ಚತುರ್ಭುಜದ ಆಂತರಿಕ ಕೋನಗಳ ಮೊತ್ತ
ಯಾವುದೇ ಚತುರ್ಭುಜದಲ್ಲಿನ ಕೋನಗಳ ಅಳತೆಗಳ ಮೊತ್ತ 4 ಲಂಬ ಕೋನಗಳಾಗಿರುತ್ತದೆ.
ಕಲಿಕೆಯ ಉದ್ದೇಶಗಳು:
ಯಾವುದೇ ಚತುರ್ಭುಜದ ಆಂತರಿಕ ಕೋನಗಳ ಮೊತ್ತ 360 ಡಿಗ್ರಿ ಎಂದು ಸ್ಥಾಪಿಸಲು
ಅಂದಾಜು ಸಮಯ
4೦ ನಿಮಿಷಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳು,ಛೇದಿಸುವ ರೇಖೆಗಳು, ಶೃಂಗಾಭಿಮುಖ ಕೋನಗಳು ಮತ್ತು ತ್ರಿಭುಜಗಳ ಗುಣಲಕ್ಷಣಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಚತುರ್ಭುಜದ ಜಿಯೋಜಿಬ್ರಾ ಚಿತ್ರದಲ್ಲಿ ಶೃಂಗಗಳಲ್ಲಿ ಬಾಹು ಮತ್ತು ಕೋನಗಳನ್ನು ಅಳೆಯಿರಿ
- ಚತುರ್ಭುಜದ ಈ ಕೋನಗಳ ಮೊತ್ತವನ್ನು ಲೆಕ್ಕಹಾಕಿ? ನಿಮ್ಮ ಅವಲೋಕನಗಳನ್ನು ಗಮನಿಸಿ
ಚತುರ್ಭುಜ | ಬಾಹು 1 | ಬಾಹು 2 | ಬಾಹು 3 | ಬಾಹು 4 | ಕೋನ 1 | ಕೋನ 2 | ಕೋನ 3 | ಕೋನ 4 | ಕೋನ 1+ಕೋನ 2+ ಕೋನ 3 + ಕೋನ 4 | ಮೊತ್ತದ ಬಗ್ಗೆ ನೀವು ಏನು ಗಮನಿಸುತ್ತೀರಿ |
1 | ||||||||||
2 | ||||||||||
3 |
- ಯಾವುದಾದರೂ ಒಂದು ಕರ್ಣವನ್ನು ಎಳೆಯಿರಿ. ನೀವು ಏನು ಗಮನಿಸುತ್ತೀರಿ? ಚತುರ್ಭುಜವನ್ನು ಯಾವುದನ್ನು ವಿಂಗಡಿಸಿದೆ? ಎಷ್ಟು ತ್ರಿಭುಜಗಳು ರೂಪುಗೊಳ್ಳುತ್ತವೆ?
- ಪ್ರತಿ ಚತುರ್ಭುಜದಲ್ಲಿನ ಕೋನಗಳ ಮೊತ್ತದ ಅಳತೆ ಏನು? ಹಾಗಾದರೆ ಚತುರ್ಭುಜದ ಎಲ್ಲಾ ಕೋನಗಳ ಅಳತೆ ಏನು?
- ವಿಭಿನ್ನ ಚತುರ್ಭುಜಗಳನ್ನು ಮಾಡಿ. ಅದನ್ನು ಎರಡು ತ್ರಿಭುಜಗಳಾಗಿ ವಿಂಗಡಿಸಿ, ಎರಡು ತ್ರಿಭುಜಗಳ ಕೋನಗಳನ್ನು ಅಳೆಯಿರಿ, ಅವುಗಳ ಮೊತ್ತವನ್ನು ಪರಿಶೀಲಿಸಿ.
- ಎರಡು ತ್ರಿಭುಜಗಳ ಕೋನಗಳನ್ನು ಪಟ್ಟಿ ಮಾಡಿ
ಅವಲೋಕನ | ತ್ರಿಭುಜ 1 | ತ್ರಿಭುಜ 2 | ಎರಡು ತ್ರಿಭುಜಗಳ ಕೋನಗಳ ಮೊತ್ತ | ||||||
ಕೋನ 1 | ಕೋನ 2 | ಕೋನ 3 | ಕೋನಗಳ ಮೊತ್ತ | ಕೋನ 1 | ಕೋನ 2 | ಕೋನ 3 | ಕೋನಗಳ ಮೊತ್ತ | ||
1 | |||||||||
2 | |||||||||
3 |
ಮೌಲ್ಯ ನಿರ್ಣಯ ಪ್ರಶ್ನೆಗಳು
- ಯಾವುದೇ ಚತುರ್ಭುಜದ ಕೋನಗಳ ಮೊತ್ತ 360 ಡಿಗ್ರಿ ಆಗಿರುತ್ತದೆಯೇ?