ಚತುರ್ಭುಜದ ಕೋನಗಳ ಮೊತ್ತದ ಗುಣಲಕ್ಷಣ
ಕರ-ನಿರತ ಚಟುವಟಿಕೆಯಿಂದ ಚತುರ್ಭುಜದ ಕೋನಗಳನ್ನು ಪರಸ್ಪರ ಪಕ್ಕದಲ್ಲಿ ಇರಿಸುವ ಮೂಲಕ ಚತುರ್ಭುಜಗಳ ಕೋನಗಳ ಮೊತ್ತವನ್ನು ತೋರಿಸಲಾಗುತ್ತಿದೆ.
ಕಲಿಕೆಯ ಉದ್ದೇಶಗಳು:
ಚತುರ್ಭುಜದ ಒಳ ಕೋನಗಳ ಮೊತ್ತವು 360 ಡಿಗ್ರಿ ಇರುತ್ತದೆ ಎಂದು ಅರ್ಥಮಾಡಿಕೊಳ್ಳಲು
ಅಂದಾಜು ಸಮಯ
4೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಬಣ್ಣದ ಪೇಪರ್ಗಳು, ಅಳತೆಪಟ್ಟಿ, ಕೋನಮಾಪಕ, ಪೆನ್ಸಿಲ್ ಮತ್ತು ಕತ್ತರಿ.
ಈ ಚಟುವಟಿಕೆಯನ್ನು ವೆಬ್ಸೈಟ್ನಿಂದ ತೆಗೆದುಕೊಳ್ಳಲಾಗಿದೆ : http://mathematicsvillage.blogspot.in/search/label/Activity
insert image
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ವಿದ್ಯಾರ್ಥಿಗಳಿಗೆ ಚತುರ್ಭುಜಗಳನ್ನು ರಚಿಸಿರುವ ಜ್ಞಾನವಿರಬೇಕು.
- ಕೋನಗಳನ್ನು ಚಿತ್ರಿಸುವ ಮತ್ತು ಅಳೆಯುವ ಕೌಶಲ್ಯ ಅವರಿಗೆ ಇರಬೇಕು.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಬಣ್ಣ ದ ಚಾರ್ಟ್ ಕಾಗದದಲ್ಲಿ ಚತುರ್ಭುಜ ABCD ಯನ್ನು ಬರೆಯಿರಿ.
- ಅಂತಹ ನಾಲ್ಕು ಚತುರ್ಭುಜಗಳನ್ನು ನಾಲ್ಕು ವಿಭಿನ್ನ ಹಾಳೆಗಳಲ್ಲಿ ಕತ್ತರಿಸಿ.
- ಚಿತ್ರಗಳಲ್ಲಿ ತೋರಿಸಿರುವಂತೆ ಪ್ರತಿ ಚತುರ್ಭುಜದ ಮೇಲೆ <A ಅನ್ನು <1, <B ಅನ್ನು <2, <C ಅನ್ನು <3 ಮತ್ತು <D ಎಂದು <4 ಎಂದು ಗುರುತಿಸಿ.
- ಒಂದು ಬಿಂದುವಿನಲ್ಲಿ ಪ್ರತಿಯೊಂದು ಬಣ್ಣದಿಂದ ಚತುರ್ಭುಜದ ನಾಲ್ಕು ಕೋನಗಳನ್ನು ಜೋಡಿಸಿ.
- ನೀವು ಏನು ಗಮನಿಸುತ್ತೀರಿ?
- ಇದು ಸಂಪೂರ್ಣ ಕೋನವನ್ನು ರೂಪಿಸುತ್ತದೆ, ಅಂದರೆ 360 ಡಿಗ್ರಿ.
- ಚತುರ್ಭುಜದ ಎಲ್ಲಾ ಕೋನಗಳ ಮೊತ್ತವು 360 ಡಿಗ್ರಿ ಎಂದು ಇದು ತೋರಿಸುತ್ತದೆ.
ಅಭಿವೃದ್ಧಿ ಪ್ರಶ್ನೆಗಳು:
- ಚತುರ್ಭುಜ ಎಂದರೇನು?
- ಚತುರ್ಭುಜವು ಎಷ್ಟು ಕೋನಗಳನ್ನು ಹೊಂದಿದೆ?
- ನಿಮ್ಮ ಶೋಧನೆಯ ಪ್ರಕಾರ ಚತುರ್ಭುಜದ 4 ಕೋನಗಳ ಮೊತ್ತ ಎಷ್ಟು?
ಮೌಲ್ಯ ನಿರ್ಣಯ ಪ್ರಶ್ನೆಗಳು
- ಚತುರ್ಭುಜದ ಅಭಿಮುಖ ಕೋನಗಳ ಮೊತ್ತ ಎಷ್ಟು?
ಪ್ರಶ್ನೆ ಕಾರ್ನರ್:
- ಚತುರ್ಭುಜದಲ್ಲಿ ನಾಲ್ಕು ಕೋನಗಳ ಬಗ್ಗೆ ನೀವು ಏನು ಹೇಳಬಹುದು? ಚತುರ್ಭುಜಕ್ಕೆ ಉದಾಹರಣೆ ನೀಡಿ.
- ಕಾನ್ಕೇವ್ ಚತುರ್ಭುಜಗಳ ಸಂದರ್ಭದಲ್ಲಿ ಈ ಲಕ್ಷಣವನ್ನು ನಿರೂಪಿಸಲು ಪ್ರಯತ್ನಿಸಿ.