ಮೂಲ ವಿದ್ಯುನ್ಮಾನ ಸಾಕ್ಷರತೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೧೪, ೬ ಅಕ್ಟೋಬರ್ ೨೦೧೭ ರಂತೆ Anand (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಐ.ಸಿ.ಟಿ ವಾತಾವರಣ

ಐ.ಸಿ.ಟಿ ಮತ್ತು ಇದರ ವ್ಯಾಪಕವಾದ ಸಾಮಾಜಿಕ ಪರಿಣಾಮಗಳನ್ನು ಅರ್ಥೈಸಿಕೊಳ್ಳುವ ಮೂಲಕ, ಇಲ್ಲಿ ನಾವು ಐ.ಸಿ.ಟಿಯನ್ನು ಹೇಗೆ ಬಳಸಬಹುದು ಎಂಬುದನ್ನು ಕಲಿಯುತ್ತೇವೆ. ಯಾವುದೇ ತಂತ್ರಜ್ಞಾನವೂ ಸಹ ಒಂದು ಕೌಶಲ ಸಾಮರ್ಥ್ಯವನ್ನು ಹೊಂದಿರುತ್ತವೆ. ಐ.ಸಿ.ಟಿ ಎಂಬುದು ನಮ್ಮ ಸ್ವಂತ ಬಳಕೆಗಾಗಿ ನಾವೆಲ್ಲರೂ ಸಹ ಬಳಸಬಹುದಾದಂತದ್ದು. ಮುಂದಿನ ವಿಭಾಗದಲ್ಲಿ ವಿವಿಧ ತಂತ್ರಾಂಶ ಅನ್ವಯಕಗಳನ್ನು ನಮ್ಮ ವೃತ್ತಿಪರ ಬೆಳವಣಿಗೆಗಾಗಿ ಹೇಗೆ ಬಳಸಬಹುದು ಎಂಬುದನ್ನು ಕಲಿಯುತ್ತೇವೆ. ನೀವು ಈ ಪ್ರಯೋಗಿಕ ವಿಭಾಗದಲ್ಲಿ ಶ್ರದ್ದೆಯಿಂದ ಕಲಿಯಬೇಕಿದೆ. ಹಾಗೆಯೇ ನಿಮ್ಮ ಬೋಧನೆಯ ವಿಷಯದಲ್ಲಿ ಇದರ ಸೂಕ್ತತತೆಯ ಬಗ್ಗೆ ಹಾಗು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆಯೂ ನೀವು ಪ್ರಯತ್ನಿಸಬೇಕಿದೆ. ನೀವು ಹೆಚ್ಚು ಬಳಸಿದಂತೆಲ್ಲಾ ಹೆಚ್ಚು ಕಲಿಕೆ ಸಾಧ್ಯವಾಗುತ್ತದೆ. ಇಲ್ಲಿ ನಾವು ಕಂಪ್ಯೂಟರ್‌ನ ಮೂಲ ಯಂತ್ರಾಂಶ ಮತ್ತು ತಂತ್ರಾಂಶದ ಬಗ್ಗೆ ನೋಡುತ್ತೇವೆ. ಮತ್ತು ವೆಬ್‌ಬ್ರೌಸಿಂಗ್ ಬಗ್ಗೆ, ಪ್ರೀಪ್ಲೇನ್ ಬಗ್ಗೆ, ಲಿಬ್ರೆ ಆಫೀಸ್ ರೈಟರ್ ಬಗ್ಗೆ ಹಾಗೆಯೇ ಲಿಬ್ರೆ ಆಫೀಸ್ ಕ್ಯಾಲ್ಕ್ ಬಗ್ಗೆಯೂ ಕಲಿಯುತ್ತೇವೆ.ಇದೇ ಸಮಯದಲ್ಲಿ ನಿಮ್ಮ ಪ್ರಾಥಮಿಕ ಅಂಶವಾದ ಬೋಧನೆ-ಕಲಿಕೆಯಲ್ಲಿ ಹೇಗೆ ಐ.ಸಿ.ಟಿ ಸೂಕ್ತವಾಗುತ್ತದೆ ಎಂಬುದನ್ನು ಸಹ ನಾವು ನೋಡುತ್ತೇವೆ. ಹಾಗೆಯೇ ಈ ಅನ್ವಯಕಗಳ ಕಲಿಕೆ ಮತ್ತು ಬಳಕೆಯನ್ನು ಬೋಧನಾ ದೃಷ್ಟಿಕೋನದಲ್ಲಿ ನೋಡುತ್ತೇವೆ.

ಕಂಪ್ಯೂಟರ್‌ ಯಂತ್ರಾಂಶ ಮತ್ತು ತಂತ್ರಾಂಶ

ಕಂಪ್ಯೂಟರ್‌ ಎನ್ನುವುದು, ಇನ್‌ಪುಟ್‌ ತೆಗೆದುಕೊಂಡು, ಪ್ರಕ್ರಿಯೆ ನಡೆಸಿ ಸಂಗ್ರಹಿಸಬಹುದಾದ ಅಥವಾ ಹಂಚಿಕೊಳ್ಳಬಹುದಾದ ಔಟ್‌ಪುಟ್ ನ್ನು ಒದಗಿಸುವ ಸಾಧನವಾಗಿದೆ. ನೀವು ಕಂಪ್ಯೂಡರ್‌ಗೆ ಡೇಟಾ ನಮೂದಿಸುವುದು ಇನ್‌ಪುಟ್‌ ಆಗುತ್ತದೆ, ಈ ಇನ್‌ಪುಟ್, ಪಠ್ಯ ಡೇಟಾ ಆಗಿರಬಹುದು ಅಥವಾ ಚಿತ್ರವಾಗಿರಬಹುದು ಅಥವಾ ಕೆಲವು ಪ್ರಕ್ರಿಯೆ ನಡೆಯಲು ಸೂಚಿಸುವ ಸೂಚನೆಯೂ ಆಗಿರಬಹುದು. ಸೂಚನೆಯ ಪ್ರಕಾರ ಡೇಟಾ ಪ್ರಕ್ರಿಯೆಯೆ ಒಳಪಡುತ್ತದೆ ಹಾಗು ಔಟ್‌ಪುಟ್‌ ದೊರೆಯುತ್ತದೆ. ಯಂತ್ರಾಂಶವೆಂಬುದು ಕಂಪ್ಯೂಟರ್‌ನ್ನು ಅಥವಾ ಮೊಬೈಲ್‌ ನ್ನು ಪ್ರಬಲವಾಗಿಸಿರುವುದಾಗಿದೆ.

ಕಂಪ್ಯೂಟರ್‌ನ ಇತಿಹಾಸದ ಬಗ್ಗೆ ತಿಳಿಯಿರಿ. ಕಂಪ್ಯೂಟರ್‌ ಬಗೆಗಿನ ವಿವರಣೆಯನ್ನು ಇಲ್ಲಿ ನೋಡಬಹುದು.

ಕೀಬೋರ್ಡ್ ಮೂಲಕ ಇನ್‌ಪುಟ್‌ ನೀಡುವುದರ ಕಲಿಕೆ

ಬಹಳಷ್ಟು ಸೂಚನೆಗಳು ಹಾಗು ಇನ್‌ಪುಟ್‌ಗಳು ಕಂಪ್ಯೂಟರ್‌ಗೆ ಕೀಬೋರ್ಡ್ ಮೂಲಕವೇ ಸಲ್ಲಿಸಲ್ಪಡುತ್ತವೆ. ಆದ್ದರಿಂದ ಶಿಕ್ಷಕರು ತಮ್ಮ ಎಲ್ಲಾ ಬೆರಳುಗಳನ್ನು ಬಳಸಿಕೊಂಡು ಉತ್ತಮವಾಗಿ ಟೈಪ್ ಮಾಡುವುದನ್ನು ಕಲಿಯುವುದು ಬಹಳ ಮುಖ್ಯವಾಗಿರುತ್ತದೆ. ಕೀಬೋರ್ಡ್‌ ನ ಕೀಗಳ ಮೇಲೆ ಸರಿಯಾದ ಬೆರಳುಗಳನ್ನು ಬಳಸುವುದುನ್ನು ಕಲಿಯುವುದು ಟೈಪಿಂಗ್ ವೇಗವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಇದು ಶಿಕ್ಷಕರಯ ಕೀಬೋರ್ಡ್ ನೋಡದೇ ಟೈಪು ಮಾಡಲು ಸಾಧ್ಯವಾಗಿಸುತ್ತದೆ. ಟೈಪು ಮಾಡುವಾಗ ಮಾನಿಟರ್ ನೋಡುವುದು ಟೈಪಿಂಗ್ ಮಾಡುವಾಗ ಮಾಡುವ ತಪ್ಪುಗಳನ್ನು ತಕ್ಷಣವೇ ಕಂಡುಹಿಡಿಯಲು ಸಾಧ್ಯವಾಗಿಸುತ್ತದೆ.

ಈ ಹಿಂದೆ ಟೈಪಿಂಗ್ ಕಲಿಯಲು ಟೈಪಿಂಗ್ ತರಗತಿಗಳಿಗೆ ಹೋಗಬೇಕಿತ್ತು. ಆದರೆ ಈಗ ಕಂಪ್ಯೂಟರ್‌ನಲ್ಲಿಯೇ ಟೈಪಿಂಗ್ ಕಲಿಯಲು ಟಕ್ಸ್‌ ಟೈಪಿಂಗ್ ಎಂಬ ತಂತ್ರಾಂಶವಿದೆ. ಟೈಪಿಂಗ್ ಕಲಿಯಲು ಇದನ್ನು ಬಳಸಬಹುದು.

ಕೀಬೋರ್ಡ್‌ ಬಗ್ಗೆ ಸಂಕ್ಷಿಪ್ತ ಮಾಹಿತಿ

ಕೀಬೋರ್ಡ್‌ನಲ್ಲಿನ 'ಕೀ' ಗಳನ್ನು ಅವುಗಳ ಕಾರ್ಯಶೈಲಿಯ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವಿಂಗಡಿಸಬಹುದು.

  1. ಟೈಪಿಂಗ್ ಕೀಗಳು (ಅಕ್ಷರಗಳು ಮತ್ತು ಸಂಖ್ಯೆಗಳು): ಈ ಕೀಗಳು ಸಾಂಪ್ರದಾಯಿಕವಾದ 'QWERTY' ಟೈಪರೇಟರ್ ಮಾದರಿಯಲ್ಲಿಯೇ ಜೋಡಣೆಗೊಂಡಿವೆ.
  2. ಫಂಕ್ಷನ್ ಕೀಲಿಗಳು :ಕೀಲಿಮಣೆಯ ಮೇಲಿನ ಸಾಲಿನಲ್ಲಿ ಇರುತ್ತವೆ. ಉಪಯೋಗಕ್ಕನುಗುಣವಾಗಿ ಅವುಗಳು ವಿವಿಧ ಕಾರ್ಯಗಳನ್ನು ಮಾಡುತ್ತವೆ.ಉದಾ : CTRL, ALT, ESC, Function keys etc.
  3. ಸಂಚರಣ ಕೀಲಿ: ಸಂಚರಣ (Navigation) ಕೀಲಿಗಳಾದ, ಬಾಣದ ( Arrow) ಕೀಲಿಗಳು ಡಾಕ್ಯುಮೆಂಟ್ ಹಾಗೂ ವೆಬ್ ಪೇಜ್‌ ನಲ್ಲಿ ಸಂಚರಿಸಲು ಸಹಕಾರಿಯಾಗಿವೆ. HOME, END, PAGE UP, PAGE DOWN, DELETE and INSERT
  4. ಸಂಖ್ಯಾ ಕೀಲಿ :ಸಾಮಾನ್ಯವಾಗಿ ಎಲ್ಲಾ ಕೀಲಿಮಣೆಯ ಬಲಭಾಗದಲ್ಲಿ ಸಂಖ್ಯಾ ಕೀಲಿಗಳಿದ್ದು, ಅವುಗಳು ಸಂಖ್ಯೆಗಳನ್ನು ವೇಗವಾಗಿ ಟೈಪ್ ಮಾಡಲು ಸಹಕಾರಿಯಾಗಿವೆ.

ಮೌಸ್ ಮೂಲಕ ಇನ್‌ಪುಟ್‌ ನೀಡುವುದರ ಕಲಿಕೆ

ಸಾಮಾನ್ಯವಾಗಿ ಕಂಪ್ಯೂಟರನ್ನು ನಿಯಂತ್ರಸಲು ಹಾಗು ಸೂಚನೆಗಳನ್ನು ನೀಡಲು ಕೀ ಬೋರ್ಡ್‌ ಬಳಸುತ್ತೇವೆ. ಆದರೆ 'ಗ್ರಾಫಿಕ್ ಯೂಸರ್ ಇಂಟರ್‌ಫೇಸ್ (graphic user interface -GUI ಸಂಕ್ಷಿಪ್ತ ರೂಪ) ದ ಹೊಸ ಅವಿಷ್ಕಾರದಿಂದಾಗಿ ಮೌಸ್ ಸಹ ಕಂಪ್ಯೂಟರ್‌ನ್ನು ನಿಯಂತ್ರಿಸುವ ಹೊಸ ಸಾಧನವಾಗಿ ಪರಿಚಯವಾಯಿತು. ಪಾಯಿಂಟಿಂಗ್ ಮಾಡಿ ಕ್ಲಿಕ್ ಮಾಡುವ ಸುಲಭ ವಿಧಾನದ ಮೂಲಕ ಮೌಸ್ ನಲ್ಲಿ ಕಂಪ್ಯೂಟರ್‌ನ್ನು ನಿಯಂತ್ರಿಸಬಹುದು. ಟಕ್ಸ್‌ ಪೈಂಟ್‌ ಅನ್ವಯಕ ಬಳಸುವ ಮೂಲಕ ಮೌಸ್‌ ಬಳಕೆಯಲ್ಲಿ ನೀವು ಪರಿಣಿತಿ ಹೊಂದಬಹುದು. ಟಕ್ಸ್‌ಪೈಂಟ್ ಸುಲಭವಾದ ಇಂಟರ್‌ಪೇಸ್ ಹೊಂದಿದ್ದು ವಿವಿಧ ಬ್ರಶ್ ಗಳ ಬಳಕೆಯ ಮೂಲಕ ಮೌಸ್‌ನಲ್ಲಿ ಚಿತ್ರಗಳನ್ನು ರಚಿಸಲು ಸಾಧ್ಯವಾಗಿಸುತ್ತದೆ ಮತ್ತು ಕಾರ್ಟೂನ್ ಚಿತ್ರಗಳನ್ನು ಸಹ ಹೊಂದಿದ್ದು ವಿದ್ಯಾರ್ಥಿಗಳು ಮೌಸ್‌ ಬಳಕೆಯನ್ನು ಕಲಿಯಲು ಪ್ರೋತ್ಸಾಹಿಸುತ್ತದೆ.

ಆಪರೇಟಿಂಗ್ ಸಿಸ್ಟಂ

ಆಪರೇಟಿಂಗ್‌ ಸಿಸ್ಟಂ ಅನ್ನು 'ಸಿಸ್ಟಂ ತಂತ್ರಾಂಶ'ವೆಂದು ಸಹ ಕರೆಯಲಾಗುತ್ತದೆ. ಇದು ಯಂತ್ರಾಂಶಗಳ ಜೊತೆ ಕೆಲಸ ಮಾಡುತ್ತದೆ. ಪ್ರತಿ ಕಂಪ್ಯೂಟರ್‌ಗಳು ಸಹ ತನ್ನ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ಗಳನ್ನು ನಡೆಸಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲೇ ಬೇಕಾಗುತ್ತದೆ. ನಿಮ್ಮ ಮೊಬೈಲ್‌ ಪೋನ್‌ ಸಹ ಒಂದು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ. ನೀವು ಕಂಪ್ಯೂಟರ್‌ನ್ನು ಚಾಲನೆಗೊಳಿಸಿದ ತಕ್ಷಣವೇ ಆಪರೇಟಿಂಗ್‌ ಸಿಸ್ಟಂ ಸಹ ಚಾಲನೆಗೊಳ್ಳುತ್ತದೆ, ಇದನ್ನು ಬೂಟಿಂಗ್ ಎಂದು ಕರೆಯುತ್ತೇವೆ. ಇತರೇ ಎಲ್ಲಾ ಕಂಪ್ಯೂಟರ್‌ ಪ್ರೋಗ್ರಾಮ್‌ಗಳಾದ ಪೈಂಟ್, ಟೈಪಿಂಗ್, ಸಂಗೀತ ಕೇಳುವುದು, ಗಣಿತ ಕಲಿಯುವುದು ಮುಂತಾದವುಗಳನ್ನು ಸಿಸ್ಟಂ ತಂತ್ರಾಂಶದ ಜೊತೆ ಕಾರ್ಯನಿರ್ವಹಿಸುವ ಅನ್ವಯಕ ತಂತ್ರಾಂಶಗಳು ಅಥವಾ ಆಪ್‌ ಗಳೆಂದು ಕರೆಯುತ್ತೇವೆ.

ಉಬುಂಟು ಕಲಿಯಿರಿ ಅನ್ವಯಕದ ಮೂಲಕ ನೀವು ಉಬುಂಟು ಆಪರೇಟಿಂಗ್ ಸಿಸ್ಟಂ ಬಳಸುವುದನ್ನು ಕಲಿಯಬಹುದು.

ಆಪರೇಟಿಂಗ್ ಸಿಸ್ಟಂ ಎಂಬುದು ಕಟ್ಟಡದ ಅಡಿಪಾಯವಿದ್ದಂತೆ. ಇದು ಇತರೇ ಎಲ್ಲಾ ಅನ್ವಯಕಗಳಿಗೂ ಮೂಲವಾಗಿರುತ್ತದೆ. ವರ್ಗ: