ಅಡಾಸಿಟಿ ಕಲಿಯಿರಿ
ಪರಿಚಯ
ಅಡಾಸಿಟಿ ಎಂಬುದು, ಸ್ವತಂತ್ರ ಮತ್ತು ಮುಕ್ತ ಅನ್ವಯಕವಾಗಿದ್ದು , ಧ್ವನಿ ಮುದ್ರಣ ಮತ್ತು ಧ್ಚನಿ ಸಂಕಲನಕ್ಕೆ ಬಳಸುವ ಆಡಿಯೋ ಎಡಿಟರ್ ಆಗಿದೆ. ಇದನ್ನು ವಿಂಡೋಸ್, ಮ್ಯಾಕ್ ಮತ್ತು ಗ್ನೂ/ಲಿನಕ್ಸ್ ನಂತಹ ಆಪರೇಟಿಂಗ್ ಸಿಸ್ಟಂನಲ್ಲಿ ಬಳಸಬಹುದಾಗಿದೆ. ಇದರ ಮೈಲ್ಮೈ ನೋಟವು ವಿವಿಧ ಭಾಷೆಗಳಲ್ಲಿ ಲಭ್ಯವಿದೆ.
ಐ.ಸಿ.ಟಿ ಸಾಮರ್ಥ್ಯ
ಇದು ಸಾರ್ವತ್ರಿಕ ಧ್ವನಿ ಸಂಕಲನ ಪರಿಕರವಾಗಿದ್ದು ಧ್ವನಿ ಸಂಪನ್ಮೂಲ ರಚನೆಗೆ ಬಳಸಬಹುದಾಗಿದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ನಮ್ಮ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ಸ್ವಂತ ಧ್ವನಿ ಮುದ್ರಣ ಮಾಡಲು ಹಾಗು ಲಭ್ಯವಿರುವ ಧ್ವನಿ ಸಂಪನ್ಮೂಲಗಳನ್ನು ಸಂಕಲನ ಮಾಡಲು ಅಥವಾ ಮಿಶ್ರಣ ಮಾಡಲು ಈ ಅನ್ವಯಕವನ್ನು ಬಳಸಲಾಗುತ್ತಿದೆ.
ಆವೃತ್ತಿ
Audacity 2.1.2
ಸಂರಚನೆ
Its part of Ubuntu custom and no need to configure.
ಲಕ್ಷಣಗಳ ಮೇಲ್ನೋಟ
- WAV, AIFF, MP3 ಸೇರಿದಂತೆ ಇತರೆ ಎಲ್ಲಾ ಆಡಿಯೋಕಡತಗಳ ನಮೂನೆಗಳಿಗೆ ಎಕ್ಸ್‌ಪೋರ್ಟ್ ಮತ್ತು ಇಂಪೋರ್ಟ್ ಮಾಡಿಕೊಳ್ಳಬಹುದು.
- ಧ್ವನಿಮುದ್ರಣ ಮಾಡಿ, ಅಲ್ಲೇ ಕೇಳಬಹುದಾಗಿದೆ.
- ಕತ್ತರಿಸು, ಪ್ರತಿ ಮಾಡು ಹಾಗು ಅಂಟಿಸುವ ಪ್ರಕ್ರಿಯೆಗಳ ಸಂಕಲನದಲ್ಲಿ ಅನಿಯಮಿತ Undo ಬಳಸಬಹುದು.
ಇತರೇ ಸಮಾನ ಅನ್ವಯಕಗಳು
Ocenaudio ಇದು ಸಹ ಅಡಾಸಿಟಿ ಮಾದರಿಯಲ್ಲೇ ಧ್ವನಿ ಸಂಕಲನ ಮಾಡಲು ಮತ್ತು ಮುದ್ರಣ ಮಾಡಲು ಬಳಸುವ ಅನ್ವಯಕವಾಗಿದೆ. ಇದು ಕೆಲವು ಪ್ರಮುಖ ಲಕ್ಷಣಗಳನ್ನು ಹೊಂದಿದ್ದು ಹೆಚ್ಚು ಬಳಕೆದಾರದನ್ನು ಹೊಂದುತ್ತಿದೆ. Wavosaur - Wavosaur is a free sound editor, audio editor, wav editor software for editing, processing and recording sounds, wav and mp3 files. Wavosaur has all the features to edit audio (cut, copy, paste, etc.) produce music loops, analyze, record, batch convert. Traverso DAW Traverso DAW is an audio recording and editing program which is very well suited to record a single voice, a band, an ensemble, a whole orchestra or any other source of music! Both the home and professional user will find Traverso attractive, it's clean interface is easy to learn, and enables you to work quickly and efficiently!
ಅಭಿವೃದ್ದಿ ಮತ್ತು ಸಮುದಾಯ ಸಹಾಯ
Audacity Team
ಅನ್ವಯಕ ಬಳಕೆ
ಕಾರ್ಯಕಾರಿತ್ವ
- Image
ಹಂತ1 -Application → Sound and Video → Audacity → ಮೂಲಕ ಅಡಾಸಿಟಿ ತೆರೆಯಬಹುದು.
- Image
ಹಂತ 2 - ಅಡಾಸಿಟಿ ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ ಹಲವು ರೀತಿಯ ಟೂಲ್ ಗಳು ಪರದೆಯ ಮೇಲೆ ಕಾಣುತ್ತವೆ.
- Image
ಹಂತ 3- ಧ್ವನಿಮುದ್ರಣ ಪ್ರಾರಂಭಿಸಲು- ಅಡಾಸಿಟಿ ಪರದೆಯ ಮೇಲೆ ಕಾಣುವ ಟೂಲ್ಬಾರ್ಗಳಲ್ಲಿ ಕೆಂಪುಬಣ್ಣದ ವೃತ್ತಾಕಾರದ ಸೂಚಕ "Record"ಬಟನ್ ಕಾಣಬಹುದು. ಇದನ್ನು ಒತ್ತುವ ಮೂಲಕ ಧ್ವನಿಮುದ್ರಣವನ್ನು ಪ್ರಾರಂಭಿಸಬಹುದು. ಧ್ವನಿಮುದ್ರಣ ಪ್ರಕ್ರಿಯೆಯನ್ನು ನಿಲ್ಲಿಸಲು ಬಯಸಿದಲ್ಲಿ ಅದೇ ಟೂಲ್ಬಾರ್ನಲ್ಲಿರುವ "Stop” ಬಟನ್ ಒತ್ತಬೇಕು.
- Image
ಹಂತ-ಈಗಾಗಲೇ ಮುದ್ರಣ ಮಾಡಿರುವ ಧ್ವನಿಯ ಜೊತೆಗೆ ಹೊಸದೊಂದು ಧ್ವನಿಯನ್ನು ಸೇರಿಸಬಯಸಿದಲ್ಲಿ ಹೊಸ ಟ್ರಾಕ್ ಸೇರಿಸಬೇಕು. ಅದಕ್ಕಾಗಿ ಮೆನುಬಾರ್ನಲ್ಲಿ Tracks- Add New Track ನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗಾಗಲೇ ಇದ್ದ ಟ್ರಾಕ್ನ ಕೆಳಗಡೆ ಹೊಸ ಟ್ರಾಕ್ ಕಾಣುತ್ತದೆ.
- Image
ಹಂತ 5- ಇದೇ ರೀತಿ ನಮಗೆ ಅವಶ್ಯಕವಾಗಿರುವಷ್ಟು ಟ್ರಾಕ್ಗಳನ್ನು ಸೇರಿಸಬಹುದು.
- Image
ಹಂತ 6- ಹೊಸ ಟ್ರಾಕ್ಗಳನ್ನು ಸೇರಿಸಿದ ಮೇಲೆ, ಆ ಟ್ರಾಕ್ಗಳಲ್ಲಿ ಧ್ವನಿಗಳನ್ನು ಸಂಕಲನ ಮಾಡಲು ಕಂಪ್ಯೂಟರ್ನಿಂದ ಧ್ವನಿಯನ್ನು ಇಂಪೋರ್ಟ್ ಮಾಡಿಕೊಳ್ಳಬೇಕು. ಇದಕ್ಕಾಗಿ ಮೆನುಬಾರ್ನಲ್ಲಿ File > Import > Audio ನ್ನಯ ಆಯ್ಕೆ ಮಾಡಿಕೊಳ್ಳಬೇಕು, ನಂತರ ನಮ್ಮ ಆಡಿಯೋವನ್ನು ಆಯ್ಕೆ ಮಾಡಿಕೊಳ್ಳಬೇಕು.
- Image
ಹಂತ7- ಧ್ವನಿಗಳನ್ನು ಸಂಕಲನ ಮಾಡುವಾಗ ಅದರಲ್ಲಿನ ಒಂದು ಭಾಗವನ್ನು ಅಳಿಸ ಬೇಕಿದ್ದಲ್ಲಿ, ಮೊದಲು ಅಷ್ಟು ಟ್ಯಾಕ್ನ್ನಯ ಆಯ್ಕೆ ಮಾಡಿಕೊಂಡು ಕೀಬೋರ್ಡ್ನಲ್ಲಿ DELETE ನ್ನು ಒತ್ತಿರಿ. ಕಾಪಿ ಮಾಡಲು ಬಯಸಿದಲ್ಲಿ ಮೌಸ್ನ್ನು ರೈಟ್ಕ್ಲಿಕ್ ಮಾಡಿ ಕಾಪಿ ಮಾಡಿ, ನಂತರ ಅದನ್ನಯ ಬೇರೆ ಕಡೆ ಸೇರಿಸಲು ಮೌಸ್ ರೈಟ್ಕ್ಲಿಕ್ ಮಾಡಿ ಅಂಟಿಸಿ.
- Image
ಹಂತ 8- ಧ್ವನಿಮುದ್ರಣ ಮತ್ತು ಸಂಕಲನವನ್ನು ಪೂರ್ಣಗೊಳಿಸಿದ ನಂತರ ಇನ್ನೂ ಹೆಚ್ಚಿನ ಸಂಕಲನ ಮಾಡುವಂತಿದ್ದಲ್ಲಿ ಕಡತವನ್ನು ಪ್ರೊಜೆಕ್ಟ್ ಆಗಿ ಉಳಿಸಬಹುದು ಇದಕ್ಕಾಗಿ File > Save ಆಯ್ಕೆ ಮಾಡಿಕೊಳ್ಳಬೇಕು. ಹಾಗು ಅಂತಿಮ ಕಡತವಾಗಿಯೂ ಉಳಿಸಬಹುದು ಇದಕ್ಕಾಗಿ "File"> "Export" ಆಯ್ಕೆ ಮಾಡಿಕೊಳ್ಳಬೇಕು.
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ಧ್ವನಿಮುದ್ರಣ ಮತ್ತು ಸಂಕಲನವನ್ನು ಪೂರ್ಣಗೊಳಿಸಿದ ನಂತರ ಇನ್ನೂ ಹೆಚ್ಚಿನ ಸಂಕಲನ ಮಾಡುವಂತಿದ್ದಲ್ಲಿ ಕಡತವನ್ನು ಪ್ರೊಜೆಕ್ಟ್ ಆಗಿ ಉಳಿಸಬಹುದು ಇದಕ್ಕಾಗಿ File > Save ಆಯ್ಕೆ ಮಾಡಿಕೊಳ್ಳಬೇಕು. ಪ್ರೊಜೆಕ್ಟ್ ಆಗಿ ಉಳಿಸಿದ ಕಡತವು .aup ನಮೂನೆಯಲ್ಲಿ ಉಳಿಯುತ್ತದೆ. ಮತ್ತೊಮೆ ಇದೇ ಕಡತವನ್ನು ಅಡಾಸಿಟಿ ಮೂಲಕ ತೆರೆದು ಸಂಕಲನವನ್ನು ಮುಂದುವರೆಸಬಹುದು.
ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್) ಮತ್ತು ಪ್ರಕಟಣೆ
ಧ್ವನಿಮುದ್ರಣ ಮತ್ತು ಸಂಕಲನವನ್ನು ಪೂರ್ಣಗೊಳಿಸಿದ ನಂತರ, ಅಂತಿಮ ಕಡತವಾಗಿಯೂ ಉಳಿಸಬಹುದು ಇದಕ್ಕಾಗಿ "File"> "Export" ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಕಡತವು MP3, WAV, AMR ಮುಂತಾದ ನಮೂನೆಗಳಲ್ಲಿ ಉಳಿಸಿಕೊಳ್ಳಬಹುದಾಗಿದೆ.
ಉನ್ನತೀಕರಿಸಿದ ಲಕ್ಷಣಗಳು
- ನೇರವಾಗಿ ಧ್ವನಿಮುದ್ರಣ ಮಾಡಬಹುದು
- ಕಂಪ್ಯೂಟರ್‌ನಲ್ಲಿ ಹಿನ್ನೆಲೆಧ್ವನಿಯನ್ನು ಮುದ್ರಣ ಮಾಡಬಹುದು
- WAV, AIFF, FLAC, MP2, MP3 or Ogg Vorbis ನಮೂನೆಯ ಕಡತಗಳನ್ನು ಸಹ ಸಂಕಲನ ಮಾಡಬಹುದು.
- AC3, M4A/M4R (AAC), WMA ಇತರೇ ನಮೂನೆಗಳು ಅಡಾಸಿಟಿಯಲ್ಲಿ ಬಳಸಬಹುದು.
- ಧ್ವನಿಯನ್ನು ಒಟ್ಟಿಗೆ Cut, copy, splice or mix ಮಾಡಬಹುದು
- ಧ್ವನಿಮುದ್ರಣದ ವೇಗವನ್ನು ಹಾಗು ಏರಿಳಿತವನ್ನು ಬದಲಿಸಬಹುದಾದಂತಹ ಪರಿಣಾಮಗಳನ್ನು ಹೊಂದಿದೆ.
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |
---|---|
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ | Go to Ubuntu Software Centre and type Audacity in search box and Click on INSTALL |
ಟರ್ಮಿನಲ್‌ನಿಂದ | Open Terminal (Ctrl+Alt+T), and then type below command. sudo apt-get install Audacity |
ವೆಬ್‌ಪುಟದಿಂದ | click here to download from website |
ವೆಬ್‌ಆಧಾರಿತ ನೊಂದಣಿ | Not Applicable |
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ
FOSS Android Apps on Fdroid - Ringdroid
Google Play store - WavePad Audio Editor - Ringtone cutter
ಸಂಪನ್ಮೂಲ ರಚನೆಯ ಆಲೋಚನೆಗಳು
ನಮ್ಮ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ಧ್ವನಿ ಸಂಪನ್ಮೂಲ ರಚಿಸಲು, ಸ್ವಂತ ಧ್ವನಿ ಮುದ್ರಣ ಮಾಡಬಹುದು ಹಾಗು ಲಭ್ಯವಿರುವ ಧ್ವನಿ ಸಂಪನ್ಮೂಲಗಳನ್ನು ಸಂಕಲನ ಅಥವಾ ಮಿಶ್ರಣ ಮಾಡುವ ಮೂಲಕ ತರಗತಿ ಕೋಣೆಗೆ ಪೂರಕವಾದ ರೀತಿಯಲ್ಲಿ ಧ್ವನಿ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.