ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಹೊಸ ಪುಟ: =13.ಕಲಿವಿನ ವಿಧಾನಗಳನ್ನು ಸಂಘಟಿಸಲು ಕೆಲವು ಉದಾಹರಣೆಗಳು = ಪ್ರಸ್ತುತ ಶಿಕ್ಷಣ...
=13.ಕಲಿವಿನ ವಿಧಾನಗಳನ್ನು ಸಂಘಟಿಸಲು ಕೆಲವು ಉದಾಹರಣೆಗಳು =
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಶು ಕೇಂದ್ರಿತ, ಚಟುವಟಿಕಾಧಾರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಈಗಾಗಲೇ ನಾವೆಲ್ಲರೂ ಅರ್ಥೈಸಿಕೊಂಡಿರುವಂತೆ ಕಂಠಪಾಠ ಕಲಿಕೆಯಿಂದ ಹೊರಬಂದು ಕಲಿಕಾಯನ್ನು ಆತನ ಸ್ವ ಪ್ರೇರಣೆಯೊಂದಿಗೆ ಕಲಿಕೆಗೆ ಸಿದ್ಧಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ, 18 ವಿಧಾನಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ:
* ಕಥಾ ನಿರೂಪಣಾ ವಿಧಾನ
* ಯೋಜನಾ ವಿಧಾನ
* ಪಾಠ ಅವಲೋಕನ ವಿಧಾನ
* ಚರ್ಚಾ ವಿಧಾನ
* ಸಮಸ್ಯಾ ಪರಿಹಾರ ವಿಧಾನ
* ಮೂಲಾಧಾರಿತ ವಿಧಾನ
* ಶಿಶು ಕೇಂದ್ರಿತ ವಿಧಾನ
* ಟಕ ಪದ್ಧತಿ
* ವೀಕ್ಷಣಾ ವಿಧಾನ
* ಹೊರ ಸಂಚಾರ ವಿಧಾನ
* ಪಾತ್ರಾಭಿನಯ ವಿಧಾನ
* ಕ್ಷೇತ್ರ ಅಧ್ಯಯನ ವಿಧಾನ
* ಪ್ರಯೋಗ ವಿಧಾನ
* ಕ್ರೀಡಾ ವಿಧಾನ
* ಪ್ರಶ್ನೋತ್ತರ ವಿಧಾನ
* ಸಂಶೋಧನಾ ವಿಧಾನ
* ಸಂದರ್ಶನ ವಿಧಾನ
* ವಿಶ್ಲೇಷಣಾತ್ಮಕ ವಿಧಾನ
ಶಿಕ್ಷಕರು ನಂದಿನ ಕಲಿಕಾಂಶದ ಸ್ವರೂಪವನ್ನು ಅರ್ಥೈಸಿಕೊಂಡು ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಬೇಕಾದಂತಹ ಅಗತ್ಯಗಳನ್ನು ಅನುಕೂಲಿಸಲು ಈ ಮೇಲಿನ ಕಲಿವಿನ ವಿಧಾನಗಳನ್ನು ತರಗತಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ಹಾಗೂ ಈ ವಿಧಾನಗಳು ಚಟುವಟಿಕೆ ಆಧಾರಿತವಾಗಿರಬೇಕು ಎಂಬುದನ್ನು ಶಿಕ್ಷಕರು ಮರೆಯುವಂತಿಲ್ಲ.
ಈ ಹಿನ್ನಲೆಯಲ್ಲಿ 9ನೇ ತರಗತಿ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ಎರಡು ಟಕಗಳನ್ನು ತೆಗೆದುಕೊಂಡು ಆರು ವಿಧದ ಕಲಿಕಾ ವಿಧಾನಗಳನ್ನು ಹೇಗೆ ಬಳಸಿಕೊಳಳಬಹುದು ಎಂಬ ಪರಿಕಲ್ಪನೆಯನ್ನು ಇಲ್ಲಿ ಉದಾಹರಣೆಯಾಗಿ ನೀಡಲಾಗಿದೆ. ಶಿಕ್ಷಕರು ಇದಕ್ಕಿಂತಲೂ ಇನ್ನು ಉತ್ತಮವಾದ ಚಟುವಟಿಕೆಗಳ ಮೂಲಕ ಕಲಿವನ್ನುಂಟುಮಾಡಲು ಅವಕಾಶವು ಇರುತ್ತದೆ ಎಂಬುದನ್ನು ಮುಂದೆ ನೀಡಲಾಗಿರುವ ಉದಾಹರಣೆಗಳೊಂದಿಗೆ ಶಿಕ್ಷಕರು ಗ್ರಹಿಸಬಹುದು.

ಕೆಲವು ಬೋಧನಾ ವಿಧಾನಗಳೊಂದಿಗೆ

ಪಾಠದ ಹೆಸರು : ನಮ್ಮ ರಾಜ್ಯ ಕರ್ನಾಟಕ

ಕಲಿಕಾಂಶ 1: `ಚರ್ಚಾ ವಿಧಾನ' ಪದ್ಧತಿ

ಕರ್ನಾಟಕ ರಾಜ್ಯದ ವೈಶಿಷ್ಟ್ಯತೆ

ಈ ವಿಷಯ ಜ್ಞಾನವನ್ನು ಮಕ್ಕಳು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಶಿಕ್ಷಕರು ಕಲಿಕಾ ಪರಿಸರವನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ. ಭಾರತದ ಭೂಪಟವನ್ನು ತರಗತಿಯಲ್ಲಿ ಪ್ರದರ್ಶಿಸಿ ಈ ಭೂಪಟದಲ್ಲಿ ಕರ್ನಾಟಕ ರಾಜ್ಯವನ್ನು ಗುರುತಿಸಿರಿ ಎಂದು, ವಿಷಯವನ್ನು ವಿದ್ಯಾಗಳ ಮುಂದಿಟ್ಟ ಚರ್ಚೆ ಹಾಗೂ ಸಂವಾದಗಳ ಮೂಲಕ ಜ್ಞಾನ ರಚನೆಗೆ ಅವಕಾಶ ಕಲ್ಪಿಸುತ್ತಾರೆ.

ಚಟುವಟಿಕೆ1 : ಶಿಕ್ಷಕರು ತಾವು ಸೂಚಿಸಿದ ವಿಷಯವನ್ನು ಕುರಿತು ತರಗತಿಯಲ್ಲಿ ಎರಡು ಗುಂಪುಗಳನ್ನು ಮಾಡಿ, ಕರ್ನಾಟಕ ರಾಜ್ಯದ ವೈಶಿಷ್ಟ್ಯತೆಯನ್ನು ಕುರಿತು ಚರ್ಚಿಸಲು ಅವಕಾಶ ನೀಡುವುದು.

ಗುಂಪು 1 :
* ಕರ್ನಾಟಕದ ಭೌಗೋಳಿಕ ಹಿನ್ನಲೆ: ಭೂಸ್ವರೂಪ, ಸಸ್ಯವರ್ಗ ಮತ್ತು ಪ್ರಾಣಿವರ್ಗ, ಮಣ್ಣು, ನದಿಗಳು, ಖನಿಜ ಸಂಪನ್ಮೂಲಗಳನ್ನು ಕುರಿತು, ಚರ್ಚೆ ನಡೆಸುವುದು.
* ಕರ್ನಾಟಕ ರಾಜ್ಯದ ಎಲ್ಲೆ: ಉತ್ತರದಲ್ಲಿ ಬೀದರ್ನಿಂದ ದಕ್ಷಿಣದಲ್ಲಿ ಚಾಮರಾಜನಗರದ ವರೆಗಿನ ವಿಶಾಲ ಕರ್ನಾಟಕ ರಾಜ್ಯದ ಪರಿಕಲ್ಪನೆಯನ್ನು ಹೇಳುವರು.
* ಭೌಗೋಳಿಕ ಸ್ವರೂಪ/ ಲಕ್ಷಣಗಳು: ಬಯಲು ಪ್ರದೇಶ ಟ್ಟಪ್ರದೇಶ ಕರಾವಳಿ ಪ್ರದೇಶ, ನದಿ ಉಗಮ ಸ್ಥಳಗಳನ್ನು ಕುರಿತಂತೆ.
* ಸಸ್ಯವರ್ಗ : ರಾಜ್ಯದಲ್ಲಿ ಮುಖ್ಯವಾಗಿ ಬೆಳೆಯುವ ಸಸ್ಯಗಳಾದ ಶ್ರೀಗಂಧ, ತ್ಯಾಗ, ಬೇಟಿ, ಸಾಲ್ ಮರಗಳ ಸಹ್ಯಾದ್ರಿ ಶ್ರೇಣಿ ಕುರಿತಂತೆ.
* ಪ್ರಾಣಿವರ್ಗ : ಹುಲಿ, ಸಿಂಹ, ಚಿರತೆ, ಕರಡಿ, ಜಿಂಕೆ, ಕಡವೆ ಪ್ರಾಣಿಗಳನ್ನು ಕುರಿತಂತೆ ಪ್ರತಿಕ್ರಿಯೆ ನೀಡುವರು.
* ಮಣ್ಣು: ಕರ್ನಾಟಕ ರಾಜ್ಯದಲ್ಲಿ ಕೆಂಪು, ಮರಳು, ಕಪ್ಪು ಮಣ್ಣು ಜಂಬಿಟ್ಟಿಗೆ ಮಣ್ಣನ್ನು ಕುರಿತು ಹೇಳುವರು.
ಈ ಮೇಲ್ಕಂಡ ಅಂಶಗಳನ್ನು ಮಕ್ಕಳು ತಮಗೆ ತಿಳಿದಿರುವ ಪೂರ್ವಜ್ಞಾನದಿಂದ ತರಗತಿಯಲ್ಲಿ ಪ್ರಸ್ತುತಪಡಿಸುವರು.

ಗುಂಪು -2 :

ಕರ್ನಾಟಕ ರಾಜ್ಯದ ವಿಭಿನ್ನ ವೈಶಿಷ್ಟ್ಯವಾದ ಕಲೆ, ಸಂಸ್ಕೃತಿ, ಸಾಹಿತ್ಯ, ಧಾರ್ಮಿಕ, ಆಧ್ಯಾತ್ಮಿಕ, ಐತಿಹಾಸಿಕ ಹಾಗೂ ಪುಣ್ಯ ಕ್ಷೇತ್ರಗಳನ್ನು ಕುರಿತು ಪ್ರಸ್ತುತಪಡಿಸುವರು.
* ಕಲೆ : ಕರ್ನಾಟಕದ ದೇವಾಲಯಗಳ ದ್ರಾವಿಡಶೈಲಿ ಹೊಯ್ಸಳ ಶೈಲಿ ನಾಗಶೈಲಿಗಳನ್ನು ಕುರಿತು ಹೇಳುವರು.
* ಸಂಸ್ಕೃತಿ : ಕರ್ನಾಟಕ ನೃತ್ಯ, ಯಕ್ಷಗಾನ, ಬಯಲಾಟ, ಸಣ್ಣಾಟ, ಭರತನಾಟ್ಯ, ಚಿತ್ರಕಲೆ ಕುರಿತು ಚರ್ಚೆ ನಡೆಸುವರು.
* ಆಚಾರ-ವಿಚಾರ : ವೇಷಭೂಷಣ, ಊಟ ಉಪಚಾರ, ಭಾಷೆಯ ಬಳಕೆಗಳನ್ನು ಕುರಿತು ಪ್ರಸ್ತುತಪಡಿಸುವರು.
* ಸಾಹಿತ್ಯ : ಕವಿರಾಜ ಮಾರ್ಗಕಾರ, ಪಂಪ, ರನ್ನ, ಬಸವ, ಅಕ್ಕ, ದಾಸರು, ಕುಮಾರವ್ಯಾಸ, ಕುವೆಂಪು, ಇನ್ನಿತರ ಕವಿಗಳ ಕೃತಿಗಳ ರಚನೆ ಕುರಿತು ಪ್ರಸ್ತುತಿ.
* ಧಾರ್ಮಿಕ: ಹಿಂದೂ, ಮುಸಲ್ಮಾನ್, ಕ್ರೈಸ್ತ, ಜೈನ, ಬೌದ್ಧ ಧರ್ಮಗಳನ್ನು ಕುರಿತು ಅಭಿಪ್ರಾಯ.
* ಐತಿಹಾಸಿಕ : ಹಂಪಿ, ಪಟ್ಟದಕಲ್ಲು, ಬಾದಾಮಿ, ಬಿಜಾಪುರ, ಬೇಲೂರು, ಮೈಸೂರು ಕುರಿತಂತೆ ಇತಿಹಾಸದ ಪರಿಚಯ ಪ್ರಸುತಿ.
* ಪುಣ್ಯಕ್ಷೇತ್ರಗಳು : ಧರ್ಮಸ್ಥಳ, ಶೃಂಗೇರಿ, ಶ್ರವಣಬೆಳಗೊಳ, ಕೂಡಲಸಂಗಮ, ಉಡುಪಿ, ಕ್ಷೇತ್ರಗಳನ್ನು ಒಳಗೊಂಡಂತೆ ಪರಿಚಯಾತ್ಮಕ ಚರ್ಚೆ.
ಈ ಮೇಲ್ಕಂಡ ಅಂಶಗಳನ್ನು ಮಕ್ಕಳು ತಮಗೆ ತಿಳಿದಂತೆ ಪೂರ್ವಜ್ಞಾನದಿಂದ ತರಗತಿಯಲ್ಲಿ ಚರ್ಚೆಗೆ ತೊಡಗಿಸಿಕೊಳ್ಳುವರು. ಜೊತೆಗೆ ಇಲ್ಲಿನ ಚರ್ಚೆಗೆ ಬರುವ ಅಂಶಗಳು, ಪ್ರತಿಕ್ರಿಯೆಯ ರೂಪದಲ್ಲಿದ್ದು, ಅನಿರೀಕ್ಷಿತವಾಗಿರಲೂ ಬಹುದು.

ಹೀಗೆ ಮಕ್ಕಳಿಂದ ಬರುವ ಎಲ್ಲಾ ಪ್ರತಿಕ್ರಿಯೆಗಳನ್ನು ಶಿಕ್ಷಕರು ಸ್ವೀಕರಿಸಿ ಕರ್ನಾಟಕ ರಾಜ್ಯದ ವೈಶಿಷ್ಟ್ಯವನ್ನು ಮಕ್ಕಳ ಸಾಮಥ್ರ್ಯವಾರು ಹಿನ್ನಲೆಯಲ್ಲಿ ಬಂದ ಉತ್ತರಗಳಿಂದ ಪರಸ್ಪರ ಚರ್ಚಿಸುವಂತೆ ಮಾಡಿ ಒಟ್ಟಾರೆ ಕರ್ನಾಟಕದ ವಿಭಿನ್ನರೂಪದ ಶ್ರೀಮಂತ ವೈಶಿಷ್ಟ್ಯವನ್ನು ಕಲಿಯುವಂತೆ ಅವಕಾಶ ಕಲ್ಪಿಸುವರು. ಹಾಗೂ ಗುಂಪು ಗುಂಪುಗಳ ನಡುವೆ ಅವರೇ ಪ್ರಶ್ನೆಗಳನ್ನು ಕೇಳುವಂತೆ ಉತ್ತರಗಳನ್ನು ಪಡೆಯುವಂತೆ ಮಕ್ಕಳು ಪ್ರೇರೇಪಿಸುವರು.

ಚಟುವಟಿಕೆ- 2 ಕಲಿಕಾ ನಿಲ್ದಾಣ ಮಾದರಿ

ಕಲಿಕಾಂಶ 2, ಕರ್ನಾಟಕ ಎಂಬ ಹೆಸರಿನ ಹಿನ್ನಲೆ

ಸಮಾಜ ವಿಜ್ಞಾನ ವಿಷಯದಲ್ಲಿ ಬರುವ ವಂಶಾವಳಿಗಳು, ದಾರ್ಶನಿಕರು ವಾಸ್ತುಶಿಲ್ಪ, ಆಡಳಿತದ ಅಂಗಗಳು, ಭೂಮಿಯ ಮೇಲ್ಪದರಗಳು, ಸಸ್ಯವರ್ಗ, ಪ್ರಾಣಿವರ್ಗ, ಸಮಾಜ ವಿಜ್ಞಾನಿಗಳು, ಕುಟುಂಬ, ಆಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ಒಂದು ಟಕವನ್ನು ಕಲಿಕಾ ನಿಲ್ದಾಣ ಮಾದರಿಯಲ್ಲಿ ಕಲಿವನ್ನು ಉಂಟುಮಾಡಬಹುದು.
ಪ್ರಸ್ತುತ `ಕರ್ನಾಟಕ ಎಂಬ ಹೆಸರಿನ ಹಿನ್ನಲೆ' ಎಂಬ ಟಕಕ್ಕೆ ಸಂಬಂಧಿಸಿದಂತೆ, `ಕರುನಾಡು' ಎಂದು ಹೆಸರು ಬರಲು ಕಾರಣ, ಕರ್ನಾಟಕ ಕುರಿತು ಕವಿರಾಜಮಾರ್ಗಕಾರನ ಉಲ್ಲೇಖ, ಮೈಸೂರು ರಾಜ್ಯದ ಉದಯ, ಕನ್ನಡ ರಾಜ್ಯೋತ್ಸವ ಆಚರಣೆ ಮಹತ್ವ, ಕುರಿತಂತೆ ಇರುವ ಅಂಶಗಳನ್ನು ಕಾರ್ಡ್ಗಳಲ್ಲಿ ವಿವರವಾಗಿ ಬರೆಯುವುದು. ಅವುಗಳನ್ನು ತರಗತಿಯ ನಿಗಧಿತ ಸ್ಥಳದಲ್ಲಿ ಇಡುವುದು. ನಂತರ ತರಗತಿಯ ಮಕ್ಕಳನ್ನು ನಾಲ್ಕು ಅಥವಾ ಐದು ಗುಂಪುಗಳನ್ನು (ಕಾರ್ಡ್ ಅನುಸಾರವಾಗಿ) ರಚಿಸಿ ಕಾರ್ಡ್ ಇಟ್ಟಿರುವ ಸ್ಥಳಕ್ಕೆ ಪ್ರತಿ ಗುಂಪು ಆವರ್ತದಲ್ಲಿ ಚಲಿಸುವಂತೆ ಮಾಡಬೇಕು, ಪ್ರತಿಗುಂಪು ಅಲ್ಲಿನ ವಿಷಯ ಓದಿ ತಮ್ಮ ತಮ್ಮಲ್ಲಿ ಚರ್ಚಿಸಬೇಕು. ನಂತರ ಮುಂದಿನ ಕಾರ್ಡ್ ಬಳಿ ಚಲಿಸಬೇಕು. ಕಾರ್ಡ್ ಇರಿಸಿದ ಸ್ಥಳವೇ ಕಲಿಕೆಯ ನಿಲ್ದಾಣ, ಇದರಿಂದ ಮಕ್ಕಳು ಸ್ವಯಂ ಉತ್ಸಾಹಿಗಳಾಗಿ ಪರಸ್ಪರ ಚರ್ಚೆಯ ಮೂಲಕ ಕಲಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಉಪನ್ಯಾಸ ಪದ್ಧತಿ ಅನಿವಾರ್ಯ ಎಂದು ಭಾವಿಸಿದ್ದವರಿಗೆ ಅದನ್ನು ತಪ್ಪಿಸಲು ಈ ವಿಧಾನ ಹೇಳಿ ಮಾಡಿಸಿದ ಮಾದರಿಯಾಗಿ ಎಂದು ಒಪ್ಪಿಕೊಳ್ಳಬಹುದು, ಹಾಗು ಶಿಕ್ಷಕರು ಪ್ರತಿಗುಂಪಿಗೂ ಚಲಿಸುತ್ತಾ ಚರ್ಚೆ ಅನುಕೂಲಿಸುತ್ತಾರೆ.

ಇದೇ ರೀತಿಯಾಗಿ ಕಲಿಕಾ ನಿಲ್ದಾಣ ವಿಧಾನದಲ್ಲಿ ಇನ್ನೂ ಮೂರು ವಿಧಾನಗಳಿವೆ. ಅವುಗಳೆಂದರೆ, ಪರಿಣತ ಗುಂಪು ಕಲಿಕೆ, ಸಹವರ್ತಿ ಕಲಿಕೆ, ಗುಂಪು ಕಲಿಕಾ ವಿಧಾನಗಳಿವೆ.
* ಪರಿಣತ ಗುಂಪು ಕಲಿಕೆ: ಇಲ್ಲಿನ ಗುಂಪಿನಲ್ಲಿ ಮೊದಲ ಹಂತದಲ್ಲಿ ಐದು ಅಥವಾ ಆರು ಮಕ್ಕಳ ಗುಂಪು ರಚಿಸುವುದು. ಈ ಗುಂಪುಗಳಲ್ಲಿ ಒಂದು ಗುಂಪು ಪರಿಣತ ಗುಂಪು ಎಂದು ಪರಿಗಣಿಸಲ್ಪಡುತ್ತದೆ. ಕಾರಣ ಶಿಕ್ಷಕರು ತಮ್ಮ ಗಮನಕ್ಕೆ ಬರುವಂತೆ ತರಗತಿಯ ಪರಿಣತ ವಿದ್ಯಾಗಳು ಒಂದು ಗುಂಪಿಗೆ ಬರುವಂತೆ ನಂಬರ್ (ಸಂಖ್ಯೆ)ಗಳನ್ನು ನೀಡಿರುತ್ತಾರೆ. ಹೀಗೆ ಒಂದು ಕಡೆ ಬಂದ ಪರಿಣತ ಗುಂಪು (ನಮ್ಮ ಗುಂಪು) ಎಂದು ಕರೆಸಿಕೊಳ್ಳುತ್ತದೆ. ಈ ಗುಂಪಿನವರು, ಆವರ್ತದಲ್ಲಿ ಪ್ರತಿ ಗುಂಪಿಗೂ (ಕಲಿಕಾ ನಿಲ್ದಾಣ) ಚಲಿಸುತ್ತಾ ಕಲಿಕೆಯನ್ನು ಅನುಕೂಲಿಸುತ್ತಾರೆ.

(ಗಮನಿಸಿರಿ : ಗುಂಪುಗಳಿಗೆ ಅನುಸಾರವಗಿ ಕಲಿಕಾಂಶದ ಅಂಶಗಳನ್ನು ನೀಡಬೇಕು. ಉದಾ: ಕಲಿಕಾಂಶ ಭಾರತದ ಭೂಪಟದಲ್ಲಿ ಕರ್ನಾಟಕದಲ್ಲಿನ ಅಕ್ಷಾಂಶ ರೇಖಾಂಶಗಳು, ಕರ್ನಾಟಕದ ಎಲ್ಲೆ ಭೂ ಮತ್ತು ಜಲ ಮೇರೆಗಳು, ಕರ್ನಾಟಕದ ಗಡಿ ರಾಜ್ಯಗಳು-ಹೀಗೆ).

ಈ ಅಂಶಗಳನ್ನು ಕುರಿತು ಚರ್ಚಿಸಿದ ನಂತರ ಪರಿಣತರ ಗುಂಪಿನ ಸದಸ್ಯರು ತಮ್ಮ ಮೂಲ ಗುಂಪಿಗೆ ಮರಳಿ ತಮ್ಮ ಅನುಭವಗಳನ್ನು ಪರಿಸ್ಪರ ವಿನಿಮಯಮಾಡಿಕೊಳ್ಳುತ್ತಾರೆ. ಪ್ರತಿ ಸದಸ್ಯರೂ ಒಂದೊಂದು ವಿಷಯವನ್ನು ಚರ್ಚಿಸಿ ಒಂದು ಕಡೆ ತರಗತಿ ಗುಂಪುಗಳನ್ನು ಸೇರಿಸಿ ವಿಷಯಗಳನ್ನು ಮತ್ತೆ ಹಂಚಿಕೊಳ್ಳುತ್ತಾರೆ. ಹಾಗೂ ಕೊನೆಯಲ್ಲಿ ಇನ್ನೂ ಹೆಚ್ಚಿನ ವಿವರಗಳಿಗೆ ಶಿಕ್ಷಕರನ್ನು ಸಂಪರ್ಕಿಸುತ್ತಾರೆ.
* ಸಹವರ್ತಿ ಕಲಿಕೆ:
ಒಂದು ತರಗತಿಯ ಅಷ್ಟು ವಿದ್ಯಾಗಳಲ್ಲಿ ಪರಸ್ಪರ ಸ್ನೇಹ, ಆತ್ಮೀಯತೆ, ಅನುಸರಣೆಗುಣ ಇದ್ದೇ ಇರುತ್ತದೆ. ಈ ಸಂದರ್ಭವನ್ನು ಗಮನಿಸಿದ ಶಿಕ್ಷಕರು, ಟಕದ ಕಲಿಕಾಂಸಕ್ಕೆ ಸಂಬಂಧಿಸಿದಂತೆ ವಿಷಯಗಳನ್ನು ಗ್ರಹಿಸಲು ಚೀಟಿಗಳನ್ನು ಬರೆದಿಡುವುದು. ಮಕ್ಕಳು ತೆಗೆದುಕೊಂಡ ಚೀಟಿಯಲ್ಲಿನ ಮಾಹಿತಿಯು/ಜ್ಞಾನವು ತನಗೆ ತಿಳಿಯದೇ ಇದ್ದಾಗ, ತನ್ನ ಮಿತ್ರ/ಸಹವರ್ತಿ, ಬಳಿ ಕೇಳಿ ತಿಳಿದುಕೊಳ್ಳುವುದು, ಆತನಿಗೂ ತಿಳಿಯದಿದ್ದರೆ ಮತ್ತೊಬ್ಬ ಸಹವರ್ತಿಯ ಬಳಿ ಪರಸ್ಪರ ಕೇಳಿ ತಿಳಿದುಕೊಳ್ಳುವುದು. ತರಗತಿಯ ಯಾವೊಬ್ಬ ಮಗುವಿಗೂ ತಿಳಿಯದೇ ಇದ್ದ ಕಲಿಕಾಂಶದ ಜ್ಞಾನವನ್ನು ಕಡೆಯಲ್ಲಿ ಶಿಕ್ಷಕರು ಅನುಕೂಲಿಸುವರು.

ಉದಾ: - ಕಲಿಕಾಂಶವಾಗಿ-ವಿಶಾಲ ಕರ್ನಾಟಕದ ಪರಿಕಲ್ಪನೆ
* ಕರ್ನಾಟಕದ ವಿಸ್ತೀರ್ಣ ಮತ್ತು ಗಾತ್ರ.
* ಕರ್ನಾಟಕದ ಜನಸಂಖ್ಯೆ ಸ್ಥಾನ.
* ಗುಂಪು ಕಲಿಕೆ:
ಗುಂಪು ಕಲಿಕೆಗೆ ಸಂಬಂಧಿಸಿದಂತೆ ತರಗತಿಯ ಒಟ್ಟು ವಿದ್ಯಾಗಳಲ್ಲಿ ಎರಡು ಗುಂಪುಗಳನ್ನು ರಚಿಸುವುದು. ಈ ಗುಂಪುಗಳ ಸಂಖ್ಯೆಯನ್ನು ಗರಿಷ್ಠ ಹತ್ತು ಗುಂಪುಗಳನ್ನು ಮಾಡಿಕೊಳ್ಳಬಹುದು. ಈ ಗುಂಪುಗಳಿಗೆ ಈ ಕೆಳಗಿನ ಕಲಿಕಾಂಶಕ್ಕೆ ಸಂಬಂಧಿಸಿದಂತೆ ಚರ್ಚಾಂಶಗಳನ್ನು ಪ್ರತಿಗುಂಪಿಗೂ ನೀಡುವುದು.
ಕಲಿಕಾಂಶ: ವಿಕೇಂದ್ರೀಕೃತ ಆಡಳಿತವಾಗಿ-ಕರ್ನಾಟಕ.

ಚರ್ಚಾಂಶಗಳು : ಕರ್ನಾಟಕದ, ಜಿಲ್ಲೆಗಳು, ತಾಲ್ಲೂಕುಗಳು, ಹೋಬಳಿಗಳು, ಪಟ್ಟಣ, ನಗರಗಳು, ಹಳ್ಳಿಗಳು, ಚಿಕ್ಕ ಮತ್ತು ದೊಡ್ಡ ಜಿಲ್ಲೆ ಆಡಳಿತಾತ್ಮಕ ವಿಭಾಗಗಳು.
ಈ ಚರ್ಚಾಂಶಗಳನ್ನು ಒಳಗೊಂಡಂತೆ ಕಲಿಕಾಗಳ ಪ್ರತಿ ಗುಂಪಿಗೆ ಕಲಿಕಾಂಶಕ್ಕೆ ಪೂರಕವಾದ ಚಟುವಟಿಕೆಗಳನ್ನು ಶಿಕ್ಷಕರು ಆಯೋಜಿಸುವುದು.
ಉದಾ: - ಮಕ್ಕಳಿಗೆ ತಿಳಿದಿರುವ ಜಿಲ್ಲೆಗಳ ಪಟ್ಟಿ ಮಾಡಿಸುವುದು.
* ಮಕ್ಕಳ ಗ್ರಾಮಗಳ ಹೆಸರುಗಳನ್ನು ಬರೆಯಲು ತಿಳಿಸುವುದು.
ಹೀಗೆ ಪ್ರತಿ ಗುಂಪುಗಳಲ್ಲಿಯ ಚರ್ಚೆಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಶಿಕ್ಷಕರು ಗಮನಿಸುತ್ತಾ ಅಗತ್ಯ ಮಾರ್ಗದರ್ಶನ ನೀಡುವುದು. ಗುಂಪಿನಲ್ಲಿ ಮಗುವಿನ ಭಾಗವಹಿಸುವಿಕೆ, ಅಲ್ಲಿ ಉಂಟಾಗಬಹುದಾದ ಗೊಂದಲ ಅಸ್ಪಷ್ಟತೆಗಳಿಗೆ ಅಗತ್ಯ ಸಲಹೆ ನೀಡುತ್ತಾ ಪರಸ್ಪರ ಕಲಿಕೆಗೆ ಹೆಚ್ಚು ಅವಕಾಶ ನೀಡುವುದು.
ಪ್ರಸ್ತುತ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಈ ರೀತಿಯ ಗುಂಪು ಚರ್ಚೆ ಹಾಗೂ ಜ್ಞಾನ ಸಂಗ್ರಹಣಾ ಚಟುವಟಿಕೆಗಳು ಇದ್ದು ಇವು ಮಗುವಿನ ಕಲಿಕಾ ಹಂದರಗಳನ್ನು ತುಂಬಲು ಹಾಗೂ ಅವರ ಪೂರ್ವಜ್ಞಾನದೊಂದಿಗೆ ತಾವೇ ಜ್ಞಾನವನ್ನು ಕಟ್ಟಿಕೊಳ್ಳಲು ಅವಕಾಶಗಳು ಇವೆ.

ಈ ಮೇಲ್ಕಂಡ ಎಲ್ಲ ನಾಲ್ಕು ಕಲಿಕಾ ನಿಲ್ದಾಣ ವಿಧಾನಗಳಿಂದ ಮಗುವಿನ ಮಾತುಗಾರಿಕೆ, ಪಾಲ್ಗೊಳ್ಳುವಿಕೆ, ಪರಸ್ಪರ ವಿನಿಮಯ, ಸಂವಹನ, ಹಾಗೂ ದಾಖಲೀಕರಣವು ಪ್ರಧಾನವಾಗಿರುತ್ತದೆ. ತನಗೆ ತಿಳಿದಿರುವ ಜ್ಞಾನದ ಮೂಲಕ ಹೊಸ ಸನ್ನಿವೇಶವೊಂದರಲ್ಲಿ ಆ ಜ್ಞಾನವನ್ನು ಪುನರ್ರಚಿಸಿಕೊಳ್ಳಲು ಮಗುವಿಗೆ ಸಾಧ್ಯವಾಗುತ್ತದೆ. ಪ್ರತಿ ಸಂದರ್ಭದಲ್ಲಿಯೂ ಮಗುವಿಗೆ ಹಿಮ್ಮಾಹಿತಿ ನೀಡಬಹುದಾದ ಹಾಗೂ ಮಗುವೇ ಹಿಮ್ಮಾಹಿತಿಯನ್ನು ನೀಡಲು ಅವಕಾಶವೂ ಇರುತ್ತದೆ.

ಚಟುವಟಿಕೆ- 3, ಸಮಾಜಶಾಸ್ತ್ರ (ವಿಭಾಗ)

ಅಧ್ಯಾಯ-1 : ಕುಟುಂಬ

ಕಲಿಕಾಂಶಗಳು:ಜ್ಞಾನ ರಚನಾ ಅಂಶಗಳು
* ಕುಟುಂಬ ಪದದ ಅರ್ಥ
* ಕುಟುಂಬದ ಲಕ್ಷಣಗಳು
* ಕುಟುಂಬದಲ್ಲಿ ಮಗುವಿನ ಬೆಳವಣಿಗೆ
* ಕುಟುಂಬದ ಪ್ರಕಾರಗಳು
* ಅವಿಭಕ್ತ ಕುಟುಂಬ
* ಅವಿಭಕ್ತ ಕುಟುಂಬದ ಲಕ್ಷಣಗಳು

ಕಲಿಕಾಂಶ 1 - ಕುಟುಂಬ ಪದದ ಅರ್ಥ

ಪಾತ್ರಾಭಿನಯ/ಪ್ರಹಸನ/ಕಿರು ನಾಟಕ ವಿಧಾನ: ಶಿಕ್ಷಕರು ವಿದ್ಯಾಗಳನ್ನು ಸಮನಾಗಿ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸುವುದು. ಪ್ರತಿಗುಂಪಿಗೆ ಒಬ್ಬ ನಾಯಕ/ನಾಯಕಿಯನ್ನು ಗುರುತಿಸುತ್ತಾರೆ. ಈಗಾಗಲೇ ಶಿಕ್ಷಕರು ತಾವು ಸಿದ್ಧಪಡಿಸಿಕೊಂಡಿರುವ ನಾಲ್ಕು ಚೀಟಿಗಳನ್ನು ಮೇಜಿನ ಮೇಲಿಟ್ಟು ತಂಡದ ಮುಖ್ಯಸ್ಥರು ಒಂದೊಂದು ಚೀಟಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಚೀಟಿಯಲ್ಲಿರುವ ವಿಷಯವನ್ನು ವಿದ್ಯಾಗಳು ತಮ್ಮ ಗುಂಪಿನೊಂದಿಗೆ ಚರ್ಚಿಸಿ ಮೂಕಾಭಿನಯ, ಪ್ರಹಸನ, ಅಥವಾ ಕಿರುನಾಟಕ ರೂಪದಲ್ಲಿ ಪ್ರದರ್ಶಿಸಬೇಕು. (ಆಯ್ಕೆ ವಿದ್ಯಾಗಳದ್ದು) ಪ್ರದರ್ಶನದ ಅವಧಿ 5 ನಿಮಿಷಗಳು ಮಾತ್ರ. ತಂಡದವರು ನಿಡುವ ಪ್ರದರ್ಶನವನ್ನು ಉಳಿದ ತಂಡದವರು ವೀಕ್ಷಿಸುತ್ತಾರೆ.

ಪ್ರದರ್ಶನ- 1: ವಿದ್ಯಾಗಳೇ ತಂದೆ, ತಾಯಿ, ಅಜ್ಜ, ಅಜ್ಜಿ, ಅಣ್ಣ, ತಂಗಿ, ವೇಷಗಳಲ್ಲಿ ಬಂದು, ಅಭಿನಯದ ಮೂಲಕ ಒಂದು ಭಾವನಾತ್ಮಕವಾದ ಕುಟುಂಬದ ಪರಿಕಲ್ಪನೆಯನ್ನು ತರಲು ಪ್ರಯತ್ನಿಸುವರು.

ಪ್ರದರ್ಶನ- 2: ಮಕ್ಕಳು, ಊಟ ಮಾಡುತ್ತಿರುವುದು, ತಾಯಿಯಾದವರು ಬಡಿಸುತ್ತಿರುವ ದೃಶ್ಯ. ತಂದೆ ಪತ್ರಿಕೆಯನ್ನು ಓದುತ್ತಿರುವಂತೆ ಕುಳಿತುಕೊಳ್ಳುವುದು.

ಪ್ರದರ್ಶನ- 3: ತಂದೆ ತಾಯಿಗಳು, ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯ ಬಗ್ಗೆ ಚರ್ಚೆ ನಡೆಸುವುದು.

ಪ್ರದರ್ಶನ- 4: ಮಕ್ಕಳು ತಪ್ಪು ಮಾಡಿರುವ ಸಂದರ್ಭವನ್ನು ತಂದೆ ತಾಯಿಗಳು ತಿಳಿಹೇಳುತ್ತಿರುವ ದೃಶ್ಯ.

ಕಲಿಕೆಯನ್ನು ಅನುಕೂಲಿಸುವ ಸಲುವಾಗಿ ಶಿಕ್ಷಕರು ಈ ಪ್ರದರ್ಶನದ ಬಳಿಕ ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಾರೆ.
#. ಈ ಪ್ರದರ್ಶನಗಳು, ನಿಮಗೆ ಯವ ತಿಳುವಳಿಕೆಯನ್ನು ನೀಡಿದವು.
#. ತಂದೆ, ತಾಯಿ, ಮಕ್ಕಳು, ತಾತ, ಅಮ್ಮ ಇವರು ಒಟ್ಟಿಗೆ ವಾಸಿಸುವುದು ಎಲ್ಲಿ?
#. ಕುಟುಂಬದಲ್ಲಿ ತಂದೆ ತಾಯಿಗಳ ಪಾತ್ರವೇನು?
#. ಮನೆಯೇ ಮೊದಲ ಪಾಠಶಾಲೆ ಹೇಗೆ?
#. ಮಗುವಿನ ಜೀವನದಲ್ಲಿ ಕುಟುಂಬದ ಪಾತ್ರವೇನು?

ಮಕ್ಕಳು ತಮ್ಮದೇ ಆದ ಭಾಷೆಯಲ್ಲಿಯೇ ಉತ್ತರಿಸಲಿ. ಅವರಿಗೆ ಕುಟುಂಬದ ಅರ್ಥವನ್ನು ಅರಿವು ಮಾಡಿಕೊಳ್ಳುವುದೇ ಶಿಕ್ಷಕರ ಆಶಯ. ಇದನ್ನು ಶಿಕ್ಷಕರೇ ಬಲವಂತವಾಗಿ ಅಥವಾ ಪರೋಕ್ಷವಾಗಿ ಹೇಳುವುದು ಬೇಡ. ಮಕ್ಕಳ ಸ್ವಯಂ ಕಲಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಮಕ್ಕಳ ಜ್ಞಾನ ರಚನೆಗೆ ಅನುಕೂಲಿಸುತ್ತಾರೆ.
ವಿಶೇಷ ಸೂಚನೆ:- ಈ ಚಟುವಟಿಕೆಯ ನಂತರ ಶಿಕ್ಷಕರು ಕುಟುಂಬದ ಪರಿಕಲ್ಪನೆ ಬರುವ ವಿವಿಧ ಬಗೆಯ ಚಾರ್ಟ್ಗಳನ್ನು ಪ್ರದಶಿಸಬಹುದು. ಹಾಗೂ ಮಂಗನಿಂದ ಮಾನವನಾದ ವಿವಿಧ ಹಂತಗಳ ಚಿತ್ರಗಳ ಪ್ರದರ್ಶನ.

ಜ್ಞಾನರಚನೆ: ಮೇಲಿನ ಚಟುವಟಿಕೆಗಳಿಂದ ಮಕ್ಕಳಲ್ಲಿ ಕುಟುಂಬದ ಪರಿಕಲ್ಪನೆಯನ್ನು ಅರಿತುಕೊಳ್ಳುತ್ತಾರೆ. ಕುಟುಂಬದ ಅರ್ಥ ತಂದೆ ತಾಯಿಗಳ ತ್ಯಾಗ, ಸಂಸ್ಕಾರ, ಶಿಸ್ತು, ಬಾಂಧವ್ಯ ಮುಂತಾದ ಗುಣಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಜ್ಞಾನದ ಪುನರ್ರಚನೆ: ಮಕ್ಕಳು ಕೂಡಿ ಬಾಳಿದರೆ ಸ್ವರ್ಗ ಸುಖ, ಮನೆಯೇ ಮೊದಲ ಪಾಠಶಲೆ, ತಾಯಿಯೇ ಮೊದಲ ಗುರು. ತಾಯಿಗಿಂತ ದೇವರಿಲ್ಲ. ಉಪ್ಪಿಗಿಂತ ರುಚಿಯಿಲ್ಲ. ಕೊಡುಕೊಳ್ಳುವ ಗುಣ, ಸಹಕಾರ, ವಾತ್ಸಲ್ಯ ಮುಂತಾದ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ.

ಕಲಿಕಾಂಶ: 2 - ಕುಟುಂಬದ ಲಕ್ಷಣಗಳು

ವಿಧಾನ: (ಶಿಶು ಕೇಂದ್ರಿತ ಮಾದರಿ)

ಶಿಕ್ಷಕರು ತರಗತಿಯಲ್ಲಿನ ಮಕ್ಕಳು ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು, ಮಕ್ಕಳನ್ನು ಐದು ಗುಂಪುಗಳನ್ನಾಗಿ ಮಾಡಿ ಶಿಕ್ಷಕರು ಮೊದಲೇ ಬರೆದು ಇಟ್ಟುಕೊಂಡಿದ್ದ ಮಿಂಚುಪಟ್ಟಿಗಳನ್ನು ಪ್ರತಿ ತಂಡಕ್ಕೂ ನೀಡುತ್ತಾರೆ. ಮಕ್ಕಳು, ತಮ್ಮ ಗುಂಪಿಗೆ ಬಂದಂತಹ ಮಿಂಚು ಪಟ್ಟಿಯಲ್ಲಿನ ವಿಷಯವನ್ನು (ಕುಟುಂಬದ ಲಕ್ಷಣಗಳು) ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ನಂತರ ಶಿಕ್ಷಕರು ಕುಟುಂಬದ ಲಕ್ಷಣಗಳಿಗೆ ಸಂಬಂಧಿಸಿದಂತೆ ಚರ್ಚಾಂಶಗಳನ್ನೂ ಕಪ್ಪು ಹಲಗೆಯ ಮೇಲೆ ಬರೆಯುತ್ತಾರೆ. ಆ ಅಂಶಗಳನ್ನು ಕುರಿತಂತೆ ಮಕ್ಕಳಿಂದ ಉತ್ತರಗಳನ್ನು ಬರೆದು ಕಪ್ಪು ಹಲಗೆಯ ಮೇಲೆ ದಾಖಲಿಸುತ್ತಾರೆ.

ಚರ್ಚಾಂಶಗಳು
* ಕುಟುಂಬದಲ್ಲಿರುವ ಸದಸ್ಯರು
* ಕುಟುಂಬದಲ್ಲಿ ತಂದೆ, ತಾಯಿ
* ಕುಟುಂಬದಲ್ಲಿ ಹಿರಿಯರು
* ಕುಟುಂಬ ಸರ್ವವ್ಯಾಪಿ ಹೇಗೆ?
* ಕುಟುಂಬ ಸಮಾಜದ ಚಿಕ್ಕ ಟಕವಾಗಿ
* ಕುಟುಂಬ ಸದಸ್ಯರ ಪಾತ್ರ ಪ್ರಜ್ಞೆ
* ಕುಟುಂಬದಲ್ಲಿ ಕಂಡುಬರುವ ಲಾಲನೆ, ಪಾಲನೆ
* ಕುಟುಂಬದ ಸದಸ್ಯರ ಕರ್ತವ್ಯಗಳು
* ಕುಟುಂಬದಲ್ಲಿನ ಆಚರಣೆಗಳು
ಈ ಮೇಲ್ಕಂಡ ಚರ್ಚಾಂಶಗಳನ್ನು ಕುರಿತ ಮಕ್ಕಳ ಅಭಿಪ್ರಾಯ ಜ್ಞಾನವನ್ನು ಶಿಕ್ಷಕರು ಕಪ್ಪು ಹಲಗೆಯ ಮೇಲೆ ಬರೆಯುವರು. ಕುಟುಂಬದ ಸಮಗ್ರ ಚಿತ್ರಣವನ್ನು ಮಕ್ಕಳಿಗೆ ತರುವಲ್ಲಿ ಯಶಸ್ವಿಯಾಗುವುದು.

ಸೂಚನೆ: ಈ ವಿಧಾನದಲ್ಲಿ ಮಕ್ಕಳೇ ತಮ್ಮ ಜ್ಞಾನ ರಚನೆಗೆ ತಾವೇ ತೊಡಿಗಿಕೊಳ್ಳಬೇಕು. ಯಾವ ಕಾರಣಕ್ಕೂ ಕಲಿಕೆ ಶಿಕ್ಷಕ ಕೇಂದ್ರೀಕೃತವಾಗಲೇಬಾರದು.

ಕಲಿಕಾಂಶ: 3 - ಕುಟುಂಬದಲ್ಲಿ ಮಗುವಿನ ಬೆಳವಣಿಗೆ

ವಿಧಾನ : ವಿಶ್ಲೇಷಣಾತ್ಮಕ ಮಾದರಿ

ಈ ವಿಧಾನದಲ್ಲಿ ಶಿಕ್ಷಕರು ಕಲಿಕಾಂಶಕ್ಕೆ ಸಂಬಂಧಿಸಿದಂತೆ ಪೂರಕವಾಗುವ ಟನಾವಗಳಿಗಳನ್ನು ತರಗತಿಯಲ್ಲಿ ಪ್ರಸ್ತುತಪಡಿಸುತ್ತಾರೆ. ಇದರನ್ವಯ ಕಲಿಕಾಂಶವು ಮಗುವಿನ ಜ್ಞಾನ ರಚನೆಗೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಏಕೆಂದರೆ ಮಗು ತನ್ನ ಸಹಪಾಟಿಗಳಿಂದ ಕಲಿಯುವಂತಹ ಹೊಂದಾಣಿಕೆ, ಸ್ನೇಹ, ನಾಯಕತ್ವ, ಸ್ವಾತಂತ್ರ್ಯ ಪ್ರವೃತ್ತಿಯ ಅಂಶಗಳನ್ನು ಹೆಚ್ಚು ಮನನ ಮಾಡಿಸಲು ಟನಾವಳಿಗಳ ವಿಶ್ಲೇಷಣೆಯನ್ನು ಮಾಡುತ್ತಾರೆ.

ಉದಾ: ಅಬ್ರಹಾಂ ಲಿಂಕನ್ನನು ತನ್ನ ಮಗನ ಶಿಕ್ಷಕರಿಗೆ ಬರೆದ ಪತ್ರ.
* ಅಂಬೇಡ್ಕರ್ ಎಂಬ ಹೆಸರಿನ ಹಿನ್ನಲೆ.
* ಗಾಂಧೀಜಿಯವರು ಮತ್ತು ಕೆಟಲ್ ಶಬ್ದ.
* ಶಿವಾಜಿ ಮತು ಜೀಜಾಬಾಯಿ.
ಈ ಟನಾವಳಿಗಳನ್ನು ಶಿಕ್ಷಕರು ಮಕ್ಕಳ ಮುಂದೆ ವಿಶ್ಲೇಷಿಸಿ, ಈ ಟನೆಗಳಿಂದ ಪರಿಣಾಮಗಳನ್ನು ಮಕ್ಕಳಿಂದ ಅಭಿಪ್ರಾಯ ಸಂಗ್ರಹಿಸಲು ಕಪ್ಪು ಹಲಗೆಯನ್ನು ಬಳಸಿಕೊಳ್ಳುವುದು.

ಈ ಟನಾವಳಿಗಳು ಮಕ್ಕಳ ಮೇಲೆ ಬೀರಿದ ಪ್ರಭಾವದ ಹಿನ್ನಲೆಯಲ್ಲಿ ಸಮಾಜ, ಕುಟುಂಬ ಸಹಪಾಟಿಗಳಿಂದ ಮಗುವಿನ ವರ್ತನೆಯಲ್ಲಾದ ಬದಲಾವಣೆಯನ್ನು ಮಕ್ಕಳಿಂದ ಪಟ್ಟಿ ಮಾಡಿಸುವುದು.

ಜ್ಞಾನ ರಚನೆ:
* ಮಗುವಿನ ವ್ಯಕ್ತಿತ್ವದ ಮೇಲೆ ಶಾಲೆ, ಸಮಾಜ, ಕುಟುಂಬ ಪ್ರಮುಖ ಪಾತ್ರ.
* ಮಗುವಿನ ವರ್ತನೆಯು ಆತನ ಸಹಪಾಟಿಗಳನ್ನು ಅವಲಂಬಿಸಿರುತ್ತದೆ. ಮಗು ಮತ್ತು ಆತನ ಸಹಪಾಟಿಗಳು.
* ಕುಟುಂಬದಲ್ಲಿ ಮಗುವಿನ ಬೆಳವಣಿಗೆ (ಬೌದ್ಧಿಕವಾಗಿ).
* ಮಗುವಿನ ಬಾಲ್ಯ ಮತ್ತು ಯೌವ್ವನದ ಹಂತಗಳು.
* ಕುಟುಂಬ ನಿರ್ವಹಣೆಯಲ್ಲಿ ತಂದೆ ತಾಯಿಗಳ ಪಾತ್ರ.
ಜ್ಞಾನ ಪುನರ್ರಚನೆ (ಮನನ ಮಾಡಿಕೊಳ್ಳಬೇಕಾದ ಅಂಶಗಳು)
* ಮುಂದಾಳತ್ವ
* ಸ್ನೇಹ ಸಂಬಂಧ
* ಹೊಂದಾಣಿಕೆ
* ರಕ್ಷಣಾತ್ಮಾಕ ಬದುಕು
* ಕೂಡಿ ಬಾಳು
* ಗೌರವ, ಅಭಿಮಾನ.
ಈ ಮೇಲ್ಕಂಡ ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳನ್ನು ಮಗು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಯತ್ನಿಸುವುದು. ಹಾಗೂ ಈ ರೂಪದ ಜ್ಞಾನ ಪುನರ್ರಚನೆಗೆ ಹೆಚ್ಚಿನ ಒತ್ತು ನೀಡುವುದು.

ಕಲಿಕಾಂಶ: 4 - ಕುಟುಂಬದ ಪ್ರಕಾರಗಳು

ವಿಧಾನ : ಸಂಶೋಧನಾ ಮಾದರಿ

ಸಮಾಜ ವಿಜ್ಞಾನ ವಿಷಯದ ಕಲಿವಿನ ಸಂದರ್ಭದಲ್ಲಿ ಸಂಶೋಧನಾ ಮಾದರಿ. ಬಹು ಮುಖ್ಯವಾದ ವಿಧಾನವಾಗಿದೆ. ಇದಕ್ಕಾಗಿ ಶಿಕ್ಷಕರು, ತರಗತಿಯಲ್ಲಿ ನಾಲ್ಕು ಗುಂಪುಗಳನ್ನು ಮಾಡಿ, ಪ್ರತಿ ಗುಂಪಿಗೂ ಈ ಕೆಳಗಿನ ಚರ್ಚಾಂಶಗಳನ್ನು ಮಕ್ಕಳು ಆಯ್ಕೆಯ ಆಧಾರದ ಮೇಲೆ ನೀಡುವುದು.

ಚರ್ಚಾಂಶಗಳು:
* ಪಿತೃ ಪ್ರಧಾನ ಕುಟುಂಬ
* ಮಾತೃ ಪ್ರಧಾನ ಕುಟುಂಬ
* ಆಧುನಿಕ ಕೇಂದ್ರ ಕುಟುಂಬ
* ಅವಿಭಕ್ತ ಕುಟುಂಬ
ಈ ಆಯ್ಕೆಯ ಅಂಶಗಳನ್ನು ಮಕ್ಕಳು ಪರಸ್ಪರ ಚರ್ಚೆಗಳ ಮೂಲಕ ವಿನಿಮಯ ಮಾಡಿಕೊಳ್ಳುವರು. ಹಾಗೂ ಇದಕ್ಕೆ ಸಂಬಂಧಿಸಿದಂತೆ ಒಂದು ದಿನ ಮೊದಲೇ ತಂಡಗಳಿಗೆ ವಿಷಯವನ್ನು ಹಂಚಿ ವಿಷಯ ಸಂಗ್ರಹಿಸಲು ಈ ಮುಂದಿನ ಹಂತಗಳಲ್ಲಿ/ಮಾದರಿ ಅನ್ವಯ ಸಂಗ್ರಹಿಸುವಂತೆ ತಿಳಿಸುವುದು.
ಮೌಲ್ಯಮಾಪನ

ಈ ಸಂಶೋಧನಾ ಹಂತಗಳಿಗೆ ಹೊಂದಿಕೊಂಡಂತೆ ಮಕ್ಕಳು ತಮಗೆ ನಿಡಿದ ಚರ್ಚಾಂಶಗಳ ಕಲಿಕೆಯ ವಿಷಯವನ್ನು ಸಂಗ್ರಹಿಸಿ ತರುತ್ತಾರೆ.

ಉದಾ:
* ವಿಷಯದ ಆಯ್ಕೆ : ಪಿತೃ ಪ್ರಧಾನ ಕುಟುಂಬ
* ವಿಷಯದ ವ್ಯಾಪ್ತಿ : ತಂದೆ ಕುಟುಂಬದ ಒಡೆಯ ಹೇಗೆ?
* ಪೂರ್ವ ತಯಾರಿ : ಪಿತೃ ಕುಟುಂಬದ ಭೇಟಿ ಪರಸ್ಪರ ವಿಚಾರ ವಿನಿಯಮ.
* ವಿಷಯ ಸಂಗ್ರಹಣೆ - ಪಿತೃ ಪ್ರಧಾನ ಕುಟುಂಬದ ಅರ್ಥ
* ಪಿತೃ ಪ್ರಧಾನ ಕುಟುಂಬದಲ್ಲಿನ ಇತರ ಸದಸ್ಯರು
* ಈ ಕುಟುಂಬದ ವಹಿವಾಟು
* ಪಿತೃ ಪ್ರಧಾನ ಕುಟುಂಬ ಲಕ್ಷಣ
* ಪಿತೃ ಪ್ರಧಾನ ಕುಟುಂಬಗಳು ಕಂಡು ಬರುವ
* ಪಿತೃ ಪ್ರಧಾನ ಕುಟುಂಬ ಅನುಕೂಲ/
ಅನಾನುಕೂಲಗಳು
* ವಿಷಯ ವಿಶ್ಲೇಷಣೆ - ವಿಷಯ ಸಂಗ್ರಹಣೆಯಲ್ಲಿರುವ ಪ್ರತಿಯೊಂದು ಅಂಶಗಳನ್ನು ವಿವರಿಸಿ ಅರ್ಥೈಸಿಕೊಳ್ಳುವುದು.

ಉದಾ: ತಂದೆಯೇ ಒಡೆಯನಾಗಿರುವ ಕುಟುಂಬ ಪಿತೃ

ಪ್ರಧಾನ ಕುಟುಂಬ (ಅರ್ಥ) ವ್ಯಾಖ್ಯಾನಗಳ ಸಂಗ್ರಹ.
* ವಿಷಯದ ಮನನ - ಕುಟುಂಬದ ಸಂಪೂರ್ಣ ವಹಿವಾಟು
* ಕಲಿವಿನ ಫಲ - ಕುಟುಂಬದ ಹಣಕಾಸಿನ, ಆರೋಗ್ಯದ
* ಮೌಲ್ಯಮಾಪನ - ಭಾವನಾತ್ಮಕ ಸಂಬಂಧದ ಹಿನ್ನಲೆಯಲ್ಲಿ
ಸಂಬೋಧಿಸುತ್ತಾರೆ ಎಂಬುದನ್ನು ಪಟ್ಟಿ ಮಾಡಿರಿ.

ಉದಾ: ತಾಯಿಯ ಅಣ್ಣ - ಮಾವ.

ಹೀಗೆ ಪ್ರತಿಯೊಂದು ಚರ್ಚಾಂಶಗಳನ್ನು ಆಯಾ ಗುಂಪಿನ ಮಕ್ಕಳು ಸಂಶೋಧನಾತ್ಮಕವಾಗಿ ವಿಷಯವನ್ನು ಸಂಗ್ರಹಿಸಿ ಜ್ಞಾನವನ್ನು ಕಟ್ಟಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಶಿಕ್ಷಕರು ಕಲಿಕಾಂಶವಾದ ಕುಟುಂಬದ ಪ್ರಕಾರಗಳು ಎಂಬ ಟಕದ ಅವಧಿಯಲ್ಲಿ ಪ್ರತಿ ಗುಂಪಿನ ಪ್ರತಿ ಮಗುವಿಗೂ ಈ ಸಂಶೋಧನಾತ್ಮಕ ಹಂತದ ಅಂಶಗಳನ್ನು ಮಕ್ಕಳು ಜ್ಞಾನವನ್ನು ಕಟ್ಟಿಕೊಂಡಂತೆ ತರಗತಿಯಲ್ಲಿ ವಿಷಯ ಮಂಡಿಸಲು ಅವಕಾಶ ಕಲ್ಪಿಸುವುದು. ಹಾಗೂ ಉಳಿದ ವಿಷಯಾಂಶಗಳಿದ್ದಲ್ಲಿ ಶಿಕ್ಷಕರು ತಿಳಿಸುವುದು. ಹಾಗೂ ಉಳಿದ ವಿಷಯಾಂಶಗಳಿದ್ದಲ್ಲಿ ಶಿಕ್ಷಕರು ತಿಳಿಸುವುದು.

ಜ್ಞಾನ ಪುನರ್ರಚನೆ:
* ಸಂಶೋಧನಾತ್ಮಕತೆ
* ಸಕಾರಾತ್ಮಕ ಆಲೋಚನೆ
* ಮುಂದಾಳತ್ವ
* ಕ್ರಿಯಾಶೀಲತೆ
* ಹೊಸತನ
ಹೀಗೆ ಕಲಿಕೆಗೆ ಬೇಕಾಗುವ ವಿಧಾನಗಳನ್ನು ಶಿಕ್ಷಕರು ಕಲಿಕಾಂಶದ ಅಗತ್ಯಗಳಿಗನುಗುಣವಾಗಿ ಬಳಸಿಕೊಳ್ಳಬಹುದು. ಇವುಗಳನ್ನು ಸಮರ್ಪಕವಾಗಿ ಅನುಕೂಲಿಸುವುದು ಹಾಗೂ ಸಂದರ್ಭೋಚಿತವಗಿ ಮಾರ್ಗೋಪಾಯಗಳನ್ನು ತಪ್ಪದೆ ಅಳವಡಿಸಿಕೊಳ್ಳುವುದು.

ಮಕ್ಕಳೇ ಕ್ರಿಯಾಶೀಲರಾಗಿ ತಮ್ಮ ತಮ್ಮ ಅನುಭವಗಳ ಮೂಲಕ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡು (ವೈಯಕ್ತಿಕ/ಗುಂಪು ಚರ್ಚೆ) ಆತ್ಮ ವಿಶ್ವಾಸವನ್ನು ರೂಢಿಸಿಕೊಳ್ಳುತ್ತಾರೆ.

ಇದಲ್ಲದೆ ಸಮಾಜ ವಿಜ್ಞಾನ ವಿಷಯದಲ್ಲಿ ಪಾಠಗಳನ್ನು ಪರಿಣಾಮಕಾರಿಯಾಗಿ ಕಲಿಸಲು ಬಳಸುವ ವಿಧಾನ ಇದೊಂದೇ ಎಂಬ ಭಾವನೆಯನ್ನು ಇಟ್ಟುಕೊಳ್ಳಬಾರದು. ಏಕೆಂದರೆ ಒಂದೇ ಟಕದ ಬೇರೆ ಬೇರೆ ಕಲಿಕಾಂಶಗಳಿಗೆ/ಚರ್ಚಾಂಶಗಳಿಗೆ ಬೇರೆ ಬೇರೆ ಅನುಕೂಲಿಸುವ ವಿಧಾನಗಳನ್ನು ಬಳಸಲು ಶಿಕ್ಷಕರು ಸ್ವತಂತ್ರರು. ತನ್ನ ಶಾಲಾ ಪರಿಸರ, ವಿದ್ಯಾಗಳ ಅಭಿರುಚಿ, ಲಭ್ಯವಿರುವ ಪರಕರಗಳು ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸೂಕ್ತ ವಿಧಾನ ಆಯ್ಕೆ ಮಾಡಿಕೊಂಡು ರಚನಾತ್ಮಕ ಕಲಿಕೆ ಎಡೆಗೆ ಸಾಗುವುದು ಇಲ್ಲಿನ ಬಹುಮುಖ್ಯ ಆಶಯವಾಗಿದೆ.
೫೭

edits