ಸಸ್ಯವರ್ಗ ಸಮೀಕ್ಷೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಸ್ಯವರ್ಗ ಸಮೀಕ್ಷೆ ಕೈಪಿಡಿ ಇಲ್ಲಿ ಡೌನ್ ಲೋಡ್ ಮಾಡಬಹುದು

ಶಾಲಾ- ಸ್ಥಳೀಯ ಪರಿಸರದಲ್ಲಿನ ಸಸ್ಯವರ್ಗ ಸಮೀಕ್ಷೆ (Vegetation survey)

ಸಸ್ಯಗಳು ಮತ್ತು ಪ್ರಾಣಿಗಳು ಬೆಳೆಯುತ್ತವೆ, ಬದಲಾಗುತ್ತಿರುತ್ತವೆ ಹಾಗು ಸಾಯುತ್ತವೆ ಎಂದಷ್ಟೇ ತಿಳಿದಿರುತ್ತೇವೆ. ಆದರೆ ಅವು ಹೇಗೆ ಬೆಳೆಯುತ್ತವೆ ಹೇಗೆ ಕಾಲಕಾಲಕ್ಕೆ ಹೇಗೆ ಬದಲಾಗುತ್ತವೆ ಎಂಬುದನ್ನು ಗಮನಿಸಿದಾಗ ಮಾತ್ರ ಆ ಜೀವವೈವಿದ್ಯತೆಯ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗುತ್ತದೆ. ಮರಗಿಡಗಳು ಸಹ ತಮ್ಮದೇ ಆದ ಜೀವನಚಕ್ರವನ್ನು ಹೊಂದಿರುತ್ತವೆ.. ಈ ಸಸ್ಯವರ್ಗಗಳ ಮತ್ತು ಮರಗಳ ಜೀವನಚಕ್ರ ಶೈಲಿ ಮತ್ತು ಇತರೆ ಪ್ರಾಣಿಗಳ ಜೀವನಚಕ್ರದ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಬಹುದು . . ಮಾನವನ ಜೀವನಕ್ರಮದಲ್ಲಿ ಈ ಸಸ್ಯವರ್ಗಗಳನ್ನು ತುಂಬಾ ಬಳಸಲಾಗುತ್ತದೆ. ಆದರೆ ಎಷ್ಟು ಸಲ ಬಳಸಿದ್ದೇವೆ ಎಂಬುದನ್ನು ಎಲ್ಲಿಯೂ ದಾಖಲಿಸುವುದಿಲ್ಲ. ಸಸ್ಯವರ್ಗಗಳ ಮಹತ್ವ ತಿಳಿಯಬೇಕಾದರೆ ನಾವು ಎಷ್ಟು ಬಳಸುತ್ತೇವೆ ಎಂಬುದನ್ನು ದಾಖಲಿಸಬೇಕು . ಈ ಸಸ್ಯವರ್ಗ ಸಮೀಕ್ಷೆ ಮೂಲಕ ಯಾವೆಲ್ಲಾ ಸಸ್ಯಗಳಿವೆ, ಹಾಗು ಅವುಗಳ ವಿಶೇಷತೆ ಏನು, ಅವುಗಳ ಉಪಯೋಗ ಏನು ಎಂಬುದನ್ನು ತಿಳಿಯಬಹುದು. ತರಗತಿ ಭೋದನೆಗೆ ಪೂರಕವಾದ ಸಸ್ಯವರ್ಗಗಳ ಚಿತ್ರಗಳನ್ನು ಪಡೆಯಬಹುದು . ಸಮೀಕ್ಷೆ ಸಂದರ್ಭದಲ್ಲಿ ಗುರುತಿಸಿದ ಕೆಲವು ಸಸ್ಯವರ್ಗಗಳ ಬಗೆಗೆ ಅಂತರ್ಜಾಲದ ಮೂಲಕ ಹೆಚ್ಚಿನ ಮಾಹಿತಿ ಸಂಗ್ರಹಿಸಬಹುದು .ಸಾಮಾನ್ಯವಾಗಿ ಹಲವಾರು ಸಸ್ಯಗಳ ಸ್ಥಳೀಯ ಹೆಸರನ್ನು ಮಾತ್ರವೇ ನಾವು ತಿಳಿದುಕೊಂಡಿರುತ್ತೇವೆ, ಆದರೆ ಆ ಸಸ್ಯಗಳ ವೈಜ್ಞಾನಿಕ ಹೆಸರುಗಳು ತಿಳಿದಿರುವುದಿಲ್ಲ. ಅಂತರ್ಜಾಲದ ಮೂಲಕ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈ ಮೂಲಕ ಕಣ್ಮರೆಯಾಗುತ್ತಿರುವ ಕೆಲವು ಸಸ್ಯವರ್ಗ/ಮರಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಬಹುದು ಈ ಮೂಲಕ ಪರಿಸರ ಸಂರಕ್ಷಣೆಯ ಅರಿವನ್ನು ಮಕ್ಕಳಲ್ಲಿ ಮೂಡಿಸಬಹುದು. ಈ ಸಮೀಕ್ಷೆಯ ನಂತರ : ಮಕ್ಕಳಿಗೆ ಸ್ಥಳೀಯವಾಗಿ ನಮಗೆ ಕಾಣುವ ಸಸ್ಯವರ್ಗಗಳ ಪಟ್ಟಿ, ಭೌಗೋಳಿಕ ಪ್ರದೇಶದಲ್ಲಿನ ಜೀವವೈವಿಧ್ಯತೆಗಳನ್ನು ಪಟ್ಟಿ ಮಾಡಲು ಮತ್ತು ವಿಶ್ಲೇಷಿಸಲು ತಿಳಿಸಬಹುದು . ಈ ಮೂಲಕ ಪಠ್ಯದಲ್ಲಿನ ಪ್ರಾಣಿಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳನ್ನು ಅರ್ಥೈಸಿಕೊಳ್ಳಲು ಹಾಗು ಅನ್ವಯಿಸಿ ನೋಡಲು ಸಾಧ್ಯವಾಗುತ್ತದೆ. ಸಮುದಾಯವನ್ನು ಒಳಗೊಂಡ ಕೆಲವು ಯೋಜನೆಗಳನ್ನು ಮಕ್ಕಳಿಗೆ ನೀಡಬಹದು. ಸ್ಥಳೀಯ ಸಸ್ಯವರ್ಗಗಳ ಬಗ್ಗೆ ಸಮುದಾಯದ ಜನರಿಗೆ ಯಾವ ರೀತಿಯ ಅರಿವಿದೆ, ವಿವಿಧ ಸಸ್ಯವರ್ಗಗಳ , ವಿವಿದ ತಳಿಗಳ ಸಂರಕ್ಷಣೆ ಹೇಗೆ ಮಾಡಬಹುದು ಎಂಬ ವಿಷಯದ ಮೇಲೆ ಯೋಜನೆ ನೀಡಬಹುದು.

ಉದ್ದೇಶಗಳು

  1. ನಮ್ಮ ಸ್ಥಳೀಯ/ಪ್ರಾದೇಶಿಕ ಜೀವವೈವಿದ್ಯತೆಗಳನ್ನು ಅರಿಯುವುದು
  2. ಸಸ್ಯವರ್ಗಗಳಲ್ಲಿ ಹಣ್ಣು ಮತ್ತು ಹೂ ಬಿಡುವ ಮಾದರಿಗಳನ್ನು ಅರ್ಥೈಸಿಕೊಳ್ಳುವುದು
  3. ಸಸ್ಯವರ್ಗಗಳಲ್ಲಿನ ಕಾಲಕಾಲದ ಬದಲಾವಣೆಯನ್ನು ಗುರುತಿಸುವುದು
  4. ಸ್ಥಳೀಯ ವಾತಾವರಣ ಶುಷ್ಕತೆಯನ್ನು ತಿಳಿಯುವುದು
  5. ಸ್ಥಳೀಯ ಮತ್ತು ಇತರೆ ಪ್ರದೇಶಗಳ ಸಸ್ಯವರ್ಗದಲ್ಲಿನ ವಿವಿಧತೆಗಳನ್ನು, ಅರಿಯುವುದು
  6. ಸ್ಥಳೀಯ/ಪ್ರಾದೇಶಿಕ ಜೀವವೈವಿದ್ಯತೆಗಳ ಬಗ್ಗೆ ದಾಖಲೆ ಸಿದ್ದಪಡಿಸುವುದು.
  7. ಸ್ಥಳೀಯ/ಪ್ರಾದೇಶಿಕ ಪರಿಸರದಲ್ಲಿನ ಪವಿತ್ರವನಗಳ ಮಾಹಿತಿ ಪಡೆಯುವುದು.
  8. ಸ್ಥಳೀಯ/ಪ್ರಾದೇಶಿಕ ಪರಿಸರದಲ್ಲಿನ ಔಷದೀಯ ಸಸ್ಯಗಳ ಬಗ್ಗೆ ವರದಿ ತಯಾರಿಸುವುದು.

ಪೂರ್ವಸಿದ್ದತೆ

  1. ಮೊದಲು ಸಮೀಕ್ಷೆಯ ಸ್ಥಳಗಳನ್ನು ನಿರ್ಧರಿಸಬೇಕು . ಭೇಟಿ ನೀಡಲು ನಿರ್ಧರಿಸಿದ ಸ್ಥಳಗಳ ಮೇಲ್ವಚಾರಕರನ್ನು ಸಂಪರ್ಕಿಸಿ ಅವರಿಗೆ ಈ ಸಮೀಕ್ಷೆಯ ಬಗ್ಗೆ ಹಾಗು ಇದರ ಉದ್ದೇಶದ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಅವರ ಅನುಮತಿ ಮತ್ತು ಸಹಕಾರ ಕೋರುವುದು.
  2. ಸಮುದಾಯ ಸಮೀಕ್ಷೆಯ ಯೋಜನೆಯನ್ನು ತಯಾರಿವ ಮೊದಲು ಶಿಕ್ಷಕರು ಕೆಲವು ಪ್ರಶ್ನೆಗಳನ್ನು ಚರ್ಚಿಸುವುದು ಉತ್ತಮ, ಅವುಗಳೆಂದರೆ, ಏನು, ಏಕೆ, ಹೇಗೆ, ಯಾವಾಗ ಮತ್ತು ಯಾರು ಯಾರು ಎಂಬ ಚರ್ಚೆ ನಡೆಯಬೇಕು.ಈ ಪ್ರಶ್ನೆಗಳನ್ನು ಶಿಕ್ಷಕರು ಬುದ್ಧಿಮಂಥನದ ಮೂಲಕ ಚರ್ಚಿಸಿ ಈ ಸಮೀಕ್ಷೆ ಕಾರ್ಯಕ್ರಮಕ್ಕೆ ಸೂಕ್ತ ಸಿದ್ದತೆ ಮಾಡಿಕೊಳ್ಳುವರು..
  3. ಶಿಕ್ಷಕರು ಜವಾಬ್ದಾರಿ ಹಂಚಿಕೆ ಮಾಡಿಕೊಳ್ಳುವುದು . ಮಕ್ಕಳ ಸುರಕ್ಷತೆಯ ಬಗ್ಗೆಯೂ ಗಮನವಹಿಸುವುದು.
  4. ಮಕ್ಕಳಲ್ಲಿ ನಾಯಕರನ್ನು ಗುರುತಿಸಿ ಶಿಸ್ತಿನಿಂದ ಈ ಕಾರ್ಯಕ್ರಮ ನಡೆಯಲು ಸೂಚನೆ ನೀಡುವುದು .
  5. ಸಮೀಕ್ಷೆಗೆ ಬೇಕಾದ ಪರಿಕರಗಳನ್ನು ಸಿದ್ದಪಟಿಸಿಕೊಳ್ಳುವುದು . ಕ್ಯಾಮೆರಾ, ನೋಟ್ ಪುಸ್ತಕ ಗಳು ಇತ್ಯಾದಿ. ಪ್ರತೀ ತಂಡವನ್ನು ಆ ಯಾ ತಂಡದ ನಾಯಕನೇ ಮುನ್ನೆಡೆಸುತ್ತಿದ್ದು , ಒಬ್ಬೊಬ್ಬ ಶಿಕ್ಷಕರು ಆ ತಂಡಗಳ ಜೊತೆಯಿರುತ್ತಾರೆ.
  6. ಮಕ್ಕಳಿಗೆ ಮೂಡುವ ಯಾವುದೇ ರೀತಿಯ ಪ್ರಶ್ನೆಯನ್ನೂ ಸಹ ಕೇಳಲು ಅವಕಾಶವಾಗಬೇಕು . ಕೆಲವು ಮಕ್ಕಳು ತಮಗೆ ಸಿಗುವ ಮಾಹಿತಿಯನ್ನು ಟಿಪ್ಪಣಿ ಮಾಡಿಕೊಳ್ಳಬಹುದು, ಇನ್ನು ಕೆಲವರು ಪೋಟೋ ತೆಗೆದುಕೊಳ್ಳಬಹುದು.
  7. ಮಕ್ಕಳನ್ನು ಗುಂಪುಗಳಲ್ಲಿ ವಿಂಗಡಿಸಿದ ನಂತರ , ತಮ್ಮ ಶಾಲಾ ಆವರಣ , ಸಮುದಾಯದ ಮೈದಾನ, ಹತ್ತಿರದ ಹೊಲಗದ್ದೆ, ತೋಟಗಳು ಹೀಗೆ ಬೇರೆ ಸ್ಥಳಗಳಿಗೆ ಬೇಟಿ ನೀಡುವುದು.

ಕಾರ್ಯವಿಧಾನ

ಮಕ್ಕಳನ್ನು ಗುಂಪುಗಳಲ್ಲಿ ವಿಂಗಡಿಸಿದ ನಂತರ , ತಮ್ಮ ಶಾಲಾ ಆವರಣ , ಸಮುದಾಯದ ಮೈದಾನ, ಹತ್ತಿರದ ಹೊಲಗದ್ದೆ, ತೋಟಗಳು ಹೀಗೆ ಬೇರೆ ಸ್ಥಳಗಳಿಗೆ ಬೇಟಿ ನೀಡುವುದು. ಮಕ್ಕಳು ಗುಂಪಿನಲ್ಲಿ ಭೇಟಿ ಮಾಡುತ್ತ, ಅಲ್ಲಿ ಕಾನುವ ವಿವಿಧ ಸಸ್ಯವರ್ಗಗಳ, ಬೇರೆ ಬೇರೆ ಜಾತಿಯ ಮರಗಿಡಗಳನ್ನು ಪಟ್ಟಿ ಮಾಡಿಕೊಳ್ಳುವರು, ಪೋಟೋ, ವೀಡಿಯೋ ತೆಗೆದುಕೊಳ್ಳುವರು. ಹೂವು ಹಣ್ಣು ಎಲೆ, ಚಿಗುರು, ಯಾವ ಹಂತದಲ್ಲಿದೆ, ಬಗ್ಗೆ ತಳಿಯಬಹುದು ಕಾಲಕಾಲಕ್ಕೆ ಆಗುವ ಬದಲಾಣೆಯನ್ನು ಗಮನಿಸಲು ತಿಳಿಸಬಹುದು. ಅದೇ ಸಮಯದಲ್ಲಿ ತಾವು ನೋಡುವ ಸಸ್ಯವರ್ಗಗಳ ಬಗ್ಗೆ ತಮಗೆ ತಿಳಿದಿರುವ ಮಾಹಿತಿ, ತಾವು ಯಾವೆಲ್ಲಾ ಸಂದರ್ಭದಲ್ಲಿ ಈ ಸಸ್ಯಗಳನ್ನು ಬಳಸಿದ್ದೇವೆ ಎಂಬುದನ್ನು ಪರಸ್ಪರರು ಹಂಚಿಕೊಂಡು ಆ ಸಸ್ಯವರ್ಗಗಳ ವಿಶೇಷತೆಯನ್ನು ಚರ್ಚಿಸುವರು . ಕೆಲವು ಸಸ್ಯವರ್ಗಗಳ ಮಾಹಿತಿ ಸರಿಯಾಗಿ ದೊರೆಯದಿದ್ದಲ್ಲಿ ಶಿಕ್ಷಕರನ್ನು ಕೇಳಿ ತಿಳಿಯಬಹದು ಅಥವಾ ಆ ಸಸ್ಯದ ಬಗ್ಗೆ ಅಂತರ್ಜಾಲದಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವರು .

ವಿದ್ಯುನ್ಮಾನ ಮಾಹಿತಿ ಮಂಡನೆ - Digital Story Telling

ಸಮುದಾಯ ಸಮೀಕ್ಷೆಯ ನಂತರ ವಿಧ್ಯಾರ್ಥಿಗಳು ತಮ್ಮ ತಂಡದವರೊಡನೆ ಕುಳಿತು ಎಲ್ಲರೂ ಚರ್ಚಿಸಿ ಈ ಕಾರ್ಯಕ್ರಮದಲ್ಲಿ ತಾವು ಪಡೆದುಕೊಂಡ ಮಾಹಿತಿಯನ್ನು ಒಂದೆಡೆ ದಾಖಲಿಸುವುದು. ಟಿಪ್ಪಣಿಗಳು, ಪೋಟೋಗಳು, ವೀಡಿಯೋಗಳು ಹಾಗು ಪೋಟೂಗಳನ್ನು ಒಂದೆಡೆಗೆ ಸಂಗ್ರಹಿಸಿಕೊಳ್ಳುವುದು.. ತಂಡದಲ್ಲಿ ಚರ್ಚಸಿ, ಈ ಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ಶಿಕ್ಷಕರ ಸಹಾಯದಿಂದ ಪೋಟೋಗಳನ್ನು ಹಾಗು ವೀಡಿಯೋಗಳನ್ನು ಹಾಗು ತಾವು ಪಡೆದ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ಸೇರಿಸಿ ಮಂಡನೆಗೆ ಸಿದ್ದಗೊಳಿಸುವುದು . ಸಮೀಕ್ಷೆ ಸಂದರ್ಭದಲ್ಲಿ ತಾವು ಕಂಡುಕೊಂಡ ಅಂಶಗಳು/ಅನುಭವಗಳು/ಮಾಹಿತಿಗಳನ್ನು ಕಥೆಯ ರೂಪದಲ್ಲಿ ಹಂಚಿಕೊಳ್ಳಬೇಕು . ತಾವು ಸಂಗ್ರಹಿಸಿದ ಪೋಟೋಗಳನ್ನು ವೀಡಿಯೋಗಳನ್ನು ಕಂಪ್ಯೂಟರ್ ನ ಮೂಲಕ ಪ್ರಸ್ತುತಪಡಿಸಬಹುದು. ಇದು ಅವರ ಕಲಿಕೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಕಥೆಯ ರೂಪದಲ್ಲಿ ಹಂಚಿಕೊಂಡಾಗ , ಇತರೆ ಗುಂಪಿನವರಿಗೂ ಆಸಕ್ತಿ ಮೂಡಿಸಲು ಹಾಗು ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯುನ್ಮಾನ ಮಾಹಿತಿ ಮಂಡನೆಯನ್ನು ಮಾಡಲು ಕಂಪ್ಯೂಟರ್, ಪ್ರೋಜೆಕ್ಟರ್, ಸ್ಪೀಕರ್ ಗಳ ಅವಶ್ಯಕತೆ ಇರುತ್ತದೆ, ಈ ಸಾಮಗ್ರಿಗಳನ್ನು ಬಳಸಿ ಮಂಡನೆ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಆಸಕ್ತಿ ಮೂಡಿಸಬಹದು. ಸಮೀಕ್ಷೆ ಭೇಟಿಯ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಗಳು, ಪೋಟೋಗಳು, ವೀಡಿಯೋಗಳ್ನು ನೇರವಾಗಿ ಪ್ರದರ್ಶಿಸುವ ಮೂಲಕ ಪ್ರತ್ಯೇಕ್ಷ ಚಿತ್ರಣವನ್ನು ನೀಡಬಹುದು. . ಈ ಮೂಲಕ ಮಂಡನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ ಮತ್ತು ಪ್ರಸ್ತುತಿ ಕೌಶಲ ದ ಕಲಿಕೆಯೂ ಸಾಧ್ಯವಾಗುತ್ತದೆ. ಬರವಣಿಗೆ ಮೂಲಕ ಅಥವಾ ಭಾಷಣದ ಮೂಲಕ ನೇರವಾಗಿ ವಿಷಯವನ್ನು ತಿಳಿಸುವುದಕ್ಕಿಂತ ಈ ರೀತಿಯ ವಿದ್ಯುನ್ಮಾನವಾಗಿ ಮಂಡನೆ ಮಾಡುವುದರಿಂದ , ಆ ಸ್ಥಳಕ್ಕೆ ಭೇಟಿ ನೀಡದ ಮಕ್ಕಳಿಗೂ ಸಹ ಸಂಪೂರ್ಣವಾದ ಪ್ರತ್ಯೇಕ್ಷ ಅನುಭವವನ್ನು ನೀಡಬಹದು. ಭೇಟಿ ಮುಗಿಸಿದ ನಂತರ ಸುರಕ್ಷಿತವಾಗಿ ಶಾಲೆಗೆ ಮರಳುವುದು. ನಂತರ ತಮ್ಮ ತಂಡದವರೊಡನೆ ಕುಳಿತು ಎಲ್ಲರೂ ಚರ್ಚಿಸಿ ಈ ಬೇಟಿಯಲ್ಲಿ ತಾವು ಪಡೆದುಕೊಂಡ ಮಾಹಿತಿಯನ್ನು ಒಂದೆಡೆ ದಾಖಲಿಸುವುದು. ಟಿಪ್ಪಣಿಗಳು, ಪೋಟೋಗಳು, ವೀಡಿಯೋಗಳು ಹಾಗು ಪೋಟೂಗಳನ್ನು ಒಂದೆಡೆಗೆ ಸಂಗ್ರಹಿಸಿಕೊಳ್ಳುವುದು.. ತಂಡದಲ್ಲಿ ಚರ್ಚಸಿ, ಈ ಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ಶಿಕ್ಷಕರ ಸಹಾಯದಿಂದ ಪೋಟೋಗಳನ್ನು ಹಾಗು ವೀಡಿಯೋಗಳನ್ನು ಹಾಗು ತಾವು ಪಡೆದ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ಸೇರಿಸಿ ಮಂಡನೆಗೆ ಸಿದ್ದಗೊಳಿಸುವುದು . ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಬಂದಿರುವ ಇತರೆ ಗುಂಪಿಗಳೆಲ್ಲವೂ ಒಂದೆಡೆ ಸೇರಿ ತಮ್ಮ ಮಂಡನೆಯನ್ನು ಪ್ರಸ್ತುತಿ ಪಡಿಸುವುದು. ಶಿಕ್ಷಕರು ಪ್ರತೀ ತಂಡದ ಜೊತೆಯಿದ್ದು ತಾಂತ್ರಿಕವಾಗಿ ಸಹಾಯ ನೀಡುವರು .

ನಿರೀಕ್ಷಿತ ಫಲಿತಾಂಶ:

  1. ಮಕ್ಕಳು ನಮ್ಮ ಸ್ಥಳೀಯ/ಪ್ರಾದೇಶಿಕ ಜೀವವೈವಿದ್ಯತೆಗಳನ್ನು ಅರಿಯುವರು.
  2. ಸಸ್ಯವರ್ಗಗಳಲ್ಲಿ ಹಣ್ಣು ಮತ್ತು ಹೂ ಬಿಡುವ ಮಾದರಿಗಳನ್ನು ಅರ್ಥೈಸಿಕೊಳ್ಳುವರು
  3. ಸಸ್ಯವರ್ಗಗಳಲ್ಲಿನ ಕಾಲಕಾಲದ ಬದಲಾವಣೆಯನ್ನು ಗುರುತಿಸುವರು
  4. ಸ್ಥಳೀಯ ವಾತಾವರಣ ಶುಷ್ಕತೆಯನ್ನು ತಿಳಿಯುವುರು
  5. ಸ್ಥಳೀಯ ಮತ್ತು ಇತರೆ ಪ್ರದೇಶಗಳ ಸಸ್ಯವರ್ಗದಲ್ಲಿನ ವಿವಿಧತೆಗಳನ್ನು, ಅರಿಯುವರು
  6. ಸ್ಥಳೀಯ/ಪ್ರಾದೇಶಿಕ ಜೀವವೈವಿದ್ಯತೆಗಳ ಬಗ್ಗೆ ದಾಖಲೆ ಸಿದ್ದಪಡಿಸುವರು
  7. ಸ್ಥಳೀಯ/ಪ್ರಾದೇಶಿಕ ಪರಿಸರದಲ್ಲಿನ ಪವಿತ್ರವನಗಳ ಮಾಹಿತಿ ಪಡೆಯುವರು.
  8. ಸ್ಥಳೀಯ/ಪ್ರಾದೇಶಿಕ ಪರಿಸರದಲ್ಲಿನ ಔಷದೀಯ ಸಸ್ಯಗಳ ಬಗ್ಗೆ ವರದಿ ತಯಾರಿಸುವುದು.

ಮೌಲ್ಯಮಾಪನ ಅಂಶಗಳು

  1. ಭಾಗವಹಿಸುವಿಕೆ
  2. ಗುಂಪುಕಾರ್ಯ
  3. ವೀಕ್ಷಣೆ
  4. ಮಾಹಿತಿ ಸಂಗ್ರಹಣೆ
  5. ಚಿತ್ರಕಲೆ. / ವಿನ್ಯಾಸ
  6. ದತ್ತಾಂಶ
  7. ವಿಶ್ಲೇಷಣೆ
  8. ವರದಿ ತಯಾರಿಸುವಿಕೆ
  9. ಸಾರಾಂಶೀಕರಣ

ಪಠ್ಯಕ್ರಮಕ್ಕೆ ಸಂಬಂಧೀಕರಣ