 +
 
 +
ಹಿಮದಿನ ವಾರ ಬಂದಾಗ, ಏನು ಮಾಡಿದ್ವಿ ಎಂದು ಕೇಳುವುದು. ಏನೂ ಹೇಳಿಲ್ಲ ಅಂದರೆ ೪ ಗ್ರೂಪ್‌ ಮಾಡ್ಕೊಂಡ್ವಿ, ಆಮೇಲೆ ಒಂದೊಂದೇ ಗ್ರೂಪ್‌ ಬೇರೆ ಕ್ಲಾಸಿಗೆ ಹೋದ್ವಿ ಇತ್ಯಾದಿಯಾಗಿ prompt ಮಾಡುವುದು.
 +
 
 +
ಇವತ್ತಿನ ಸೆಶನ್‌ ಶುರು ಮಾಡೋದಕ್ಕಿಂತ ಮುಂಚೆ, ಒಂದಷ್ಟು ಕಟ್ಟುಪಾಡುಗಳನ್ನು ಮಾಡಿಕೊಳ್ಳೋಣ
 +
 
 +
೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
 +
 
 +
೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
 +
 
 +
೩. ಎಲ್ಲಾರೂ ಭಾಗವಹಿಸಬೇಕು
 +
 
 +
೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
 +
 
 +
೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
 +
 
 +
೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು '''10 ನಿಮಿಷ'''
 +
 
 +
ಇದಾದ ನಂತರ ನಮ್ಮ ಬಗ್ಗೆ ಈ ರೀತಿಯಾಗಿ ಹೇಳುವುದು.  
 +
 
 +
ನಾವು IT for Change ಅನ್ನೋ ಸಂಸ್ಥೆಯಿಂದ ಬಂದಿದೀವಿ. IT ಅಂದರೆ information technology  ಅಂದರೆ ಮಾಹಿತಿ ಸಂವಹನ ತಂತ್ರಜ್ಞಾನ. ಇದನ್ನ ಬಳಸಿಕೊಂಡು ನಾವು ಬೇರೆ ಬೇರೆ ಶಾಲೆಗಳಲ್ಲಿ, ಬೇರೆ ಬೇರೆ ಜಿಲ್ಲೆಗಳಲ್ಲಿ ನಿಮ್ಮ ವಯಸ್ಸಿನ ಹೆಣ್ಣುಮಕ್ಕಳ ಜೊತೆ ಕೆಲಸ ಮಾಡ್ತೀವಿ. ನಿಮಗೆ ಕೊಟ್ಟಿರೋ ಸ್ಟಿಕರ್‌ ಅಲ್ಲಿ ಹೊಸ ಹೆಜ್ಜೆ ಹೊಸ ದಿಶೆ ಅಂತ ಇದ್ಯಲ್ಲ. ಅದು ನಮ್ ಪ್ರಾಜೆಕ್ಟ್‌ ಹೆಸರು. ನಮ್ಮ ಬಗ್ಗೆ ಹೋಗ್ತಾ ಹೋಗ್ತಾ ಇನ್ನೂ ಜಾಸ್ತಿ ಗೊತ್ತಾಗ್ತಾ ಹೋಗುತ್ತೆ. ನಿಮ್ಮ ಶಾಲೆಗೆ ನಾವು ಪ್ರತೀ ವಾರ ಬಂದು ನಿಮ್ಮ ಜೊತೆ ಈಗ ಮಾಡಿದ್ವಲ್ಲ, ಆ ರೀತಿಯ ಚಟುವಟಿಕೆಗಳನ್ನು ಮಾಡಬಹುದ?
 +
 
 +
ಇದಾದ ನಂತರ, ಹಿಂದಿನ ವಾರ ರೆಕಾರ್ಡ್‌ ಮಾಡಿದ ಕಥೆಯನ್ನು ಕೇಳಿಸುವುದು. ಇದಕ್ಕೆ ಮ್ಯೂಸಿಕ್‌ ಎಡಿಟ್‌ ಅನ್ನು ಮೊದಲೇ ಮಾಡಿಕೊಂಡಿರುವುದು.
 +
 
 +
ಆಡಿಯೋ ಕೇಳಾದ ನಂತರ ಹೇಗನ್ಸ್ತು ಅಂತ ಕೇಳುವುದು..
 +
 
 +
* ಚೆನ್ನಾಗಿದೆ ಅನ್ನಬಹುದು
 +
* ನಮ್‌ voice ಕೇಳ್ಸ್ಕೊಂಡ್ವಿ ಅನ್ನಬಹುದು
 +
 
 +
ಇದೇ ರೀತಿ ನಾವು ಬೇರೆ ಬೇರೆ ರೀತಿಯಲ್ಲಿ ಹೊಸ ಹೊಸ ವಿಷಯಗಳನ್ನ ಕಲಿಯೋಣ. ಅದಕ್ಕೆ ನೀವು ರೆಡಿನ??
 +
 
 +
(ಸ್ವಲ್ಪ ಜೋಶ್‌ ಬರುವಂತೆ ಮಾಡುವುದು)
 +
 
 +
ಈಗ ಒಂದು activity ಮಾಡೋಣ. ಅದಿಕ್ಕೆ ೪ ಗುಂಪುಗಳನ್ನು ಮಾಡಿಕೊಳ್ಳೋಣ.
 +
 
 +
ಕಿಶೋರಿಯರನ್ನು ೪ ಗುಂಪುಗಳಾಗಿ ಮಾಡಿಕೊಳ್ಳಲು, ೪ ಬೇರೆ ಬೇರೆ ಪಕ್ಷಿಗಳ ಚಿತ್ರಗಳನ್ನ(ಗುಂಪು - 01 ಗುಬ್ಬಿ ಗುಂಪು - 02 ಕೋಗಿಲೆ ಗುಂಪು - 03 ಪಾರಿವಾಳ  ಗುಂಪು - 04 ಗಿಳಿ) ಬಾಕ್ಸಿನಲ್ಲಿ ಹಾಕಿ ಅವರ ಹತ್ತಿರ ಆರಿಸಿಕೊಂಡು ಅವರು ಅದನ್ನು ಬೇರೆಯವರ ಜೊತೆಗೆ  exchange ಮಾಡಿಕೊಳ್ಳುವ ಹಾಗಿಲ್ಲ ಎಂದು ಹೇಳುವುದು. ಅವರನ್ನು ಅವರಿಗೆ ಬಂದಿರುವ ಆಯಾ ಗುಂಪಿನಲ್ಲಿ ಆಯ್ದ ಜಾಗಗಳಲ್ಲಿ ಕುಳಿತುಕೊಳ್ಳಲು ಹೇಳುವುದು.
 +
 
 +
ಒಂದೊಂದು ಗುಂಪಿನಲ್ಲೂ ಒಬ್ಬ ಫೆಸಿಲಿಟೆಟರ್‌ ಇರಬೇಕು.   ಪ್ರತಿ ಗುಂಪಿಗೆ ೧ ಚಾರ್ಟ್‌ಶೀಟ್‌ ಮತ್ತು ಸ್ಕೆಚ್‌ ಪೆನ್‌ಗಳನ್ನು ಕೊಟ್ಟು ಈಗ ನಾನು ನಿಮಗೆ ಕೇಳುವ ಅಂಶಗಳನ್ನು ಎಲ್ಲರೂ ಹಂಚಿಕೊಳ್ಳಬೇಕು, ಇದು ನಿಮಗೆ ಗೊತ್ತಿಲ್ಲದೆ ಇರೋದೇನಲ್ಲ, ಹಿಂಜರಿಕೆ ಇಲ್ಲದೆ ಮಾತನಾಡಿ ಎಂದು ಹೇಳಿ,  ಈ ಕೆಳಗಿನ ಪ್ರಶ್ನೆ ಕೇಳಿ,
 +
 
 +
ಪ್ರಶ್ನೆ ೦೧: ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಅವರವರ ಮನೆಗಳಲ್ಲಿ ಬರುವ ಸವಾಲುಗಳು ಅಥವ ಸಮಸ್ಯೆಗಳು ಏನು? (ಅವರು ಮನೆಯ ಸಮಸ್ಯೆಗಳನ್ನು ಹೇಳದ ಹಾಗೆ, ಅವರ ‘ವಯಸ್ಸಿನಿಂದಾಗಿ’ ಬರುವ ಸವಾಲುಗಳನ್ನು ಹೇಳುವ ಹಾಗೆ ಫೆಸಿಲಿಟೇಟರ್ ನೋಡಿಕೊಳ್ಳಬೇಕು)
 +
 
 +
ಪ್ರತಿಯೊಬ್ಬರೂ ಇದಕ್ಕೆ ಉತ್ತರ ನೀಡುವ ಹಾಗೆ ಪ್ರೋಬ್ ಮಾಡಿ. ಅವರು ಹೇಳುವ ಉತ್ತರ ಮನೆಯ ಕಾಲಮ್ ನಲ್ಲಿ ಬರೆದುಕೊಳ್ಳಿ. (ಗಮನಿಸಿ: ಅವರು ಹಂಚಿಕೊಳ್ಳುವುದರ ಬಗ್ಗೆ ಹೆಚ್ಚಿನ ಫೋಕಸ್ ಇರಬೇಕು. ಬರೆಯುತ್ತಿರುವವರು ಎಲ್ಲರೂ ಹೇಳಿದ್ದನ್ನು ಬರೆಯಬೇಕು)                                                                                                                                                                                                                                                                                              '''೪೫ ನಿಮಿಷ'''
 +
 
 +
ಪ್ರಶ್ನೆ ೦೨: ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ನೀವು ಶಾಲೆಯಿಂದ ಊರಿಗೆ ಬಸ್‌ನಲ್ಲಿ ಹೋಗುವಾಗ, ಬೀದಿನಲ್ಲಿ ನಡ್ಕೊಂಡು ಹೋಗುವಾಗ (ನಡೆಯುವಾಗ, ಬಸ್ ಸ್ಟಾಪ್, ಬಸ್, ಮೆಟ್ರೋ, ಟೂ ವೀಲರ್ ಡ್ರಾಪ್ ಇತ್ಯಾದಿ) ಬರುವ ಸವಾಲುಗಳೇನು ? (ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ - ಮತ್ತೆ ಅವರ ಗಮನ ಯಾವ್ಯಾವುದೋ ಸಮಸ್ಯೆಗಳ ಕಡೆಗೆ ಹೋಗದಂತೆ, ಅವರ ‘ವಯಸ್ಸಿನ’ ಆಧಾರವಾಗಿ ಬರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವಂತೆ ನೋಡಿಕೊಳ್ಳಿ)
 +
 
 +
ಪ್ರಶ್ನೆ ೦೩: ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಶಾಲೆಯಲ್ಲಿ ಬರುವ ಸಮಸ್ಯೆಗಳೇನು? (ಶಾಲೆಯ ಸಮಸ್ಯೆಗಳನ್ನು ಹೇಳುವಾಗ ಹಿಂಜರಿಕೆ ಸಹಜವಾದದ್ದು. ಅವರಿಗೆ ‘ನಿಮ್ಮ ಹಂಚಿಕೆಯನ್ನು ನಾವು ಯಾವ ಶಿಕ್ಷಕರೊಂದಿಗೂ ಹಂಚಿಕೊಳ್ಳುವುದಿಲ್ಲ ಎನ್ನುವ ಭರವಸೆ ಮೂಡಿಸಬೇಕು ಹಾಗೆಯೇ ಶಾಲೆಯ ಸಮಸ್ಯೆಯಲ್ಲ, ಅವರ ‘ಶಾಲೆಯಲ್ಲಿ ಅವರ ವಯಸ್ಸಿನವರಿಗಾಗುವ ಸಮಸ್ಯೆ’ ಎನ್ನುವುದನ್ನು ಸ್ಪಷ್ಟಪಡಿಸಿ)  
 +
 
 +
ಇವುಗಳನ್ನು ಅವರಲ್ಲಿ ಯಾರಾ ಚೆನ್ನಾಗಿ ಬರೀತಾರೋ ಅವರಿಗೆ ಬರೆಯಲು ಹೇಳುವುದು. ಎಲ್ಲರೂ ಬರೆದಾದ ನಂತರ ಮುಂದಿನ ವಾರ ಸಿಗೋಣ ಎಂದು ಮಾತುಕತೆಯನ್ನು ಮುಗಿಸುವುದು.   '''೫ ನಿಮಿಷ'''
 +
 
 +
=== ಒಟ್ಟೂ ಸಮಯ ===
 +
6೦ ನಿಮಿಷಗಳು
 +
 
 +
=== ಒಟ್ಟೂ ಫೆಸಿಲಿಟೇಟರ್‌ಗಳು: ೪ ===
 +
 
 +
=== ಬೇಕಾಗಿರುವ ಸಂಪನ್ಮೂಲಗಳು ===
 +
 
 +
# ಕ್ಯಾಮೆರ
 +
# Tripod
 +
# ಚಾರ್ಟ್‌ ಶೀಟ್‌ಗಳು - 5
 +
# ಸ್ಕೆಚ್‌ ಪೆನ್‌ಗಳು
 +
# Speaker
 +
 
 +
=== ಇನ್‌ಪುಟ್‌ಗಳು ===
 +
Audio story
 +
 
 +
=== ಔಟ್‌ಪುಟ್‌ಗಳು ===
 +
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 +
[[ವರ್ಗ:ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚಾಮರಾಜಪೇಟೆ]]
೪೩೨

edits