ಆಕೃತಿಗಳೊಂದಿಗೆ ಆಟ
ನನ್ ಗೊಂಬೆ ಕಾಣ್ತಿಲ್ಲ
ತ್ರಿಭುಜ ಕುಟುಂಬದ ಎಲ್ಲಾ ಸದಸ್ಯರು ಒಂದು ಹಬ್ಬಕ್ಕೆ ಭೇಟಿಯಾಗಿದ್ದರು. ಸಮಬಾಹುಕರು, ಅಸಮಬಾಹುಕರು, ಸಮದ್ವಿಬಾಹುಕರೆಲ್ಲರೂ ಬಂದಿದ್ದರು. ಮಕ್ಕಳೆಲ್ಲಾ ಆಟವಾಡುತ್ತಿದ್ದರು. ಊಟಕ್ಕೆ ಸಮಯವಾಯಿತು.
ಅಜ್ಜಿ ತ್ರಿಭುಜ: ಮಕ್ಕಳೇ, ಎಲ್ಲರೂ ಊಟಕ್ಕೆ ಬನ್ನಿ! ನಿಮಗೆ ಇಷ್ಟವಾದ ಸ್ವೀಟ್ ಇದೆ!
ಎಲ್ಲಾ ಮಕ್ಕಳು ಉತ್ಸಾಹದಿಂದ ಊಟ ಮಾಡಲು ಹೋದರು. ಊಟ ಮುಗಿಸಿ ಬಂದ ಮೇಲೆ
ಮಗು_ ಛೋಟು : ಏನೋ ಹುಡುಕಾಡುತ್ತಿದ್ದಳು.
ತನ್ನ ಅಮ್ಮನ ಬಳಿ ಹೋಗಿ ಕೇಳಿದಳು, ಅಮ್ಮ ನಾನು ಮನೆಯಿಂದ ತಂದಿದ್ದ ಗೊಂಬೆ ಸಿಗುತ್ತಿಲ್ಲ, ಹುಡುಕಿ ಕೊಡ್ತೀಯಾ?”
ಅಮ್ಮ: “ನಂಗೆ ಈಗ ತುಂಬಾ ಕೆಲ್ಸ ಇದೆ, ಇವಾಗ್ ಅಗಲ್ಲ. ಆವಾಗ್ಲೆ ನಾನು ಒಂದು ಮಗು ಹಿಡಿದಿದನ್ನು ನೋಡಿದೆ ಹೋಗಿ ಕೇಳು.
ಮಗು_ ಛೋಟು: ಇಲ್ಲಿ ತುಂಬಾ ಮಕ್ಳು ಇದ್ದಾರೆ ಯಾರತ್ರ ಕೇಳಲಿ ಅಮ್ಮ?
ಅಮ್ಮ: ನಂಗೆ ಅವಳ ಹೆಸರು ಗೊತ್ತಿಲ್ಲ.
ಮಗು_ ಛೋಟು: ಹೋಗ್ಲಿ ಅವಳು ಹೇಗ್ ಕಾಣ್ತಳೆ ಹೇಳಮ್ಮ , ನಾನು ಗೊಂಬೆ ಜೊತೆ ಆಟಾಡ್ಬೇಕು.
ಅಮ್ಮ: ನಾನು ಸರಿಯಾಗಿ ನೋಡಿಲ್ಲ ಛೋಟು. ಆದರೆ ಅವಳು 3 ಮೂಲೆ/ಬಿಂದುವನ್ನು 3 ಅಂಚು/ ಬಾಹುಗಳಿಂದ ಸೇರಿಸಿರುವುದನ್ನು ನೋಡಿದೆ ಹಾಗೆ ಆದರ 2 ಅಂಚು/ಬಾಹುಗಳು ಒಂದೇ ಸಮವಿರೊದನ್ನ ಗಮನಿಸಿದೆ. ಇಗಾ ನೀನು ಹೋಗಿ ಹುಡುಕೊ.
ಮಗು_ಛೋಟು : ಏಗಪ್ಪಾ ಹುಡುಕ್ಲಿ? ಈ ತರ ಇರೊರ್ನ ನಾನು ನೋಡೇ ಇಲ್ಲಾ.
(ಒಂದು ರೌಂಡ್ ತಿರುಗಿ ಬಂದು)
ಮಗು_ಛೋಟು : ಹೋ,ಹೋ , ಸಿಕ್ಬಿಟ್ರು, ಸಿಕ್ಬಿಟ್ರು. ಅವ್ರು ನಮ್ಮಮ್ಮ ಹೇಳಿರೊ ತರ 3 ಮೂಲೆ/ಚುಕ್ಕಿ/ಬಿಂದುವನ್ನು 3 ಅಂಚು/ ಬಾಹುಗಳಿಂದ ಸೇರಿಸಿರೊ ತರನೇ ಇದಾರೆ.
ಮಗು_ಛೋಟು: ಅಣ್ಣ ನಿನ್ನ ಅತ್ರ ನನ್ ಗೊಂಬೆ ಇದೆ ಅಂತ ನಮ್ಮಮ್ಮ ಹೇಳಿದ್ರು, ಪ್ಲೀಸ್ ನಂಗ್ ನನ್ ಗೊಂಬೆ ಕೊಡು.
ಅಸಮಬಾಹು ತ್ರಿಭುಜ: ಇನ್ನೆ ನ್ ಹೇಳಿದ್ರು ನಿಮ್ಮಮ್ಮ ನನ್ ಬಗ್ಗೆ ?
ಮಗು_ಛೋಟು : ನಿಮ್ಗೆ 3 ಅಂಚು/ಬಾಹು, 3 ಮೂಲೆ /ಬಿಂದು ಇದ್ಯಂತೆ ಮತ್ತೇ ನಿಮ್ಗೆ 2 ಬಾಹು ಒಂದೇ ಸಮವಿದ್ಯಂತೆ.
ಅಸಮಬಾಹು ತ್ರಿಭುಜ: ಓ... ನನ್ನ ಹೆಸರು ಅಸಮಬಾಹು ತ್ರಿಭುಜ, ನಂಗೆ 3 ಬಾಹು 3 ಬಿಂದುಗಳೇನೊ ಇದವೆ, ಆದರೆ ನನ್ನ 3 ಬಾಹುಗಳು ಒಂದೇ ಅಳತೆ ಇಲ್ಲ ನೋಡು. ಎಲ್ಲಾ ಬೇರೆ ಬೇರೆ ಉದ್ದವಿವೆ. ನಿಮ್ಮಮ್ಮ ಹೇಳಿರೊದು ನಾನಲ್ಲ.
ಮಗು_ಛೋಟು : ಅಯ್ಯೋ !
ಅಸಮಬಾಹು ತ್ರಿಭುಜ: ಅವಳ್ನ ಅತ್ರ ಒಂದ್ ಸಲ ಕೇಳು. ಅವ್ಳೀಗೂ 3 ಬಾಹು 3 ಬಿಂದುಗಳು ಇವೆ.
ಮಗು_ಛೋಟು : ಹ. ಕೇಳ್ತೀನಿ.
ಮಗು_ಛೋಟು : ಅಕ್ಕ ನಿಮ್ಮ ಅತ್ರ ನನ್ ಗೊಂಬೆ ಇದ್ಯಾ..
ಸಮಬಾಹು ತ್ರಿಭುಜ : ಯಾವ್ ಗೊಂಬೆ? ನಂಗ್ ಗೊತ್ತಿಲ್ಲ.
ಮಗು_ಛೋಟು : ನೀವು 3 ಬಾಹುವಿನ ಮೂಲಕ 3 ಬಿಂದುಗಳನ್ನ ಸೇರಿಸಿದ್ದಿರಾ ಮತ್ತೇ ನಿಮ್ಮ 2 ಬಾಹುಗಳು ಒಂದೇ ಸಮ ಇದವೇ.
ಸಮಬಾಹು ತ್ರಿಭುಜ : ಹು, ಇವೆ. ಆದ್ರೆ ನನ್ನ ಹೆಸರು ಸಮಬಾಹು ತ್ರಿಭುಜ ಅಂತ. ನನ್ನಲ್ಲಿ ಬರೀ 2 ಬಾಹು ಮಾತ್ರ ಅಲ್ಲ 3 ಬಾಹುಗಳೂ ಒಂದೇ ಸಮ ಇವೆ. ನೋಡು ಎಲ್ಲಾ ಒಂದೇ ಉದ್ದವಿದೆ. ಆದ್ರೆ ನನ್ನ ಅತ್ರ ನಿನ್ ಗೊಂಬೆ ಇಲ್ಲ.
ಮಗು_ಛೋಟು : ಆಗದ್ರೆ ನನ್ ಗೊಂಬೆ ಏಲ್ಲಿದೆ ?
ಸಮಬಾಹು ತ್ರಿಭುಜ : ನೋಡು ಅವ್ನ ಅತ್ರನೂ 2 ಬಾಹುಗಳು ಸಮವಿದೆ. ಅವ್ನ ಹೆಸರು ಸಮದ್ವಿಬಾಹು ತ್ರಿಭುಜ.
ಮಗು_ಛೋಟು : ಆಯ್ತು ಕೇಳ್ತಿನಿ.
ಮಗು_ಛೋಟು : ಏನಣ್ಣ ಸಮದ್ವಿಬಾಹು ತ್ರಿಭುಜ, ನಿನ್ ಅತ್ರ ನನ್ ಗೊಂಬೆ ಇದ್ಯಾ?
ಸಮದ್ವಿಬಾಹು ತ್ರಿಭುಜ : ಹು ಇದೆ. ನಾನ್ ಇಷ್ಟೋತನ್ಕ ಅದ್ರಲ್ಲೆ ಆಟ ಆಡ್ತಿದ್ದೆ. ತಗೋ ಇಲ್ಲಿದೆ ನೋಡು ನಿನ್ ಗೊಂಬೆ.
ಮಗು_ಛೋಟು : ಓಹೋ, ಓಹೋ. ನನ್ ಗೊಂಬೆ ಸಿಕ್ತು. ನಾನು ಆಟ ಆಡೋಕೆ ಹೋಗ್ತಿನಿ. ಟಟಾ, ಬಾಯ್ ಬಾಯ್.
ಮಾರ್ಕೆಟ್ ನಲ್ಲಿ ಮಿಸ್ ಆದ ಆಯತ
ಮಗು ಆಯತ: ಅಯ್ಯೋ ಏಲ್ಲಿದಿನಿ ನಾನು! ನಮ್ಮಮ್ಮ ಏಲ್ಲಿ ಹೋದ್ರು ? (ಸಪ್ಪೆ ಮೋರೆ ಹಾಕಿ ಆಳುತ್ತಾ ನಿಂತ ಹುಡುಗಿ/ಹುಡುಗ).
ಮಗು_ಅಸಮಬಾಹು_ತ್ರಿಭುಜ: ಬಂದು ಆಳುತ್ತಿರುವ ಹುಡುಗಿ/ಹುಡುಗನನ್ನು ಹೋಯ್ ಯಾಕ್ ಆಳ್ತಿದ್ಯಾ? ನಿಮ್ಮಮ್ಮ ನೀನ್ ಕೆಳಿದ್ನಾ ಕೊಡುಸ್ಲಿಲ್ವಾ?
ಮಗು ಆಯತ: ಹೇ ಅಲ್ಲಾ ನಮ್ಮಮ್ಮ ಕಾಣುಸ್ತಿಲ್ಲಾ, (ಹೂಃಹೂಹೂ…….)
ಮಗು_ಅಸಮಬಾಹು_ತ್ರಿಭುಜ: ಹೌದಾ! ನಿಮ್ಮಮ್ಮ ನೋಡೊಕೆ ಹೇಗಿದ್ರು ?
ಮಗು ಆಯತ: ನಮ್ಮಮ್ಮ ನಿಮ್ಮನೆ ಬಾಗಿಲ್ ತರ ಇದ್ರು.
ಮಗು_ಅಸಮಬಾಹು_ತ್ರಿಭುಜ: ಏನು? ಉದ್ದೂಕ್ಕೆ, ಅಗ್ಲೂಕ್ಕೆ ಇದರಾ?
ಮಗು ಆಯತ:ಹೌದು, ಅದ್ರೂ ಜೋತೆ ೪ ಬಾಹು ೪ ಮೂಲೆಗಳಿದಾವೆ.
ಮಗು_ಅಸಮಬಾಹು_ತ್ರಿಭುಜ:ಮೂಲೆ ನಾ?ಹಾಗಂದ್ರೆ ? .
ಮಗು ಆಯತ:ನಿಂಗ್ ಗೊತ್ತಿಲ್ವ ಹಾಗಂದ್ರೆ?
ಮಗು_ಅಸಮಬಾಹು_ತ್ರಿಭುಜ: ಅದ್ಕೆ ತಾನೆ ಕೇಳಿದ್ದು.
ಮಗು ಆಯತ:ಬಾಗಿಲುನಲ್ಲಿರ್ವ ಅಂಚುಗಳು ಕೂಡಿರುವ ಜಾಗ ನೋಡಿದ್ಯಾ?
ಮಗು_ಅಸಮಬಾಹು_ತ್ರಿಭುಜ:ಹೂ …..
ಮಗು ಆಯತ:ಆದೇ ಮೂಲೆ.
ಮಗು_ಅಸಮಬಾಹು_ತ್ರಿಭುಜ:ಹೇ ನಾವು ಅದ್ನ ಚುಕ್ಕಿ/ ಬಿಂದು ಅಂತೀವಿ.
ಮಗು ಆಯತ:ಆಯ್ತ್ ಆಯ್ತ್. ಈಗ ನಮ್ಮಮ್ಮ ನ ಹುಡ್ಕಿ ಕೊಡು……..
ಮಗು_ಅಸಮಬಾಹು_ತ್ರಿಭುಜ: ಸರಿ ಇರು ಬಂದೆ. (ಒಂದು ರೌಂಡ್ ಹೋಗಿ ಬಂದು).
ಹೇ ಹೇ ಹೇ … ನಿಮ್ಮಮ್ಮ ಸಿಕ್ಕಿಬಿಟ್ರು .
ಮಗು ಆಯತ:ಏಲ್ಲಿ? ಏಲ್ಲಿ?
ಮಗು_ಅಸಮಬಾಹು_ತ್ರಿಭುಜ:ಈಗೋ ಇಲ್ಲಿ ?
ಮಗು_ಆಯತ : ಇವ್ರ್ ಅಲ್ಲ.
ಮಗು_ಅಸಮಬಾಹು_ತ್ರಿಭುಜ: ಹೇ ನೀನೆ ಹೇಳಿದ್ದು ತಾನೆ. ನಿಮ್ಮಮ್ಮ ೪ ಬಾಹು ಮತ್ತು ೪ ಬಿಂದು ಗಳ್ನ ಸೇರಿಸ್ಕೊಂಡಿರ್ತಾರೆ ಅಂತ.
ಮಗು_ಆಯತ : ಅದ್ರು ಜೊತೆ, ನಿಮ್ಮನೆ ಬಾಗಿಲ್ ತರ ಇರ್ತಾರೆ ಅಂತನೂ ಹೇಳಿದ್ದೆ ಅಲ್ವ ?
ಮಗು_ಅಸಮಬಾಹು_ತ್ರಿಭುಜ: ಹೌದು .
ಮಗು_ಆಯತ : ಆದ್ರೆ, ಇವ್ರು ನೀನ್ ಬಳಸುವ ಕರ್ಚೀಫ್ ತರ ಇದರೆ.
ಮಗು_ಅಸಮಬಾಹು_ತ್ರಿಭುಜ:ಯಾಕೆ?
ಮಗು_ಆಯತ : ನೀನೆ ಸರಿಯಾಗಿ ನೋಡು.
ಚೌಕ : ನಾನ್ ಹೇಳ್ದೇ ನಂಗ್ ಮಕ್ಳಿಲ್ಲ ಅಂತ ಆದ್ರೆ ,ಇವ್ನ್ ಕೇಳ್ಲಿಲ್ಲ , ಸುಮ್ನೆ ಎಳ್ಕೋಂಡು ಬಂದ.
ನಂಗೆ ೪ ಬಾಹು, ೪ ಮೂಲೆ ಇದವೆ. ಆದರೆ ಏಲ್ಲಾ ಸಮವಾಗಿವೆ. ಅವ್ರ್ಅಮ್ಮತರ ಬರಿ ಎದುರು-ಬದರು ಇರೊ ೨,೨ ಬಾಹುಗಳು ಮಾತ್ರ ಸಮವಿರಲ್ಲ. (ನಾನ್ ಹೋಗ್ತಿನಿ, ನನ್ ಸಮಯವೆಲ್ಲಾ ಆಳಾಯ್ತು.…)
ಮಗು_ಆಯತ : ನಮ್ಮಮ್ಮ ಏಲ್ಲಿ ? ನಮ್ಮಮ್ಮ ನನ್ ತರ ಇರ್ತಾರೆ, ಯಾರದ್ರು ನೋಡಿದ್ರೆ ಹೇಳಿ?
ಮಗು_ಸಮದ್ವಿಬಾಹು ತ್ರಿಭುಜ : ಏನಮ್ಮ ನಿಮ್ಮ ಅಮ್ಮ ಇವ್ರ ನೋಡು.(ತ್ರಾಪಿಜ್ಯ/ ಗಾಳಿಪಟ(ವಜ್ರಾಕೃತಿ) ವನ್ನು ತೋರಿಸುತ್ತಾ)
ಮಗು_ಆಯತ : ಅಯ್ಯೋ! ಇಲ್ಲ.
ತ್ರಾಪಿಜ್ಯ/ಗಾಳಿಪಟ: ನಾನು ೪ ಬಾಹು, ೪ ಬಿಂದುಗಳನ್ನ ಸೇರಿಸಿಕೊಂಡಿದ್ರೂ ನಾನು ಸ್ವಲ್ಪ, ಸೊಟ್ಟ-ಪಟ್ಟ ಇದೀನಿ.
ಮಗು_ಆಯತ : ಹು. ಗಾಳಿಪಟ ತರ.
ಗಾಳಿಪಟ: ಹೌದು ನನ್ನ ಹೆಸರು ಗಾಳಿಪಟ.
ಮಗು_ಆಯತ : ಅಮ್ಮ, ಏಲ್ಲಿದ್ಯಾ?
ಪಂಚಭುಜ ಕೃತಿ: ಹೇ ಹುಡುಗಿ, ನಿಮ್ಮಮ್ಮ ಇಲ್ಲವ್ರೆ ನೋಡು.
ಮಗು_ಆಯತ : ಅಮ್ಮ !(ಅಮ್ಮ ಮಗಳು ಅಪ್ಪಿಕೊಳ್ಳುತ್ತಾರೆ).
ಅಮ್ಮ: ಮಾರ್ಕೆಟ್ ನಲ್ಲಿ ನನ್ನಿಂದೆನೇ ಬರ್ಬೇಕು ತಾನೆ.
ಮಗು_ಆಯತ : ಸಾರೀ ಅಮ್ಮ.
ಅಮ್ಮ: ಓಕೆ ಬಾ.
ಮಗು_ಆಯತ : ನಿನ್ನ ಬಗ್ಗೆ ಇವ್ರಿಗೆಲ್ಲ ಹೇಳಮ್ಮ.
ಅಮ್ಮ : ನನ್ ಹೆಸರು ಆಯತ. ನಾನು ೪ ಬಾಹು, ೪ ಚುಕ್ಕಿ/ಬಿಂದು ಗಳ್ನ ಒಂದಿರ್ತೀನಿ.
ಮಗು_ಆಯತ : ಆದ್ರೆ, ನೀನ್ ಹೆಳ್ದಂಗೆ ಅವಾಗ್ಲೇ ಯಾರೋ ೪ ಬಾಹು ೪ ಬಿಂದು ಗಳ್ನ ಹೊಂದಿರೊ ಆಂಟೀ ಬಂದಿದ್ರು, ಆದ್ರೇ ಸ್ವಲ್ಪ ನೋಡುಕೆ ನಿಮ್ಮತರನೇ ಇದ್ರು, ಆದ್ರೇ ನೀವಗಿರ್ಲಿಲ್ಲ.
ಅಮ್ಮ : ಓಕೆ, ನಂಗೆ ಎದುರು ಇರೂ ಬಾಹು/ಭುಜಗಳು ಒಂದೇ ಸಮ ಇರ್ತವೆ. ಇಗೋ ನೋಡು ಇ ತರ. ಈ ಎರಡು ಬಾಹು ಒಂದು ಅಳತೆ ಮತ್ತು ಈ ಎರಡು ಬಾಹು ಮತ್ತೊಂದು ಅಳತೆ.(ಚಿತ್ರ ತೋರಿಸುತ್ತಾ) . ಅದ್ರೇ ಆ ಆಂಟೀಗೆ ಏಲ್ಲಾ ೪ ಬಾಹುಗಳು ಸಮವಾಗಿ ಇರ್ತಾವೆ. ಇಲ್ನೋಡು ಈ ತರ (ಚಿತ್ರ ತೋರಿಸುತ್ತಾ).
ಮಗು_ಆಯತ : ಸರಿ ಅಮ್ಮ. ನಿನ್ನ ಕರ್ಕೊಂಡು ಬಂದ ಆಂಕಲ್ ಯಾರು ?
ಪಂಚಭುಜ: ನಾವು ನಿಮ್ಮ ಕಡೆಯಾವ್ರೆ. ನನ್ ಹೆಸ್ರು ಪಂಚಭುಜೇಶ್ವರ ಅಂತ , ಯಾಕ್ ಗೊತ್ತ ನಾನು ೫ ಬಾಹು ಮತ್ತು ೫ ಬಿಂದುಗಳ್ನ ಸೇರಿಸಿಕೊಂಡಿರ್ತೀನಿ. ಇಲ್ನೋಡು ಈ ತರ(ಚಿತ್ರ ತೋರಿಸುತ್ತಾ).
(ಏಲ್ಲರೂ ಒಟ್ಟಿಗೆ ನಿಂತು ನಾವೆಲ್ಲ ಒಂದೇ ಬಳಗದವರು, ನಮ್ಮನ್ನ ಮುಚ್ಚಿದ(closed) ಆಕೃತಿಗಳು ಎನ್ನುತ್ತಾರೆ ಮತ್ತು ನಮಗೆ ಚೂಪಾದ ಬಾಹು/ ನೇರ ಬಾಹು/ ನೇರ ಅಂಚು ಮತ್ತು ಬಿಂದುಗಳನ್ನ ಸೇರಿಸಿಕೊಂಡು ಮೂಲೆಗಳನ್ನ ಒಳಗೊಂಡಿರೊದಕ್ಕೆ ನಮ್ಮದು ಬಹುಭುಜಾಕೃತಿ ಬಳಗ. )
ವೃತ್ತ: ಹೇ ನಾನು ಮುಚ್ಚಿದ ಆಕೃತಿನೇ? ನಂದು ನಿಮ್ಮ ಬಹುಭುಜಾಕೃತಿ ಬಳಗನೇ ತಾನೇ?
(ಏಲ್ಲರೂ ನಗುತ್ತಾ ..ನಿಂಗೆ ನೇರ ಬಾಹುವಿಲ್ಲ/ ಅಂಚಿಲ್ಲ, ಮೂಲೆಯಿಲ್ಲ ನೀನು ನಮ್ಮ ಬಳಗ ಅಲ್ಲ….ಅದ್ರೇ ನೀನು ನಮ್ಮ ಮುಚ್ಚಿದ ಆಕೃತಿಯಲ್ಲಿರುವ ಗೆಳಯ )
ಏಲ್ಲರೂ ಅಪ್ಪಿಕೊಂಡು ನಾವೆಲ್ಲಾ, ಮುಚ್ಚಿದ ಆಕೃತಿಗಳು.
ತೆರದ ಆಕೃತಿ : ನಾನು?
ಏಲ್ಲರೂ: ನಿಂದು ತೆರೆದ ಆಕೃತಿ ಬಳಗ. ಯಾಕಂದ್ರೆ? ನಿನ್ನ ಎಲ್ಲಾ ಬಾಹುಗಳು ಕೂಡಿಲ್ಲ.