೧೦ನೇ ತರಗತಿಯ ಶ್ರೇಢಿಯ ವಿಧಗಳು ಸಮಾಂತರ ಶ್ರೇಢಿಗಳು ಚಟುವಟಿಕೆ 1
ಬದಲಾವಣೆ ೧೫:೫೭, ೧೩ ಆಗಸ್ಟ್ ೨೦೧೫ ರಂತೆ Ganeshs (ಚರ್ಚೆ | ಕಾಣಿಕೆಗಳು) ಇವರಿಂದ (→ವಿಧಾನ: (ಚಟುವಟಿಕೆ ನಡೆಸುವುದು ಹೇಗೆ))
ಚಟುವಟಿಕೆ - ಮೊದಲ 'n' ಸ್ವಾಭಾವಿಕ ಸಂಖ್ಯೆಗಳ ಮೊತ್ತವನ್ನು ಸುಲಭವಾಗಿ ಕಂಡುಹಿಡಿಯುವ ಸೂತ್ರ
ಅಂದಾಜು ಸಮಯ : 40 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವಾ ಸಂಪನ್ಮೂಲಗಳು
- ಪ್ರೊಜೆಕ್ಟರ್
- ಕಂಪ್ಯೂಟರ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಚಟುವಟಿಕೆಯನ್ನು ಪ್ರಾರಂಬಿಸುವ ಮೊದಲು ಭಾರತದ ಶ್ರೇಷ್ಠ ಗಣಿತಜ್ಞರಾದ ಶ್ರೀನಿವಾಸ ರಾಮಾನುಜನ್ ಇವರ ಗಣಿತ ಕ್ಷೇತ್ರದ ಕೆಲವು ಸಾಧನೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳು
ಜಿಯೋಜಿಬ್ರಾ ಕಡತ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು
ಸ್ವಾಭಾವಿಕ ಸಂಖ್ಯೆಗಳ ಮೊತ್ತ ಕಂಡುಹಿಡಿಯುವ ಸೂತ್ರದ ಜಿಯೋಜಿಬ್ರಾ ಕಡತ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಮೊದಲ 5 ಅಥವಾ 6 ಅಥವಾ 7 ಅಥವಾ 8 ಸ್ವಾಭಾವಿಕ ಸಂಖ್ಯೆಗಳ ಶ್ರೇಣಿಯನ್ನು ಸಿಗ್ಮಾ ಸಂಕೇತ ಬಳಸಿ ಬರೆಯಲು ವಿದ್ಯಾರ್ಥಿಗಳಿಗೆ ತಿಳಿಸುವುದು.
- ಬಳಿಕ ಇಳಿಕೆ ಕ್ರಮದಲ್ಲಿ ಅದೇ ಸಂಖ್ಯೆಗಳ ಶ್ರೇಣಿಯನ್ನು ಬರೆಯಲು ತಿಳಿಸುವುದು.
- ಈಗ ದೊರಕಿದ ಎರಡೂ ಸಮೀಕರಣಗಳನ್ನು ಕೂಡಿಸಲು ಹೇಳುವುದು .
- ಈ ಸಂದರ್ಭದಲ್ಲಿ ಕೂಡಿಸಲು ಅನುಕೂಲವಾಗುವಂತೆ ಜಿಯೋಜಿಬ್ರಾ ಕಡತವನ್ನು ಪ್ರದರ್ಶಿಸುವುದು.
- ಈ ರೀತಿಯಲ್ಲಿ ಸೂತ್ರದ ಸಾಮಾನ್ಯೀಕರಣದ ಕಡೆಗೆ ಬರುವಂತೆ ವಿದ್ಯಾರ್ಥಿಗಳ ಗಮನ ಸೆಳೆಯುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ೧೦ನೇ_ತರಗತಿಯ_ಶ್ರೇಢಿಯ_ವಿಧಗಳು