ಡಿಜಿಟಲ್ ಭಾಷಾ ಬುನಾದಿಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಅಧ್ಯಯ-1 - ಡಿಜಿಟಲ್ ಭಾಷಾ ಬುನಾದಿಗಳು

ಪರಿಚಯ

ಈ ಅಭ್ಯಾಸಕ್ರಮದಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿ ಭಾಷೆಯ ಬುನಾದಿಗಳನ್ನು ಕಲಿಸಲಾಗುವುದು. ಕೇಳು - ಮಾತು - ಓದು - ಬರೆಹ ಇವುಗಳಲ್ಲಿ ಸಾಂಪ್ರದಾಯಕ ಪದ್ದತಿಯಲ್ಲಿ ಬಹುತೇಕವಾಗಿ ಮೊದಲಿಗೆ ಬರವಣಿಗೆಯನ್ನು ಮಾತ್ರ ಹೆಚ್ಚು ಗಮನಹರಿಸಲಾಗುವುದನ್ನು ಗುರುತಿಸಬಹುದು. ಮಕ್ಕಳಿಗೆ ಪರಸ್ಪರ ಕಲಿಕೆ ಚಟುವಟಿಕೆಯಧಾರಿತವಾಗಿರುವುದರಿಂದ ಕಲಿಕಾ ಪ್ರವೃತ್ತಿಯು ಪರಿಣಾಮಕಾರಿಯಾಗಿರುತ್ತದೆ ಜೊತೆಗೆ ಇತರೇ ಸಾಮರ್ಥ್ಯಗಳ ಮೂಲಕವೂ ಸಹ ಕಲಿಕೆಯ ಮೇಲೆ ಪರಿಣಾಮಕಾರಿ ಕಲಿಕೆಯನ್ನು ಗುರುತಿಸ ಬಹುದಾಗಿದೆ. ಆದರೆ ಇತರೆ ವಿಧಾನಗಳಲ್ಲಿ ಇದರ ಸಾಧ್ಯತೆ ಕಡಿಮೆ ಇದ್ದು ಡಿಜಿಟಲ್ ಬೋಧನಾ ಕ್ರಮದಿಂದ ಈ ನಾಲ್ಕೂ ಸಾಮರ್ಥ್ಯಗಳನ್ನು ಸುಲಭವಾಗಿ ಮುಟ್ಟ ಬಹುದಾಗಿದೆ. ಇದರ ಜೊತೆಗೆ ಒಂದೇ ಮಾಧ್ಯಮದಲ್ಲಿ ಬಹು ಸಾಧ್ಯತೆಗಳನ್ನು ಕೈಗೊಳ್ಳುವ ಸಾಧ್ಯತೆ ಇರುವುದರಿಂದ ತರಗತಿಯ ಹಂತದಲ್ಲಿನ ಬಹು ಕಲಿಕಾ ಮಟ್ಟದ ಮಕ್ಕಳಿಗೆ ಕಲಿಸಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿ ಕೆಲವು ಪ್ರಯೋಗಗಳನ್ನು ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳಲಾಗಿದ್ದು ಇದೇ ಅಂತಿಮವಲ್ಲ. ತರಗತಿಯ ಪರಿಸರಕ್ಕೆ ತಕ್ಕಂತೆ ಹೊಸ ಹೊಸ ಚಟುವಟಿಕೆಗಳನ್ನು ಸೇರಿಸಬಹುದು. ಇಲ್ಲಿ ಹಂತ ಹಂತವಾಗಿ ಕೇಳುವುದು(ಧ್ವನಿಗಳು)- ಮಾತನಾಡುವುದು(ಚಿತ್ರ ನೋಡಿ !) - ನಂತರ ಓದು ಬರೆಹವನ್ನು ಯೋಜಿಸಲಾಗಿದೆ.

ಪರಿಕಲ್ಪನಾ ನಕ್ಷೆ

ಗುರಿಗಳು

  1. ಡಿಜಿಟಲ್ ಮೂಲಕ ಭಾಷಯ ನಾಲ್ಕೂ ಸಾಮರ್ಥ್ಯಗಳ ಕಲಿಕೆ
  2. ವಿವಿಧ ಸಾಮರ್ಥ್ಯದ ಮಕ್ಕಳಿಗೆ ವಿವಿಧ ಚಟುವಟಿಕೆಗಳಿಂದ ಕಲಿಸುವ ಮೂಲಕ ಸಮೂದಾಯದೊಂದಿಗಿನ ಸಹಭಾಗಿತ್ವ
  3. ಮಕ್ಕಳ ಸೃಜನಶೀಲತೆ ಮತ್ತು ಕಲ್ಪನಾಶೀಲತೆಗೆ ಪ್ರೋತ್ಸಾಹ - ಅವರ ಮನಸ್ಸಿನ ಭಾವನೆಗಳಿಗೆ ಅವಕಾಶ
  4. ಆಟದ ಮೂಲದ ಪಾಠ ಎಂಬ ನೀತಿ
  5. ಭಾಷಾ ವೈವಿಧ್ಯತೆಗಳ ಪರಿಚಯ
  6. ಮಕ್ಕಳ ಕಲಿಕಾ ಮಟ್ಟದ ಅನ್ವೇಷಣೆ - ನೈನಿದಾನಿಕ ವಿಧಾನದ ಬಳಕೆ

ಸಂದರ್ಭ

  1. ವಿವಿಧ ಕಲಿಕಾ ಸಾಮರ್ಥ್ಯದ ಮಕ್ಕಳು ಮತ್ತು ತರಗತಿಯ ಭಾಗವಹಿಸುವಿಕೆ ಕಡಿಮೆ
  2. ಭಾಷೆಯನ್ನು ಮಾತನಾಡುವುದಿಲ್ಲ ಮತ್ತು ಭಾಷೆಯಲ್ಲಿ ಭಾಗವಹಿಸುದಿಲ್ಲ (ಭಾಷಾ ವಿಭಿನ್ನತೆಯ ಪರಿಸರ)
  3. ಹೇಳಿದ್ದನ್ನು - ಕೇಳಿದ್ದನ್ನು ಅರ್ಥೈಸುತ್ತಾ ಉತ್ತರಿಸಲು ಬಾರದು
  4. ತರಗತಿಯಲ್ಲಿ ಉತ್ಸಾಹಿತರಾಗಿ ಭಾಗವಹಿಸದಿರುವಿಕೆ, ಎಲ್ಲರಿಗೂ ಸಮಾನ ಕಲಿಕಾ ಅವಕಾಶವಿಲ್ಲದಿರುವುದು

ತರಗತಿ ಪ್ರಕ್ರಿಯೆ

  • ಒಂದು ವಾರದಲ್ಲಿ 3 ಡಿಜಿಟಲ್ ಭಾಷಾ ತರಗತಿಯಂತೆ , 2 ತಿಂಗಳ ಅವಧಿಗೆ ಈ ಅಭ್ಯಾಸ ಕ್ರಮದಲ್ಲಿ 24 ತರಗತಿಗಳು ಲಭ್ಯವಾಗುತ್ತದೆ. ವಾರದ ಒಂದು ತರಗತಿಯನ್ನು ಐಟಿಎಫ್‌ಸಿ ತಂಡದಿಂದ ಮಾದರಿ ತರಗತಿಯಲ್ಲಿಬಾಗವಹಿಸಿದರೆ ಉಳಿದ ಎರಡು ತರಗತಿಯನ್ನು ಆಯಾ ಶಾಲಾ ಶಿಕ್ಷಕರೇ ನಿರ್ವಹಿಸುತ್ತಾರೆ. ಇದಕ್ಕೆ ಎರಡು ಅವಧಿಯ ಅಂದರೆ 40 ನಿಮಿಷದ 2 ಅವಧಿಯ ಒಂದು ತರಗತಿಯ ಅಗತ್ಯವಿರುತ್ತದೆ. ಧ್ವನಿ,ಚಿತ್ರ,ದೃಶ್ಯಾ,ಪಠ್ಯ ಹೀಗೆ ವೈವಿಧ್ಯಮಯ ಸಾಧ್ಯತೆಗಳನ್ನು ಪ್ರಯೋಗಿಸಲಾಗುವುದರಿಂದ ಇದಕ್ಕೆ ಪೂರಕವಾದ ಡಿಜಿಟಲ್ ಉಪಕರಣಗಳ ಅಗತ್ಯವಿದೆ. ಉದಾ: ಧ್ವನಿವರ್ಧಕ.ಪ್ರದರ್ಶನಾ ಪರದೆ, ಪೆನ್ ಡ್ರೈವ್ ಇತ್ಯಾದಿ. ಪ್ರತಿ ಘಟಕದ ಅಥವ ತಿಂಗಳ ಕೊನೆಯಲ್ಲಿ ಮೌಲ್ಯಮಾಪನವಿದ್ದು ಅಂಕಗಳನ್ನು ಅಥವ ಶ್ರೇಣಿಗಳನ್ನು ನೀಡಲಾಗುದು.(ಇದು ಕೇವಲ ಮಕ್ಕಳ ಪ್ರೋತ್ಸಹಕ್ಕಾಗಿ ಮಾತ್ರ)

ಪಠ್ಯಕ್ರಮ

ಪಾಠ1.ಕೇಳಿ ತಿಳಿ

ಪರಿಚಯ

ತರಗತಿ ಪ್ರಕ್ರಿಯೆ

ಸಂಪನ್ಮೂಲಗಳು

  1. ಧ್ವನಿ ಕಥೆ - 1
  2. ಧ್ವನಿ ಕಥೆ - 2
  3. ಧ್ವನಿ ಕಥೆ - 3

ಚಟುವಟಿಕೆಗಳು

  • ಈ ಶಬ್ಧಗಳನ್ನು ಗುರುತಿಸಿ ಹೇಳಿ (ಪ್ರಾಣಿ ಪಕ್ಷಿ ಗಾಳಿ ಆಟ)
  • ಕಥೆ ಕೇಳಿ ಸರಳ ಪ್ರಶ್ನೆಗಳಿಗೆ ಉತ್ತರ
  • ಕನ್ನಡ ಕಥೆ ಕೇಳಿ ಬದಲಿಸಿ ಹೇಳಿ - ಧ್ವನಿಯಲ್ಲಿನ ತಪ್ಪನ್ನು ಹುಡುಕುವುದು (ಅಕ್ಕಿ - ಹಕ್ಕಿ)
  • ಶಬ್ಧ ರೂಪದ ಕಥೆಯನ್ನು ಕೇಳಿ ಹೇಳಿರಿ ಮತ್ತು ಬರೆಯಿರಿ
  • ಧ್ವನಿಯಲ್ಲಿನ ತಪ್ಪನ್ನು ಹುಡುಕುವುದು (ಅಕ್ಕಿ - ಹಕ್ಕಿ),
  • ನೀಡಿರುವ ಶಬ್ದವನ್ನು ಬಳಸಿ ಕಥೆಯನ್ನು ರೂಪಿಸಿ ಪ್ರಸ್ತುತ ಪಡಿಸಿ
  • ಸರಳ ವಾಕ್ಯಗಳನ್ನು ಸರಿಪಡಿಸಿ ಹೇಳಿ (ಅದಲು - ಬದಲು) ಬರೆಯಿರಿ

ಮೌಲ್ಯಮಾಪನ

ಪಾಠ 2. ನೋಡಿ ಕಲಿ

ಪರಿಚಯ

ತರಗತಿ ಪ್ರಕ್ರಿಯೆ

ಸಂಪನ್ಮೂಲಗಳು

ಚಟುವಟಿಕೆಗಳು

  • ಚಿತ್ರಗಳನ್ನು ಗುರುತಿಸಿ ಹೇಳಿ (ತರಕಾರಿ ಹಣ್ಣು )
  • ಚಿತ್ರದಲ್ಲಿರುವ 20 ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ
  • ಚಿತ್ರ ನೋಡಿ / ನೋಡದೆ ಕತೆ ಕಟ್ಟುವುದು ಮತ್ತು ಬರೆಯಿರಿ
  • ಚಿತ್ರ ಮತ್ತು ವೀಡಿಯೋ ಸಂಬಂಧಿ ಚಟುವಟಿಕೆ (ಪಂಚತಂತ್ರ)
  • ಮೂಕಿ ಚಿತ್ರ ನೋಡಿ ಚಟುವಟಿಕೆ
  • ವೀಡಿಯೋ ನೋಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ ವಸ್ತು ಪಾತ್ರಗಳನ್ನು ಗುರುತಿಸಿ,ಅನುಕರಿಸಿ, ಬದಲಿಸಿ ಹೇಳಿ

ಮೌಲ್ಯಮಾಪನ

ಪಾಠ 3. ಮಾತಿನ ಮನೆ

ಪರಿಚಯ

ತರಗತಿ ಪ್ರಕ್ರಿಯೆ

ಸಂಪನ್ಮೂಲಗಳು

ಚಟುವಟಿಕೆಗಳು

  • ಸರಣಿ ಚಿತ್ರಗಳನ್ನು ಆಧರಿಸಿ ಕಥೆ ಹೇಳಿ ಮತ್ತು ಬರೆಯಿರಿ
  • ಆಶುಭಾಷಣ,ಆರಂಭಾಕ್ಷರಿ,ಜಾನಪದ ಕಥೆ ಹೇಳುವುದು
  • ನಾಲಿಗೆ ತಿರುಗಣೆ, ಚರ್ಚಾಸ್ಪರ್ಧೆ
  • ಮೂಕಿ ಚಿತ್ರವನ್ನು ನೋಡಿ ನಿಮ್ಮ ಭಾಷೆಯಲ್ಲಿ ಹೇಳಿ (ಊಹಿಸಿ) ಮತ್ತು ಭಾವಗಳನ್ನು ಗುರುತಿಸಿ
  • ಕಾರ್ಡ್ ವೀಕ್ಷಣೆ ಮತ್ತು ಚರ್ಚೆ
  • ವಿಭಿನ್ನ ಧ್ವನಿ ಪರಿಚಯ, ವಿಭಿನ್ನ ಓದಿನ ಪರಿಚಯ

ಮೌಲ್ಯಮಾಪನ

ಪಾಠ 4. ಸರಳ ಪದ ಪರಿಚಯ

ಪರಿಚಯ

ತರಗತಿ ಪ್ರಕ್ರಿಯೆ

ಸಂಪನ್ಮೂಲಗಳು

ಚಟುವಟಿಕೆಗಳು

  • ಅಕ್ಷರ ಕಲಿ ಅಭ್ಯಾಸ
  • ಅಕ್ಷರ ಕಲಿ ಅಭ್ಯಾಸ
  • ಅಕ್ಷರ ಕಲಿ ಅಭ್ಯಾಸ
  • ಕಲಿ - ತಿಳಿ ಕಾರ್ಡ್ ಬಳಕೆ
  • ಕಲಿ - ತಿಳಿ ಕಾರ್ಡ್ ಬಳಕೆ
  • ಕಲಿ - ತಿಳಿ ಕಾರ್ಡ್ ಬಳಕೆ

ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಗಳು

ಮೌಲ್ಯಮಾಪನ