ಮಾನವ ಮತ್ತು ಪ್ರಕೃತಿ ಪರಸ್ಪರರ ಮೇಲೆ ಬೀರುವ ಪ್ರಭಾವ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Manava mattu prakruti parasparara mele biruva prabhava.mm
ಮತ್ತಷ್ಟು ಮಾಹಿತಿ
ಮಾನವನಿಂದ ಪರಿಸರದ ಶಿಥಿಲತೆ ೧. ಅರಣ್ಯ ನಾಶ – ಕೃಷಿ, ಕೈಗಾರಿಕೆ, ವಸತಿ. ೨. ಹುಲ್ಲುಗಾವಲಿಗಾಗಿ ೩. ವಿವಿದೋದ್ದೇಶ ನದಿ ಕಣಿವೆ ಯೋಜನೆಗಳ ನಿರ್ಮಾಣ ೪. ಗಣಿಗಾರಿಕೆ 5. ಆಧುನಿಕ ಕೃಷಿ. ೬ ಜನಸಂಖ್ಯೆ ಬೆಳವಣಿಗೆ ೭ ನಗರೀಕರಣಕ್ಕೆ ೮. ಕೈಗಾರಿಕರಣಕ್ಕೆ ೯. ಆಧುನಿಕ ತಂತ್ರಜ್ಞಾನ ೧೦. ಜಲಮಾಲಿನ್ಯ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಭೂಗೋಳ ಸಂಗಾತಿ-೨,ಗ್ರಂಥ ಸ್ವಾಮ್ಯ-ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ,ಬೆಂಗಳೂರು.
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1
ಮಾನವ ಪ್ರಕೃತಿಯ ಮೇಲೆ ಬೀರುವ ಪ್ರಭಾವ
ಕಲಿಕೆಯ ಉದ್ದೇಶಗಳು
ಪರಿಸರದ ಶಿಥಿಲತೆಗೆ ಮಾನವನ ಚಟುವಟಿಕೆಗಳು ಮುಖ್ಯ ಕಾರಣಗಳಾಗಿರುತ್ತವೆ. ನಾಗರಿಕತೆಯ ಪ್ರಾರಂಭದಿಂದಲೂ ನಿರಂತರವಾಗಿ ಮಾನವನು ಪ್ರಕೃತಿಯನ್ನು ಶೋಷಣೆ ಮಾಡುತ್ತಾ ಬಂದಿದ್ದಾನೆ. ಅದು ಅವನ ಮೂಲ ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊ ಳ್ಳದೇ ಪರಿಸರ ವ್ಯವಸ್ಥೆ ಯನ್ನು ವಿನಾಶ ಗೊಳಿಸುವ ಮಟ್ಟಕ್ಕೆ ವ್ಯಾಪಿಸಿದೆ.. ಪ್ರಕೃತಿಯು ತನ್ನದೇ ಆದ ಪರಿಸ್ಥಿತಿಯಿಂದ ಪರಸರ ಸಮತೋಲನ ಅಥವಾ ಪುನಶ್ಚೇತನ ಕಾಪಾಡಿಕೊಳ್ಳಬಲ್ಲದು. ಆದರೆ ಮನುಷ್ಯನ ನಿರಂತರವಾದ ಹಾಗೂ ಮಿತಿಮೀರಿದ ಪರಿಸರದ ಶೋಷಣೆಯಿಂದಾಗಿ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಇಂದು ಒಂದು ಕಡೆ ವಿಜ್ಞಾನ ಮತ್ತು ತಂತ್ರಜ್ಞಾನ ದ ಪ್ರಗತಿ , ಮತ್ತೊಂದು ಕಡೆ ಅಧಿಕ ಜನಸಂಖ್ಯೆ ನಗರೀಕರಣ ಮತ್ತು ಕೈಗಾರಿಕರಣಗಳ ಫಲವಾಗಿ ಇಡೀ ಪ್ರಪಂಚವೇ ಪರಿಸರದ ಶಿಥಿಲತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಈ ದಿಶೆಯಲ್ಲಿ ಪರಿಸರದ ಬಗ್ಗೆ ವಿದ್ಯಾರ್ಥಿಗಳ ಕಾಳಚಿ, ಜವಾಬ್ದಾರಿಗಳನ್ನು ಅರ್ಥೈಸುವ ದೃಷ್ಟಿಯಿಂದ ಈ ಪರಿಕಲ್ಪನೆಯನ್ನು ಬಳಸಿಕೊಳ್ಳುವುದು ಅಗತ್ಯ.
ಶಿಕ್ಷಕರಿಗೆ ಟಿಪ್ಪಣಿ
[[ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ]]
ಪರಿಸರ ಬದಲಾವಣೆಯು ಪೃಥ್ವಿಯು ಅಸ್ತಿತ್ವಕ್ಕೆ ಬಂದಾಗಿನಿಂದ,ಅಂದರೆ ೪.೬ ಬಿಲಿಯನ್ ವರ್ಷಗಳ ಹಿಂದಿನಿಂದ ಪ್ರಾರಂಭವಾಯಿತು.ಭೂ ಮೇಲ್ಮೈ ವಿಕಾಸ ಹೊಂದುತ್ತಾ ಶಿಲಾಗೋಳ,ಜಲಗೋಳ,ವಾಯುಗೋಳಗಳು ರೂಪುಗೊಂಡವು.ಅಂತಿಮವಾಗಿ ಜೀವಗೋಳವು ಅಸ್ತಿತ್ವಕ್ಕೆ ಬಂದಿತು.ಎಲ್ಲ ವರ್ಗದ ಸಸ್ಯ ಮತ್ತು ಪ್ರಾಣಿಗಳು ಪರಿಸರದ ಮೇಲೆ ಪ್ರಭಾವ ಬೀರುತ್ತವೆ. ಪರಿಸರದ ಮೇಲೆ ಇತರ ಪ್ರಾಣಿಗಳ ಪ್ರಭಾವ ಗೌಣವಾದುದು.ಏಕೆಂದರೆ ಅವುಗಳ ಸಂಖ್ಯೆಯನ್ನು ನೈಸರ್ಗಿಕ ಅಂಶಗಳು ನಿಯಂತ್ರಿಸುತ್ತವೆ.ಅಲ್ಲದೆ ಅವು ತಮ್ಮ ಜೀವನ ಪಥವನ್ನು ಬದಲಾಯಿಸಿಕೊಳ್ಳಲಾರವು.ಆದರೆ ಮಾನವನು ಇದಕ್ಕೆ ಹೊರತಾಗಿದ್ದಾನೆ.ಇತರ ಯಾವುದೇ ಜೀವಿಗಿಂತಲೂ ತನ್ನ ತಕ್ಷಣದ ಅವಶ್ಯಕತೆಗೆ ತಕ್ಕಂತೆ,ವೈಜ್ಞಾನಿಕ ಪರಿಣಿತಿಯನ್ನು ಬಳಸಿಕೊಂಡು ಪರಿಸರವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾನೆ.ಮನುಷ್ಯನ ಜೀವನದ ಪ್ರಾರಂಭಿಕ ಹಂತದಲ್ಲಿ ಪರಿಸರದ ಮೇಲೆ ಅವನ ಪ್ರಭಾವ ಮಂದಗತಿಯದಾಗಿತ್ತು.ಆದರೆ ಕೈಗಾರಿಕಾ ಕ್ರಾಂತಿಯೊಂದಿಗೆ ಈ ಪ್ರಭಾವ ತೀವ್ರಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ಅದುಭೀತಿಗೊಳಿಸುವ ಮಟ್ಟಕ್ಕೆ ಹೆಚ್ಚಾಗಿದೆ.ಈ ದಿಸೆಯಲ್ಲಿ ಶಿಕ್ಷಕರು ಈ ಪರಿಕಲ್ಪನೆಯನ್ನು ಸ್ಪಷ್ಟ ಪಡಿಸಲು ಎರಡು ಚಟುವಟಿಕೆಗಳನ್ನು ನೀಡಲಾಗಿದೆ.
- ಸ್ಥಳೀಯ ಮರಗಿಡಗಳ ಸಮೀಕ್ಷೆ ಮತ್ತು ಚರ್ಚೆ
- ಮಾನವರಿಂದ ಪರಿಸರಕ್ಕಾದ ಹಾನಿಗಳ ಕುರಿತಾದ ಆಲ್ಬಂ ತಯಾರಿಕೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1ಭಾರತದ_ಪ್ರಾಕೃತಿಕ_ಲಕ್ಷಣಗಳು_ಮಾನವ_ಪ್ರಕೃತಿಯ_ಮೇಲೆ_ಬೀರುವ_ಪ್ರಭಾವ_ಚಟುವಟಿಕೆ1
- ಚಟುವಟಿಕೆ ಸಂ 2ಭಾರತದ_ಪ್ರಾಕೃತಿಕ_ಲಕ್ಷಣಗಳು_ಮಾನವ_ಪ್ರಕೃತಿಯ_ಮೇಲೆ_ಬೀರುವ_ಪ್ರಭಾವ_ಚಟುವಟಿಕೆ2
ಪರಿಕಲ್ಪನೆ #2
ಮಾನವನ ಮೇಲೆ ಪರಿಸರದ ಪ್ರಭಾವ
ಕಲಿಕೆಯ ಉದ್ದೇಶಗಳು
ಮಾನವ ಮತ್ತು ಪರಿಸರದ ಸಂಬಂಧ ಅನಾದಿ ಕಾಲದಿಂದ ಬಂದಿದೆ.ಪರಿಸರವಿಲ್ಲದೆ ಮಾನವನಿಲ್ಲ, ಮಾನವನಿಲ್ಲದೆ ಪರಿಸರವಿಲ್ಲ.ಮಾನವನ ವಾಸಸ್ಥಾನವಾದ ಭೂಮಿ ಅನೇಕ ಗೋಚರ ಮತ್ತು ಅಗೋಚರ ವಸ್ತುಗಳಿಂದ ಕೂಡಿದೆ. ಉದಾ:ನೆಲ,ಜಲ,ಮಣ್ಣು, ಗಾಳಿ,ಸಸ್ಯ, ಉಷ್ಣತೆ ಇತ್ಯಾದಿ. ಈ ಪರಿಸರ ಮಾನವ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ತಿಳಿಸುವುದೇ ಪ್ರಸ್ತುತ ಪರಿಕಲ್ಪನೆಯ ಉದ್ದೇಶವಾಗಿದೆ.
- ಮಾನವ ಮತ್ತು ಪರಿಸರದ ಸಂಬಂಧದ ಬಗ್ಗೆ ತಿಳಿಸುವುದು.
- ಪ್ರಾಕೃತಿಕ ಪರಿಸರ ಮಾನವ ಜೀವನದ ಅನೇಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ.ಉದಾ:ಉದ್ಯೋಗಗಳ ಆಯ್ಕೆ ,ಆಹಾರ ಪದ್ಧತಿ, ಉಡುಪು ,ಆರೋಗ್ಯ , ಆಚಾರ ವಿಚಾರಗಳು ,ಸಂಪ್ರದಾಯಗಳ ,ಜನಸಂಖ್ಯಾ ಪ್ರಮಾಣ, ಅಭಿವೃದ್ಧಿ ಹಾಗೂ ಅನಭಿವೃದ್ಧಿ ಇತ್ಯಾದಿ. ಈ ಅಂಶಗಳ ಬಗ್ಗೆ ವಿಮರ್ಶಿಸುವುದು.
- ಪ್ರಾಕೃತಿಕ ವಿಕೋಪಗಳು ಉಂಟು ಮಾಡುವ ಹಾನಿಯ ಬಗ್ಗೆ ತಿಳಿಸುವುದು.
- ಮಾನವನಿಗೆ ಪರಿಸರದೊಂದಿಗೆ ಹೊಂದಾಣಿಕೆ ಅಗತ್ಯ ಎಂಬುದನ್ನು ಅರಿಯುವರು.
- ಈ ಮೇಲಿನ ಅಂಶಗಳನ್ನು ಸ್ಥಳೀಯ ಅಂಶಗಳೊಂದಿಗೆ ಸಮೀಕರಿಸಿ ಅರ್ಥೈಸಿಕೊಳ್ಳುವುದು.
ಶಿಕ್ಷಕರಿಗೆ ಟಿಪ್ಪಣಿ
[[ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ]] ಪರಿಸರಕ್ಕೆ ಅನುಗುಣವಾಗಿ ಜೀವಿಗಳು ಮತ್ತು ಮಾನವರು ಸ್ವರೂಪ ,ವರ್ತನೆ ,ಆತ್ಮ ರಕ್ಷಣೆ ಮತ್ತು ಬೆಳವಣಿಗೆಗಳನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಉದಾ:
- ಹಿಮ ಪ್ರದೇಶದ ಪ್ರಾಣಿಗಳಿಗೆ ಹಿಮದಂತೆ ಶ್ವೇತ ವರ್ಣ ,ಮೈತುಂಬ ತುಪ್ಪಳ
- ಎಸ್ಕಿಮೊ ಜನರ ಉಣ್ಣೆ ಉಡುಪು ,ತಂಡ್ರಾ ಜನರ ಇಗ್ಲೂ ಗಳು (ಮಂಜಿನ ಮನೆ)
- ಮರುಭೂಮಿಯಒಂಟೆಗಳ ದೇಹ ರಚನೆ
- ಸಮಭಾಜಕ ವೃತ್ತ ಪ್ರದೇಶಗಳಲ್ಲಿ ವಾಸಿಸುವವರ ಕಷ್ಟ ಸಹಿಷ್ಣುತೆ ಹಾಗೂ ಧೈರ್ಯ,ಇತ್ಯಾದಿ.
ಜೊತೆಗೆ ಪ್ರಾಕೃತಿಕ ಪರಿಸರಕ್ಕನುಗುಣವಾಗಿ ಮಾನವರ ಉದ್ಯೋಗಗಳ ಆಯ್ಕೆ ,ಆಹಾರ ಪದ್ಧತಿ, ಉಡುಪು ,ಆರೋಗ್ಯ ,ಜನಾಂಗ ವೈವಿಧ್ಯತೆ, ಆಚಾರ ವಿಚಾರಗಳು ,ಸಂಪ್ರದಾಯಗಳು ,ಅಭಿವೃದ್ಧಿ ಹಾಗೂ ಅನಭಿವೃದ್ಧಿ ಹೇಗೆ ಪರಿವರ್ತನೆಯಾಗುತ್ತವೆ ಎಂಬುದರ ಬಗ್ಗೆ ಚರ್ಚಿಸುವುದು.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಮಾನವ_ಮತ್ತು_ಪ್ರಕೃತಿ_ಪರಸ್ಪರರ_ಮೇಲೆ_ಬೀರುವ_ಪ್ರಭಾವ_ಮಾನವನ_ಮೇಲೆ_ಪರಿಸರದ_ಪ್ರಭಾವ- ಚಟುವಟಿಕೆ ಸಂಖ್ಯೆ1
- ಚಟುವಟಿಕೆ ಸಂ 2,ಮಾನವ_ಮತ್ತು_ಪ್ರಕೃತಿ_ಪರಸ್ಪರರ_ಮೇಲೆ_ಬೀರುವ_ಪ್ರಭಾವ_ಮಾನವನ_ಮೇಲೆ_ಪರಿಸರದ_ಪ್ರಭಾವ_ಚಟುವಟಿಕೆ ಸಂಖ್ಯೆ2
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಈ ಕೆಳಗಿನ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ಗಮನಿಸಲು ಹೇಳುತ್ತಾ,ಪ್ರಪಂಚದಲ್ಲಿ ಕಂಡು ಬರುವ ವಿವಿಧ ವೃತ್ತಿ,ಸಂಸ್ಕೃತಿ,ಉಡುಪು ,ಜೀವನ ಶೈಲಿಗಳ ಮೇಲೆ ಪರಿಸರದ ಪ್ರಭಾವವನ್ನು ಚರ್ಚಿಸುವುದು. http://qph.is.quoracdn.net/main-qimg-7ac0a0feb1cd080f776b080aeeac5f11?convert_to_webp=true
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು