ಅಂತರ್ಜಾಲ ಮತ್ತು ವೆಬ್
ಅಂತರ್ಜಾಲನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಮಾಹಿತಿ ಬೇಕಾದಲ್ಲಿ ನೀವು ನಿಮ್ಮ ಮನೆಯಿಂದಲೇ ಬ್ಯಾಂಕಿನ ಕಂಪ್ಯೂಟರ್‌ನ್ನು ಸಂಪರ್ಕಿಸು ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದು. ಇದೇ ರೀತಿಯ ವಿವಿಧ ಕಂಪ್ಯೂಟರ್‌ಗಳು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದು ವಿವಿಧ ರೀತಿಯ ಮಾಹಿತಿಗಳನ್ನು ನಮಗೆ ನೀಡುತ್ತವೆ. ಈ ಕಂಪ್ಯೂಟರ್‌ಗಳು ಒಂದಕ್ಕೊಂದು ಸಂಪರ್ಕಗೊಂಡಿರುತ್ತವೆ. ಈ ಸಂಪರ್ಕವನ್ನೇ ಅಂತರ್ಜಾಲ ಎಂದು ಕರೆಯುತ್ತೇವೆ. ಅಂತರ್ಜಾಲ ಎಂಬುದು ಜಗತ್ತಿನಾದ್ಯಂತ ಮಿಲಿಯನ್ ಕಂಪ್ಯೂಟರ್‌ಗಳನ್ನು ಭೌತಿಕವಾಗಿ ಸಂಪರ್ಕಿಸುವುದಾಗಿದ್ದು, ಪ್ರತಿಯೊಂದು ಸಹ ಪ್ರತ್ಯೇಕವಾದ ಗುರುತನ್ನು ಹೊಂದಿರುತ್ತವೆ. ಇದರಲ್ಲಿ ಕೆಲವು ಕಂಫ್ಯೂಟರ್‌ಗಳು ಸರ್ವರ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಈ ಸರ್ವರ್‌ಗಳು ಇತರೇ ಕಂಪ್ಯೂಟರ್‌ಗಳು ಬಳಸಲು ಸಾಧ್ಯವಾಗುವಂತೆ ಮಾಹಿತಿಯನ್ನು ಸಂಗ್ರಹಿಸುತ್ತವೆ. ಅಂತರ್ಜಾಲದ ಭಾಗವಾಗಿರುವ ಮಿಲಿಯನ್ ಕಂಪ್ಯೂಟರ್‌ಗಳು ಯಾವುದೇ ವಿಷಯದ ಮಾಹಿತಿಯ ಒಂದು ದೊಡ್ಡ ಸಂಗ್ರಹಾಲಯವಾಗಿರುತ್ತವೆ. ಮಾಹಿತಿ ಮಾತ್ರವಲ್ಲದೇ, ಹಲವು ಕಂಪ್ಯೂಟರ್‌ಗಳು ಅನ್ವಯಕಗಳನ್ನು, ವಿವಿಧ ಉದ್ದೇಶಗಳನ್ನೊಳಗೊಂಡ ವೆಬ್‌ಟೂಲ್‌ಗಳನ್ನು, ಸರ್ಚ್ ಎಂಜಿನ್, ಮ್ಯಾಪ್, ಟ್ರಾನ್ಸ್‌ಲೇಷನ್ ಗಳನ್ನು ಹೊಂದಿರುತ್ತವೆ. ನಾವು ಭೇಟಿ ನೀಡುವ ವೆಬ್‌ಸೈಟ್‌ಗಳು ಅಂತರ್ಜಾಲಕ್ಕೆ ಸಂಪರ್ಕ ಹೊಂದಿರುವ ಕಂಪ್ಯೂಟರ್‌ಗಳ ಕಡತಕೋಶಗಳಿದ್ದಂತೆ. ಈ ಕಂಪ್ಯೂಟರ್‌ಗಳು, TCP-IP(transmission control protocol / internet protocol)ಯ ಮೂಲಕ ಒಂದರಿಂದ ಮತ್ತೊಂದಕ್ಕೆ ಸಂವಹನ ನಡೆಸುತ್ತವೆ ಮತ್ತು ಡೇಟಾ ಹಂಚಿಕೆ ಮಾಡುತ್ತವೆ. TCP/IP ಮೂಲಕ ಪ್ರತೀ ಕಡತಗಳು ಅಂತರ್ಜಾಲದ ಸರ್ವರ್ ಮೂಲಕ ಸಣ್ಣ ಸಣ್ಣ ಪ್ಯಾಕೆಟ್‌ಗಳಾಗಿ ಪರಿವರ್ತನೆ ಹೊಂದಿ ಚಲಿಸುತ್ತವೆ. ಈ ಪ್ರತೀ ಪ್ಯಾಕೇಟ್‌ಗೂ ಸಹ ಒಂದು IP ವಿಳಾಸ ವಿರುತ್ತದೆ. ಈ ಮೂಲಕ ಯಾವ ಕಂಪ್ಯೂಟರ್‌ನಿಂದ ಚಲಿಸಿದೆ ಎಂಬುದನ್ನು ತಿಳಿಯಬಹುದು. ಜಾಗತೀಕ ನೆಟ್‌ವರ್ಕ್‌ನಲ್ಲಿ ಈ ಪ್ಯಾಕೆಟ್‌ಗಳು ಚಲಿಸುವಾಗ ಹಲವಾರು ಸರ್ವರ್‌ಗಳನ್ನು ತಲುಪಿರುತ್ತವೆ. ಈ ಪ್ಯಾಕೆಟ್‌ಗಳು ಅಂತರ್ಜಾಲದಲ್ಲಿ ಜೊತೆಜೊತೆಯಾಗಿ ಚಲಿಸುವುದಿಲ್ಲ. ಒಂದೇ ಕಡತದ ಪ್ಯಾಕೆಟ್ ಬೇರೆ ಬೇರೆ ಮಾರ್ಗದಲ್ಲಿ ಬೇರೇ ಸರ್ವರ್ ಮೂಲಕ ಒಂದೇ ಗುರಿಯೆಡೆಗೆ ಚಲಿಸುತ್ತವೆ. ಈ ರೀತಿಯಾದ ವಿಂಗಡಣೆಯು ನಾವು ಅಂತರ್ಜಾಲವನ್ನು ಉತ್ತಮವಾಗಿ ಬಳಸಲು ಸಹಕಾರಿಯಾಗುತ್ತದೆ. ಇದರ ಅರ್ಥ ಕತಡದ ವಿವಿಧ ಭಾಗಗಳನ್ನು ಒಂದೇ ಪೋನ್ ಲೈನ್ ನಲ್ಲಿ ಹಂಚಿಕೊಳ್ಳುವುದಕ್ಕಿಂತ, ವಿವಿಧ ಭಾಗಗಗಳನ್ನು ವಿವಿಧ ಲೈನ್‌ಗಳಲ್ಲಿ ಹಂಚುವುದರಿಂದ ಉತ್ತಮವಾದ ವೇಗದ ಸಂಪರ್ಕ ಪಡೆಯಬಹುದು. TCP/IP ಪ್ರೊಟೋಕಾಲ್ ಮೂಲಕ ಮಾಹಿತಿಯನ್ನು ಒಂದು ಕಂಪ್ಯೂಟರ್‌ನಿಂದ ಮತ್ತೊಂದಕ್ಕೆ ತ್ವರಿತವಾಗಿ ವರ್ಗಾಯಿಸಲು ಸಾಧ್ಯವಾಗುತ್ತದೆ. TCP/IP ಪ್ರೋಟೋಕಾಲ್ ನ್ನು ವಿನ್ಸೆಂಟ್ ವಾನ್ ಸೆರ್ಪ್ ರಾಬರ್ಟ್ ಖಾನ್ ಮತ್ತು ಲೂಯಿಸ್ ಪೌಝಿನ್ ಎಂಬುವವರು ಕಂಡುಹಿಡಿದರು. ವರ್ಡ್ ವೈಡ್ ವೆಬ್ (World Wide Web)ವರ್ಡ್ ವೈಡ್ ವೆಬ್ (www.)ಎಂಬುದು ಅಂತರ್ಜಾಲದ ಒಂದು ಅನ್ವಯಕವಾಗಿದೆ. ಇದು ಟಿಮ್ ಬರ್ನರ್ ಲೀ ಎಂಬುವವನಿಂದ ಕಂಡುಹಿಡಿಯಲ್ಪಟ್ಟಿತು. ಕಂಪ್ಯೂಟರ್‌ಗಳು ಅಂತರ್ಜಾಲದ ವೆಬ್‌ಬ್ರೌಸರ್ ಮೂಲಕ ವೆಬ್‌ಪುಟಗಳನ್ನು ಹುಡುಕಲು ಇದು ಸಹಾಯ ಮಾಡುತ್ತದೆ. ಹಲವು ಜನರು ಹಾಗು ಸಂಸ್ಥೆಗಳಿಂದ ರಚಿಸಲ್ಪಟ್ಟ ಹಾಗು ಹಂಚಿಕೊಂಡ ಮಿಲಿಯನ್ ಗಟ್ಟಲೆ ಮಾಹಿತಿಗಳು ಕಂಪ್ಯೂಟರ್ ನೆಟ್‌ವರ್ಕ್‌ನಲ್ಲಿ ಲಭ್ಯವಿವೆ. ಇವುಗಳನ್ನು ವೆಬ್ ಬ್ರೌಸರ್ ಮೂಲಕ ಹುಡುಕಬಹುದು ವರ್ಡ್ ವೈಡ್ ವೆಬ್ ಮಾಹಿತಿ ಜಾಲವು ಹಲವು ವೆಬ್‌ಸೈಟ್‌ಗಳನ್ನು ಹೊಂದಿರುತ್ತದೆ. ವೆಬ್‌ಸೈಟ್ ಎಂದರೆ ಇದಕ್ಕೆ ಸಂಬಂಧಿಸಿದ ವೆಬ್‌ಪುಟಗಳ ಸಂಗ್ರಹವಾಗಿರುತ್ತದೆ. ವೆಬ್ ಪುಟಗಳನ್ನು URL ಮೂಲಕ ಗುರುತಿಸಲಾಗುವುದು. (uniform resource locater). ಇದು ವೆಬ್ ಸೈಟ್ ವಿಳಾಸದ ಮೂಲಕ ಹುಡುಕುತ್ತದೆ. ವೆಬ್‌ಸೈಟ್ ವಿಳಾಸವು ಸಾಮಾನ್ಯವಾಗಿ “http://” ಮೂಲಕ ಆರಂಭವಾಗುತ್ತದೆ. (HTTP stands for hyper text transfer protocol), ಇದು ವೆಬ್ ಪುಟದ ಮಾಹಿತಿಯನ್ನು ಸರ್ವರ್‌ನಿಂದ ಕಂಪ್ಯೂಟರ್‌ಗೆ ವರ್ಗಾಯಿಸುತ್ತದೆ. ಅಂತರ್ಜಾಲವನ್ನು ಬಳಸಿ ವೆಬ್‌ಬ್ರೌಸರ್ ಮೂಲಕ ವೆಬ್ ಪುಟವನ್ನು ತೆರೆಯಬಹುದು. ಈ ಪುಟಗಳು ಇತರೇ ಪುಟಗಳಿಗೆ ಕೊಂಡಿಯನ್ನು ಹೊಂದಿರುತ್ತವೆ. ಆ ಕೊಂಡಿಯನ್ನು ಒತ್ತುವ ಮೂಲಕ ಬೇರೆ ಬೇರೆ ಪುಟಗಳಿಗೆ ಭೇಟಿ ನೀಡಬಹುದು. ಪ್ರತಿಯೊಂದು ಪುಟಗಳು ಹಾಗು ಉಪ ಪುಟಗಳು ಪ್ರತ್ಯೇಕ ಕೊಂಡಿಯನ್ನು ಹೊಂದಿದ್ದು ಆಯಾ ಕೊಂಡಿಗಳ ಮೂಲಕ ಬೇರೆ ಬೇರೆ ಪುಟಗಳನ್ನು ತೆರೆಯುತ್ತಾ ಹೋಗಬಹುದು. ಉದಾಹರಣಗೆ: ಒಂದು ಮನೆಯಲ್ಲಿ ಹಲವು ಕೊಠಡಿಗಳು ಹಾಗು ಒಂದೊಂದು ಕೊಠಡಿಯಲ್ಲಿಯೂ ಹಲವು ಬಾಗಿಲುಗಳ ಮೂಲಕ ಮತ್ತಷ್ಟು ಕೊಠಡಿಗಳಿಗೆ ಪ್ರವೇಶಿಸಿದಂತೆ. ಮತ್ತಷ್ಟು ಕೊಠಡಿಗಳು ಇನ್ನೂ ಮತ್ತಷ್ಟು ಬಾಗಿಲುಗಳನ್ನು ಹೊಂದಿದ್ದು ಒಂದೊಂದು ಬಾಗಿಲುಗಳ ಸಹ ಒಂದೊಂದು ಕೊಠಡಿಗೆ ಪ್ರವೇಶ ನೀಡುವಂತೆ ಹಲವು ವೆಬ್ ಪುಟಗಳಿಗೆ ಪ್ರವೇಶಿಸಬಹುದು. ವೆಬ್‌ಸೈಟ್ ಎಂಬುದು ಬಹಳ ವಿಸ್ತಾರವಾದುದಾಗಿದ್ದು, ನಾವು ಒಮ್ಮೆಗೆ ಒಂದು ಪುಟಕ್ಕೆ ಭೇಟಿ ನೀಡಬಹುದು. ವೆಬ್‌ಬ್ರೌಸರ್ ಅನ್ವಯಕದ ಮೂಲಕ ನಾವು ಹಲವು ವೆಬ್‌ಪುಟಗಳಿಗೆ ಬೇಟಿ ನೀಡಬಹುದು. ವೆಬ್‌ಬ್ರೌಸರ್ ಸುಲಭವಾಗಿ ಮತ್ತು ತ್ವರಿತವಾಗಿ ಮಾಹಿತಿ ಪಡೆಯಲು ಸಾಧ್ಯವಾಗಿಸುತ್ತದೆ. ಈ ಹಿಂದೆ, www web 1.0 ಆವೃತ್ತಿಯಲ್ಲಿ ಕೇವಲ ಡೌನ್‌ಲೋಡಿಂಗ್ ಮಾತ್ರವೇ ಸಾಧ್ಯವಾಗುತ್ತಿತ್ತು. ಆದರೆ ಮುಂದುವರೆದ ಬೆಳವಣಿಗೆಯಲ್ಲಿ Web 2.0. ಆವೃತ್ತಿಯಲ್ಲಿ ಸಾಮಾನ್ಯ ಬಳಕೆದಾರರು ಸಹ ತಮ್ಮ ಸಾಮಗ್ರಿಗಳನ್ನು ರಚಿಸಬಹುದು ಹಾಗು ವಿಕಿ ಅಥವಾ ಬ್ಲಾಗ್ ಮೂಲಕ ಅಂತರ್ಜಾಲದಲ್ಲಿ ಪ್ರಕಟಿಸಬಹುದಾಗಿದೆ. ಬ್ಲಾಗ್ ಎಂದರೆ ಶಿಕ್ಷಕರು ತಮ್ಮ ಲೇಖನಗಳನ್ನು ಮುಕ್ತವಾಗಿ ವಿದ್ಯುನ್ಮಾನವಾಗಿ ಬರೆದಿಟ್ಟುಕೊಳ್ಳುವುದಾಗಿದೆ. ಬ್ಲಾಗ್‌ಗಳ ಬಗೆಗೆ ಹೆಚ್ಚಿನ ಮಾಹಿತಿಯನನ್ನು WordPress ನಲ್ಲಿ ನೋಡಬಹುದು. ಇಲ್ಲಿಂದ ನಾವು ತುಂಬಾ ದೂರ ಮುಂದುವರೆದಿದ್ದೇವೆ, ಈಗ ಆನ್‌ಲೈನ್ ಸಹಯೋಜಿತ ವೇದಿಕೆಗಳ ಮೂಲಕ ಸಹಯೋಜಿತವಾಗಿ ವೆಬ್‌ಪುಟಗಳನ್ನು ರಚಿಸಲಾಗುತ್ತಿದೆ. ಈಗ ಬಹಳಷ್ಟು ಪ್ರಕ್ರಿಯೆಗಳನ್ನು ಅಂತರ್ಜಾಲದಲ್ಲಿ ಮಾಡಬಹುದಾಗಿದೆ. ಎಲ್ಲಿ ಮಾಹಿತಿ ಸಂಗ್ರಹಿಸಿದೆ ಎಂಬುದನ್ನು ವಿಶ್ಲೇಷಣೆ ಮಾಡುಬಹುದು.ವಿವಿಧ ವೆಬ್ ಆಧಾರಿತ ಅನ್ವಯಕಗಳ ಮೂಲಕ ಪ್ರಕ್ರಿಯೆ ನಡೆಸಬಹುದು. ಇದನ್ನು Cloud Computing ಎನ್ನಲಾಗುತ್ತದೆ. |