ಸಾಬೂನೀಕರಣ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆ - ಚಟುವಟಿಕೆಯ ಹೆಸರು
ಪ್ರಯೋಗಶಾಲೆಯಲ್ಲಿ ಸಾಬೂನನ್ನು ತಯಾರಿಸುವುದು.
ಅಂದಾಜು ಸಮಯ
60 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ೨೫೦ಮಿಲಿ ಬೀಕರ್ -೩
- ೧೦೦ ಮಿಲಿ ಬೀಕರ್ -೨
- ವಯರ್ ಗಾಝ್
- ಸ್ಪಿರಿಟ್ ದೀಪ
- ಗಾಜಿನ ಕಡ್ಡಿ
- ಪ್ರನಾಳಗಳು
- ಶೋಧಿಸುವ ಹಾಳೆಗಳು
- ಲಾಲಿಕೆ
- ೧೦೦ ಮಿಲಿ ಕೊಬ್ಬರಿ ಎಣ್ಣೆ-೩೦ ಮಿಲಿ
- ವಾಚ್ ಗ್ಲಾಸ್
- ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ-೬೦ ಮಿಲಿ
- ಸೋಡಿಯಂ ಕ್ಲೋರೈಡ್ ದ್ರಾವಣ -೫೦ ಮಿಲಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ರಾಸಾಯನಶಾಸ್ತ್ರದ ಪ್ರಯೋಗ ಮಾಡುವಾಗ ಏಪ್ರೆನ್ ದರಿಸಿ ಪ್ರಯೋಗ ಮಾಡಬೇಕು
- ಸೋಡಿಯಂ ಹೈಡ್ರಾಕ್ಸೈಡ್ ಪ್ರಬಲ ಪ್ರತ್ಯಾಮ್ಲ ವಾಗಿದ್ದು ಚಮ೯ಕ್ಕೆ ಹಾನಿ ಉಂಟುಮಾಡಬಹುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ೨೫೦ ಮಿಲಿ ಬೀಕರಿನಲ್ಲಿ ೩೦ ಮಿಲಿ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ.
- ಅದಕ್ಕೆ ೬೦ ಮಿಲಿ ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣವನ್ನು ನಿಧಾನವಾಗಿ ಗಾಜಿನ ಕಡ್ಡಿಯ ಸಹಾಯದಿಂದ ಕಲಕುತ್ತಾ ಸೇರಿಸಿ.
- ಬೀಕರನ್ನು ತ್ರಿಪಾದ ಸ್ಥಂಭದ ಮೇಲಿರುವ ವಯರ್ ಗಾಝ್ ಮೇಲೆ ಇಡಿ.
- ಮಿಶ್ರಣವನ್ನು ನಿಧಾನವಾಗಿ ಕಲಕುತ್ತಾ ಸ್ಪಿರಿಟ್ ದೀಪದ ಸಹಾಯದಿಂದ ಕಾಯಿಸಿ
- ಬೀಕರಿನ ಮೇಲ್ಭಾಗದಲ್ಲಿ ತೆಳುವಾದ ಸಾಬೂನಿನ ಪದರ ಬರುವವರೆಗೆ ಕಾಯಿಸಿ
- ಸ್ಪಿರಿಟ್ ದೀಪವನ್ನು ಆರಿಸಿ ಮಿಶ್ರಣವನ್ನು ಕೊಠಡಿಯ ಉಷ್ಣತೆಗೆ ತಣ್ಣಗಾಗಲು ಬಿಡಿ
- ತಣ್ಣಗಾದ ಮಿಶ್ರಣಕ್ಕೆ ೧೦೦ ಮಿಲಿ ಪ್ರಬಲ ಸೋಡಿಯಂ ಕ್ಲೋರೈಡ್ ದ್ರಾವಣವನ್ನು ಸೇರಿಸಿ ಗಾಜಿನ ಕಡ್ಡಿಯ ಸಹಾಯದಿಂದ ಚನ್ನಾಗಿ ಕಲಕಿ
- ಬೀಕರಿನಲ್ಲಾಗುವ ಬದಲಾವಣೆಯನ್ನು ವೀಕ್ಷಿಸಿ.
- ಶೋಧಿಸುವ ಕಾಗದದ ಸಹಾಯದಿಂದ ಮಿಶ್ರಣವನ್ನು ಬೇಪ೯ಡಿಸಿ
- ಶೋಧಿಸುವ ಕಾಗದದ ಸಹಾಯದಿಂದ ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ಮೆದು ನೀರಿನ ಸಹಾಯದಿಂದ ತೊಳೆಯಿರಿ.ವೀಕ್ಷಣೆಯನ್ನು ದಾಖಲಿಸಿ.
ವೀಕ್ಷಣೆ:
- ಬೀಕರಿನಲ್ಲಿ ಸಾಬೂನು ಮೇಲ್ಭಾಗದಲ್ಲಿ ಸಂಗ್ರಹವಾಗಿರುತ್ತದೆ.
- ಶೋಧಿಸಿದ ಕಾಗದದ ಮೇಲಿರುವ ಮಿಶ್ರಣವು ಮೆದು ನೀರಿನೊಂದಿಗೆ ಚೆನ್ನಾಗಿ ಮತ್ತು ಸರಾಗವಾಗಿ ನೊರೆ ಕೊಡುತ್ತದೆ.
ತೀಮಾ೯ನ: ಮೇಲಿನ ಪ್ರಯೋಗದಲ್ಲಿ ಕೊಬ್ಬರಿ ಎಣ್ಣೆ ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ವತಿ೯ಸಿ ಜಲವಿಭಜನೆ ಹೊಂದಿ ಸಾಬೂನು ಮತ್ತು ಗ್ಲಿಸರಾಲ್ ಉತ್ಪತ್ತಿ ಆಗುತ್ತದೆ. ಸೋಡಿಯಂ ಕ್ಲೋರೈಡನ್ನು ನೀರು ಮತ್ತು ಗ್ಲಿಸರಾಲ್ ನಲ್ಲಿರುವ ಸಾಬೂನ್ನು ಪ್ರತ್ಯೇಕಿಸಲು ಮತ್ತು ಹೆಚ್ಚುವರಿ ಸೋಡಿಯಂ ಹೈಡ್ರಾಕ್ಸೈಡ್ ನ್ನು ತೆಗೆಯಲು ಬಳಸುತ್ತಾರೆ.
ರಾಸಾಯನಿಕ ಕ್ರಿಯೆ:
ಎಣ್ಣೆ ( ಕೊಬ್ಬು ) + ಸೋಡಿಯಂ ಹೈಡ್ರಾಕ್ಸೈಡ್ → ಸಾಬೂನು + ಗ್ಲಿಸರಾಲ್ ( ಸ್ಲೈಡ್)
{{#ev:youtube|oryBDyX8vS4| 500|left }}
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಇತ್ತಿಚಿನ ದಿನಗಳಲ್ಲಿ ಸಾಬೂನನ್ನು ಮನೆಗಳಲ್ಲಿ ತಯಾರಿಸಿ ಕೊಳ್ಳಬಹುದು.
ಇತ್ತೀಚಿಗೆ ಸಾಬೂನಿಗಿ೦ತ ಹೆಚ್ಚಾಗಿ ಮಾಜ೯ಕಗಳನ್ನು ಬಳಸುತ್ತಿರುವುದರಿ೦ದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಏಕೆಂದರೆ ಮಾಜ೯ಕಗಳು ಜೈವಿಕ ಶಿಥಿಲೀಯವಲ್ಲ.
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಸಾಬೂನು ಎಂದರೇನು?
- ಸಾಬೂನು ತಯಾರಿಕೆಯಲ್ಲಿ ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದ ಸೋಡಿಯಂ ಹೈಡ್ರಾಕ್ಸೈಡನ್ನು ಪ್ರತ್ಯೇಕಿಸಬೇಕು. ಏಕೆ?
- ಸಾಬೂನಿಕರಣದ ಉಪುತ್ಪನ್ನ ಯಾವುದು?
- ಸೋಡಿಯಂ ಸಾಬೂನು ಮತ್ತು ಪೊಟ್ಯಾಷಿಯಂ ಸಾಬೂನುಗಳಿಗಿರುವ ವ್ಯತ್ಯಾಸ ತಿಳಿಸಿ.
- ಬಟ್ಟೆ ಸಾಬೂನಿಗೂ ಸ್ನಾನದ ಸಾಬೂನಿಗಿರುವ ವ್ಯತ್ಯಾಸವೇನು?
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದೈನಂದಿನ_ಜೀವನದಲ್ಲಿ_ರಾಸಾಯನಿಕಗಳು_-೧