ಸೌಂಡ್‌ಕ್ಲೌಡ್ ಕಲಿಯಿರಿ
ಪರಿಚಯ
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | 'ಸೌಂಡ್ ಕ್ಲೌಡ್' ಎಂಬುದು ಆಡಿಯೋ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಸಂಗ್ರಹಮಾಡುವ,ಅಪ್‌ಲೋಡ್ ಮಾಡುವ ಮತ್ತು ಕೇಳುವ ತಾಣವಾಗಿದೆ. ಇದರಲ್ಲಿ ಸಂಗೀತ,ಧ್ವನಿ, ಸಂಭಾಷಣೆ, ಸಂದರ್ಶನಗಳನ್ನು ವಿವಿಧ ವಿನ್ಯಾಸಗಳಲ್ಲಿ ಉಳಿಸಬಹುದಾಗಿದೆ. |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು,ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಯುವರ್ ಲಿಸನ್ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು. |
ಆವೃತ್ತಿ | ಅನ್ವಯವಾಗುವುದಿಲ್ಲ |
ಸಂರಚನೆ | ಅನ್ವಯವಾಗುವುದಿಲ್ಲ |
ಇತರೇ ಸಮಾನ ಅನ್ವಯಕಗಳು | Yourlisten |
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | Google Play Music, Spotify |
ಅಭಿವೃದ್ದಿ ಮತ್ತು ಸಮುದಾಯ ಸಹಾಯ | ಅಧಿಕೃತ ವೆಬ್‌ಪುಟ |
ಲಕ್ಷಣಗಳ ಮೇಲ್ನೋಟ
- ಯಾವುದೇ ನಮೂನೆಯ ಧ್ವನಿ ಕಡತಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಇದರಲ್ಲಿ ಇಭ್ಯವಿರುವ ಎಲ್ಲಾ ಧ್ವನಿ ಅಥವ ಸಂಗೀತವನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದು.
- ಹೊರಗಿನಿಂದ ಕಡತಗಳನ್ನು ಅಪ್‌ಲೋಡ್ ಮಾಡುವ ಜೊತೆಗೆ, ಈ ಪುಟದಲ್ಲಿಯೇ ಧ್ವನಿಮುದ್ರಣ ಮಾಡಬಹುದು.
ಅನುಸ್ಥಾಪನೆ
ಇದು ವೆಬ್ ಆಧಾರಿತ ಅನ್ವಯಕವಾದ್ದರಿಂದ ಅನುಸ್ಥಾಪನೆಯ ಅವಶ್ಯಕತೆ ಇರುವುದಿಲ್ಲ.
ಅನ್ವಯಕ ಬಳಕೆ
ಸೌಂಡ್‌ಕ್ಲೌಡ್ ಪುಟ ತೆರೆಯುವುದು ಮತ್ತು ಲಾಗಿನ್ ಆಗುವುದು
- ಪುಟ ತೆರೆಯುವುದು ಮತ್ತು ಲಾಗಿನ್ ಆಗುವುದು
- Application - Internet - Firefox web browser ಗೆ ಹೋಗಿ https://soundcloud.com ಎಂದು ನಮೂದಿಸಿ ನಂತರ "ENTER" ಒತ್ತಿರಿ.
- ನಂತರ ಎರಡನೇ ಚಿತ್ರದಲ್ಲಿ ಕಾಣುವ ಸೌಂಡ್‌ಕ್ಲೌಡ್ ಪುಟದಲ್ಲಿನ "Sign in" ಮೇಲೆ ಒತ್ತಿರಿ.
- ಇದರಲ್ಲಿ "Continue with Google" ಆಯ್ಕೆ ಮಾಡಿ, ನಂತರ ನಿಮ್ಮ ಜೀಮೇಲ್ ಐಡಿಯನ್ನು ನಮೂದಿಸಿ.
- ಲಾಗಿನ ಆದ ನಂತರ ಸೌಂಡ್‌ಕ್ಲೌಡ್ ನ ಮುಖ್ಯಪುಟ ನಾಲ್ಕನೇ ಚಿತ್ರದ ರೀತಿ ಕಾಣುತ್ತದೆ. ಇದರಲ್ಲಿ ಈಗಾಗಲೇ ಅಪ್‌ಲೋಡ್ ಮಾಡಲಾಗಿರುವ ಆಡಿಯೋ ಕಡತಗಳನ್ನು ಕಾಣಬಹುದು.
ಆಡಿಯೋ ಕಡತಗಳನ್ನು ಅಪ್‌ಲೋಡ್ ಮಾಡುವುದು
- ಆಡಿಯೋ ಕಡತಗಳನ್ನು ಅಪ್‌ಲೋಡ್ ಮಾಡುವುದು
- Playing audio in soundcloud.png
ಆಡಿಯೋ ಪ್ಲೇ ಮಾಡುವುದು
- ನಿಮ್ಮ ಖಾತೆಯಿಂದ ಲಅಗಿನ ಆದ ಬಳಿಕ, ನಿಮ್ಮ ಆಡಿಯೋ ಕಡತಗಳನ್ನು ಅಪ್‌ಲೋಡ್ ಮಾಡಬಹುದು. ಸೌಂಡ್‌ಕ್ಲೌಡ್ ಪುಟದ ಮೇಲ್ಭಾಗದಲ್ಲಿ ಸರ್ಚ್ ಆಯ್ಕೆಯ ಪಕ್ಕದಲ್ಲಿನ "UPLOAD" ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ಆಡಿಯೋ ಕಡತಗಳನ್ನು ಆಯ್ಕೆ ಮಾಡಿ.
- ಅಪ್‌ಲೋಡ್ ಮಾಡುವ ಜೊತೆಗೆ, ನೇರವಾಗಿ ಸೌಂಡ್‌ಕ್ಲೌಡ್ ಪುಟದಲ್ಲೇ ಧ್ವನಿಮುದ್ರಣ ಮಾಡಬಹುದು. ಇದಕ್ಕಾಗಿ "UPLOAD" ಮೇಲೆ ಕ್ಲಿಕ್ ಮಾಡಿದ ನಂತರ "Start new recording" ನ್ನು ಆಯ್ಕೆ ಮಾಡಿಕೊಳ್ಳಿ.
- ನೀವು ಅಪ್‌ಲೋಡ್ ಮಾಡಿದ ಕಡತಗಳ ಪಟ್ಟಿಯು ಮೂರನೇ ಚಿತ್ರದಲ್ಲಿರುವಂತೆ ಕಾಣುತ್ತದೆ.
- ಅಪ್‌ಲೋಡ್ ಮಾಡಿರುವ ಕಡತಗಳ ಪಟ್ಟಿಯಿಂದಲೇ ನಿಮಗೆ ಬೇಕಾದ ಕಡತವನ್ನು ಆಯ್ಕೆ ಮಾಡಿ ಪ್ಲೇ ಮಾಡಬಹುದು.
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು
ಅನ್ವಯವಾಗುವುದಿಲ್ಲ
ಉನ್ನತೀಕರಿಸಿದ ಲಕ್ಷಣಗಳು
ಸೌಂಡ್‌ಕ್ಲೌಡ್‌ನಲ್ಲಿ ಸಾರ್ವಜನಿಕವಾಗಿ ಇತರರು ಅಪ್‌ಲೋಡ್ ಮಾಡಿದ ಆಡಿಯೋ ಸಂಪನ್ಮೂಲಗಳನ್ನು ವಿವಿಧ ನಿರ್ಧಿಷ್ಟ ವರ್ಗೀಕರಣದ ಮೂಲಕ ಹುಡಕಬಹುದಾಗಿದೆ.