ಮಾಡ್ಯೂಲ್ ೬ ಪುರುಷ ಪ್ರಧಾನತೆ ಭಾಗ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೨:೨೬, ೨೯ ಏಪ್ರಿಲ್ ೨೦೨೪ ರಂತೆ Anusha (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಉದ್ದೇಶ

  • ದಿನನಿತ್ಯದ ಜೀವನದಲ್ಲಿ ಗಂಡು ಮತ್ತು ಹೆಣ್ಣು ಯಾವ ಯಾವ ರೀತಿಯ ಕೆಲಸಗಳನ್ನು ನಿಭಾಯಿಸುತ್ತಾರೆ ಎಂದು ಅರ್ಥಮಾಡಿಸುವುದು
  • ಪುರುಷ ಪ್ರಧಾನತೆ ಶಬ್ದವನ್ನು ಪರಿಚಯ ಮಾಡಿಸುವುದು

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು 10 ನಿಮಿಷ

ಹಿಂದಿನ ವಾರ ಏನಾಗಿತ್ತು ಎಂದು ಕೇಳುವುದು. ಅವರು ಏನೂ ಹೇಳಿಲ್ಲ ಅಂದರೆ ನಾವೇ ಜ್ಷಾಪಿಸುವುದು.  ಹೇಳಿಲ್ಲ ಅಂದ್ರೆ ಅದೇ ಟೀನೇಜಲ್ಲಿ ಏನಾಗುತ್ತೆ ಅಂತ ಮಾತಾಡ್ಕೊಂಡ್ವಿ. ಇತ್ಯಾದಿಯಾಗಿ prompt ಮಾಡುವುದು

ಇದಾದ ನಂತರ ಪ್ರತಿಯೊಬ್ಬರಿಗೂ ಒಂದೊಂದು A4 ಹಾಳೆಯನ್ನು ಕೊಡುವುದು. ಈ ಹಾಳೆಯಲ್ಲಿ ಬೆಳಿಗ್ಗೆ ೬ ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವೆರೆಗೆ ಪ್ರತಿ ಗಂಟೆಯೂ ಮನೆಯ ಸದಸ್ಯರು ಏನು ಮಾಡುತ್ತಿರುತ್ತಾರೆ ಎಂದು ಬರೆಯಲು ಹೇಳುವುದು

ತಮ್ಮ ಕುಟುಂಬದಲ್ಲಿ ಇರುವ ಎಲ್ಲಾ ವ್ಯಕ್ತಿಗಳನ್ನು ಸೂಚಿಸುತ್ತ ಈ ಚಟುವಟಿಕೆ ಮಾಡಬೇಕು.

ಪ್ರತಿಯೊಬ್ಬ ವ್ಯಕ್ತಿಯೂ ಬೆಳಿಗ್ಗೆ ಏಳುವ ಸಮಯದಿಂದ ಮೊದಲುಗೊಂಡು ಮಧ್ಯಾಹ್ನದವರೆಗೆ ಮಾಡುವ

ಎಲ್ಲಾ ಚಟುವಟಿಕೆಗಳನ್ನು ಪಟ್ಟಿಮಾಡಲು ತಿಳಿಸುವುದು.

ಸಮಯ ಅಮ್ಮ ಅಪ್ಪ ಅಣ್ಣ / ತಮ್ಮ ಅಕ್ಕ / ತಂಗಿ ನಾನು
ಬೆಳಿಗೆ 5-6
6-7
7-8
8-9
9-10
10-11
11-12
ಮಧ್ಯಾಹ್ನ 12-1
1-2
2-3

ಪ್ರತಿಯೊಬ್ಬರೂ ಪಟ್ಟಿಮಾಡಿದ ಮೇಲೆ ಅವರು ಬರೆದಿರುವುದನ್ನು ಗಮನಿಸಲು ಹೇಳುವುದು.

ನೀವು ಈ ದಿನಚರಿಗಳನ್ನು ಬರೆದಾಗ ನಿಮ್ಮ ಗಮನಕ್ಕೆ ಬಂದ ಅಂಶಗಳೇನು? ಎಂದು ಪ್ರಶ್ನೆಯನ್ನು ಕೇಳುವುದು. ಪ್ರಾಂಪ್ಟ್‌ ಮಾಡಲು ಅಪ್ಪ ಏನ್‌ ಮಾಡ್ತ ಇದ್ರು, ಅಮ್ಮ ಏನ್ ಮಾಡ್ತಿದ್ರು. ಯಾರು ಹೊರಗಡೆ ಹೋಗ್ತಿದ್ರು, ಯಾರು ಮನೇನಲ್ಲಿದ್ರು. ನೀವೇನ್ಮಾಡ್ತಿದ್ರಿ ಎಂದು ಕೇಳುವುದು. ಯಾರ್ಯಾರು ಮಾಡೋದು ಸಿಮಿಲರ್‌ ಇತ್ತು, ಬೇರೆ ಬೇರೆ ಇತ್ತು  ಹೀಗೆ ಪ್ರಾಂಪ್ಟ್‌ ಮಾಡೋದು .  

ಎಲ್ಲರೂ ಹೇಳಾದ ನಂತರ, ನೀವು ಹೇಳ್ತಿರೋದನ್ನ ನೋಡಿದರೆ ಅಮ್ಮ ಒಂದು ರೀತಿಯ ಕೆಲಸ ಮಾಡ್ತಾರೆ, ಅಪ್ಪ ಒಂದು ರಿತಿಯ ಕೆಲಸ ಮಾಡ್ತಾರೆ. ಆದ್ರೆ ಅಪ್ಪ ಮಾಡೋ ಕೆಲಸ ಅಮ್ಮ ಮಾಡೋದು, ಅಮ್ಮ ಮಾಡೋ ಕೆಲಸ ಅಪ್ಪ ಮಾಡೋದು ಅಂತ ಬದಲಾಯಿಸಿಕೊಳ್ಳಬಹುದ? ಉದಾಹರಣೆಗೆ - ಅಪ್ಪ ಅಡಿಗೆ ಮಾಡೋದು, ನೆಲ ಒರೆಸಿ ರಂಗೋಲಿ ಹಾಕೋದು. ನಿಮ್ಮ ಅಣ್ಣ/ ತಮ್ಮನ ಬದಲು ನೀವು ಅಂಗಡಿಗೆ ಹೋಗೋದು?

ಇದನ್ನ ಕೇಳಿ ಕಿಶೋರಿಯರಿಗೆ ನಗು ಬರಬಹುದು ಅಥವ ಇದೆಲ್ಲ ಹೇಗೆ ಸಾಧ್ಯ ಅಂತ ಕೇಳಬಹುದು. ಮಹಿಳೆಯರಿಗೆ ಒಂದು ರೀತಿ ಕೆಲಸ ಇರುತ್ತೆ, ಗಂಡ್ಮಕ್ಳಿಗೇ ಒಂದು ರೀತಿಯ ಕೆಲಸ ಇರುತ್ತೆ ಅಂತಾನೂ ಹೇಳಬಹುದು.

ಅವರು ಏನು ಹೇಳುತ್ತಾರೆ ಅನ್ನುವ ಆಧಾರದ ಮೇಲೆ ಇದನ್ನ ಕೇಳಿದ್ರೇನೆ ನಮಗೆ ನಗು ಬರುತ್ತೆ. ಇದನ್ನ ಊಹಿಸಿಕೊಳ್ಳೋಕೂ ಆಗಲ್ಲ. ಈ ರೀತಿ ಪುರುಷರು ಈ ಕೆಲಸ ಮಾಡ್ಬೇಕು, ಮಹಿಳೆಯರು ಈ ಕೆಲಸಾನೇ ಮಾಡ್ಬೇಕು ಅಂತ ಸಮಾಜ ಹೇಳುತ್ತೆ.

ಆದ್ರೆ ನಾವು ಗಮನಿಸಿದ್ರೆ ಯಾರ್ಬೇಕಿದ್ರೂ ಯಾವ ಕೆಲಸ ಕೂಡ ಮಾಡಬಹುದಲ್ವ?  

ಹೌದೋ, ಇಲ್ವೋ .. ಹೌದು ಎಂದು ಜೋರಾಗಿ ಹೇಳಿಸೋದು.

ಈ ರೀತಿ ಹೆಣ್ಮಕ್ಳು ಈ ರೀತಿ ಇರಬೇಕು, ಈ ಕೆಲಸಾನೇ ಮಾಡ್ಬೇಕು, ಗಂಡ್ಮಕ್ಳು ಈ ರೀತಿ ಇರ್ಬೇಕು, ಈ ಕೆಲಸಾನೇ ಮಾಡ್ಬೇಕು ಅನ್ನೋ ವ್ಯವಸ್ತೆಗೆ ಒಂದು ಹೆಸರಿದೆ.

ಅದರ ಹೆಸರೇ ಪುರುಷಪ್ರಧಾನತೆ. ಏನು? ಪುರುಷಪ್ರಧಾನತೆ.

ಪುರುಷಪ್ರಧಾನತೆ ಎಂದು ಜೋರಾಗಿ ಹೇಳಿಸಿವುದು. ಬೊರ್ಡಿನ ಮೇಲೆ ಬರೆಯುವುದು.

ಪುರುಷಪ್ರಧಾನತೆ ಅಂದರೆ ಏನು, ಅದು ಯಾವ ಯಾವ ರೀತಿ ಇರುತ್ತೆ ಅಂತ ಮುಂದಿನ ವಾರಗಳಲ್ಲಿ ತಿಳ್ಕೊಳ್ಳೋಣ ಎಂದು ಮಾತುಕತೆಯನ್ನು ಮುಗಿಸುವುದು.  

ಒಟ್ಟೂ ಸಮಯ

೪೦ ನಿಮಿಷಗಳು

ಒಟ್ಟೂ ಫೆಸಿಲಿಟೇಟರ್‌ಗಳು: 2

ಬೇಕಾಗಿರುವ ಸಂಪನ್ಮೂಲಗಳು

  1. ಸಮಯವನ್ನು ಬರೆದ A4 ಹಾಳೆಗಳು
  2. ಕ್ಯಾಮೆರ

ಇನ್‌ಪುಟ್‌ಗಳು

ಔಟ್‌ಪುಟ್‌ಗಳು

ಕಿಶೋರಿಯರು ಬರೆದ ದಿನಚರಿ