ಚಿಗುರು-೬-ಆಡಿಯೊ ರೆಕಾರ್ಡಿಂಗ್ ಬೇಸಿಕ್ಸ್ - ಭಾಗ ೩
ಸಾರಾಂಶ
ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಿಗೆ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಆಡಿಯೋ ರೆಕಾರ್ಡಿಂಗ್ ಜೊತೆಗೆ, ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡಲು ಉತ್ತೇಜಿಸುವುದರಿಂದ ಕಿಶೋರಿಯರ ಅಭಿವ್ಯಕ್ತಿ ಕೌಶಲ್ಯವನ್ನು ಕೂಡ ಹೆಚ್ಚಿಸಬಹುದು.
ಮುಖ್ಯ ಫೆಸಿಲಿಟೇಟರ್: ಶ್ರೇಯಸ್
ಸಹಾಯಕ ಫೆಸಿಲಿಟೇಟರ್: ಕಾರ್ತಿಕ್, ಅಪರ್ಣ, ಅನುಷಾ
ಊಹೆಗಳು
1. ವಿವಿಧ ಹಬ್ಬಗಳಿಗೆ ಶಾಲೆಗೆ ರಜ ಇದ್ದ ಕಾರಣ ಗೈರು ಹಾಜರಿ ಜಾಸ್ತಿ ಇರಬಹುದು.
2. ಆಡಿಯೊ ರೆಕಾರ್ಡಿಂಗ್ ಮಾಡಿಸಬಹುದು ಅಂದುಕೊಳ್ಳಬಹುದು (ಅಥವ ಅದೇ ಥರದ ಚಟುವಟಿಕೆ)
3. ತೆಲುಗು ಭಾಷೆ ಮಾತನಾಡುವ ಕಿಶೋರಿಯರು ನಮ್ಮ ಬಗ್ಗೆ ಇರಿಸುಮುರುಸಾಗಿರಬಹುದು. (ಕಳೆದ ಮಾಡ್ಯೂಲ್ ನಲ್ಲಿ, ಅವರನ್ನು ರೆಕಾರ್ಡ್ ಮಾಡುವಂತೆ ನಾವೇ ಸೂಚಿಸಿದ್ದೆವು)
4. ದಿನೇ ದಿನೇ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ.
5. ಸೂಕ್ಷ್ಮ ವಿಚಾರಗಳನ್ನೂ ಸಹ ಅವರೊಡನೆ ಮಾತನಾಡಬಹುದು.
ಉದ್ದೇಶ
ಆಡಿಯೊ ಬೇಸಿಕ್ಸ್ ಜೊತೆ ಜೊತೆಗೆ ಅದರ ಹಿಂದೆ ಕಲಿತ ವಿಷಯಗಳನ್ನು ಅರ್ಥಪೂರ್ಣವಾಗಿ ನೆನಪಿಸುವುದು
ಪ್ರಕ್ರಿಯೆ
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ಮಾತುಕಥೆಯನ್ನು ಶುರು ಮಾಡುವುದು.
ಕಟ್ಟುಪಾಡುಗಳನ್ನು ಇದಾದ ನಂತರ ನಾವೇ ನೆನಪಿಸುವುದು. (೧೦ ನಿಮಿಷ)
ಹಿಂದಿನ ವಾರದ ಚಟುವಟಿಕೆಗಳನ್ನು ಮರಿಕಳಿಕೆ ಮಾಡಿಕೊಳ್ಳುವುದು. ಆಡಿಯೋ ರೆಕಾರ್ಡಿಂಗ್‌ನ ಬೇಸಿಕ್‌ಗಳನ್ನು ನೆನಪಿಸುವುದು.
ಇಬ್ಬರು ವಾಲಂಟಿಯರ್‌ಗಳನ್ನು ಕರೆದು ರೆಕಾರ್ಡಿಂಗ್‌ನ ಡೆಮೊ ಮಾಡಲು ಕೇಳಿಕೊಳ್ಳುವುದು. ಯಾರೂ ಮುಂದೆ ಬರದೆ ಇದ್ದ ಪಕ್ಷದಲ್ಲಿ, ಫೆಸಿಲಿಟೇಟರ್‌ಗಳೇ ಡೆಮೊ ಮಾಡಿ ತೋರಿಸುವುದು.
ಇಬ್ಬರಂತೆ ಕಿಶೋರಿಯರಲ್ಲಿ ಜೋಡಿಗಳನ್ನು ಮಾಡಿ ಅವರಲ್ಲಿ ಈಕೆಳಗಿನ ಪ್ರಶ್ನೆಗಳಿಗೆ ಸಂದರ್ಶನ ಮಾಡಲು ಹೇಳುವುದು.
ಕಿಶೋರಾವಸ್ಥೆ ಅಥವ ಟೀನೇಜ್ ಅಂತಂದ್ರೆ ಏನು? (ಆಡಿಯೊ ಸಂದರ್ಶನಗಳು)
ನಿನ್ನ ಹೆಸರು ಏನು? ಯಾವ ಸ್ಕೂಲು, ಎಷ್ಟನೆ ತರಗತಿ?
ಹೊಸ ಹೆಜ್ಜೆ ಹೊಸ ದಿಶೆ ಬಗ್ಗೆ ನಿಂಗೆ ಏನನ್ಸುತ್ತೆ?
ಕಿಶೋರಾವಸ್ಥೆ ಬೇಡ ಟೀನೇಜ್ ಅನ್ನೋಣ ಅಂತ ಅಂದ್ಕೊಂಡ್ವಲ್ಲ, ಏನು ಟೀನೇಜ್ ಅಂದ್ರೆ ನಿನ್ನ ಪ್ರಕಾರ?
ಟೀನೇಜ್ ನಲ್ಲಿ ಏನೇನಾಗುತ್ತೆ ಅಂತ ಗುಂಪಲ್ಲಿ ಕೂತ್ಕಂಡು ಮಾತಾಡ್ಕಂಡ್ವಲ್ಲ ಏನದು? ಯಾವ ವಿಷಯದ ಬಗ್ಗೆ?
ಈಗ ಬೇರೆ ಸ್ಕೂಲಲ್ಲಿ, ನಮ್ಮ ಥರಾನೆ ಇರೋ ಹುಡಿಗಿಯರಿಗೆ ನೀನು ಏನಾದ್ರು ಹೇಳಕ್ಕೆ ಇಷ್ಟ ಪಡ್ತೀಯ?
ಜೋಡಿಗಳ ೨ ಗುಂಪುಗಳನ್ನು ಮಾಡಿ ಪ್ರತಿ ಗುಂಪಿನ ಜೊತೆ ಇಬ್ಬರು ಫೆಸಿಲಿಟೇಟರ್‌ಗಳು ಇರುವಂತೆ ನೋಡಿಕೊಳ್ಳುವುದು. (೬೦ ನಿಮಿಷಗಳು)
ಎಲ್ಲರ ಸಂದರ್ಶನಗಳು ಮುಗಿದ ನಂತರ ತರಗತಿಗೆ ಬರುವುದು. ಕಿಶೋರಿಯರನ್ನು ಸಂದರ್ಶನದ ಬಗ್ಗೆ ಕೇಳುವುದು.
"ನಿಮ್ಮ ಕೈಗೆ ರೆಕಾರ್ಡರ್ ಕೊಟ್ಟೂ, ಮನೆಯವರನ್ನ ಸಂದರ್ಶನ ಮಾಡಿ ಅಂದ್ರೆ, ನೀವು ಯಾವ ವಿಷಯದ ಬಗ್ಗೆ ಮಾಡ್ತೀರ?” ಎಂದು ಕೇಳಿ ಅವರು ಹೇಳುವುದನ್ನು ಬರೆದುಕೊಳ್ಳುವುದು.
ಇದಾದ ನಂತರ ಮುಂದಿನ ವಾರಗಳಲ್ಲಿ ಇನ್ಣೂ ಬೇರೆ ಬೇರೆ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳೋಣ ಎಂದು ಮಾತುಕತೆಯನ್ನು ಮುಗಿಸುವುದು. (೧೦ ನಿಮಿಷಗಳು)
ಬೇಕಾದ ಸಂಪನ್ಮೂಲಗಳು
- ಕಂಪ್ಯೂಟರ್/ಲ್ಯಾಪ್‌ಟಾಪ್ - ೧
- ಸ್ಪೀಕರ್ - ೧
- ಪ್ರೊಜೆಕ್ಟರ್ - ೧
- ಕ್ಯಾಮೆರಾ - ೧
- ಆಡಿಯೋ ರೆಕಾರ್ಡರ್‌ಗಳು - ೪
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು
ಒಬ್ಬ ಮುಖ್ಯ ಫೆಸಿಲಿಟೇಟರ್, ಮೂರು ಸಹಾಯಕ ಫೆಸಿಲಿಟೇಟರ್‌ಗಳು
ಒಟ್ಟು ಸಮಯ
೮೦ ನಿಮಿಷ
ಇನ್‌ಪುಟ್‌ಗಳು
ಔಟ್‌ಪುಟ್‌ಗಳು
ಕಿಶೋರಿಯರ ಸಂದರ್ಶನಗಳು