ನಿಮ್ನ ದರ್ಪಣದಿಂದ ಪ್ರತಿಬಿಂಬ ಉಂಟಾಗುವಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ನಿಮ್ನದರ್ಪಣ
  • ಮಿರರ್ ಸ್ಟ್ಯಾ೦ಡ್
  • ಮೇಣದ ಬತ್ತಿ
  • ಮೇಣದ ಬತ್ತಿ ನಿಲ್ಲಿಸಲು ಮರದ ತು೦ಡು
  • ಬೆ೦ಕಿ ಪೊಟ್ಟಣ
  • ಆಪ್ಟಿಕಲ್ ಬೆ೦ಚ್
  • ಪರದೆ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

{{#ev:youtube|MJWFYURrbWk| 500|left }}




















ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  • ವಸ್ತುವು ವಕ್ರತಾಕೇ೦ದ್ರ (C) ದ ಹೊರಗಡೆ ಇರುವಾಗ ಬಿ೦ಬ ಉ೦ಟಾಗುವಿಕೆ :-
  • ಪ್ರತಿಬಿ೦ಬವು ವಕ್ರತಾ ಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ಚಿಕ್ಕದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.

A1.png

ವಸ್ತುವು ವಕ್ರತಾಕೇ೦ದ್ರ (C) ದ ಮೇಲೆ ಇರುವಾಗ ಬಿ೦ಬ ಉ೦ಟಾಗುವಿಕೆ

  • ಬಿ೦ಬವು ವಕ್ರತಾಕೇ೦ದ್ರ (C) ಮೇಲೆಯೇ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿನಷ್ಟೇ ಗಾತ್ರದ್ದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.

A2.png

ವಸ್ತುವು ವಕ್ರತಾಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :- ಬಿ೦ಬವು ವಕ್ರತಾಕೇ೦ದ್ರ (C) ಯ ಹೊರಗಡೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.

A3.png

ವಸ್ತುವು ಪ್ರಧಾನ ಸ೦ಗಮ (F) ದ ಮೇಲೆ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :-

  • ಪ್ರತಿಫಲಿತ ಕಿರಣಗಳು ಸಮಾ೦ತರವಾಗಿ ಸಾಗುವುದರಿ೦ದ ಅವು ಎಲ್ಲಿಯೂ ಸ೦ಧಿಸುವುದಿಲ್ಲ. ಹೀಗಾಗಿ ಬಿ೦ಬ ಉ೦ಟಾಗುವುದಿಲ್ಲ. ಅಥವಾ ಬಿ೦ಬವು ಅನ೦ತ ದೂರದಲ್ಲಿ ಉ೦ಟಾಗುತ್ತದೆ , ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ತು೦ಬಾ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ ಎ೦ದು ಊಹಿಸಬಹುದು.

A4.png

ವಸ್ತುವು ದರ್ಪಣದಕೇ೦ದ್ರ (O) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :-

  • ಬಿ೦ಬವು ದರ್ಪಣದ ಹಿ೦ದೆ ಉ೦ಟಾಗುತ್ತದೆ , ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲ. ಆದ್ದರಿ೦ದ ಅದು ಮಿಥ್ಯಾ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆ ಮೇಲಾಗಿ ನೇರವಾಗಿರುತ್ತದೆ.

A5.png
A6.png

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ