ICT student textbook/ಮುನ್ನುಡಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೫:೪೩, ೨೯ ಅಕ್ಟೋಬರ್ ೨೦೧೮ ರಂತೆ Karthik (ಚರ್ಚೆ | ಕಾಣಿಕೆಗಳು) ಇವರಿಂದ (added Category:ಐಸಿಟಿ ವಿದ್ಯಾರ್ಥಿ ಪಠ್ಯ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search
ICT student textbook
ಮುನ್ನುಡಿ ಪರಿಚಯ

ಇತಿಹಾಸದ ಉದ್ದಕ್ಕೂ, ಸಾಮಾಜಿಕ ಪ್ರಕ್ರಿಯೆಗಳು ಮತ್ತು ರಚನೆಗಳನ್ನು ಮಹತ್ತರವಾಗಿ ಬದಲಿಸಿದ ಸಂಶೋಧನೆಗಳು ಮತ್ತು ಆವಿಷ್ಕಾರಗಳು ನಡೆದಿವೆ. ಕೃಷಿ ಕ್ರಾಂತಿ ಮತ್ತು ಕೈಗಾರಿಕಾ ಕ್ರಾಂತಿ ಅನುಕ್ರಮವಾಗಿ ಕೃಷಿ ಮತ್ತು ಕೈಗಾರಿಕಾ ಸಮಾಜಗಳನ್ನು ಸೃಷ್ಟಿಸಿದುವು. ನಾವು ಈಗ ಮಾಹಿತಿ ಸಂವಹನ ತಂತ್ರಜ್ಞಾನಗಳು (ಐಸಿಟಿ)ಯ ಸಮಯದಲ್ಲಿದ್ದೇವೆ. ಮಾಹಿತಿ ಸೃಷ್ಟಿ, ಪ್ರವೇಶ, ಪ್ರಕ್ರಿಯೆ ಮತ್ತು ಹಂಚಿಕೊಳ್ಳುವಿಕೆಯು ತ್ವರಿತವಾಗಿ ಮತ್ತು ಸರಳವಾಗುವುದರೊಂದಿಗೆ, ಈ ಪ್ರಕ್ರಿಯೆಗಳಿಂದ ಸಮಾಜವನ್ನು ಈಗ ರೂಪಿಸಲಾಗುತ್ತಿದೆ, ಇದರಿಂದಾಗಿ ಇಂದಿನ ಸಮಾಜವನ್ನು ವಿವರಿಸಲು ಮಾಹಿತಿ ಸಮಾಜ ಎಂಬ ಪದವನ್ನು ಬಳಸಲಾಗುತ್ತದೆ. ಈ ಸಮಾಜದಲ್ಲಿ ಪಾಲ್ಗೊಳ್ಳುವುದರಿಂದ ಹೊಸ ಕೌಶಲ್ಯಗಳ ಅಭಿವೃದ್ಧಿ ಮತ್ತು ಸಮಾಜದ ಮೇಲೆ ಈ ಪ್ರಕ್ರಿಯೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಿಳಿಯಬಹುದಾಗಿದೆ. ಐಸಿಟಿ ಹಾಗು ಸಮಾಜದ ಮೇಲೆ ಅದರ ಪರಿಣಾಮ ಮತ್ತು ಐಸಿಟಿ ಮೂಲಕ ಕಲಿಯುವ ಸಾಧ್ಯತೆಗಳ ಬಗ್ಗೆ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯಾಗಿರುತ್ತದೆ. ಶೈಕ್ಷಣಿಕ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಐಸಿಟಿಯಿಂದ ರೂಪಿಸ್ಪಟ್ಟ ಸಮಾಜದಲ್ಲಿ ಕಾರ್ಯ ನಿರ್ವಹಿಸುವ ಕೌಶಲ್ಯಗಳನ್ನು ನಿರ್ಮಿಸಲು ಸಹಕರಿಸಬೇಕು, ಇದು ಅವರನ್ನು ಸಮರ್ಥರನ್ನಾಗಿಸುತ್ತದೆ. ಈ ಸನ್ನಿವೇಶದಲ್ಲಿ, ಶಿಕ್ಷಕರ ಶಿಕ್ಷಣ ಸಾಮರ್ಥ್ಯ, ಐಸಿಟಿ ಕಲಿಕೆಗೆ ಪಠ್ಯಕ್ರಮದ ಅಭಿವೃದ್ಧಿ, ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲಿಕೆ ಮತ್ತು ಸರಬರಾಜು ಮಾಡುವುದನ್ನು ಬೆಂಬಲಿಸುವ ವಿಷಯದ ಅಭಿವೃದ್ಧಿಯನ್ನು ಒಳಗೊಂಡಿರುವ ಸಮಗ್ರ ವಿಧಾನದ ಮೂಲಕ ರಾಜ್ಯದಲ್ಲಿ ಐಸಿಟಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ತೆಲಂಗಾಣ ಶಾಲಾ ಶಿಕ್ಷಣ ಇಲಾಖೆ ಇಚ್ಛಿಸಿದೆ. ಅಂತೆಯೇ, ತೆಲಂಗಾಣ ಶಾಲಾ ಶಿಕ್ಷಣ ಇಲಾಖೆಯು ಐಸಿಟಿ ಪಠ್ಯ ಪುಸ್ತಕ ಮತ್ತು ಶಿಕ್ಷಕರ ಕೈಪಿಡಿಯನ್ನು ಅಭಿವೃದ್ಧಿಪಡಿಸಿದೆ, ಇದು ಐಸಿಟಿ ತರಗತಿಗಳನ್ನು 6-10ರ ವರ್ಗಗಳವರೆಗೆ ಪಾಠ ಮಾಡುವ ಶಿಕ್ಷಕರು ಬಳಸಿಕೊಳ್ಳಬಹುದಾಗಿದೆ. ಈ ಪುಸ್ತಕಗಳನ್ನು ರಾಷ್ಟ್ರೀಯ ಐಸಿಟಿ ಪಠ್ಯಕ್ರಮ ಅಭಿವೃದ್ಧಿಪಡಿಸಿದ ನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಷನಲ್ ರಿಸರ್ಚ್ ಆಂಡ್ ಟ್ರೈನಿಂಗ್ (NCERT), ಅಭಿವೃದ್ಧಿಪಡಿಸಿದೆ. ಇದು ಶಾಲಾ ಶಿಕ್ಷಣಕ್ಕೆ ಸಂಪರ್ಕ ಮತ್ತು ಕಲಿಕೆಗಾಗಿ ಹಾಗು ರಚನೆ ಮತ್ತು ಕಲಿಕೆಗಾಗಿ,ಐಟಿ ಫಾರ್ ಚೇಂಜ್, ಮತ್ತು CEMCAಯ ಸಹಯೋಗದೊಂದಿಗೆ ಐಸಿಟಿಯ ಸಾಧ್ಯತೆಗಳನ್ನು ತರಲು ಉದ್ದೇಶಿಸಿದೆ.

ರಾಜ್ಯದ ಐಸಿಟಿ ಪಠ್ಯಕ್ರಮದ ಸಾಮೀಪ್ಯ ಮತ್ತು ಉದ್ದೇಶ

ರಾಜ್ಯ ಐಸಿಟಿ ಪಠ್ಯಕ್ರಮವು ರಾಷ್ಟ್ರೀಯ ಐಸಿಟಿ ನೀತಿಯಲ್ಲಿರುವ ಆಕಾಂಕ್ಷೆಗಳನ್ನು ಮತ್ತು ಮಾರ್ಗದರ್ಶಿಗಳನ್ನು ಆಧರಿಸಿತ್ತು, ಇದು ಐಸಿಟಿ ಬಳಸುವ ಸುರಕ್ಷಿತ, ನೈತಿಕ ಮತ್ತು ಕಾನೂನುಬದ್ಧ ವಿಧಾನಗಳ ಮೂಲಕ ಕಂಪ್ಯೂಟಿಂಗ್ ಕೌಶಲಗಳನ್ನು ಕಟ್ಟುವುದು, ಸೃಷ್ಟಿಸುವುದು ಮತ್ತು ಸಹಯೋಗ ಮಾಡುವುದರ ಮೇಲೆ ಗಮನಹರಿಸುತ್ತದೆ.

ಪಠ್ಯಕ್ರಮವು ಸಮಾಜದಲ್ಲಿ ಐಸಿಟಿಯ ವಿಭಿನ್ನ ಸಾಧ್ಯತೆಗಳನ್ನು ಒತ್ತಿಹೇಳಿದೆ, ಅವುಗಳನ್ನು ಸಂಕ್ಷಿಪ್ತವಾಗಿ ಕೆಳಗೆ ಚರ್ಚಿಸಲಾಗಿದೆ.

  1. 'ವಿಶ್ವದೊಂದಿಗೆ ಸಂಪರ್ಕಿಸಲು': ಮಾಹಿತಿ ಪ್ರವೇಶಿಸಲು ಮತ್ತು ತಿಳಿದುಕೊಳ್ಳಲು ತಂತ್ರಜ್ಞಾನವು ಹೊಸ ಮಾರ್ಗಗಳನ್ನು ಒದಗಿಸುತ್ತದೆ. ಮಾಹಿತಿಯನ್ನು ಮೌಲ್ಯಮಾಪನ ಮಾಡುವುದು ಮತ್ತು ಅದನ್ನು ಸೂಕ್ತವಾಗಿ ಬಳಸುವುದು ಅಭಿವೃದ್ಧಿಯಾಗಬೇಕಾದ ಕೌಶಲ್ಯಗಳು. ಈ ವಿಷಯ ಅಂತರ್ಜಾಲವನ್ನು ಪ್ರವೇಶಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಲಭ್ಯವಿರುವ ಸಂಪನ್ಮೂಲಗಳ ಮೌಲ್ಯಮಾಪನ ಮತ್ತು ಸ್ವಯಂ ಕಲಿಕೆಗಾಗಿ ವೈಯಕ್ತಿಕ ಡಿಜಿಟಲ್ ಗ್ರಂಥಾಲಯಗಳನ್ನು ರಚಿಸುವುದು.
  2. 'ಪರಸ್ಪರ ಸಂಪರ್ಕಿಸಲು': ಐಸಿಟಿ ಮೂಲಕ ಸಂಪರ್ಕಿಸುವ ಒಂದು ಸಂಬಂಧಿತ ಆಯಾಮವು ಸಮುದಾಯದಿಂದ ಕಲಿಯುವ ಸಾಧ್ಯತೆಯಲ್ಲಿ ಇದೆ. ಸಮಾನ ಕಲಿಕೆಯ ವಾತಾವರಣದಲ್ಲಿ ಮತ್ತು ಆನ್-ಲೈನ್ ವೇದಿಕೆಗಳ ಮೂಲಕ ಹೇಗೆ ಸಂವಹನ ಮಾಡುವುದು ಮತ್ತು ಕಲಿಯುವುದು ಎಂಬುದರ ಕುರಿತು ಈ ವಿಷಯದ ಗಮನವಿರುತ್ತದೆ. ಒಟ್ಟಾರೆ ಸಹಯೋಗ ಮತ್ತು ಕಲಿಕೆ ಈ ಪಠ್ಯಕ್ರಮದ ಒಂದು ಪ್ರಮುಖ ನಿರೀಕ್ಷೆಯಾಗಿದೆ.
  3. 'ಐಸಿಟಿ ಸಂವಹನ' : ತಂತ್ರಜ್ಞಾನ ಪರಿಸರದಲ್ಲಿ ಕೌಶಲ್ಯಗಳನ್ನು ಕಟ್ಟುವುದು ಮತ್ತು ಉಪಶೀರ್ಷಿಕೆಗಳು ಈ ಪಠ್ಯಕ್ರಮದ ಒಂದು ಪ್ರಮುಖ ನಿರೀಕ್ಷೆಯಾಗಿದೆ. ತಂತ್ರಜ್ಞಾನದೊಂದಿಗೆ ತೊಡಗಿಸಿಕೊಳ್ಳುವಲ್ಲಿ, ಸೂಕ್ತವಾದ ತಂತ್ರಜ್ಞಾನದ ಆಯ್ಕೆಗಳನ್ನು ಮೌಲ್ಯಮಾಪನ ಮಾಡುವುದು ಮತ್ತು ಐಸಿಟಿ ಮೂಲಭೂತ ಸೌಕರ್ಯವನ್ನು ನಿರ್ವಹಿಸುವುದಕ್ಕಾಗಿ ಹೆಚ್ಚು ಸಕ್ರಿಯ ವಿಧಾನವನ್ನು ನಿರ್ಮಿಸುವ ವಿಷಯದ ಮೇಲೆ ಇದು ಕೇಂದ್ರೀಕರಿಸುತ್ತದೆ. ತಂತ್ರಜ್ಞಾನದ ವಿಭಿನ್ನ ಧನಾತ್ಮಕ ಮತ್ತು ಋಣಾತ್ಮಕ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಅರಿತುಕೊಳ್ಳುವ ಮೂಲಕ ತಂತ್ರಜ್ಞಾನದ ವಿಮರ್ಶಾತ್ಮಕ ಬಳಕೆದಾರರಾಗುವುದು ಸಹ ಮುಖ್ಯವಾಗಿದೆ.
  4. 'ಐಸಿಟಿ ಜೊತೆ ರಚನೆ' : ವಿವಿಧ ಐಸಿಟಿ ಅನ್ವಯಗಳ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಕೌಶಲವನ್ನು ನಿರ್ಮಿಸಲು ಮತ್ತು ಕೌಶಲ್ಯಗಳನ್ನು ರಚಿಸುವ ವಿಷಯವಾಗಿದೆ. ಅವುಗಳು ದತ್ತಾಂಶ ವಿಶ್ಲೇಷಣೆ ಮತ್ತು ಸಂಸ್ಕರಣೆ, ಗ್ರಾಫಿಕ್ಸ್ ರಚಿಸುವುದು, ಆಡಿಯೋ ದೃಶ್ಯ ಸಂವಹನಗಳನ್ನು ರಚಿಸುವುದು, ನಕ್ಷೆಗಳ ಅನ್ವಯಗಳೊಂದಿಗೆ ಕೆಲಸ ಮಾಡುವುದು, ನಿರ್ದಿಷ್ಟ ಶಾಲಾ ವಿಷಯ ಸಂಬಂಧಿತ ಅನ್ವಯಕಗಳು ಮತ್ತು ವೇದಿಕೆಗಳೊಂದಿಗೆ ಸಂಪನ್ಮೂಲಗಳನ್ನು ರಚಿಸುವುದು.

ಕೇವಲ ನಿರ್ದಿಷ್ಟ ಅನ್ವಯಿಕಗಳನ್ನು ಕಲಿಯುವ ಬದಲು ಐಸಿಟಿ ಪರಿಸರದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ವಿಷಯ, ಹಂಚಿಕೆ ಮತ್ತು ಕಲಿಕೆ ಮತ್ತು ಶೈಕ್ಷಣಿಕ ಮತ್ತು ಕಲಿಕೆಯ ಪ್ರಕ್ರಿಯೆಗಳ ಮೇಲೆ ಕೇಂದ್ರೀಕರಿಸುವ ಸಾಮರ್ಥ್ಯ, ಈ ಪಠ್ಯಕ್ರಮದ ವಿನ್ಯಾಸದ ಮುಖ್ಯ ತತ್ವಗಳಾಗಿವೆ . ಪಠ್ಯಕ್ರಮವು ಇಂದು ಲಭ್ಯವಿರುವ ಐಸಿಟಿ ಅನ್ವಯಗಳು ಮತ್ತು ವೇದಿಕೆಗಳ ಮೂಲಕ ಸೃಜನಾತ್ಮಕ ಅಭಿವ್ಯಕ್ತಿಯ ವಿಭಿನ್ನ ಸಾಧ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲ್ಪಟ್ಟಿದೆ ಮತ್ತು ಮುಂದುವರಿದ ಆಧಾರದ ಮೇಲೆ ಇಂತಹ ಅನ್ವಯಕಗಳನ್ನು ಪೂರ್ವಭಾವಿಯಾಗಿ ಮತ್ತು ಸ್ವತಂತ್ರವಾಗಿ ಅನ್ವೇಷಿಸುವ ಮನೋಭಾವವನ್ನು ನಿರ್ಮಿಸಲು ಪ್ರಯತ್ನಿಸುತ್ತದೆ. ನಿರ್ದಿಷ್ಟ ಅನ್ವಯಗಳ ಮೇಲೆ ಡಿಜಿಟಲ್ ಸಾಕ್ಷರತೆಯನ್ನು ನಿರ್ಮಿಸುವ ಸಾಂಪ್ರದಾಯಿಕ ವಿಧಾನವನ್ನು ತೆಗೆದುಕೊಳ್ಳದೆ, ಪಠ್ಯಕ್ರಮ ಐಸಿಟಿ ಕಲಿಕೆಗೆ ವಿಷಯಾಧಾರಿತ, ಯೋಜನೆ ಆಧಾರಿತ ವಿಧಾನವನ್ನು ಒತ್ತಿಹೇಳುತ್ತದೆ. ಅಂತಹ ಒಂದು ವಿಧಾನವು ಐಸಿಟಿಯ ಏಕೀಕರಣವನ್ನು ಬಹು ಶಾಲಾ ವಿಷಯಗಳೊಂದಿಗೆ ಸಕ್ರಿಯಗೊಳಿಸುತ್ತದೆ. ಐಸಿಟಿ ಕಲಿಕೆಗೆ ಅಂತಹ ಒಂದು ವಿಧಾನವನ್ನು ಸುಲಭಗೊಳಿಸಲು, ಶಾಲೆಗಳಲ್ಲಿನ ತಂತ್ರಜ್ಞಾನದ ವಾತಾವರಣವು ಉಚಿತವಾಗಿರಬೇಕು ಮತ್ತು ಮುಕ್ತವಾಗಿರಬೇಕು. ಇಂತಹ ಉಚಿತ ಮತ್ತು ಮುಕ್ತ ಪ್ರವೇಶವನ್ನು ಸುಲಭಗೊಳಿಸಲು ಎಲ್ಲಿಯಾದರೂ ಲಭ್ಯವಿರುವ ಉಚಿತ ಮತ್ತು ಮುಕ್ತ ತಂತ್ರಜ್ಞಾನಗಳ ಬಳಕೆಯನ್ನು ಪಠ್ಯಕ್ರಮವು ಸೂಚಿಸಿದೆ. ಶಾಲೆಗಳಲ್ಲಿ ಬಳಸಲಾಗುವ ಶೈಕ್ಷಣಿಕ ವಿಷಯವು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತಮ್ಮದೇ ಆದ ಸಂದರ್ಭಗಳನ್ನು ಪ್ರತಿಬಿಂಬಿಸಲು, ವಿಷಯವನ್ನು ಮಾರ್ಪಡಿಸುವ ಮತ್ತು ಹೊಂದಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಈ ಪುಸ್ತಕದಲ್ಲಿ ಬಳಸಲಾದ ಎಲ್ಲಾ ಚಿತ್ರಗಳು, ನಿರ್ದಿಷ್ಟಪಡಿಸದಿದ್ದರೆ ಕ್ರಿಯೇಟಿವ್ ಕಾಮನ್ಸ್ ಅಡಿಯಲ್ಲಿ ಪರವಾನಗಿ ಪಡೆದಿವೆ ಅಥವಾ ಸಾರ್ವಜನಿಕ ಡೊಮೇನ್ನಲ್ಲಿ ಲಭ್ಯವಿದೆ. ಅವುಗಳಲ್ಲಿ ಹೆಚ್ಚಿನವುWikimedia commonsನಿಂದ ಪಡೆಯಲ್ಪಟ್ಟಿವೆ.

ಪಠ್ಯಪುಸ್ತಕವನ್ನು ಹೇಗೆ ರಚಿಸಲಾಗಿದೆ

ಎರಡು ಹಂತಗಳಲ್ಲಿ ರಾಷ್ಟ್ರೀಯ ಐಸಿಟಿ ಪಠ್ಯಕ್ರಮ ಮತ್ತು ಐಸಿಟಿ ನೀತಿಗಳಲ್ಲಿ ವಿವರಿಸಿರುವ ಸಾಮರ್ಥ್ಯಗಳನ್ನು ಮತ್ತು ಉದ್ದೇಶಗಳ ಸಾಧನೆಯನ್ನು ನಾವು ನಿರೀಕ್ಷಿಸಿದ್ದೇವೆ, 6 ರಿಂದ 8ನೇ ತರಗತಿಗಳು ಮತ್ತು 9 ರಿಂದ 10ನೇ ತರಗತಿಗಳನ್ನು ಒಳಗೊಂಡು ಮತ್ತು 5 ವರ್ಷಗಳವರೆಗಿನ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಿದೆ, ವಿದ್ಯಾರ್ಥಿ ಪಠ್ಯಕ್ರಮವನ್ನು ಲೆಕ್ಕಕ್ಕೆ ತೆಗೆದುಕೊಂಡಿದೆ ರಾಷ್ಟ್ರೀಯ ಐಸಿಟಿ ಪಠ್ಯಕ್ರಮದಲ್ಲಿ. ಇದು ಎರಡು ಪುಸ್ತಕಗಳ ಮೂಲಕ ತೋರಲ್ಪಡುತ್ತದೆ:

  1. ಪುಸ್ತಕ 1 - 6-8 ತರಗತಿಗಳನ್ನು ಪೂರೈಸಲು ಮೂರು ಹಂತಗಳನ್ನು ಹೊಂದಿರುತ್ತದೆ
  2. ಪುಸ್ತಕ 2 - ಇದು 9-10 ತರಗತಿಗಳನ್ನು ಪೂರೈಸಲು ಎರಡು ಹಂತಗಳನ್ನು ಹೊಂದಿರುತ್ತದೆ

ಕೆಳಗಿನ ವಿಷಯವಸ್ತುಗಳನ್ನು ಈ ಪಠ್ಯಕ್ರಮವನ್ನು ಬೆಂಬಲಿಸಲು ಸಿದ್ಧಪಡಿಸಲಾಗಿದೆ:

  1. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಐಸಿಟಿ ಕೌಶಲ್ಯ ಮತ್ತು ಯೋಜನೆ ಆಧಾರಿತ ಕಲಿಕೆಯ ವಿಧಾನವನ್ನು ಬಳಸಿಕೊಳ್ಳುವ ಅನ್ವಯಗಳನ್ನು ಪರಿಚಯಿಸುತ್ತದೆ, ವಿವಿಧ ಶಾಲಾ ವಿಷಯಗಳೊಂದಿಗೆ ಸಂಯೋಜಿತವಾಗಿದೆ. ಪಠ್ಯ ಪುಸ್ತಕದಲ್ಲಿ ಒಳಗೊಳ್ಳಬೇಕಾದ ಪ್ರಮುಖ ಸಾಮರ್ಥ್ಯಗಳು ಮತ್ತು ಕೌಶಲ್ಯಗಳನ್ನು ರಾಷ್ಟ್ರೀಯ ಐಸಿಟಿ ಪಠ್ಯಕ್ರಮ ಮತ್ತು ತೆಲಂಗಾಣ ರಾಜ್ಯ ಶೈಕ್ಷಣಿಕ ಮಾನದಂಡಗಳು ಮತ್ತು ವಿಷಯ ಪಠ್ಯ ಪುಸ್ತಕಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಪಠ್ಯ ಪುಸ್ತಕವು ಈ ಕಲಿಕೆಯ ಸಾಮರ್ಥ್ಯಗಳ ಸಾಧನೆಗೆ ಯೋಜನಾ ಆಧಾರಿತ ವಿಧಾನವನ್ನು ತೆಗೆದುಕೊಳ್ಳುತ್ತದೆ.
  2. ಶಿಕ್ಷಕರು ಮತ್ತು ಶಿಕ್ಷಕ ಬೋಧಕರಿಗೆ ಪಠ್ಯಕ್ರಮವನ್ನು ಅಳವಡಿಸಲು ಮತ್ತು ಎನ್‌.ಸಿ.ಇ.ಆರ್‌.ಟಿ.ಇ ಐಸಿಟಿ ಪಠ್ಯಕ್ರಮದ ಆಧಾರದ ಮೇಲೆ ಐಸಿಟಿ ಅನ್ವಯಗಳ ಕಲಿಕೆ ಮತ್ತು ತಮ್ಮ ಜ್ಞಾನವನ್ನು ಬೆಳಸಲು ಸಹಾಯ ಮಾಡಲು ಶಿಕ್ಷಕ ಕೈಪಿಡಿ.

ಈ ಕೈಪಿಡಿ ಐಸಿಟಿ ಪಠ್ಯಕ್ರಮದ ಬೋಧನೆಯನ್ನು ಸುಲಭಗೊಳಿಸುತ್ತದೆ ಮತ್ತು ಪಠ್ಯಕ್ರಮದ ಮತ್ತು ಸಹ-ಪಠ್ಯಕ್ರಮದ ಪ್ರದೇಶಗಳಿಗೆ ಅರ್ಥಪೂರ್ಣ ಸಂಪರ್ಕಗಳನ್ನು ಒದಗಿಸುತ್ತದೆ. ಐಸಿಟಿಯನ್ನು ಬಳಸುವಲ್ಲಿ ಶಿಕ್ಷಕರು ತಮ್ಮ ಸ್ವಂತ ಸಾಮರ್ಥ್ಯಗಳನ್ನು ನಿರ್ಮಿಸಲು ಶಿಕ್ಷಕ ಕೈಪಿಡಿ ಸಹ ಒಂದು ಅಂಶವನ್ನು ಹೊಂದಿರುತ್ತದೆ. ಈ ಎರಡಕ್ಕೂ ಹೆಚ್ಚುವರಿಯಾಗಿ, ಪಠ್ಯಪುಸ್ತಕದಲ್ಲಿ ಬಳಸಿದ ತಂತ್ರಾಂಶದ ಅನ್ವಯಕಗಳನ್ನು ಬಳಸುವ ವೈಶಿಷ್ಟ್ಯಗಳು ಮತ್ತು ಪ್ರಕ್ರಿಯೆಗಳನ್ನು ಒದಗಿಸುವ ಕೈಪಿಡಿ ಇದೆ. ಇದು ಡಿಜಿಟಲ್ ಸ್ವರೂಪದಲ್ಲಿ ಲಭ್ಯವಿರುತ್ತದೆ; ಸೀಮಿತ ಮುದ್ರಿತ ಪ್ರತಿಗಳನ್ನು ಶಾಲೆಗಳಿಗೆ ಲಭ್ಯವಿರುತ್ತವೆ.

ಮುಕ್ತ ವಿಷಯ ಸೃಷ್ಟಿಗೆ ಗಮನ ಕೇಂದ್ರೀಕರಿಸುವ ಮೂಲಕ, ಶಿಕ್ಷಕ ಸಾಮರ್ಥ್ಯ ವೃದ್ಧಿ ಮತ್ತು ತಂತ್ರಜ್ಞಾನದ ಸಂಯೋಜನೆಯ ಮೂಲಕ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸುವುದು, ದೇಶಾದ್ಯಂತ ಶಾಲಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಏಕೀಕರಣದ ಪರಿಣಾಮಕಾರಿ ಮಾದರಿಯನ್ನು ಪ್ರದರ್ಶಿಸಬಹುದು. ಅಂತಹ ಒಂದು ವಿಧಾನವು ಸರ್ಕಾರದ ಶಾಲಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ನಾವು ನಂಬುತ್ತೇವೆ, ಅಂತಹ ಭಾರತೀಯರು 'ನ್ಯಾಯಸಮ್ಮತ ಗುಣಮಟ್ಟದ' ಶಿಕ್ಷಣದ ದೃಷ್ಟಿಕೋನವನ್ನು ಭಾರತೀಯರ ಶಿಕ್ಷಣ ಹಕ್ಕು ಕಾಯಿದೆಯಿಂದ ಅರಿತುಕೊಂಡಿದೆ.