ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು


2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು
ಈ ಪ್ರಸಕ್ತ ಸಾಲಿನಲ್ಲಿ 'ಎಸ್.ಟಿ.ಎಪ್' ಕಾರ್ಯಕ್ರಮವನ್ನು ಉಳಿದ ಶೈಕ್ಷಣಿಕ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದ್ದು, ಈ ವರ್ಷದ STF-KOER ಕಾರ್ಯಕ್ರಮ ಪ್ರಸ್ತಾವನೆಗಳುಈ ಕೆಳಕಂಡಂತಿವೆ

  1. 10ನೇ ತರಗತಿ ಹೊಸ ಪಠ್ಯಕ್ರಮಕ್ಕೆಸಂಪನ್ಮೂಲ ಶಿಕ್ಷಕರ ತಂಡದಿಂದ ಸಂಪನ್ಮೂಲಗಳ ರಚನೆ.
    10ನೇ ತರಗತಿ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿದ 25 ಶಿಕ್ಷಕರು ಮತ್ತು 5 DIET/CTE ಸಂಪನ್ಮೂಲ ವ್ಯಕ್ತಿಗಳು ಸೇರಿ ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಪೂರಕ ಸಾಮಾಗ್ರಿಗಳ ತಯಾರಿಕೆ ಕಾರ್ಯಾಗಾರ ಮಾಡುವುದು. ಈ ಸಂಪನ್ಮೂಲ ವ್ಯಕ್ತಿಗಳ ಗುಂಪಿಗೆ 5+3+3ದಿನಗಳ 3 ಹಂತದ ಕಾರ್ಯಾಗಾರಗಳನ್ನು ಮಾಡಲಾಗುತ್ತದೆ.ಈ ಕಾರ್ಯಾಗಾರದಲ್ಲಿ 10ನೇ ತರಗತಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ವಿಷಯದ ಸಂಪನ್ಮೂಲಗಳ ಬಳಕೆ,ಪುನರ್ರಚನೆ ಮತ್ತು ವಿಶ್ಲೇಷಣೆ ಚಟುವಟಿಕೆ ನಡೆಸಲಾಗುತ್ತದೆ.
  2. STF ಮತ್ತು HTFಕಾರ್ಯಕ್ರಮಗಳ ವಿಸ್ತರಣೆ. ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳನ್ನು34 ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಫೇಸ್-3ಶಾಲೆಗಳ ಶಿಕ್ಷಕರಿಗೆ ನಡೆಸಲಾಗುವುದು.
  3. ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ ಆಯ್ದ ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.
  4. ಮುಖ್ಯ ಶಿಕ್ಷಕರ ವೇದಿಕೆಯ ರಚನೆ. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳ ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ ಆಯ್ದ ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಶಾಲೆಗಳಲ್ಲಿ ಮುಖ್ಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.

2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು. ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.