ಪರಿಸರ ಮಾಲಿನ್ಯಕಾರಗಳು ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೨೧:೪೯, ೨೬ ಆಗಸ್ಟ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→‎ಚಟುವಟಿಕೆ - ಚಟುವಟಿಕೆಯ ಹೆಸರು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಚಾರ್ಟ ತಯಾರಿಕೆ (ವೈಯುಕ್ತಿಕ ಚಟುವಟಿಕೆ ) Pollutantschart.jpg

ಅಂದಾಜು ಸಮಯ

20 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಗ್ರಂಥಾಲಯ , ಮಾಸಿಕ /ಸಾಪ್ತಾಹಿಕ/ದೈನಿಕ ಪತ್ರಿಕೆಗಳು ,ಅಂತರ್ಜಾಲ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಚಾರ್ಟಗಳ ತಯಾರಿಕೆ ಸುಲಭ ,ಸರಳ ಹಾಗೂ ಅಗ್ಗವಾಗಿರಬೇಕು.ಸ್ವತಃ ವಿದ್ಯಾರ್ಥಿಗಳೇ ತಾಯಾರಿಸಿರಬೇಕು.ಚಾರ್ಟ್ ಒಳಗೊಂಡಿರುವ ಅಂಶಗಳು ಮತ್ತು ಮೌಲ್ಯಮಾಪನ ಮಾನಕಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಮಾಲಿನ್ಯಕಾರಕಗಳ ನಡುವಿನ ವ್ಯತ್ಯಾಸಗಳನ್ನು ಒಳಗೊಂಡಿರುವ ಅಂದವಾದ ಚಾರ್ಟನ್ನು ತಯಾಇರಿಸಿ
  2. ಮಾಲಿನ್ಯಕಾರಕಗಳ ವಿಧಗಳಿಗೆ ಸಂಬಂಧಪಟ್ಟ ಚಿತ್ರಗಳನ್ನು ಸಂಗ್ರಹಿಸಿ ಅದನ್ನು ಪ್ರತ್ಯೇಕ ಕೋಷ್ಟಕದಲ್ಲಿ ಅಂಟಿಸಿ
  3. ಚಾರ್ಟ್ ನ ವಿಷಯವು ಮಾಲಿನ್ಯಕಾರಕಗಳು ವಿಧ ,ಪರಿಸರ ಮೇಲಾಗುವ ಪರಿಣಾಮಗಳು ಮತ್ತು ನಿಯಂತ್ರಣ ಕ್ರಮಗಳನ್ನು ಒಳಗೊಂಡಿರಬೇಕು .
  4. ಚಾರ್ಟ ಒಳಗೊಂಡಿರುವ ಅಂಶಗಳೇ ಮೌಲ್ಯಮಾಪನಕ್ಕೆ ಒಳಗೊಂಡಿರುತ್ತವೆ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ದಿನ ನಿತ್ಯ ಬಳಸುವ ವಸ್ತುಗಳನ್ನು ಪಟ್ಟಿ ಮಾಡಿ
  2. ನೈಸರ್ಗಿಕ ಹಾಗೂ ಕೃತಕ ವಸ್ತುಗಳನ್ನಾಗಿ ವಿಂಗಡಿಸಿ ಬರೆಯಿರಿ
  3. ಕೊಳೆಯುವ /ಜೈವಿಕ ವಿಘಟನೆಯಾಗುವ ಹಾಗೂ ಕೊಳೆಯದ /ಜೈವಿಕ ವಿಘಟನೆಯಾಗದ ಮಾಲಿನ್ಯಕಾರಕಗಳ ವ್ಯತ್ಯಾಸಗಳ ಚಾರ್ಟ ತಯಾರಿಸಿ ತರಗತಿಯಲ್ಲಿ ಚರ್ಚಿಸಿ
  4. ಕೊಳೆಯದ ವಸ್ತುಗಳಿಂದ ಪರಿಸರದ ಮೇಲಾಗುವ ಪರಿಣಾಮಗಳೇನು ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಜೈವಿಕ ವಿಘಟನೆಗೊಳಗಾಗುವ ಮಾಲಿನ್ಯಕಾರಕಗಳ ಬಳಕೆ ಪ್ರೋತ್ಸಾಹಿಸ ಬೇಕು . ಏಕೆ ? ಚರ್ಚಿಸಿ
  2. ಜೈವಿಕ ವಿಘಟನೆಗೊಳಗಾಗದ ಮಾಲಿನ್ಯಕಾರಗಳ ಬಳಕೆ ಯಿಂದ ಪರಿಸರ ಮೇಲಾಗುವ ಪರಿಣಾಮಗಳ ಬಗ್ಗೆ ಪ್ರಬಂಧ ಬರೆಯಿರಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್