ವಿಕಿರಣಮಾಲಿನ್ಯ ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೨೧, ೭ ಸೆಪ್ಟೆಂಬರ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→‎ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಪ್ರಬಂಧ ರಚನೆ : ವಿಷಯ : ವಿಕಿರಣ ಮಾಲಿನ್ಯದಿಂದ ಪರಿಸರದ ಮೇಲಾಗುವ ಪರಿಣಾಮಗಳು ಬಗ್ಗೆ ಚರ್ಚಿಸಿ

ಅಂದಾಜು ಸಮಯ

40 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕಾಗದ ,ಪೆನ್ನು , ಗ್ರಂಥಾಲಯ , ಅಂತರ್ಜಾಲ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ವಿಕಿರಣ ಮಾಲಿನ್ಯ : ಶಕ್ತಿಶಾಲಿ ವಿಕಿರಣಗಳು ಜೀವಿಯ ಜೈವಿಕ ಬೃಹತ್ ಅಣುಗಳನ್ನು ಭೇದಿಸಿ ಅಣುರಚನೆಯನ್ನು ಬದಲಾಯಿಸಿ ಮಾರಕ ಅಪಾಯಕಾರಿ ಅನುವಂಶೀಯ ಕಾಯಿಲೆಗಳಿಗೆ ಕಾರಣವಾಗುವುದಕ್ಕೆ ವಿಕಿರಣ ಮಾಲಿನ್ಯ ಎನ್ನುವರು ಅಥವಾ ಅಣುಗಳ ನ್ಯೂಕ್ಲಿಯಸ್ ನಲ್ಲಿ ನಡೆಯುವ ಕ್ರಿಯೆಗಳಿಂದಾಗಿ ಪ್ರೋಟಾನ್ ಗಳು /ಆಲ್ಫಾ ಕಣಗಳು , ಎಲೆಕ್ಟ್ರಾನ್ ಗಳು /ಬೀಟಾ ಕಣಗಳು ಹಾಗೂ ಗ್ಯಾಮಾ ವಿಕಿರಣಗಳು ಬಿಡುಗಡೆಯಾಗುವುದಕ್ಕೆ ವಿಕಿರಣ ಮಾಲಿನ್ಯ ಎನ್ನುವರು.. ವಿಕಿರಣ ಎಷ್ಟಿದ್ದರೆ ಅಪಾಯ ? : ಬೆಳಕಿನ ಕಿರಣಕ್ಕೂ ವಿಕಿರಣಕ್ಕೂ ಇರುವ ವ್ಯತ್ಯಾಸ ಗೊತ್ತೇ ? ಬೆಳಕಿನ ಕಿರಣವು ನಮ್ಮನ್ನು ಅಥವಾ ಯಾವುದೇ ಜೀವಕೋಶವನ್ನು ಸ್ಪರ್ಶಿಸಿದರೆ ಶಾಖ ತಟ್ಟುತ್ತದೆ.ಜೀವಕೋಶದ ಅಣುಗಳಿಗೆ ಏನೂ ಆಗುವುದಿಲ್ಲ .ವಿಕಿರಣ ಹಾಗಲ್ಲ , ಜಾಸ್ತಿ ಶಕ್ತಿ ಇರುವ ಅದು ಜೀವಕೋಶವನ್ನು ಸ್ಪರ್ಶಿಸಿದರೆ ಅಣುವಿನಲ್ಲಿರುವ ಇಲೆಕ್ಟ್ರಾನ್ ಗಳು ಕಿತ್ತೆದ್ದು ಬರುತ್ತವೆ.ಜೀವಕೋಶಗಳಲ್ಲಿ ಶತಕೋಟಿಗಟ್ಟಲೇ ಅಣುಗಳಿರುವುದರಿಂದ ವಿಕಿರಣ ಸೂಸಿದಾಗ ಅವು ವಿರೂಪಗೊಳ್ಳುತ್ತವೆ. ಮೈಕ್ರೋವೇವ್ , ಎಕ್ಸ-ರೇ , ಗ್ಯಾಮಾ ರೇ , ನ್ಯೂಟ್ರಾನ್ ಕಿರಣಗಳೂ ಶಕ್ತಿಶಾಲಿ ಇದ್ದರೆ ಇಲೆಕ್ಟ್ರಾನ್ ಗಳನ್ನು ಕಿತ್ತಬ್ಬೆಸುವುದನ್ನು ವಿಕಿರಣ ಸೂಸುವಿಕೆ ಎನ್ನುವರು.ವಿಕಿರಣ ಹೊರಗಿನಿಂದ ನಮಗೆ ತಟ್ಟಬಹುದು ,ಇಲ್ಲವೇ ದೇಹದೊಳಕ್ಕೆ ಸೂಕ್ಷ್ಮ ರೂಪದಲ್ಲಿ ಸೇರಿ ಕೂತಲ್ಲೇ ವಿಕಿರಣ ಸೂಸುತ್ತಿರಬಹುದು .ಜೀವಕೊಶಗಳು ವಿರೂಪಗೊಂಡರೆ ಕ್ಯಾನ್ಸರ್ ಉಂಟಾಗುತ್ತದೆ. ಜೀವಕೋಶ ಎಷ್ಟು ಸೂಕ್ಷ್ಮ ಸಂವೇದಿ , ವಿಕಿರಣದ ಡೋಸ್ ಎಷ್ಟಿದೆ ಎಂಬುದರ ಮೇಲೆ ಕ್ಯಾನ್ಸರ್ ತೀವ್ರತೆ ನಿರ್ಧರಿತವಾಗುತ್ತದೆ. ಅಣುವಿಕಿರಣ ವನ್ನು ಮೈಕ್ರೋ -ಸಿವರ್ಟ್ (mSv) ಎಂಬ ಮೂಲಮಾನದಿಂದ ಅಳೆಯುತ್ತಾರೆ.ನೈಸರ್ಗಿಕ ಕಾರಣದಿಂದ ಸಾಮಾನ್ಯವಾಗಿ ನಮಗೆ ವರ್ಷವೊಂದಕ್ಕೆ 2 mSv ನಷ್ಟು ವಿಕಿರಣ ಸೋಂಕುತ್ತದೆ.ಅಣುಸ್ಥಾವರ ,ವಿಕಿರಣ ಗಣಿಗಾರಿಕೆಗಳಲ್ಲಿ ವರ್ಷಕ್ಕೆ 20 mSv ನಷ್ಟು ಪಡೆಯುತ್ತಾರೆ.ಅದಕ್ಕಿಂತ ಹೆಚ್ಚು ಪಡೆದರೆ ಕೆಲಸ ಮಾಡುವಂತಿಲ್ಲ.ಕನಿಷ್ಟ 100 mSv ನಷ್ಟು ವಿಕಿರಣ ಸೋಂಕು ಕ್ಯಾನ್ಸರ್ ಗೆ ಆಹ್ವಾನ .5000 mSv ನಷ್ಟು ವಿಕಿರಣ ಸೋಂಕು ಅರ್ಧದಷ್ಟು ಜನ ತಿಂಗಳೊಳಗೆ ಸಾಯುತ್ತಾರೆ.ಪುಕುಶಿಮಾ ಅಣುಸ್ಥಾವರ ದರ್ಘಟನೆಯಿಂದ ಬೆಂಕಿ ಆರಿಸಲೆಂದು ಅಮೆರಿಕಾದಿಂದ ಬಂದ ಸಿಬ್ಬಂದಿ ಪುಕುಶಿಮಾ ಘಟಕದಿಂದ 80ಕಿ.ಮೀ ದೂರವಿರಬೇಕೆಂದು ಅಲ್ಲಿನ ಸರಕಾರ ಆದೇಶ ನೀಡಿತ್ತು. ಮಾಹಿತಿ ಮೂಲ ಕೃಪೆ : 9 ನೇ ತರಗತಿ ಕನ್ನಡ ಮಾಧ್ಯಮ ಪಠ್ಯಪುಸ್ತಕ - ತಮಿಳುನಾಡು ರಾಜ್ಯ ಪಠ್ಯಪುಸ್ತಕ , ದಿಕ್ಸೂಚಿ ಮಾಸಿಕ ಪತ್ರಿಕೆ ಸಂಚಿಕೆ ಫೆಬ್ರವರಿ 1995 , ತರಂಗ ಸಾಪ್ತಾಹಿಕ ಪತ್ರಿಕೆ 31 ಮಾರ್ಚ್ -2011

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ವಿಕಿರಣ ಎಂದರೇನು ?
  2. ವಿಕಿರಣ ಶೀಲ ಧಾತುಗಳು ಎಂದರೇನು ? ಉದಾಹರಣೆ ಕೊಡಿ
  3. ವಿಕಿರಣ ಪಟುತ್ವ ಹಾಗೂ ವಿಕಿರಣ ಕ್ಷಯನ ಎಂದರೇನು ?
  4. ವಿಕಿರಣ ಕ್ಷಯನದ ವಿಧಗಳು ಮತ್ತು ದ್ರವ್ಯಾಂತರಣ ಎಂದರೇನು ?
  5. ವಿಕಿರಣಗಳಲ್ಲಿ ಅತ್ಯಂತ ಅಪಾಯಕಾರಿ ವಿಕಿರಣಗಳು ಯಾವುವು ?
  6. ಅಪಾಯಕಾರಿ ವಿಕಿರಣಗಳಿಂದ ಪರಿಸರ ಮೇಲಾಗುವ ಪರಿಣಾಮಗಳೇನು ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಬಂಧ ರಚನೆಯ ಮೌಲ್ಯಮಾಪನದ ಮಾನಕಗಳು

  1. ಪ್ರಬಂಧ ವಿಷಯದ ಪರಿಕಲ್ಪನೆ ಅರ್ಥವಾಗಿದೆಯೇ ?
  2. ಪ್ರಬಂಧವು ವಿಕಿರಣ ಹಾಗೂ ವಿಕಿರಣಶೀಲತೆ ಬಗ್ಗೆ ವಿವರವಿದೆಯೇ ?
  3. ವಿಕಿರಣದ ಅಪಾಯಗಳು ಮತ್ತು ಅದಕ್ಕೆ ನಿಯಂತ್ರಣ ಉಪಾಯಗಳನ್ನು ಒಳಗೊಂಡಿದೆಯೇ ?
  4. ಅಂದವಾದ ಬರವಣಿಗೆ , ವಿಷಯ ರಚನೆ ಉತ್ತಮವಾಗಿದೆಯೇ ?
  5. ಪ್ರಬಂಧದ ವಿಷಯವನ್ನು ಅಂತರ್ಜಾಲ ,ಗ್ರಂಥಾಲಯ ಹಾಗೂ ಇತರ ಮಾಹಿತಗಳನ್ನು ಆಧರಿಸಿ ಬೆಳಿಸಿದೆಯೇ ?

ಪ್ರಶ್ನೆಗಳು

  1. ವಿಕಿರಣ ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ
  2. ವಿಕಿರಣದಿಂದಾಗುವ ಅಪಾಯಗಳ ಬಗ್ಗೆ ಪತ್ರಿಕಾ ಸುದ್ದಿಗಳನ್ನು ಸಂಗ್ರಹಿಸಿ
  3. ವಿಕಿರಣ ಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
  4. ನ್ಯೂಕ್ಲೀಯ ಶಕ್ತಿಸ್ಥಾವರಗಳು ,ನ್ಯೂಕ್ಲೀಯ ಅಸ್ತ್ರಗಳು ಯಾವುವು ? ಹೆಚ್ಚಿನ ಮಾಹಿತಿಯೊಂದಿಗೆ ಅವುಗಳ ಚಿತ್ರ ,ಅವುಗಳಿಂದಾಗುವ ಅಪಾಯಗಳ ಬಗ್ಗೆ ಸಂಗ್ರಹಿಸಿ ಒಂದು ಆಲ್ಬಮ್ ತಯಾರಿಸಿ .

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್