೧೦ನೇ ತರಗತಿಯ ಕ್ರಮಯೋಜನೆ ಮತ್ತು ವಿಕಲ್ಪಗಳು ಏಣಿಕೆಯ ಮೂಲತತ್ವ ಚಟುವಟಿಕೆ೧
ಚಟುವಟಿಕೆ - ಒಂದು ದಾಳ ಮತ್ತು ನಾಣ್ಯವನ್ನು ಎಸೆಯುವುದು
ಅಂದಾಜು ಸಮಯ
೩೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ದಾಳ, ನಾಣ್ಯ, ಪೆಪರ, ಪೆನ್ಸಿಲ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಘಟನೆಗಳನ್ನು ಪಟ್ಟಿಮಾಡಿಕೊಳ್ಳಲು ತಿಳಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ನಾಣ್ಯ,ದಾಳ,ಪೆಪರ ಮತ್ತು ಪೆನ್ಸಿಲ್ ಗಳನ್ನು ತನ್ನೊಂದಿಗೆ ಹೊಂದಿರಲು ತಿಳಿಸುವುದು.
- ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆಯಲು ತಿಳಿಸುವುದು.
- ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾದ ಫಲಿತಾಂಶಗಳನ್ನು ಕೇಳುವುದು.
- ನಂತರ ವಿದ್ಯಾರ್ಥಿಗಳಿಗೆ ಆ ಫಲಿತಾಂಶಗಳನ್ನು ಪೆಪರ್‌ನಲ್ಲಿ ಪಟ್ಟಿಮಾಡಿಕೊಳ್ಳಲು ತಿಳಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಾಣ್ಯವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು?
- ದಾಳವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು?
- ಹಾಗಾದರೆ ಇಲ್ಲಿ ಸಂಭವಿಸಿದ ಎರಡು ಘಟನೆಗಳು ಯಾವವು?
- ಹಾಗಾದರೆ ಈ ಎರಡು ಬೇರೆ ಬೇರೆ ಘಟನೆಗಳು ಒಮ್ಮೆಲೆ ಸಂಭವಿಸಬಹುದೇ?
- ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಫಲಿತಾಂಶಗಳು ಎಷ್ಟು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಸಂಭವಿಸಬಹುದಾದ ಫಲಿತಾಂಶಗಳು ಎಷ್ಟು?
- ಸಂಭವಿಸಿದ ಎಲ್ಲಾ ಫಲಿತಾಂಶಗಳ ವೃಕ್ಷನಕ್ಷೆಯನ್ನು ರಚಿಸಿರಿ
ಪ್ರಶ್ನೆಗಳು
- ಒಂದು ಕ್ರಿಯೆಯನ್ನು 5 ವಿಧಗಳಲ್ಲಿ ಮತ್ತೊಂದು ಕ್ರಿಯೆಯನ್ನು 4 ವಿಧಗಳಲ್ಲಿ ಮಾಡಬಹುದಾದರೆ ಒಟ್ಟಿ ಗೆ ಎರಡು ಕ್ರಿಯೆಗಳನ್ನು ಎಷ್ಟು ವಿಧಗಳಲ್ಲಿ ಮಾಡಬಹುದು.?
- ಮೂರು ಬೇರೆ ಬೇರೆ ಕ್ರಿಯೆಗಳನ್ನು ಕ್ರಮವಾಗಿ m.n ಮತ್ತು p ವಿಧಗಳಲ್ಲಿ ಮಾಡಬಹುದಾದರೆ , ಮೂರು ಕ್ರಿಯೆಗಳನ್ನು ಒಟ್ಟಿಗೆ ಎಷ್ಟು ವಿಧಗಳಲ್ಲಿ ಮಾಡಬಹುದು ?
ಚಟುಟವಟಿಕೆಯ ಮೂಲಪದಗಳು
ದಾಳ,ನಾಣ್ಯ,ಏಣಿಕೆಯ ಮೂಲತತ್ವ ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಇಲ್ಲಿ ಕ್ಲಿಕ್ಕಿಸಿ