ಮಗ್ಗದ ಸಾಹೇಬ ಚಟುವಟಿಕೆ ೨ ಚಿತ್ರವನ್ನು ನೋಡಿ ಹಬ್ಬಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೯:೪೨, ೧೧ ಆಗಸ್ಟ್ ೨೦೨೦ ರಂತೆ Kishor (ಚರ್ಚೆ | ಕಾಣಿಕೆಗಳು) ಇವರಿಂದ (removed Category:೮ನೇ ತರಗತಿ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಿತ್ರವನ್ನು ನೋಡಿ ಹಬ್ಬಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ

ಈ ಚಟುವಟಿಕೆಯಲ್ಲಿ ಪ್ರಸಿದ್ದ ಹಬ್ಬಗಳನ್ನು ಬಿಂಬಿಸುವ ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ.

ಕಲಿಕೋದ್ದೇಶಗಳು

  1. ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ
  2. ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ

ವಿಷಯ ಉದ್ದೇಶಗಳು

  1. ಪ್ರಸಿದ್ದ ಹಬ್ಬದ ಮಹತ್ವವನ್ನು ತಿಳಿಯುವರು
  2. ಪ್ರಸಿದ್ದ ಹಬ್ಬಗಳ ವೈವಿಧ್ಯತೆಯನ್ನು ಮೆಚ್ಚುವರು
  3. ಪ್ರಸಿದ್ದ ಹಬ್ಬಗಳ ಸಂಭ್ರಮವನ್ನು ಅರಿಯುವರು

ಕೌಶಲ್ಯ ಉದ್ದೇಶಗಳು

  1. ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
  2. ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವರು ಮತ್ತು ಅರ್ಥೈಸುವುದು
  3. ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
  4. ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.

ತರಗತಿ ಉದ್ದೇಶಗಳು

  1. ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
  2. ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು

ಉದ್ದೇಶಿತ ಸಮಯ

15 ನಿಮಿಷಗಳು

ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ

ತರಗತಿಯ ಆರಂಭಕ್ಕೂ ಮೊದಲು ಪ್ರಸಿದ್ದ ಹಬ್ಬಗಳ ಹಿನ್ನೆಲೆ ಅಗತ್ಯ ಮತ್ತು ಮಹತ್ವವನ್ನು ತಿಳಿದುಕೊಂಡು ಬರಲು ತಿಳಿಸಿದರೆ ಮಕ್ಕಳ ಪೂರ್ವ ಜ್ಞಾನಶಕ್ತಿಗೆ ಪುಷ್ಟಿನೀಡಿದಂತಾಗಿ ಕಲಿಕೆಯು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ

ಅಗತ್ಯ ಸಂಪನ್ಮೂಲಗಳು

ಪ್ರೊಜೆಕ್ಟರ್‌, ಪ್ರಸಿದ್ದ ಹಬ್ಬಗಳ ಚಿತ್ರಗಳು (H5P)

ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)

ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ಆರರಿಂದ ಹತ್ತು ಮುಶೈಸಂ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳುವುದು

H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಸ್ತುತಿ ವಿಭಾಗದಲ್ಲಿ ಸೇರಿಸುವುದು. ಇಲ್ಲಿ ಧ್ವನಿ, ಸೇರಸಲೂ ಸಹ ಅವಕಾಶವಿರುವುದರಿಂದ ಶಿಕ್ಷಕರ ಸೃಜನಶೀಲತೆಯ ಆಧಾರದ ಮೇಲೆ ಸಂಪನ್ಮೂಲವನ್ನು ಆಧರಿಸಿ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ.

ಎಚ್‌ಫೈವ್‌ ಪಿ - ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಕಟಿಸಿರುವ ವಿವಿಧ ಹಬ್ಬಗಳ ಚಿತ್ರವನ್ನು ಬಳಸಿ ಮಕ್ಕಳಿಗೆ ನಿರ್ದಿಷ್ಟ ಹಬ್ಬವನ್ನು ಗುರುತಿಸಲು ತಿಳಿಸುವುದು. ಗುರುತಿಸಲು ಸಾಧ್ಯವಾಗದಿದ್ದರೆ ಹಬ್ಬದ ಹೆಸರಿನ ಮುದ್ರಣವಾದ ಧ್ವನಿಯನ್ನು ಕೇಳಿಸುವುದು. ತಂಡದಿಂದ ಹೇಳಿದ ಮಗು ಅಥವ ಯಾರಾದರೊಬ್ಬರು ಆ ಹಬ್ಬದ ಮಹತ್ವವನ್ನು ತಿಳಿಸಬೇಕು.

ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?

ಪ್ರಸಿದ್ದ ಹಬ್ಬಗಳನ್ನು ಪ್ರತಿಬಿಂಬಿಸುವ ಆರು ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ - ಪ್ರತಿ ತಂಡಕ್ಕೂ ಪ್ರತ್ಯೇಕವಾಗಿ ಪ್ರದರ್ಶಿಸುವುದು

ಮಕ್ಕಳಿಗೆ ಪ್ರತಿಯೊಂದು ಚಿತ್ರವನ್ನು ಪ್ರದರ್ಶಿಸಿ ಅದರ ವಿವರಣೆಯನ್ನು ಮಕ್ಕಳು ಮತ್ತು ಶಿಕ್ಷಕರು ತಿಳಿಸುತ್ತಾರೆ.

ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ.

ಮೊದಲು ಚಿತ್ರಗಳನ್ನು ತಂಡದಿಂದ ಒಬ್ಬರು ವೀಕ್ಷಿಸುತ್ತಾರೆ. ನಂತರ ಉಳಿದವರ ಜೊತೆ ಚರ್ಚಿಸಿ ತರಗತಿಯ ಜೊತೆ ಪ್ರಸ್ತುತಪಡಿಸುತ್ತಾರೆ. ಪ್ರತಿ ಚಿತ್ರವೂ ಸಾಧ್ಯವಾದಷ್ಟು ಮಕ್ಕಳು ಗುರುತಿಸುವ ಮಟ್ಟದಲ್ಲಿದ್ದು ಹಬ್ಬದ ಆಚರಣೆಯ ಕಾರಣ, ಹಿನ್ನೆಲೆ, ಮಹತ್ವ, ಮತ್ತು ಅವರವರ ಮನೆಯಲ್ಲಿ ಆಚರಿಸುವ ಬಗೆಯನ್ನು ಮಕ್ಕಳು ತಿಳಿಸುತ್ತಾರೆ ಮತ್ತು ಉಳಿದವರು ತಿಳಿದುಕೊಳ್ಳುತ್ತಾರೆ.

ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು

  1. ನಿಮ್ಮ ಮನೆಯಲ್ಲಿ ಆಚರಿಸುವ ಮತ್ತು ವಿಶೇಷವಾಗಿ ನಿಮ್ಮ ಮನೆತನದವರು ಮಾತ್ರ ಮಾಡುವ ವಿಶೇಷ ಹಬ್ಬ ಯಾವುದು?
  2. ಹಬ್ಬಗಳು ನಮಗೆ ಬೇಕು. ಯಾಕೆ? ಚರ್ಚಿಸಿ
  3. ನಿಮಗೆ ಇಷ್ಟವಾದ ಯಾವುದಾದರೊಂದು ಹಬ್ಬದ ತಯಾರಿಯನ್ನು ತಿಳಿಸಿ

ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?

  1. ನೀವು ಬಂದು ಗುಡಿ ಕೈಗಾರಿಕೆಯನ್ನು ಆಯ್ಕೆಮಾಡಿಕೊಳ್ಳಲು ತಿಳಿಸಿದರೆ ಯಾವ ಗುಡಿ ಕೈಗಾರಿಕೆಯನ್ನು ಆಯ್ಕೆ ಮಾಡಿಕೊಳ್ಳುವಿರಿ? ಏಕೆ ?