ಕರ್ನಾಟಕದಲ್ಲಿ ದೊರೆಯುವ ಖನಿಜಗಳು ಚಟುವಟಿಕೆ
ಚಟುವಟಿಕೆ 1 - ಚಟುವಟಿಕೆಯ ಹೆಸರು
ಕರ್ನಾಟಕದ ನಕ್ಷೆ ತಯಾರಿಸಿ ಖನಿಜಗಳಿರುವ ಸ್ಥಳಗಳನ್ನು ಗುರುತಿಸುವುದು
ಅಂದಾಜು ಸಮಯ
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡ್ರಾಯಿಂಗ್ ಹಾಳೆ , ಪೆನ್ಸಿಲ್ ಅಥವಾ ಮಾರ್ಕರ ಪೆನ್ನು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಅದಿರುಗಳು : ಯಾವ ಖನಿಜದಿಂದ ಅದರಲ್ಲಿರುವ ಲೋಹವನ್ನು ಸುಲಭ ವಿಧಾನದಿಂದ ಲಾಭದಾಯಕವಾಗಿ ಉದ್ಧರಿಸಬಹುದಾದ ಖನಿಜಗಳಿಗೆ ಅದಿರುಗಳು ಎನ್ನುವರು. ಅದಿರುಗಳೆಲ್ಲವೂ ಖನಿಜಗಳೇ ಆದರೂ ಖನಿಜಗಳೆಲ್ಲವೂ ಅದಿರುಗಳಾಗಿರಲು ಸಾಧ್ಯವಿಲ್ಲ.
ಖನಿಜಗಳು : ಗಣಿಗಳಿಂದ ಹೊರತೆಗೆದ ನಿಸರ್ಗದತ್ತ ಲೋಹಯುಕ್ತ ವಸ್ತುಗಳಿಗೆ ಖನಿಜಗಳು ಎನ್ನುವರು.
ಖನಿಜ/ಅದಿರುಗಳು ದೊರಕುವ ರೂಪ : ಭೂಗರ್ಭದಲ್ಲಿ ಕ್ರಿಯಾಶೀಲವಲ್ಲದ ಧಾತುಗಳು (ಲೋಹಗಳು ) ಸ್ವತಂತ್ರ/ಮುಕ್ತ/ಧಾತು ರೂಪದಲ್ಲೂ (ಉದಾಹರಣೆ : ಚಿನ್ನ,ಬೆಳ್ಳಿ,,ಪ್ಲಾಟಿನಮ್ ) ,ಕ್ರಿಯಾಶೀಲ ಧಾತುಗಳು ಸಂಯುಕ್ತರೂಪದಲ್ಲಿ ಅಂದರೆ ಅಲ್ಯೂಮಿನಯಮ್ , ಕಬ್ಬಿಣ,ತಾಮ್ರ, ಸೋಡಿಯಮ್ ಮೊದಲಾದ ಲೋಹಗಳು ಆಕ್ಸೈಡ್ ,ಸಲ್ಫೈಡ್ , ಸಲ್ಫೇಟ್ , ಫಾಸ್ಫೇಟ್ , ಕ್ಲೋರೈಡ ,ಕಾರ್ಬೋನೇಟ್ ಮುಂತಾದ ಸಂಯುಕ್ತಗಳ ರೂಪದಲ್ಲಿ ನಿಸರ್ಗದಲ್ಲಿ ಹರಡಿವೆ.
ಲೋಹಗಳು : ಯಾವ ಧಾತುಗಳು ಕಾಂತೀಯತೆ /ಹೊಳಪು , ತನ್ಯತೆ (ತಂತಿ ),ಕುಟ್ಯತೆ (ತಗಡು ) ,ಉಷ್ಣ ಮತ್ತು ವಿದ್ಯುತ್ತಿನ ಉತ್ತಮ ವಾಹಕ ಗುಣಗಳನ್ನು ತೋರಿಸುತ್ತವೆಯೋ ಅಂಥಹ ಧಾತುಗಳನ್ನು ಲೋಹಗಳು ಎನ್ನುವರು. ಉದಾಹರಣೆ : ತಾಮ್ರ, ಅಲ್ಯೂಮಿನಿಯಮ್, ಬೆಳ್ಳಿ , ಚಿನ್ನ ,ಕಬ್ಬಿಣ ,ಮ್ಯಾಗ್ನೀಷಿಯಮ್ ,
ಧಾತು : ಒಂದೇ ಬಗೆಯ ಪರಮಾಣುಗಳಿಂದ ಆಗಿರುವ ದ್ರವ್ಯಕ್ಕೆ ಧಾತು /ಮೂಲವಸ್ತು ಎನ್ನುವರು. ಅಥವಾ ಮತ್ತಷ್ಟು ಚಿಕ್ಕದಾಗಿ ಸರಳ ವಸ್ತುಗಳನ್ನಾಗಿ ವಿಭಜಿಸಲಾಗದ ಒಂದೇ ರೀತಿಯ ಪರಮಾಣುಗಳಿಂದ ಮಾಡಲ್ಪಟ್ಟಿರುವ ವಸ್ತುವಿಗೆ ಧಾತು ಎನ್ನುವರು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಮೊದಲನೆ ಗುಂಪು : ಕರ್ನಾಟಕ ರಾಜ್ಯದ ನಕ್ಷೆ ಬರೆಯಲು ತಿಳಿಸುವುದು
- ಎರಡನೆ ಗುಂಪಿಗೆ : ಖನಿಜ ದೊರೆಯುವ ಸ್ಥಳಗಳನ್ನು ಗುರುತಿಸಲು ತಿಳಿಸುವುದು ಹಾಗೂ
- ಮೂರನೆ ಗುಂಪಿಗೆ : ಗುಂಪಿಗೆ ಅಲ್ಲಿ ದೊರೆಯುವ ಖನಿಜಗಳನ್ನು ಪಟ್ಟಿ ಮಾಡಿ ಗುರುತಿಸಲು ತಿಳಿಸುವುದು .
- ನಾಲ್ಕನೆ ಗುಂಪಿಗೆ : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ದೊರೆಯುವ ಪ್ರಮುಖ ಅದಿರುಗಳ ಕೋಷ್ಟಕ ತಯಾರಿಸಲು ತಿಳಿಸುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ವಸ್ತುಗಳು ಯಾವುದರಿಂದ ರಚನೆಯಾಗಿವೆ ?
- ಧಾತುಗಳು ಎಂದರೇನು ?
- ಅದಿರು ಮತ್ತು ಖನಿಜಗಳು ಎಂದರೇನು ?
- ಲೋಹಗಳು ಎಂದರೇನು ? ಲೋಹಗಳಿಗೆ ಉದಾಹರಣೆ ಕೊಡಿರಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಮೊದಲನೇ ಗುಂಪು
- ಉತ್ತಮವಾಗಿ ನಕ್ಷೆ ತಯಾರಿಸಿರುವುದು (ವೈಯುಕ್ತಿ/ಗುಂಪು)
- ನಕ್ಷೆ ತಯಾರಿಸುವ ಆಸಕ್ತಿ
- ಗುಂಪಿನಲ್ಲಿ ಪರಸ್ಪರ ಸಹಕಾರ
ಎರಡನೇ ಗುಂಪು :
- ಖನಿಜವಿರುವ ಸ್ಥಳಗಳನ್ನು ಸ್ಪಷ್ಟವಾಗಿ ಗುರುತಿಸಿರುವುದು
- ಗುಂಪಿನಲ್ಲಿ ಸಹಕಾರ ತೋರಿರುವುದು
- ಆಸಕ್ತಿಯನ್ನು ತೋರಿಸಿರುವುದು
ಮೂರನೇ ಗುಂಪು
- .ಖನಿಜಗಳು ದೊರೆಯುವ ಸ್ಥಳಗಳನ್ನು ಪಟ್ಟಿ ಮಾಡಿರುವುದು
- ಧಾತುಗಳ ಸಂಕೇತ ಗುರುತಿಸವುದು
- ಆಸಕ್ತಿವಹಿಸುವುದು
ನಾಲ್ಕನೇ ಗುಂಪು
- ಉತ್ತಮವಾಗಿ ಕೋಷ್ಟಕ ತಯಾರಿಸುವುದು
- ಕೋಷ್ಟಕದಲ್ಲಿ ದೊರೆಯುವ ಸ್ಥಳ ಹಾಗೂ ಖನಿಜಗಳನ್ನು ನಮೂದಿಸುವುದು
- ಆಸಕ್ತಿಯಿಂದ ಭಾಗವಹಿಸಿರುವುದು
ಪ್ರಶ್ನೆಗಳು
ನೀವು ವಾಸಿಸುವ ಪ್ರದೇಶದಲ್ಲಿ ದೊರೆಯುವ ಅದಿರು ಮತ್ತು ಖನಿಜಗಳನ್ನು ಪಟ್ಟಿ ಮಾಡಿ ತರಗತಿಯಲ್ಲಿ ತೂಗು ಹಾಕಿ ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ