ಮಾಡ್ಯೂಲ್‌-೨-ಕಂಪ್ಯೂಟರ್‌ ಸಾಕ್ಷರತೆಯ ಪರಿಚಯ -ಭಾಗ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಾರಾಂಶ

ಕಿಶೋರಿಯರಿಗೆ ನಮ್ಮ ಪರಿಚಯ ಆಗಿದ. ತಂತ್ರಜ್ಞಾನದ ಸುತ್ತಲಿರುವ ಕ್ಲಿಷ್ಟತೆಯನ್ನು ಹೋಗಲಾಡಿಸಿ, ಕಿಶೋರಿಯರು ಮೈಚಳಿ ಬಿಟ್ಟು ಕಂಪ್ಯೂಟರ್‌ ಅನ್ನು ಉಪಯೋಗಿಸುವಂತೆ ಮಾಡುವುದು ಈ ವಾರದ ಮಾತುಕತೆಯ ಉದ್ದೇಶ.

ಫೆಸಿಲಿಟೇಟರ್‌: ಅನುಷಾ, ಶ್ರೇಯಸ್‌

ಕೊ - ಫೆಸಿಲಿಟೇಟರ್‌ : ಕಾರ್ತಿಕ್

ಊಹೆಗಳು

  1. ಒಟ್ಟು ಕಿಶೋರಿಯ ಸಂಖ್ಯೆ ೩೬.
  2. ಕಿಶೋರಿಯರಿಗೆ ಕಂಪ್ಯೂಟರ್‌ನ ಬೇಸಿಕ್‌ ಜ್ಞಾನ ಇದೆ.
  3. ಹಿಂದಿನ ವಾರ ಕಿಶೋರಿಯರು ಮಾತುಕತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
  4. ಕಿಶೋರಿಯರಲ್ಲಿ  ಬೇರೆ ಬೇರೆ ಗುಂಪುಗಳು ಈಗಾಗಲೇ ಇವೆ.
  5. ಬೇಸ್‌ಲೈನ್‌ ಮಾಡಿರದಿರುವುದರಿಂದ ಅವರು ಯಾವ ಯಾವ ತಂತ್ರಜ್ಙಾನಗಳ ಬಳಕೆ ಮಾಡುತ್ತಾರೆ ಎಂದು ನಮಗೆ ತಿಳಿದಿಲ್ಲ.
  6. ಇದು ಡಿಜಿಟಲ್‌ ಸಾಕ್ಷರತೆಯ ಭಾಗವಾಗಿರುವುದರಿಂದ ಹೊಸ ಹೆಜ್ಜೆ ಹೊಸ ದಿಶೆಯ ಬೇರೆ ತರಗತಿಗಳನ್ನು ಯೋಜಿಸಿದಂತೆ ಇಲ್ಲಿ ಕಿಶೋರಾವಸ್ಥೆಯ ಅಂಶಗಳನ್ನು ಹೆಚ್ಚು ತರಲು ಸಾಧ್ಯವಾಗದಿರಬಹುದು.
  7. ನಮಗೆ ಸಿಗುವ ಒಟ್ಟು ತರಗತಿಗಳ ಸಂಖ್ಯೆ ೩-೪. ಆದ್ದರಿಂದ ನಾವು ಪರಸ್ಪರ ಪರಿಚಯಕ್ಕೆ ತುಂಬ ಸಮಯ ತೆಗೆದುಕೊಳ್ಳಲು ಆಗುವುದಿಲ್ಲ.
  8. ಕಡಿಮೆ ಸಂಖ್ಯೆಯ ತರಗತಿಗಳು ಸಿಗುವುದರಿಂದ ನೇರವಾಗಿ ಡಿಜಿಟಲ್‌ ತಂತ್ರಜ್ಞಾನದ ಬಗೆಗಿನ ಮಾತುಕತೆಯನ್ನು ಶುರುಮಾಡಬಹುದೇನೋ.
  9. ಇಂಗ್ಲಿಷ್‌ ಮಾಧ್ಯಮವಾದ್ದರಿಂದ ಕಿಶೋರಿಯರು ಇಂಗ್ಲಿಷ್‌ನಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ.ಕೆಲವು ಕಿಶೋರಿಯರಿಗೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಲು ಆಗದಿರುವುದರಿಂದ ಅವರ ಅಭಿವ್ಯಕ್ತಿಗೆ ತೊಂದರೆಯಾಗುತ್ತಿದೆ.
  10. ಒಬ್ಬ ಫೆಸಿಲಿಟೇಟರ್‌ ಇರಲ್ಲ.
  11. ನಮ್ಮ ಇಷ್ಟು ತರಗತಿಗಳಲ್ಲಿ ಇದೇ ಮೊದಲ ಬಾರಿಗೆ ಕಿಶೋರಿಯರು ಕಂಪ್ಯೂಟರ್‌ ಉಪಯೋಗಿಸುತ್ತಾರೆ.

ಉದ್ದೇಶ

1. ಕಂಪ್ಯೂಟರ್‌ನ ಬಗ್ಗೆ ಆಸಕ್ತರನ್ನಾಗಿಸುವುದು ಹಾಗು ಅದರ ಬಗೆಗಿನ ಮಾತುಕತೆಯನ್ನು ಶುರು ಮಾಡುವುದು.

2. ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿಧ್ಧಗೊಳಿಸುವುದು.

ಪ್ರಕ್ರಿಯೆ

ನಮಸ್ಕಾರ ಎಂದು ಹೇಳುತ್ತಾ ಮಾತುಕಥೆಯನ್ನು ಆರಂಭಿಸುತ್ತೇವೆ. ನಮ್ಮ ಪರಿಚಯವನ್ನು ಮತ್ತೊಮ್ಮೆ ಮಾಡಿಕೊಳ್ಳುತ್ತೇವೆ.

ಹಿಂದಿನ ವಾರದಲ್ಲಿ ಚರ್ಚಿಸಿದ ಕಟ್ಟುಪಾಡುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ. ಕಿಶೋರಿಯರು ಹೇಳದಿದ್ದರೆ ನಾವೇ ಜ್ಞಾಪಿಸುತ್ತೇವೆ. ೧೦ ನಿಮಿಷಗಳು

ಕಟ್ಟುಪಾಡುಗಳು

1. ಎಲ್ಲಾರು ಭಾಗವಹಿಸೋಣ.

2. ಒಬ್ಬರು ಮಾತನಾಡುವಾಗ, ಎಲ್ಲಾರೂ ಕೇಳಿಸಿಕೊಳ್ಳೋಣ.

3. ನಮಗೇನಾದರೂ ಮಾತನಾಡಬೇಕು ಎಂದು ಅನಿಸಿದರೆ, ಕೈ ಎತ್ತೋಣ.

4. ಪರಸ್ಪರ ಅಣಕ ಮಾಡುವುದು, ಗೇಲಿ ಮಾಡಿಕೊಳ್ಳುವುದು ಬೇಡ.

5. ನಾವು ನಿಮ್ಮ ಶಿಕ್ಷಕಕರಲ್ಲ. ನಾವೆಲ್ಲರೂ ಸಮಾನ ಅನ್ನುವುದನ್ನು ಮರೆಯುವುದಿಲ್ಲ.                                                                                      

ಇದಾದ ನಂತರ ಲ್ಯಾಬ್‌ಗೆ ಬರುತ್ತೇವೆ.

ಕಂಪ್ಯೂಟರ್‌ ಅಂದ್ರೆ ಏನಿರಬಹುದು ಎಂದು ಅನಿಸುತ್ತೆ ಎಂದು ಕೇಳುತ್ತೇವೆ.

ಅವರಿಗೆ ಈಗಾಗಲೇ ಕಂಪ್ಯೂಟರ್‌ನ ಪರಿಚಯ ಇರುವುದರಿಂದ ಅವರು ಕಂಪ್ಯೂಟರ್‌ ಬಗ್ಗೆ ಹೇಳಬಹುದು.

ಅವರು ಏನೂ ಹೇಳಲ್ಲ ಅಂದರೆ ನಾವೇ ಅವರಿಗೆ ಕಂಪ್ಯೂಟರ್‌ ಅಂದ್ರೆ ಬರೀ ಒಂದು ಮಷಿನ್‌ ಎಂದು ಹೇಳುತ್ತೇವೆ.

ನಿಮಗೆ ಕಂಪ್ಯಟರ್‌ ಈಗ ಹೇಗಿದೆ ಅಂತ  ನೋಡಿದೀರ ಅಲ್ವ ಆದರೆ ಅದು ಮೊದಲು ಹೇಗಿತ್ತು ಅಂತ ನೋಡೋಣ ಎಂದು ಕಂಪ್ಯೂಟರ್‌ನ ವಿಕಾಸದ ಬಗ್ಗೆ ಪ್ರೆಸೆಂಟೇಶನ್‌ ತೋರಿಸುವುದು.     

ಕಂಪ್ಯೂಟರ್‌ನ ವಿಕಾಸದ ಬಗ್ಗೆ ಪ್ರೆಸೆಂಟೇಶನ್‌  ೧೦ ನಿಮಿಷ

ಕಿಶೋರಿಯರಿಗೆ ಬೇರೆ ಬೇರೆ ಬಣ್ಣದ ಸ್ಟಿಕರ್‌ಗಳನ್ನು ಕೊಟ್ಟು ೩ ಗುಂಪುಗಳನ್ನು ಮಾಡುತ್ತೇವೆ. ಈ ಗುಂಪಿನಲ್ಲಿ  ಅವರಿಗೆ ನಿಮಗೆ ಕಂಪ್ಯೂಟರ್‌ನ ಉಪಯೋಗಿಸಿಕೊಂಡು ಏನು ಬೇಕಾದರೂ ಮಾಡಬಹುದು ಅಂದರೆ ಏನು ಮಾಡ್ತೀರಾ? ಎಂದು ಕೇಳಿ ಅವರು ಹೇಳುವುದನ್ನು ಬರೆದುಕೊಳ್ಳುತ್ತೇವೆ.        

ಇದರ ನಂತರ "ನೀವು ಯಾವ ರೀತಿ ಕಂಪ್ಯೂಟರ್‌ ಉಪಯೋಗಿಸಿಕೊಂಡು ಬೇರೆ ಬೇರೆ ಚಟುವಟಿಕೆಗಳನ್ನು ಮಾಡಬೇಕು ಅಂದಿದ್ದೀರೊ ಅದೇ ಥರ ನಿಮ್ಮ ಜೊತೆಗೆ ನಾವೂ ಕಂಪ್ಯೂಟರ್‌ ಹಾಗೂ ಇತರೆ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಈ ವರ್ಷ ಹಾಗೂ ಮುಂದಿನ ವರ್ಷಗಳಲ್ಲೂ ಬೇರೆ ಬೇರೆ ಚಟುವಟಿಕೆಗಳನ್ನು ಮಾಡೋಣ ಅಂದುಕೊಂಡಿದ್ದೇವೆ. ಮಾಡಬಹುದಾ? “ ಎಂದು ಕೇಳುತ್ತೇವೆ. ೧೫ ನಿಮಿಷ

ಇದರ ನಂತರ ಅವರನ್ನು ಕಂಪ್ಯೂಟರ್‌ ರೂಮಿಗೆ ಕರೆದುಕೊಂಡು ಹೋಗುತ್ತೇವೆ. ಅಲ್ಲಿ ಇಬ್ಬರಂತೆ ಒಂದು ಕಂಪ್ಯೂಟರ್‌ನಲ್ಲಿ ಕೂರಿಸುತ್ತೇವೆ.

ಕಂಪ್ಯೂಟರ್‌ನಲ್ಲಿ ಫೋಲ್ಡರ್‌  ಹೇಗೆ ಮಾಡುವುದು. Libre Officeನಲ್ಲಿ ಸೇವ್‌ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ.

ಇದಾದ ನಂತರ ಹೀಗೆಯೇ ಮುಂದಿನ ವಾರಗಳಲ್ಲೂ ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಎಂದು ಮಾತುಕತೆಯನ್ನು ಮುಗಿಸುತ್ತೇವೆ. ೪೫ ನಿಮಿಷ

ಬೇಕಾದ ಸಂಪನ್ಮೂಲಗಳು

ಕಂಪ್ಯೂಟರ್‌ ಇರುವ ಲ್ಯಾಬ್‌

ಲ್ಯಾಪ್‌ಟಾಪ್‌

ಪ್ರೊಜೆಕ್ಟರ್‌

spike buster

ಕ್ಯಾಮೆರಾ

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩

ಒಬ್ಬ ಮುಖ್ಯ ಫೆಸಿಲಿಟೇಟರ್‌, ೨ ಸಹಾಯಕ ಫೆಸಿಲಿಟೇಟರ್‌ಗಳು

ಒಟ್ಟು ಸಮಯ

೮೦ ನಿಮಿಷಗಳು

ಇನ್‌ಪುಟ್‌ಗಳು

ಕಂಪ್ಯೂಟರ್‌ ವಿಕಾಸದ ಬಗೆಗಿನ ಪ್ರೆಸೆಂಟೇಶನ್‌

ಔಟ್‌ಪುಟ್‌ಗಳು

ಕಿಶೋರಿಯರು ಹೇಳಿದ ಅಂಶಗಳು