ವಿ.ಎಲ್.ಸಿ ಪ್ಲೇಯರ್ ಕಲಿಯಿರಿ
Jump to navigation
Jump to search
ಪರಿಚಯ
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | ವಿಎಲ್ಸಿ ಮೀಡಿಯಾ ಪ್ಲೇಯರ್, ಆಡಿಯೋ ಮತ್ತು ವೀಡಿಯೋಗಳನ್ನು ಪ್ಲೇ ಮಾಡುವ ತಂತ್ರಾಂಶ ಅನ್ವಯಕವಾಗಿದೆ. |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ಶೈಕ್ಷಣಿಕವಾಗಿ ಲಭ್ಯವಿರುವ ವೀಡಿಯೋ ಮತ್ತು ಆಡಿಯೋಗಳನ್ನು ವಿಎಲ್ಸಿ ಪ್ಲೇಯರ್ ಮೂಲಕ ಬಳಸಬಹುದಾಗಿದೆ. |
ಆವೃತ್ತಿ | 2.2.2 |
ಸಂರಚನೆ | ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. |
ಇತರೇ ಸಮಾನ ಅನ್ವಯಕಗಳು | SMPlayer, |
ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | MX Player |
ಅಭಿವೃದ್ದಿ ಮತ್ತು ಸಮುದಾಯ ಸಹಾಯ | ಅಧಿಕೃತ ವೆಬ್ಪುಟ |
ಲಕ್ಷಣಗಳ ಮೇಲ್ನೋಟ
- ಇದು ಎಲ್ಲಾ ರೀತಿಯ ಆಡಿಯೋ ಹಾಗು ವೀಡಿಯೋ ನಮೂನೆಗಳನ್ನು ಬೆಂಬಲಿಸುತ್ತದೆ (ex: Mp4, Mpeg, Divx, flv, mp3, etc).
- ಇದು ಎಲ್ಲಾ ರೀತಿಯ ಆಪರೇಟಿಂಗ್ ಸಿಸ್ಟಂಗಳಲ್ಲಿಯೂ ಬಳಕೆಯಾಗುತ್ತದೆ.
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “
VLC Media Player
” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. - ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
“sudo apt-get install vlc vlc-plugin-pulse mozilla-plugin-vlc
ಅನ್ವಯಕ ಬಳಕೆ
ವಿಎಲ್ಸಿ ಮೀಡಿಯಾ ಪ್ಲೇಯರ್ ತೆರೆಯುವುದು
- ವಿಎಲ್ಸಿ ಮೀಡಿಯಾ ಪ್ಲೇಯರ್ ತೆರೆಯುವುದು
- ವಿಎಲ್ಸಿ ಮೀಡಿಯಾ ಪ್ಲೇಯರ್ ನ್ನು Application --> Sound and Videos → VLC Media Player ಮೂಲಕ ತೆರೆಯಬಹುದು.
- ವಿಎಲ್ಸಿ ಮೀಡಿಯಾ ಪ್ಲೇಯರ್ ತೆರೆದ ನಂತರ ಎರಡನೇ ಚಿತ್ರದ ರೀತಿಯ ಮುಖ್ಯಪುಟ ಕಾಣಬಹುದು.
ವಿಎಲ್ಸಿ ಮೀಡಿಯಾ ಪ್ಲೇಯರ್ ಮೂಲಕ ಕಡತ ತೆರೆಯುವುದು
- ಕಡತ ತೆರೆಯುವುದು
- ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿ ಆಡಿಯೋ ಅಥವಾ ವೀಡಿಯೋ ಕಡತ ತೆರೆಯಲು ಮೆನುಬಾರ್ನ Media > Open File ನ್ನು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ನೀವು ತೆರೆಯಬೇಕಿರುವ ಆಡಿಯೋ ಅಥವಾ ವೀಡಿಯೋ ಕಡತದ ಮೇಲೆ ಮೌಸ್ನ ಬಲಬದಿಯನ್ನು ಒತ್ತಿ Open with > VLC Media Player ಮೂಲಕವೂ ತೆರೆಯಬಹುದು.
- ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿ ಒಮ್ಮೆಗೆ ಹಲವು ಕಡತಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕಡತಗಳು ಸರಣಿಯಲ್ಲಿ ಒಂದಾದ ನಂತರ ಒಂದರಂತೆ ಚಾಲನೆಗೊಳ್ಳುತ್ತವೆ.
ಯೂಟ್ಯೂಬ್ ವೀಡಿಯೋ ಡೌನ್ಲೋಡ್ ಮಾಡುವುದು
ವಿಎಲ್ಸಿ ಮೀಡಿಯಾ ಪ್ಲೇಯರ್ ಮೂಲಕ ಯೂಟ್ಯೂಬ್ ವೀಡಿಯೋ ಡೌನ್ಲೋಡ್ ಮಾಡಬಹುದು.
- ಯೂಟ್ಯೂಬ್ನಲ್ಲಿ ನಿಮಗೆ ಬೇಕಾದ ವೀಡಿಯೋನ್ನು ಹುಡುಕಿ. ಆ ವೀಡಿಯೋದ URL ಕೊಂಡಿಯನ್ನು ಅಡ್ರೆಸ್ ಬಾರ್ನಿಂದ ಕಾಪಿ ಮಾಡಿಕೊಳ್ಳಿ.
ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿ ಮೆನುಬಾರ್ ನಲ್ಲಿನ Media > Open Network Stream ನ್ನು ಆಯ್ಕೆ ಮಾಡಿ.
- ಇಲ್ಲಿ ಯೂಟ್ಯೂಬ್ ಪುಟದಿಂದ ಕಾಪಿಮಾಡಿಕೊಂಡ URL ಕೊಂಡಿಯನ್ನು ನಮೂದಿಸಿ. ನಂತರ "Play" ಮೇಲೆ ಒತ್ತಿ.
- ಈಗ ನಿಮ್ಮ ವೀಡಿಯೋ ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿ ತೆರೆಯುತ್ತದೆ. ಇಲ್ಲಿ Tools> Codec Information ಗೆ ಹೋಗಿ.
- Location ಎಂಬಲ್ಲಿ ಇರುವ ಕೊಂಡಿಯನ್ನು ಕಾಪಿ ಮಾಡಿಕೊಂಡು ನಿಮ್ಮ ಬ್ರೌಸರ್ ನ ಅಡ್ರೆಸ್ ಬಾರ್ನಲ್ಲಿ ಅಂಟಿಸಿ. ಇಲ್ಲಿ ವೀಡಿಯೋ ಚಾಲನೆಗೊಳ್ಳುತ್ತದೆ. ಈ ವೀಡಿಯೋ ಮೇಲೆ ನಿಮ್ಮ ಮೌಸ್ ಕರ್ಸರ್ನ ಬಲಬದಿಯನ್ನು ಒತ್ತಿ "Save Video As." ನ್ನು ಆಯ್ದುಕೊಳ್ಳಿ. ಈಗ ವೀಡಿಯೋ ನಿಮ್ಮ ಕಂಪ್ಯೂಟರ್ಗೆ ಡೌನ್ಲೋಡ್ ಆಗುತ್ತದೆ.
ವೀಡಿಯೋ ಆಯ್ಕೆ ಮಾಡುವಾಗ ಕಾಪಿರೈಟ್ ಅನುಮತಿಗಳನ್ನು ಗಮನಿಸಿ. ಮುಕ್ತ ಲೈಸೆನ್ಸ್ ಹೊಂದಿರುವ ವೀಡಿಯೋಗಳನ್ನು ಮಾತ್ರ ಡೌನ್ಲೋಡ್ ಮಾಡಿ.
ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿ ಆಡಿಯೋ/ವೀಡಿಯೋ ಕನ್ವರ್ಟ್ ಮಾಡುವುದು
ಬೇರೆ ಬೇರೆ ನಮೂನೆಗಳಲ್ಲಿರುವ ಆಡಿಯೋ/ವೀಡಿಯೋ ಕಡತಗಳನ್ನು ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿಕನ್ವರ್ಟ್ ಮಾಡಬಹುದು, ಅದಕ್ಕಾಗಿ
- ಮೆನುಬಾರ್ನ Media> "Convert/Save." ನ್ನು ಆಯ್ಕೆ ಮಾಡಿ.
- ಕನ್ವರ್ಟ್ ಮಾಡಬೇಕಿರುವ ಕಡತವನ್ನು ಆಯ್ಕೆ ಮಾಡಿಕೊಳ್ಳಿ.
- "Convert/Save." ಮೇಲೆ ಒತ್ತಿರಿ.
- "Settings" ವಿಭಾಗದಲ್ಲಿನ Profile ನಲ್ಲಿ ನಮೂನೆಯನ್ನು ಆಯ್ಕೆ ಮಾಡಿ.
- ಕಡತಕ್ಕೆ ಹೆಸರು ಮತ್ತು ಉಳಿಯಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ
- Start ಮೇಲೆ ಒತ್ತಿರಿ.
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು
ಅನ್ವಯಿಸುವುದಿಲ್ಲ