ಶಿಕ್ಷಕರ ಸ್ವರಚಿತ ಕವನಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೫:೨೯, ೩೧ ಡಿಸೆಂಬರ್ ೨೦೧೪ ರಂತೆ Venkatesh (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: #'''ರಾಜೀವ ಪೂಜಾ ಉಡುಪಿ ಜಿಲ್ಲೆರವರ ಕವನ -''ಬದುಕು-ಭ ಯ'' ''' ಗರುಡವೊಂದು ದೂರದಿಂದ ...)
Jump to navigation Jump to search
  1. ರಾಜೀವ ಪೂಜಾ ಉಡುಪಿ ಜಿಲ್ಲೆರವರ ಕವನ -ಬದುಕು-ಭ ಯ

ಗರುಡವೊಂದು ದೂರದಿಂದ ಹಾರಿ ಬಂದಿತು

ನನ್ನ ಮೇಲೆ ಎರಗಿ ಕುಳಿತು ಹಿಡಿದುಕೊಂಡಿತು

ಹಾರಿ ನೆಗೆದು ಮುಗಿಲು ಮುಟ್ಟಿ ಗೆಲುವು ಎಂದಿತು

ಭಯದಿ ಹೆದರಿ ನಡುಗಿ ನಾನು ಕೊಸರಿಕೊಂಡೆನು

ದೂರದಿಂದ ಪೊದೆಯ ಕಂಡು ಧೈರ್ಯ ಹೆಚ್ಚಿತು

ಶಕ್ತಿ ಹೆಚ್ಚಿ ನನ್ನ ಕೊಕ್ಕು ಬೆರಳ ಕಚ್ಚಿತು

ಹಾರುವಾಗ ಆಯ ತಪ್ಪಿ ಕಾಲ ಬಿಟ್ಟಿತು

ಕೂಗಿಕೊಂಡು ಸತ್ತೆನೆಂದು ಕೆಳಗೆ ಬಿದ್ದೆನು

ಎದ್ದು ನೋಡುವಾಗ ಮೇಲೆ ಪಂಕ ತಿರುಗಿತು

ಮುಟ್ಟಿ ನೋಡೆ ನನ್ನ ಮೈಯು ಬೆವತುಕೊಂಡಿತು

ಸಟ್ಟನೆದ್ದು ಬೇಗ ನಾನು ಮಂಚವೇರಿದೆ

ನಡೆದುದೆಲ್ಲ ಈಗ ಒಂದು ಕನಸು ಎಂದೆನು

ಭಯದಿ ಬದುಕು ಸಾಗುವಾಗ ಹೀಗೆ ಆಗದೇ ?