ಫೆಟ್ ಕಲಿಯಿರಿ
ಪರಿಚಯ
ಫೆಟ್ ಎಂಬುದು ಪ್ರಯೋಗಗಳು ಮತ್ತು ಚಟುವಟಿಕೆಗಳನ್ನು ಕಂಪ್ಯೂಟರ್ ಮೂಲಕ ಪ್ರಸ್ತುತಪಡಿಸಬಹುದಾದ ಶೈಕ್ಷಣಿಕ ಪರಿಕರವಾಗಿದೆ. ತರಗತಿ ಬೋಧನೆ-ಕಲಿಕೆಯಲ್ಲಿ ಅಳವಡಿಕೆ ಮಾಡಿಕೊಳ್ಳಬಹುದಾದ ಹಲವು ಸಿಮ್ಯುಲೇಷನ್‌ಗಳ ಸಂಗ್ರಹವಾಗಿದೆ.
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | ಫೆಟ್ ಎಂಬುದು ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು,ವಿಷಯ ಸಂಪನ್ಮೂಲ ರಚನೆಯ ಅನ್ವಯಕವಾಗಿದೆ (ವಿಜ್ಞಾನ ಮತ್ತು ಗಣಿತ) |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ಫೆಟ್-ಸಿಮ್ಯುಲೇಷನ್‌ಗಳು ಶೈಕ್ಷಣಿಕವಾಗಿ ಬಳಸಬಹುದಾದಂತಹ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ಉಪಕರಣಗಳಾಗಿವೆ. ವಿಜ್ಞಾನ ಮತ್ತು ಗಣಿತದಂತಹ ವಿಷಯಗಳನ್ನು ಮುಕ್ತವಾಗಿ, ಮೋಜಿನೊಂದಿಗೆ ಕಲಿಯಲು, ಸಂಶೋಧನೆಗಳಂತಹ ಗುಣಗಳನ್ನು ಅಭಿವೃದ್ದಿ ಪಡಿಸಿಕೊಳ್ಳಲು ಅನುಕೂಲವಾಗುವಂತೆ ಸಿಮ್ಯುಲೇಷನ್ ಗಳನ್ನು ರೂಪಿಸಲಾಗಿದೆ. ಸೂಕ್ಷ್ಮವಾದ ವೀಕ್ಷಣೆ, ಪ್ರಶಂಸೆ ಮತ್ತು ಆವಿಷ್ಕಾರದಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಹಾಗೂ ಮಕ್ಕಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸಲು ಫೆಟ್-ಸಿಮ್ಯುಲೇಷನ್ ಗಳು ಬಹಳ ಸಹಕಾರಿಯಾಗಿವೆ. ನೈಜ ಪ್ರದರ್ಶನದ ಮೂಲಕ ಮಕ್ಕಳಲ್ಲಿ ಕಲಿಕೆಯನ್ನು ಪರಿಣಾಮಕಾರಿಗೊಳಿಸಲು ಸಿಮ್ಯುಲೇಷನ್ ಗಳು ಸಹಕಾರಿಯಾಗುತ್ತದೆ. ಸಿಮ್ಯುಲೇಷನ್‌ಗಳನ್ನು ಮೌಲ್ಯಮಾಪನಕ್ಕೂ ಸಹ ಬಳಸಿಕೊಳ್ಳಬಹುದು. |
ಆವೃತ್ತಿ | PhET Version - 1.1.7 |
ಸಂರಚನೆ | ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. |
ಇತರೇ ಸಮಾನ ಅನ್ವಯಕಗಳು | |
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | ಫೆಟ್ ಸಿಮ್ಯುಲೇಷನ್‌ನ ಅನ್ವಯಕಗಳು ಆಂಡ್ರಾಯಿಡ್ ಮೊಬೈಲ್‌ನಲ್ಲಿ ಲಭ್ಯವಿದೆ. |
ಅಭಿವೃದ್ದಿ ಮತ್ತು ಸಮುದಾಯ ಸಹಾಯ | ಫೆಟ್ ಸಿಮ್ಯುಲೇಷನ್‌ಗಳು Java, Flash or HTML5ಗಳ ಮೂಲಕ ರಚನೆಯಾಗಿರುತ್ತವೆ.ಇವುಗಳನ್ನು ಆನ್‌ಲೈನ್‌ನಲ್ಲಿ ಅಥವಾ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಅಧಿಕೃತ ವೆಬ್‌ಪುಟ] |
ಲಕ್ಷಣಗಳ ಮೇಲ್ನೋಟ
ಫೆಟ್ ವರ್ಚುಯಲ್ ಪ್ರಯೋಗಾಲಯವಾಗಿದ್ದು, ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಾಧಾರಿತವಾದ ಹಲವು ವರ್ಚುಯಲ್ ಪ್ರಯೋಗಾಲಯಗಳನ್ನು ಹೊಂದಿದೆ. ವಿಜ್ಞಾನದ ಸಿಮ್ಯುಲೇಷನ್‌ಗಳನ್ನು ಭೌತ ವಿಜ್ಞಾನ, ಜೀವ ವಿಜ್ಞಾನ ಹಾಗು ಭೂ ವಿಜ್ಞಾನವಾಗಿ ವರ್ಗೀಕರಿಸಲಾಗಿದೆ. ಅನುವಾದಗೊಂಡಿರುವ ಸಿಮ್ಯುಲೇಷನ್‌ಗಳು ಸಹ ಲಭ್ಯವಿವೆ.
ಅನುಸ್ಥಾಪನೆ
Applications> Education> Science ನಲ್ಲಿ ಫೆಟ್ ಅನ್ವಯಕ ದೊರೆಯದಿದ್ದರೆ, ನೀವು ಹೊಸದಾಗಿ ನಿಮ್ಮ ಆಪರೇಟಿಂಗ್ ಸಿಸ್ಟಂ ಗೆ ಫೆಟ್‌ನ್ನು ಸಂರಚಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. Application → System tools → preferences → main menu → Select science → Click on NEW ITEM → Name – PhET → Command- firefox /opt/PhET/index.html → OK ಈ ವಿಧಾನ ಅನುಸರಿಸಿದ ನಂತರ, Applications> Education> Science ಮೂಲಕ ಫೆಟ್ ಅನ್ವಯಕ ತೆರೆಯಬಹುದು.
ಅನ್ವಯಕ ಬಳಕೆ
ಫೆಟ್ ಅನ್ವಯಕ ಬಳಕೆ
- ಫೆಟ್ ಅನ್ವಯಕವನ್ನು Applications> Education> PhET ಮೂಲಕ ತೆರೆಯಬಹುದು. ಫೆಟ್ ಎಂಬುದು ಪ್ರಯೋಗಗಳು ಮತ್ತು ಚಟುವಟಿಕೆಗಳನ್ನು ಕಂಪ್ಯೂಟರ್ ಮೂಲಕ ಪ್ರಸ್ತುತಪಡಿಸಬಹುದಾದ ಶೈಕ್ಷಣಿಕ ಪರಿಕರವಾಗಿದೆ
- ಫೆಟ್ ತೆರೆದ ನಂತರ ಆ ಪರದೆಯಲ್ಲಿನ “Play with sims” ನ್ನು ಕ್ಲಿಕ್ ಮಾಡಿ. ಇದು ವಿವಿಧ ವಿಷಯಗಳ ಸಿಮ್ಯುಲೇಷನ್‌ಗಳನ್ನು ತೆರೆಯುತ್ತದೆ. ಇಲ್ಲಿ ಉದಾಹರಣೆಗೆ “Physics” ಮೇಲೆ ಕ್ಲಿಕ್ ಮಾಡಿ. ನಂತರ ಹಾಗೆ ಕೆಳಕ್ಕೆ ಹೋಗಿ “simulation on Pendulum Lab” ಮೇಲೆ ಕ್ಲಿಕ್ ಮಾಡಿ Pendulum Lab ನ ಪ್ರಯೋಗವನ್ನು ನೋಡಬಹುದು. ಇದರಲ್ಲಿ ಸಿಮ್ಯುಲೇಷನ್‌ಗಳನ್ನು ತೆರೆಯಲು. “Run Now” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಪೆಂಡುಲಮ್ ಸಿಮ್ಯುಲೇಷನ್ ಬಳಕೆ
ಒಂದು ಸಂದರ್ಭದಲ್ಲಿನ ವಿವಿಧ ಅಂಶಗಳನ್ನು ಕ್ರೋಢೀಕರಿಸಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಸ್ತುತಿಪಡಿಸುವುದೇ ಸಿಮ್ಯುಲೇಷನ್‌ನ ಪ್ರಮುಖ ಅಂಶವಾಗಿದೆ. ಈ ಕೆಳಗೆ ಸಮ್ಯುಲೇಷನ್ ಬಳಸಿ ಪಾಠ ವಿವರಿಸುವ ಉದಾಹರಣೆಯನ್ನು ನೀಡಲಾಗಿದೆ.
- ಈಗ Pendulum ಎಲ್ಲಿದೆ ಎಂಬುದನ್ನು ಗಮನಿಸಿ.
- ಇದು ಕೇಂದ್ರ ಬಿಂದುವಿಗಿಂತ ಮೇಲಿನ ಹಂತದಲ್ಲಿದೆಯೇ ಅಥವಾ ಕೆಳಗಿನ ಹಂತದಲ್ಲಿದೆಯೇ ಅಥವಾ ಸಮನಾಗಿದೆಯೇ ಎಂಬುದನ್ನು ಗಮನಿಸಿ.
- ಗ್ರಾಫ್ ನ್ನು ಗಮನಿಸಿ- ಗ್ರಾಫ್ ನಲ್ಲಿನ ಎರಡು ಬದಲಾವಣೆಗಳೇನು ?
- ನಿಮ್ಮ ಪ್ರಕಾರ ಮುಂದೆ ಪೆಂಡುಲಮ್‌ನಲ್ಲಿ ಯಾವ ಬದಲಾವಣೆ ಆಗಬಹುದು ?
- Pendulum ಎಲ್ಲಿಗೆ ಚಲಿಸುತ್ತದೆ ಎಂಬುದನ್ನು ಗಮನಿಸಿ? ಈ ಚಲನೆಯ ಬಗ್ಗೆ ನಿಮ್ಮ ಆಭಿಪ್ರಾಯ ಏನು? ಗ್ರಾಫ್ ನ್ನು ಗಮನಿಸಿ – ಬಾರ್ ಚಾರ್ಟ್‌ನಲ್ಲಾಗುತ್ತಿರುವ ಬದಲಾವಣೆಗಳೇನು? ಒಟ್ಟು ಸಾಮರ್ಥ್ಯಕ್ಕೆ ಹೋಲಿಸಿದಲ್ಲಿ PE and KE ಮೌಲ್ಯಗಳೇನು ?
- ಈಗ Pendulum ಎಲ್ಲಿದೆ ಎಂಬುದನ್ನು ಗಮನಿಸಿ.
- ಇದು ಕೇಂದ್ರಬಿಂದುವಿಗಿಂತ ಮೇಲಿನ ಹಂತದಲ್ಲಿದೆಯೇ ಅಥವಾ ಕೆಳಗಿನ ಹಂತದಲ್ಲಿದೆಯೇ ಅಥವಾ ಸಮನಾಗಿದೆಯೇ ಎಂಬುದನ್ನು ಗಮನಿಸಿ.
- ತೂಗಾಡುತ್ತಿರುವ ಲೋಲಕವು ಒಂದೆಡೆಯಿಂದ ಮತ್ತೊಂದೆಡೆಗೆ ತೂಗಾಗಡುವಾಗ ಇದರ ವೇಗವನ್ನು ಗಮನಿಸಿದಿರಾ ?
- ಗ್ರಾಫ್ ನ್ನು ಗಮನಿಸಿ- ಗ್ರಾಫ್ ನಲ್ಲಿ ಎರಡು ಬದಲಾವಣೆಗಳೇನು ?
- ಒಟ್ಟು ಸಾಮರ್ಥ್ಯಕ್ಕೆ ಹೋಲಿಸಿದಲ್ಲಿ PE and KE ಮೌಲ್ಯಗಳೇನು ?
- ಏನು ಆಗುತ್ತಿದೆ ಎಂದು ನಿಮಗನಿಸುತ್ತಿದೆ ? ನೀವು ಈ ಪ್ರಯೋಗವನ್ನು ಮಾಡಲು ಪ್ರಯತ್ನಿಸಿದಾಗ ಇದೇ ರೀತಿ ಆಗುತ್ತದೆ ಎಂದು ಯೋಚಿಸಿರುವಿರಾ ? ಏಕೆ ? ಏಕಿಲ್ಲ ? ಏನು ವ್ಯತ್ಯಾಸ ?
- ಈಗ Pendulum ಎಲ್ಲಿದೆ ಎಂಬುದನ್ನು ಗಮನಿಸಿ.
- ಬಲಬದಿಯ ಕೊನೆ ತುದಿಯು ವಿಭಿನ್ನವಾದ ಎತ್ತರದಲ್ಲಿದೆ. ಯಾಕೆ? ಇದರಲ್ಲಿ ಘರ್ಷಣೆಯ ಪಾತ್ರವೇನು ? ಇದು ಎಲ್ಲಿಂದ ಬಂತು ?
- ನಕ್ಷೆ ನೋಡಿ - ಬಾರ್‌ಚಾರ್ಟ್‌ನಲ್ಲಿನ ಬದಲಾವಣೆಗಳೇನು ? ಉಷ್ಣಶಕ್ತಿ ಎಲ್ಲಿಂದ ಬಂತು ? ಸರಳ ಪೆಂಡಲಮ್ ಗೆ ಏನಾಗಬಹುದು ಎಂದು ನಿರೀಕ್ಷಿಸಿದ್ದೀರಿ ?
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು
ಫೆಟ್ ಸಿಮ್ಯುಲೇಷನ್ ಅದರದೇ ಆದ ಯಾವುದೇ ನಮೂನೆಗಳನ್ನು ಹೊಂದಿಲ್ಲ. ಇದರಲ್ಲಿ ವೆಬ್‌ಪುಟವನ್ನು ಉಳಿಸಿಕೊಳ್ಳಬಹುದಾಗಿದ್ದು ಅವು ".html" ನಮೂನೆಯಲ್ಲಿ ಉಳಿಯುತ್ತದೆ. ನೀವು ಬಳಸುತ್ತಿರುವ ಫೆಟ್ ಸಿಮ್ಯುಲೇಷನ್‌ನನ್ನು ಚಿತ್ರವಾಗಿ ತೆಗೆದುಕೊಳ್ಳಲು ಸ್ಕ್ರೀನ್‌ಶಾಟ್ ಬಳಸಬಹುದು. ರೆಕಾರ್ಡ್ ಮೈ ಡೆಸ್ಕ್ಟಾಪ್ ಅನ್ವಯಕದ ಮೂಲಕವು ಸಹ ವೀಡಿಯೋವಾಗಿ ಮುದ್ರಿಸಿಕೊಂಡು ತರಗತಿ ಕೋಣೆಯಲ್ಲಿ ಬಳಸಬಹುದು.
ಉನ್ನತೀಕರಿಸಿದ ಲಕ್ಷಣಗಳು
ಸಂಪನ್ಮೂಲ ರಚನೆಯ ಆಲೋಚನೆಗಳು
ಫೆಟ್‌ನಲ್ಲಿನ ಚಟುವಟಿಕೆಗಳನ್ನು ಈ ಹಿಂದೆ ಹೇಳಿದಂತೆ ವೀಡಿಯೋ ಸಂಪನ್ಮೂಲ ರಚಿಸಲು ಬಳಸಬಹುದು. ಅದೇ ರೀತಿ ಫೆಟ್ ಬಳಸುವಾಗ ಸ್ಕ್ರೀನ್‌ಶಾಟ್ ತೆಗೆದುಕೊಮಡು ಅವುಗಳನ್ನು ಒಮದು ಪೋಲ್ಡರ್‌ನಲ್ಲಿ ಕ್ರಮಾನುಗತವಾಗಿ ಜೋಡಿಸಿ ಸ್ಲೈಡ್ ಶೋ ಮೂಲಕ ಪ್ರಸ್ತುತಿಪಡಿಸಬಹುದು.