TIEE ಮುಖ್ಯ ಶಿಕ್ಷಕರ ಕಾರ್ಯಾಗಾರ 2023-24
ಬದಲಾವಣೆ ೧೪:೨೩, ೨೪ ಆಗಸ್ಟ್ ೨೦೨೩ ರಂತೆ Ashayogendra (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ಕಾರ್ಯಾಗಾರದ ಉದ್ದೇಶಗಳು * ಸರ್ಕಾರಿ ಶಾಲಾ ಮಖ್ಯ ಶಿಕ್ಷಕರಲ್ಲಿ ಶಾಲಾ ನಾಯಕತ...)
ಕಾರ್ಯಾಗಾರದ ಉದ್ದೇಶಗಳು
- ಸರ್ಕಾರಿ ಶಾಲಾ ಮಖ್ಯ ಶಿಕ್ಷಕರಲ್ಲಿ ಶಾಲಾ ನಾಯಕತ್ವದ ಪರಿಕಲ್ಪನೆ ಮತ್ತು ಪ್ರಕ್ರಿಯೆ ಕುರಿತಂತೆ ಸ್ಪಷ್ಟವಾದ ಅರ್ಥವನ್ನು ಮೂಡಿಸುವುದು.
- ಸರ್ವತೋಮುಖ ಶಾಲಾ ಬೆಳವಣಿಗೆಗೆ ಪೂರಕವಾಗಿರುವ ಪದ್ಧತಿಗಳನ್ನು ಬಲಪಡಿಸುವಲ್ಲಿ ಮತ್ತು ಬಳಸುವಲ್ಲಿ ಮುಖ್ಯಶಿಕ್ಷಕರುಗಳಿಗೆ ಸಹಾಯ ಮಾಡುವುದು
- ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ವಿವಿಧ ತಂತ್ರಾಂಶಗಳನ್ನು ಹಾಗು ಸಂಪನ್ಮೂಲಗಳನ್ನು ಅನ್ವೇಷಿಸುವುದರೊಂದಿಗೆ ಪಾಲುದಾರರೊಂದಿಗಿನ ಸಹಯೋಗ ಮತ್ತು ಸಂವಹನ ಬೆಳೆಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
- ತಮ್ಮ ಸಹುದ್ಯೋಗಿ ಶಿಕ್ಷಕರು ಟಿ.ಐ.ಇ.ಇ ಕಾರ್ಯಕ್ರಮದ ಮೂಲಕ ಸಮನ್ವಯ ಶಿಕ್ಷಣದ ವಿಧಾನಗಳನ್ನು ಬಳಸುವಂತೆ ಸಹಕರಿಸಲು ಮುಖ್ಯಶಿಕ್ಷಕರಿಗೆ ಅನುಕೂಲ ಒದಗಿಸುವುದು.
- ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕಾ ಸಮುದಾಯವನ್ನು ನಿರ್ಮಿಸಿ ಅದರ ಮೂಲಕ ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವುದು