ಚಿಗುರು ೦೩ ನನ್‌ ನಮಸ್ಯೆ ನಮ್ಮೆಲ್ಲರ ಸಮಸ್ಯೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೭:೪೨, ೨೮ ಡಿಸೆಂಬರ್ ೨೦೨೧ ರಂತೆ Anusha (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ಉದ್ದೇಶ ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯಗಳು ಬರೀ ಒಬ್ಬರದ್ದೇ ಅಲ...)
Jump to navigation Jump to search

ಉದ್ದೇಶ ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯಗಳು ಬರೀ ಒಬ್ಬರದ್ದೇ ಅಲ್ಲ, ಎಲ್ಲರಿಗೂ ಇದೇ ತರಹದ ಸಮಸ್ಯೆಗಳಿವೆ ಎಂದು ತಿಳಿಸಿ, ಹದಿಹರೆಯದ ವ್ಯಾಖ್ಯಾನವನ್ನು ತಿಳಿಸುವುದು

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. ಹಿಂದಿನ ವಾರದಲ್ಲಿ ಮಾಡಿದ ಚಟುವಟಿಕೆಗಳನ್ನು ಜ್ಷಾಪಿಸುವುದು. (೫ ನಿಮಿಷ)

ಕಳೆದ ವಾರ ಕಿಶೋರಿಯರು ಬರೆದ ಸಮಸ್ಯಗಳ ಚಾರ್ಟ್‌ಗಳನ್ನು ಒಬ್ಬ ಫೆಸಿಲಿಟೇಟರ್‌ ತೋರಿಸುವುದು ಇವುಗಳನ್ನು ಎಲ್ಲ ಗುಂಪಿನಲ್ಲೂ ಬರೆದ ಸಾಮಾನ್ಯ ಅಂಶಗಳನದನು ಹೈಲೈಟ್‌ ಮಾಡಿರಲಾಗಿರುತ್ತದೆ. . ಇನ್ನೊಬ್ಬ ಫೆಸಿಲಿಟೇಟರ್‌ ಎಲ್ಲ ಗುಂಪಿನಲ್ಲೂ ಬರೆದ ಸಾಮನ್ಯ ಅಂಶಗಳನ್ನು ಗುರುತಿಸಿ ಬರೆದ ಚಾರ್ಟ್‌ ಅನ್ನು ತೋರಿಸುವುದು. ಕಿಶೋರಿಯರು ಒಬ್ಬೊಬ್ಬರೆ ಬಂದು ಒಂದೊಂದೂ ಸಮಸ್ಯೆಯನ್ನು ಎರಡೂ ಚಾರ್ಟ್‌ಗಳಿಂದ ಓದುತ್ತಾರೆ. (೨೦ ನಿಮಿಷ)

ಎಲ್ಲ ಅಂಶಗಳನ್ನು ಓದಿಯಾದ ನಂತರ, ಈ ಸಮಸ್ಯೆಗಳು ಎಲ್ಲರ ಗುಂಪುಗಳಲ್ಲಿ ಬಂದಿರುವ ಸಾಮಾನ್ಯ ಅಂಶಗಳು ಎನ್ನುವುದನ್ನು ಹೇಳುತ್ತಲೇ, ಈ ಸಮಸ್ಯೆಗಳು ಏಕೆ ಬಂದಿವೆ ಎನ್ನುವುದನ್ನು ಚರ್ಚಿಸುವುದು. ಪ್ರೈಮರಿ ಸ್ಕೂಲಲ್ಲಿ ಇವೇ ಸವಾಲಿತ್ತ? (ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರೋ ಕೆಲವು ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ)

ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳ ಸಂಖ್ಯೆ ಮತ್ತು ಸ್ವರೂಪ ಬೇರೆಯಾಗಿದೆ ಅನ್ನುವುದನ್ನು ಅರ್ಥಮಾಡಿಸಬೇಕು - ಇದು ಯಾಕೆ - ಅಂದ್ರೆ, ಹದಿಹರೆಯ ಅಥವ ಕಿಶೊರಾವಸ್ತೆಯಿಂದ - ಟೀನೇಜ್ ಅಂತಾನೂ ಅನ್ನಬಹುದು. ನೀವೆಲ್ಲರೂ ಕಿಶೊರಾವಸ್ತೆ ಇಲ್ಲ ಹದಿಹರೆಯ ಇಲ್ಲ ಟೀನೆಜ್ ನಲ್ಲಿರೋರು - ಹಿಂಗಂದ್ರೆ ಏನು ಅಂತ ಹೇಳ್ತೀರ? ಬಾಲ್ಯಾವಸ್ಥೆಯನ್ನು ಧಾಟಿ ಪ್ರೌಢಾವಸ್ಥೆಗೆ ಹೋಗೋ ಮುಂಚೆ ಬರುವ ಹಂತಾನೇ ಈ ಕಿಶೋರಾವಸ್ಥೆ ಎಂದು ಹೇಳುವುದು.

ನಿಮ್ಮ ಬಗ್ಗೆನೇ ನಿಮಗೆ ತಿಳ್ಕೊಳೋ ಇಂಟರೆಸ್ಟ್‌ ಇದ್ಯ? ಹದಿಹರೆಯ ಅತ್ವ ಟೀನೇಜ್ ಬಗ್ಗೆ ನಿಮ್ಗೆಲ್ಲಾ ಇನ್ನೂ ಮಜ ಮಜ ವಿಶ್ಯಗೊತ್ತಾಗುತ್ತೆ ಮುಂದಿನ್ ವಾರ, ಎಂದು ಮಾತುಕತೆಯನ್ನು ಮುಗಿಸುವುದು. (೧೫ ನಿಮಿಷ)

ಬೇಕಾಗಿರುವ ಸಂಪನ್ಮೂಲಗಳು ಸಮಸ್ಯೆಗಳನ್ನು ಬರೆದ ಚಾರ್ಟ್‌ಗಳು ಸಾಮಾನ್ಯ ಸಮಸ್ಯೆಗಳನ್ನು ಗುರುತಿಸಿ ಬರೆದ ಚಾರ್ಟ್‌ಗಳು ಕ್ಯಾಮೆರ ಬೇಕಾಗಿರುವ ಸಮಯ 45 ನಿಮಿಷಗಳು ಇನ್‌ಪುಟ್‌ಗಳು ಔಟ್‌ಪುಟ್‌ಗಳು