ಜೀಯೋಜೀಬ್ರಾ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪರಿಚಯ

ಜಿಯೋಜೀಬ್ರಾ ಎನ್ನುವುದು ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯಗಳ ಹಂತದವರೆಗಿನ ಗಣಿತದಲ್ಲಿನ ರೇಖಾಗಣಿತ, ಬೀಜಗಣಿತ, ಅಂಕಿಅಂಶ ಸಂಖ್ಯಾಶಾಸ್ತ್ರಗಳ ಕಲಿಕೆ ಮತ್ತು ಬೋಧನೆಯ ಉದ್ದೇಶದ ಅನ್ವಯಕ. ಬಿಂದುಗಳ ಮೂಲಕ ಹೊಸ ಅಂಶವನ್ನು ಸೃಷ್ಟಿಸಲು ಜಿಯೋಜೀಬ್ರಾ ಪರಿಕರವು ಸಾಧ್ಯವಾಗಿಸುತ್ತದೆ. ಟೂಲ್‌ಬಾರ್‌ನಲ್ಲಿನ ಸೂಕ್ತ ಆಯ್ಕೆಗಳನ್ನು ಆಯ್ದುಕೊಳ್ಳುವ ಮೂಲಕ ರಚಿಸಬಹುದಾಗಿದೆ. ಈ ಅನ್ವಯಕವು ಸಾರ್ವಜನಿಕ ಮತ್ತು ಗ್ನೂ ಸಾರ್ವಜನಿಕ ಲೈಸೆನ್ಸ್ ನಡಿಯಲ್ಲಿದೆ.

ಐ.ಸಿ.ಟಿ ಸಾಮರ್ಥ್ಯ

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಗಣಿತ ಶಿಕ್ಷಣವನ್ನು ಸುಧಾರಿಸುವಲ್ಲಿ ಜಿಯೋಜೀಬ್ರಾವು ಅತ್ಯುತ್ತಮವಾದ ತಂತ್ರಜ್ಞಾನ ಪರಿಕರವಾಗಿದೆ. ಅಮೂರ್ತವಾಗಿ ಮನಸ್ಸಿನಲ್ಲಿಯೇ ಚಿತ್ರಗಳನ್ನು ಸಂರಚಿಸುವ ಬದಲು ವಿದ್ಯಾರ್ಥಿಗಳು ಸಿಮುಲೇಶನ್‌ಗಳ ಮೂಲಕ ಜ್ಯಾಮಿತಿ ಪ್ರಮೇಯಗಳ ಕಾಂಕ್ರೀಟ್‌ ನಿರೂಪಣೆಗಳನ್ನು ರಚಿಸಿದ್ದಾರೆ. ಜಿಯೋಜೀಬ್ರಾ ಪರಿಕರವು ಗಣಿತ ಕಲಿಕೆಯನ್ನು ಪ್ರಚೋದಿಸುವಂತದ್ದಾಗಿದ್ದು, ಕಂಠಪಾಠ ಪರಕಲ್ಪನೆಯನ್ನು ನಿವಾರಿಸುತ್ತದೆ. ಇದರ ಜೊತೆಗೆ ವಿಧ್ಯಾರ್ಥಿಗಳು ತರಗತಿಯಲ್ಲಿ ಜಡ ವೀಕ್ಷಕರಿಂದ ಸಕ್ರಿಯ ಹಾಗು ಉತ್ತೇಜಕ ಭಾಗವಹಿಸುವವರಾಗುತ್ತಾರೆ. ವಿಧ್ಯಾರ್ಥಿಗಳು ಕುಶಲತೆಯಿಂದ ಬಳಸಿದಂತೆಲ್ಲಾ ಮತ್ತು ಜಿಯೋಜೀಬ್ರಾದಲ್ಲಿ ದತ್ತಾಂಶವನ್ನು ಪರೀಕ್ಷಿಸಿದಂತೆಲ್ಲಾ ಇದು ಅರ್ಥಪೂರ್ಣ ಕಲಿಕೆಯನ್ನು ಒದಗಿಸುತ್ತದೆ.

ಆವೃತ್ತಿ

The GEOGEBRA version - 5.0.236.0-3D….. ಜಿಯೋಜೀಬ್ರಾ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Education → Geogebra ಮೂಲಕ ತೆರೆಯಬಹುದಾಗಿದೆ.

ಸಂರಚನೆ

ಜಿಯೋಜೀಬ್ರಾ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದರಿಂದ ವಿಶೇಷವಾಗಿ ಮತ್ತೆ ಯಾವುದೇ ಸಂರಚನೆ ಮಾಡಿಕೊಳ್ಳಬೇಕಾಗಿಲ್ಲ.

ಲಕ್ಷಣಗಳ ಮೇಲ್ನೋಟ

ಈ ಪರಿಕರವು ಕೆಳಕಂಡ ಲಕ್ಷಣಗಳನ್ನು ಹೊಂದಿದೆ

  1. ನಾವು ಇತರೇ ಕಡತಗಳಿಗೆ ವಿನ್ಯಾಸವನ್ನು ಅನ್ವಯಿಸಬಹುದಾದ ವಿಶೇಷ .ggb ಕಡತಗಳನ್ನು ರಚಿಸಬಹುದು.
  2. ಮತ್ತೊಂದು ಕಡತಕ್ಕೆ .ggb ಕಡತಗಳನ್ನು ಸೇರಿಸಬಹುದು.
  3. ಗೆರೆ ಮತ್ತು ಪರಿಧಿಗಳ ಆಕಾರದಲ್ಲಿ ಅಪಾರದರ್ಶಕತೆ
  4. ಚಿತ್ರಗಳ ನ್ನು ಸೇರಿಸಬಹುದು ಹಾಗು ಈ ಪರಿಕರವು SVG ಕಡತಗಳನ್ನು ಬೆಂಬಲಿಸುತ್ತದೆ.
  5. ಇದು ಸಿಮ್ಯುಲೇಶನ್ ಹಾಗೂ ಗ್ರಾಫಿಕ್ ಪ್ಲಾಟರ್ ಆಗಿದೆ.

ಇತರೇ ಸಮಾನ ಅನ್ವಯಕಗಳು

ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಅನ್ವಯಕ ಬಳಕೆ

ಕಾರ್ಯಕಾರಿತ್ವ










ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಮೊದಲು File ಮೇಲೆ ಕ್ಲಿಕ್ ಮಾಡಿ > ನಂತರ Save ಬಟನ್ ಕ್ಲಿಕ್ ಮಾಡಬೇಕು. ಕಡತಕ್ಕೆ ಸೂಕ್ತ ಹೆಸರು ಮತ್ತು ಉಳಿಸಬೇಕಾದ ಸ್ಥಳವನ್ನು ನಮೂದಿಸಿ ನಂತರ Save ಬಟನ್ ಕ್ಲಿಕ್ ಮಾಡಬೇಕು. ಈಕಡತವು .ggb ನಮೂನೆಯಲ್ಲಿ ಉಳಿದುಕೊಳ್ಳುತ್ತದೆ.

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು