ಎನ್.ಸಿ.ಎಪ್ ಪೊಶೀಷನ್ ಪೇಪರ್ ಬಹು ಭಾಷಾ ಹಾಗೂ ತತ್ವಶಾಸ್ತ್ರದ ಸಾಧನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೦:೩೦, ೧೬ ಆಗಸ್ಟ್ ೨೦೧೮ ರಂತೆ Anand (ಚರ್ಚೆ | ಕಾಣಿಕೆಗಳು) ಇವರಿಂದ (added Category:ಎನ್.ಸಿ.ಎಪ್ ಪೊಶೀಷನ್ ಪೇಪರ್ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಪರಿಚಯ

ಭಾರತ ಗುರುತಿಸಿಕೊಂಡಿರುವುದೇ ಇಲ್ಲಿರುವ ಬಹುಭಾಷಾ ವಿಶೇಷತೆಯಿಂದ. 'ಏಕ ಭಾಷೆಯಲ್ಲಿ' ಸಂವಹನ ನಡೆಸುವ ಭಾರತದ ಯಾವುದೇ ಕುಗ್ರಾಮವು ಸಹ ಸಾಮಾನ್ಯವಾಗಿ ತನ್ನ ಅಭಿವ್ಯಕ್ತಿ ಶೀಲ ಮಾತುಕತೆಗಾಗಿ ದೊಡ್ಡ ಸಂಖ್ಯೆಯ ಶಬ್ಧ ಭಂಡಾರವನ್ನು ಹೊಂದಿದೆ, ಇದು ಹಳ್ಳಿಯನ್ನು ಸಮರ್ಪಕ ಸಂವಹನಕ್ಕೆ ಸಜ್ಜುಗೊಳಿಸುತ್ತದೆ. ವಾಸ್ತವವಾಗಿ, ಬಹು ರೂಪತೆಯಿಂದ ಕೂಡಿದ ಭಾರತೀಯ ಧ್ವನಿಗಳನ್ನು ಭಾರತೀಯ ಭಾಷಾ ಶಾಸ್ತ್ರ ಮತ್ತು ಸಾಮಾಜಿಕ ಶ್ರೇಣಿ ವ್ಯವಸ್ಥೆಯ ಆಧಾರದಲ್ಲಿ ಕಟ್ಟಲಾಗಿದೆ, ಇದು ವಿವಿಧ ರೂಪದ ಭಾಷಾ ಶಾಸ್ತ್ರ ಮತ್ತು ಸಾಮಾಜಿಕ ಸ್ತರಗಳ ಗುಣಲಕ್ಷಣವನ್ನು ಹೊಂದಿದೆ. ಮತ್ತೊಂದೆಡೆ, ಇತ್ತೀಚಿನ ಹಲವಾರು ಅಧ್ಯಯನಗಳು ಪರಿಣಾಮಕಾರಿಯಾದ ಜ್ಞಾನದ ಗ್ರಹಿಕೆಯಲ್ಲಿ ಮತ್ತು ತಾರ್ಕಿಕ ಸಾಧನೆಯಲ್ಲಿ ದ್ವಿಭಾಷೆ ಧನಾತ್ಮಕ ಸಂಬಂಧವನ್ನು ಹೊಂದಿದೆ ಎಂದು ಪ್ರತಿಪಾದಿಸಿವೆ.

ಭಾರತ ಬಹು ಭಾಷಾ ಸಂಸ್ಕೃತಿಯ ದೇಶ

ಭಾರತ ಬಹು ಭಾಷಾ ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ಈ ವಿಷಯದಲ್ಲಿ ಅತ್ಯಂತ ವಿಶ್ವಾಸಾರ್ಹವೆಂದು ಪರಿಗಣಿಸಬಹುದಾದ 1971 ಜನಗಣತಿಯಲ್ಲಿ ಭಾರತದ ಐದು ವಿವಿಧ ಭಾಷಾ ಕುಟುಂಬಗಳಿಗೆ ಸೇರಿದ ಒಟ್ಟು 1,652 ಭಾಷೆಗಳನ್ನು ದಾಖಲಿಸಲಾಗಿದೆ. ಭಾರತದಲ್ಲಿ 87 ಭಾಷೆಗಳನ್ನು ಮುದ್ರಣ ಮಾಧ್ಯಮದಲ್ಲಿ ಬಳಸಲಾಗುತ್ತದೆ, 71 ಭಾಷೆಗಳಲ್ಲಿ ರೇಡಿಯೋ ಪ್ರಸಾರವಾಗುತ್ತಿದೆ, ಮತ್ತು ದೇಶದ ಆಡಳಿತವನ್ನು 13 ವಿವಿಧ ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಆದರೆ ವಿಪರ್ಯಾಸವೆಂದರೆ ಕೇವಲ 47 ಭಾಷೆಗಳು ಶಾಲಾ ಬೋಧನಾ ಮಾಧ್ಯಮವಾಗಿ ಬಳಸಲ್ಪಡುತ್ತವೆ. ಪರಿಣಾಮಕಾರಿಯಾಗಿ ಹೆಚ್ಚು ಹೆಚ್ಚು ಮಾತೃ ಭಾಷೆಯಲ್ಲಿ ಶಾಲಾ ಬೋಧನಾ ಚಟುವಟಿಕೆಗಳು ನಡೆಯಬೇಕೆನ್ನುವುದು ಈ ವಿಷಯ ಪ್ರತಿಯ (position paper) ಆಶಯವಾಗಿದೆ. ಅಗಾದವಾದ ವೈವಿಧ್ಯತೆಯ ಹೊರತಾಗಿಯೂ, ಹಲವಾರು ಭಾಷಾ ಮತ್ತು ಸಾಂಸ್ಕೃತಿಕ ಅಂಶಗಳು ಭಾರತವನ್ನು ಒಂದೇ ಭಾಷೆ ಮತ್ತು ಒಂದೇ ಸಾಮಾಜಿಕ ಪ್ರದೇಶವಾಗಿ ಒಂದುಗೂಡಿಸಿವೆ. ವಾಸ್ತವವಾಗಿ ಭಾರತದಲ್ಲಿ, ಯಾವುದೇ ಅನುವಂಶೀಯ ನೆಲೆಯಲ್ಲಿ ಸಂಬಂಧವಿಲ್ಲದ ಹಾಗೂ ಭೌಗೋಳಿಕವಾಗಿ ಪ್ರತ್ಯೇಕಿಸಿರುವ ಭಾಷೆಗಳು ವ್ಯಾಕರಣ ಸಂಸ್ಕೃತಿಯನ್ನು ಸಹಜವಾಗಿ ಭಾಷೆಯ ಮೂಲಕ ಹಂಚಿಕೊಳ್ಳತ್ತದೆ. ಭಾರತೀಯ ಬಹು ಭಾಷಾ ಸೂತ್ರವನ್ನು ನಿರೂಪಿಸುವಲ್ಲಿ ಅಧ್ಯಯನ ನಡೆಸಿದವರಲ್ಲಿ ಪಂಡಿತ್ (1969, 1972, 1988), ಪಟ್ಟನಾಯಕ (1981, 1986, 1986a, 1990), ಶ್ರೀವಾಸ್ತವ (1979, 1988), ದುವಾ (1985), ಮತ್ತು ಖೂಬ್ ಚಾಂದನಿ (1983, 1988) ಪ್ರಮುಖರು. ಪಂಡಿತ್ ಅವರು ಭಾಷೆಯ ಮೇಲಿನ ನಡತೆಯ ವ್ಯತ್ಯಾಸವು ಬಹು ಭಾಷಾ ಸಮಾಜದಲ್ಲಿ ಸಂವಹನ ಸುಗಮಗೊಳಿಸುವ ಬದಲಿಗೆ ಹೇಗೆ ಒಡೆಯುತ್ತವೆ ಎಂದು ತೋರಿಸಿರುತ್ತಾರೆ.
ಬಹು ಭಾಷೆಯನ್ನು ಅಳವಡಿಸುವಲ್ಲಿ ಚರ್ಚೆಯ ಅಗತ್ಯವಿದ್ದು, ಬಹು ಭಾಷಾ ವೈಶಿಷ್ಟ್ಯತೆಯನ್ನು ನಿಗ್ರಹಿಸುವ ಬದಲು ನಮ್ಮ ಶೈಕ್ಷಣಿಕ ವ್ಯವಸ್ಥೆಯು ಬಹು ಭಾಷೆಯನ್ನು ಉಳಿಸಿಕೊಳ್ಳುವ ಸಂಭಾವ್ಯ ಪ್ರಯತ್ನಗಳನ್ನು ಮಾಡಬೇಕು (ಕ್ರಾವಾಲ 1992; ಹೆಫ್ 1995 ಇತರರು). ಪಟ್ಟನಾಯಕ (1981) ನಮ್ಮ ಶೈಕ್ಷಣಿಕ ವ್ಯವಸ್ಥೆ ಸತತವಾಗಿ ನಮ್ಮ ಸಮಾಜದಲ್ಲಿ ಬೇರೂರಿದ ಬಹು ಭಾಷಾ ಸಂಸ್ಕೃತಿಯ ಅನುಕೂಲಗಳನ್ನು ಬಳಸಿಕೊಳ್ಳದೆ ಬಹು ಭಾಷೆಯ ವೈಶಿಷ್ಟ್ಯವನ್ನು ದುರ್ಬಲಗೊಳಿಸಿವೆ ಎಂದು ವಾದಿಸಿದ್ದಾರೆ. ತುಂಬಾ ತಡವಾಗಿ ಆದರೂ ಮೊದಲು ದೇಶದಲ್ಲಿ ಶಿಕ್ಷಣ ಯೋಜಕರು ಶಿಕ್ಷಣದಲ್ಲಿ ಭಾಷೆ ಪ್ರಾಧಾನ್ಯತೆಗಳ ಬಗ್ಗೆ ತಕ್ಷಣ ಗಮನಹರಿಸಬೇಕಾಗಿದೆ. ನಾವು ತುಳಿತಕ್ಕೊಳಗಾದ ಜನಾಂಗದ, ಬುಡಕಟ್ಟು ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಬಲಗೊಳಿಸುವ ಪ್ರಯತ್ನ ಮಾಡುವ ಅಗತ್ಯವಿದೆ ಎಂದ ಇಲ್ಚ್ (1981) ಸೂಚಿಸಿದ್ದರು. ಇದನ್ನು ಸಮರ್ಥಿಸುವ ಕಾರ್ಯತಂತ್ರವನ್ನು ಈ ನೆಲೆಯಲ್ಲಿ ಕೈಗೊಳ್ಳಬೇಕಿದೆ.. ವ್ಯಕ್ತಿಯೊಬ್ಬ ತನ್ನ ಭಾಷಾ ಹಕ್ಕನ್ನು ಕೇಳಲು ಕಾಯುತ್ತಾ ಕುಳಿತಿರಲು ಸಾಧ್ಯವಿಲ್ಲ. ಇಲ್ಚ್ ಪ್ರಕಾರ ನಾವು ಒಂದೆಡೆ ಬುಡಕಟ್ಟು ಭಾಷೆಯನ್ನು ಹಿಂಬಡ್ತಿ ಗೊಳಿಸಲು ಮಿಲಿಯನ್ ಡಾಲರ್ ಖರ್ಚು ಮಾಡುತ್ತೇವೆ ಮತ್ತು ನಂತರ ಆ ಭಾಷೆಗಳನ್ನು ಸಂಕೇತಕ್ಕೆಂದು ಅದ್ಭುತ ಎಂದು ಬಣ್ಣಿಸಿ ಹಣದ ಮಳೆ ಸುರಿಸುತ್ತೇವೆ. ಪಟ್ಟನಾಯಕ (1981) ಸೂಚಿಸುವ ಹಾಗೆ ಸಹಭಾಗಿ ಪ್ರಜಾಪ್ರಭುತ್ವ ನೆಲೆ ಉಳಿದುಕೊಳ್ಳಬೇಕಾದರೆ, ನಾವು ಪ್ರತಿ ಮಗುವಿನ ಭಾಷೆಗೆ ಧ್ವನಿ ಕೂಡಿಸುವ ಅಗತ್ಯವಿದೆ.
ವಿವಧ ಶೈಕ್ಷಣಿಕ ಆಯೋಗಗಳು ತ್ರೀ ಭಾಷಾ ಸೂತ್ರವನ್ನು ಬಲಪಡಿಸ ಬೇಕಾದ ಅಗತ್ಯತೆಯನ್ನು ಶಿಫಾರಸ್ಸು ಮಾಡಿರುತ್ತದೆ. ಅದರಂತೆ ದೇಶದಾದ್ಯಂತ ನೈಜ್ಯ ಸ್ಪೂರ್ತಿಯಿಂದ ತ್ರೀ ಭಾಷಾ ಸೂತ್ರವನ್ನು ಅಪರೂಪವೆಂಬಂತೆ ಕಾರ್ಯಗತಗೊಳಿಸುತ್ತಿರುವುದು ವಿಷಾದನೀಯವಾಗಿದೆ. ಆದ್ದರಿಂದ ನಾವು ಈ ವಿಷಯ ಪ್ರತಿಯಲ್ಲಿ (position paper) ತ್ರೀ ಭಾಷಾ ಸೂತ್ರವನ್ನು ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸುವ ಬದಲು ಈ ದೇಶದ ಬಹು ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ದೇಶದ ಭಾಷಾ ಯೋಜನಾ ಘಟಕ ಹೃದಯದಿಂದ ಯೋಚಿಸಬೇಕೆಂದು ಸಲಹೆ ನೀಡುತ್ತದೆ.
ಹಕುತಾ (1986) ಪ್ರಕಾರ ಅಮೇರಿಕಾದ ರಾಷ್ಟ್ರೀಯ ದ್ವಿ ಭಾಷಿ ಶಿಕ್ಷಣ ಸಂಸ್ಥೆ ಸ್ಪಷ್ಟಪಡಿಸಿದಂತೆ ದ್ವಿ ಭಾಷಾ ಶಿಕ್ಷಣ ಅನುಷ್ಟಾನದಿಂದ ಅನೇಕ ಲಾಭಗಳಾಗಿವೆ ಮುಖ್ಯವಾಗಿ ಮಕ್ಕಳಿಗೆ ಮಾಡುವ ಶೈಕ್ಷಣಿಕ ಸಾಮರ್ಥ್ಯಗಳ ಪರೀಕ್ಷೆಗಳಲ್ಲಿ ಅಂಕಗಳ ಹೆಚ್ಚಳವಾಗಿದೆ, ಶಾಲೆ ಬಿಡುವ ಮಕ್ಕಳ ಪ್ರಮಾಣ ಕಡಿಮೆಯಾಗಿದೆ, ಮತ್ತು ಶಾಲಾ ಮಕ್ಕಳ ಗೈರು ಹಾಜರಿ ಪ್ರಮಾಣ ಕಡಿಮೆಯಾಗಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿದೆ ಇದು ವಿದ್ಯಾರ್ಥಿಯಲ್ಲಿ ಸ್ವಾಭಿಮಾನ ಉಂಟುಮಾಡಿದೆ.

ದ್ವಿ ಭಾಷಾ ಶಾಸ್ತ್ರ ಹಾಗೂ ತತ್ವ ಶಾಸ್ತ್ರದ ಸಾಧನೆ

ಬಹಳ ವರ್ಷಗಳ ವರೆಗೆ ದ್ವಿ ಭಾಷೆ ಶಾಸ್ತ್ರವು ಜ್ಞಾನ ಅರಿವಿನ ವೃದ್ಧಿಯಲ್ಲಿ ಋಣಾತ್ಮಕ ಸಂಬಂಧ ಹೊಂದಿದೆ ಎಂದು ನಂಬಲಾಗಿತ್ತು. (ಉದಾಹರಣೆಗೆ, ಜೆಸ್ಪರ್ ಸನ್ 1922 ನೋಡಿ; ಸಿಯರ್ 1923, ಮತ್ತು ಇತರರ). ಉದಾಹರಣೆಗೆ, ಸಿಯರ್ (1923) ದ್ವಿ ಭಾಷಿಯಲ್ಲಿ 7-14 ವರ್ಷದ ವೆಲ್ಷ್ ಇಂಗ್ಲೀಷ್ ಮಾತನಾಡುವ ಮಗುವಿನ ಸಾಮರ್ಥ್ಯವು ಏಕ ಭಾಷೀಯ ಸಹವರ್ತಿಗಳಿಗೆ ಹೋಲಿಸಿದರೆ ಐಕ್ಯೂ ಮಟ್ಟ ಕಡಿಮೆ ಇರುವುದನ್ನು ತೋರಿಸಲು ಪ್ರಯತ್ನಿಸಿದರು.
ಮತ್ತೊಂದೆಡೆ, ಇತ್ತೀಚಿನ ಹಲವಾರು ಅಧ್ಯಯನಗಳು (ಉದಾಹರಣೆಗೆ, ಪೀಲ್ ಮತ್ತು ಲ್ಯಾಂಬರ್ಟ್ 1962; ಗಾರ್ಡ್ನರ್ ಮತ್ತು ಲ್ಯಾಂಬರ್ಟ್ 1972; ಕಮ್ಮಿನ್ಸ್ ಮತ್ತು ಸ್ವೇನ್ 1986, ಇತರರ) ದ್ವಿ ಭಾಷೆ, ಜ್ಞಾನ ಗ್ರಹಿಕೆಯ ಸ್ವಾತಂತ್ರ ಮತ್ತು ತತ್ವ ಶಾಸ್ತ್ರದ ಸಾಧನೆಯ ನಡುವೆ ಸಕಾರಾತ್ಮಕ ಸಂಬಂಧವಿದೆ ಎಂದು ಸಮಂಜಸವಾಗಿ ತೋರಿಸಿವೆ. ದ್ವಿ ಭಾಷಾ ವಿಧಾನದ ಕಲಿಕೆಯಲ್ಲಿ ತೊಡಗಿರುವ ಮಕ್ಕಳು ಕೇವಲ ವಿವಧ ಭಾಷೆಗಳ ಮೇಲೆ ನಿಯಂತ್ರಣ ಸಾಧಿಸುವುದಲ್ಲದೆ ಅಂಥಹಾ ಮಕ್ಕಳು ಶೈಕ್ಷಣಿಕವಾಗಿ ಹೆಚ್ಚು ಸೃಜನಶೀಲರು ಮತ್ತು ಸಾಮಾಜಿಕ ಸಹಿಷ್ಣು.ಗಳಾಗಿರುತ್ತಾರೆ. ಅವರ ವ್ಯಾಪಕ ಪದಗಳ ಸಂಗ್ರಹವು ಯಾವುದೇ ಸಾಮಾಜಿಕ ಸಂದರ್ಭಗಳಲ್ಲಿ ಮಾತುಕತೆಗಳನ್ನು ನಿಯಂತ್ರಿಸುವಲ್ಲಿ ಮತ್ತು ಸಿದ್ಧಪಡಿಸುವಲ್ಲಿ ಪರಿಣಾಮಕಾರಿಯಾಗಿರುತ್ತಾರೆ. ದ್ವಿ ಭಾಷಾ ಕಲಿಕೆಯಲ್ಲಿ ತೊಡಗಿರುವ ಮಕ್ಕಳು ವೈವಿಧ್ಯಮಯ ಚಿಂತನೆಯಲ್ಲಿ ಪ್ರಭುದ್ಧರಾಗುತ್ತಿರುವುದು ಸಾಕ್ಷ್ಯಾಧಾರಗಳು ರುಜುವಾತುಮಾಡಿವೆ, ಹಾಗಾಗಿ ಶಾಲಾ ಪಠ್ಯ ಕ್ರಮದಲ್ಲಿ ದ್ವಿ ಭಾಷೆ ಸೂತ್ರವನ್ನು ಉತ್ತೇಜಿಸುವ ಪ್ರಾಮುಖ್ಯತೆ ಅಡಗಿದೆ.. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಎಂದರೆ ಸುಧಾರಿತಗೊಳಿಸಿದ ಭಾಷಾ ಕೌಶಲಗಳನ್ನು ಸರಳವಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ವರ್ಗಾಯಿಸಬಹುದು, ಹಾಗಾಗಿ ಪ್ರಜ್ಞಾಪೂರ್ವಕವಲ್ಲದ ವರ್ಗಾವಣೆಗೆ ಹೆಚ್ಚಿನ ಶ್ರಮವಹಿಸುವ ಅಗತ್ಯವಿರುವುದಿಲ್ಲ. ಕಮ್ಮಿನ್ಸ್ (1976, 1981) ಮತ್ತು ಕಮ್ಮಿನ್ಸ್ ಮತ್ತು ಸ್ವೇನ್ (1986) ಅವರು ಮೂಲಭೂತ ಅಂತರ್ ವ್ಯಕ್ತೀಯ ಸಂವಹನ ಕೌಶಲ (BIC) ಮತ್ತು ವಿಸ್ತೃತಗೊಂಡ ಭಾಷಾ ಜ್ಞಾನದ ಪ್ರಬುದ್ಧತೆಯ (CALP) ನಡುವಿನ ವ್ಯತ್ಯಾಸವನ್ನು ಗುರುತಿಸಿರುತ್ತಾರೆ. ಮೂಲಭೂತ ಅಂತರ್ ವ್ಯಕ್ತೀಯ ಸಂವಹನ ಕೌಶಲವು ಭಾಷಾ ಸಾಮರ್ಥ್ಯದೊಂದಿಗೆ ಸಂಬಂಧೀಕರಿಸಿದ್ದಾಗಿದ್ದು ಹೆಚ್ಚಾಗಿ ಇದು ಮಕ್ಕಳಲ್ಲಿ ಸಂತೃಪ್ತಯ ಸನ್ನಿವೇಶದಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸುವ ಕೌಶಲ ಮತ್ತು ಜ್ಞಾನ ಕಟ್ಟುವಲ್ಲಿ ಅಪೇಕ್ಷಿಸದೆ ಇರುವ ಮಟ್ಟವನ್ನು ಒಳಗೊಂಡಿರುತ್ತದೆ. ಮೂಲಭೂತವಾದ ಅಂತರ್ ವ್ಯಕ್ತೀಯ ಸಂವಹನ ಕೌಶಲದ (BIC) ವ್ಯಾಪ್ತಿಯಲ್ಲಿ ಸ್ಥಳೀಯ ಮತ್ತು ಪ್ರಸ್ತುತ ಭಾಷೆ ಹಾಗೂ ಸಮಾನ ಮನಸ್ಕ ಮಾತುಕತೆಗಳು ಒಳಗೊಂಡಿರುತ್ತದೆ.
ಮೂಲಭೂತ ಅಂತರ್ ವ್ಯಕ್ತೀಯ ಸಂವಹನ ಕೌಶಲಗಳ (BIC) ಸಾಮರ್ಥ್ಯಾ ಮಟ್ಟವು ಬಹುತೇಕ ಹೊಸದಾಗಿ ಎಲ್ಲಾ ಭಾಷಾಗಳು ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಗೋಚರವಾಗುತ್ತದೆ. ಇದು ಭಾರತದಂತಹ ಬಹು ಭಾಷಾ ಸಮಾಜದಲ್ಲಿ ಹೆಚ್ಚು ಸುಲಭವಾಗಿ ಮೂಲಭೂತ ಅಂತರ್ ವ್ಯಕ್ತೀಯ ಸಂವಹನ ಕೌಶಲಗಳು (BIC) ನೈಸರ್ಗಿಕ ಸ್ವಾಧೀನ ಪ್ರಕ್ರಿಯೆಗಳು ಮೂಲಕ ಸ್ವಾಧೀನ ಪಡಿಸಿಕೊಂಡಿರುತ್ತದೆ. ವಿಸ್ತೃತಗೊಂಡ ಭಾಷಾ ಜ್ಞಾನದ ಪ್ರಬುದ್ಧತೆಯ (CALP) ಮಟ್ಟದ ಸಾಮರ್ಥ್ಯಗಳು ಸಾಂಧರ್ಭಿಕ ಹಿನ್ನಲೆಯ ಅನಾನುಕೂಲ ಪರಿಸ್ತಿತಿ ಮತ್ತು ಜ್ಞಾನದ ಬೇಡಿಕೆಯಿರುವ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸವ ಅಗತ್ಯವಿದೆ. ಅವು ಸಾಮಾನ್ಯವಾಗಿ ಭಾಷೆ ಹೇಳಿಕೊಡುವ ವ್ಯವಸ್ಥೆಯಾಗಿ ಪರಿಗಣಿಸಲ್ಪಡುತ್ತವೆ. ಉದಾಹರಣೆಗೆ, ದ್ವಿತೀಯ ಅಥವಾ ಅರೆ ದ್ವಿತೀಯ ದರ್ಜೆಯ ವಿದ್ಯಾರ್ಥಿಗೆ ಅವನು/ಅವಳು ಪರಿಚಿತ ವಿಲ್ಲದ ವಿಷಯದ ಮೇಲೆ ಪ್ರಬಂಧ ಬರೆಯಲು ತಿಳಿಸುವುದು ಅಥವಾ ವಿಮರ್ಶೆ ಮಾಡಲು ಪತ್ರಿಕೆಯೊಂದರ ಸಂಪಾದಕೀಯ ಓದಿಸುವುದು ಇದಕ್ಕಾಗಿ ಅವನು/ಅವಳು ವಿಸ್ತೃತಗೊಂಡ ಭಾಷಾ ಜ್ಞಾನದ ಪ್ರಬುದ್ಧತೆಯ (CALP) ಮಟ್ಟದ ಸಾಮರ್ಥ್ಯಗಳನ್ನು ಹೊಂದಿರಬೇಕು. ನಾವು ಹೇಳಿರುವ ಇಂತಹಾ ಸಾಮರ್ಥ್ಯಗಳು ಸಾಮಾನ್ಯವಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ವರ್ಗಾಯಿಸುವ ಒಲವಿರುತ್ತದೆ.

ಬಹುಭಾಷಾ ಸೂತ್ರವನ್ನು ಮುಂದುವರಿಸುವ ಅಗತ್ಯತೆ

ಸಾಮಾಜಿಕ ಸಾಮರಸ್ಯ ಇರುವ ದೇಶದಲ್ಲಿ ಮಾತ್ರ ದೇಶದಲ್ಲಿರುವ ಪರಸ್ಪರರ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಪಾರ ಗೌರವವಿರುತ್ತದೆ, ಭಾರತದಂತಹ ವೈವಿಧ್ಯಮಯ ಭಾಷಾ ಸಂಸ್ಕೃತಿಯ ದೇಶದಲ್ಲಿ ಮಾತ್ರ ಇದು ಸಾಧ್ಯ., ಇಂತಹ ಗೌರವವು ಜ್ಞಾನಾಭಿವೃದ್ಧಿಯಿಂದ ಮಾತ್ರ ರೂಪಿಸಬಹುದಾಗಿದೆ. ಅಜ್ಞಾನ ಭಯವನ್ನು ಹುಟ್ಟಿಸುತ್ತದೆ, ದ್ವೇಶ ಮತ್ತು ಅಸಹನೆ ಬೆಳೆಯುತ್ತದೆ ಇದು ದೇಶೀಯ ಗುರುತಾಗಿ ಉಳಿಸಿಕೊಳ್ಳುವಲ್ಲಿ ಮತ್ತು ಒಬ್ಬ ಜವಾಬ್ದಾರಿಯುತ ನಾಗರಿಕನಾಗಿಸುವಲ್ಲಿ ಪ್ರಮುಖ ಅಡ್ಡಿಯಾಗುತ್ತದೆ. ಪ್ರತಿ ರಾಜ್ಯ ಒಂದು ಪ್ರಬಲ ಭಾಷೆ ಹೊಂದಿದೆ, ಹಾಗಾಗಿ ಇಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಜನಾಂಗೀಯ ಕೇಂದ್ರೀತ ವರ್ತನೆ ಮತ್ತು ಭಾಷಾ ಅಭಿಮಾನದ ಭಾವನೆ ಅಭಿವೃದ್ಧಿ ಆಗಬೇಕಾಗಿದೆ. ಇದು ಜನರು ತಮ್ಮ ಕಲ್ಪನೆಗಳನ್ನು ಮತ್ತು ಮುಕ್ತ ಸಂಚಾರವನ್ನು ಕುಂಠಿತಗೊಳಿಸುತ್ತದೆ ಅದೂ ಅಲ್ಲದೆ ಸೃಜನಶೀಲತೆ, ನಾವಿನ್ಯತೆಗೆ ನಿರ್ಬಂಧಗಳನ್ನು ಹೇರುತ್ತದೆ ಮತ್ತು ವಿಶಾಲ ದೃಷ್ಟಿಕೋನ ಮತ್ತು ಸಮಾಜದ ಆಧುನೀಕರಣವನ್ನು ಕುಂಠಿತಗೊಳಿಸಿಸುತ್ತದೆ. ಜ್ಞಾನದ ಬೆಳವಣಿಗೆ ಮತ್ತು ಶೈಕ್ಷಣಿಕ ಸಾಧನೆಯನ್ನು ಗಮನಿಸಿದ ನಮಗೆ ಬಹು ಭಾಷಾ ತತ್ವದ ಧನಾತ್ಮಕ ಸಂಬಂಧದ ಅರಿವು ಉಂಟಾಗಿದ್ದು ಹಾಗಾಗಿ ಎಲ್ಲಾ ಶಾಲೆಗಳಲ್ಲಿ ಬಹು ಭಾಷಾ ಶಿಕ್ಷಣವನ್ನು ಉತ್ತೇಜಿಸುವ ಅಗತ್ಯವಿದೆ.