MDRS ಮಾಡ್ಯೂಲ್ ೧ ಪರಿಚಯ
ಉದ್ದೇಶ
- ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯಮಾಡಿ, ಅದರಲ್ಲಿ ಒಂದು ವರ್ಷವಿಡೀ ಪ್ರತಿವಾರ ನಾವು ಜೊತೆಯಾಗಿ ಕಲಿಯುವ /ಕಲಿಸುವ ಅವಕಾಶದ ಬಗ್ಗೆ ಖುಶಿ ಮತ್ತು ಉತ್ಸಾಹ ಮೂಡುವಂತೆ ಮಾಡುವುದು.
ಪ್ರಕ್ರಿಯೆ
(ನಾವು ಅವರಿಗೆ ಕೊಡುವ ಸ್ಟೈಲ್ ಥೈಲಿ - ಸ್ಟಿಕ್ಕರ್, ಚಾಕ್ಲೇಟ್)
ಮೊದಲಿಗೆ ಫೆಸಿಲಿಟೇಟರ್ ತಮ್ಮ ಹೆಸರು ಇಷ್ಟವಾದ ತಿಂಡಿ ಹಾಗು ಫೆವರೆಟ್ ಹೀರೋ/ ಹೀರೋಯಿನ್ ಹೆಸರು ಹೇಳಿ ಪರಿಚಯ ಮಾಡಿಕೊಳ್ಳುವುದು. ಪ್ರತಿ ಕಿಶೋರಿಗೂ ಇದೇ ರೀತಿ ಪರಿಚಯ ಮಾಡಿಕೊಳ್ಳಲು ಹೇಳುವುದು .
(೧೦ ನಿಮಿಷ)
ಇದಾದ ನಂತರ 1,2,3,4 ಎಂದು 4 ಗುಂಪುಗಳನ್ನು ಮಾಡಿಕೊಳ್ಳುವುದು.
ಅನುಷಾ ಮೊದಲನೇ ಗುಂಪನ್ನು ಕರೆದುಕೊಂಡು ಪಕ್ಕದ ಕ್ಲಾಸ್‌ರೂಮಿಗೆ ಕರೆದುಕೊಂಡು ಹೋಗುತ್ತಾರೆ.
ಅಲ್ಲಿ ಒಂದೊಂದೇ ಕಿಶೋರಿಯನ್ನು ಕರೆದು ಈ ಕತೆಯ ಒಂದು ವಾಕ್ಯವನ್ನು ಓದಲು ಹೇಳುವುದು. ಓದಿದ್ದನ್ನು ಲ್ಯಾಪ್‌ಟಾಪಿನಲ್ಲಿ audio recorder ಮೂಲಕ ರೆಕಾರ್ಡ್ ಮಾಡಿಕೊಳ್ಳುವುದು.
ಈ ರೀತಿಯಾಗಿ ೪ ಗುಂಪುಗಳನ್ನು ಕರೆದು ರೆಕಾರ್ಡ್ ಮಾಡಿಕೊಳ್ಳಬೇಕು.
ಶ್ರೇಯಸ್ ರೆಕಾರ್ಡ್ ಆಗುತ್ತಿರುವಂತೆ extra takes ಗಳನ್ನು delete ಮಾಡಿಕೊಳ್ಳುವುದು
ಕಥೆ ಈ ರೀತಿಯಾಗಿದೆ.
ಕಥೆಯ ಲಿಂಕ್ ಇಲ್ಲಿದೆ
https://docs.google.com/spreadsheets/d/1ij8CnVVUhFihdTB4E0v35RRj71xX8sU0JYFxlIl8MpA/edit#gid=0
ಚಾಂದನಿ ಒಂದೊಂದೇ ಗುಂಪನ್ನು ರೆಕಾರ್ಡಿಂಗ್‌ಗೆ ಕರೆದುಕೊಂಡು ಬರುವುದು.
ಈ ಸಮಯದಲ್ಲಿ ಕಾರ್ತಿಕ್ ಡೈನಿಂಗ್ ಹಾಲಿನಲ್ಲಿ ಮಿಕ್ಕಿದ ಗುಂಪುಗಳಿಗೆ picture story activity ಯನ್ನು ಮಾಡಿಸುವುದು. ಇದರಲ್ಲಿ ಪ್ರತಿ ಗುಂಪಿಗೂ ೫ ಚಿತ್ರಗಳನ್ನು ಕೊಟ್ಟು ಅದರಿಂದ ಕಥೆಯನ್ನು ಕಟ್ಟಲು ಹೇಳುವುದು. ಕಟ್ಟಿದ ಕಥೆಯನ್ನು ಚಾರ್ಟ್‌ಶೀಟಿನಲ್ಲಿ ಬರೆಯುವುದು. ೩೦ ನಿಮಿಷ
ಶ್ರೇಯಸ್ ಸೆಶನ್ ಶುರುವಾಗುವುದಕ್ಕೆ ಮುಂಚೆಯೇ ಈ ಕೆಳಗಿನ ವಾಕ್ಯವನ್ನು ರೆಕಾರ್ಡ್ ಮಾಡಿ, ಸಿಗ್ನೇಚರ್ ಮ್ಯೂಸಿಕ್ ಹಾಕಿ audacity ಪ್ರೊಜೆಕ್ಟ್ ಫೈಲ್ ಅನ್ನು ರೆಡಿಯಾಗಿಟ್ಟುಕೊಳ್ಳಬೇಕು.
“ಎಲ್ಲರಿಗೂ ಹಾಯ್, ಈ ಕಥೆಯನ್ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಂಟು ಮತ್ತು ಒಂಬತ್ತನೇ ತರಗತಿಯ ಹೆಣ್ಣುಮಕ್ಕಳು ಹೇಳಿದ್ದಾರೆ, ಬನ್ನಿ ಕೇಳಿ ಎಂಜಾಯ್ ಮಾಡಿ”
Picture story activity ನಡೆಯುತ್ತಿರುವ ಸಮಯದಲ್ಲಿ ಕಿಶೋರಿಯರು ಹೇಳಿದ ಕಥೆಯನ್ನು ಮೇಲಿಸ ಫೈಲ್ ಜೊತೆ ಕೂಡಿಸಿಕೊಳ್ಳುವುದು. ೧೫ ನಿಮಿಷ
ಒಟ್ಟುಗೂಡಿಸಿದ ಕಥೆಯನ್ನು ಕಿಶೋರಿಯರಿಗೆ ಕೇಳಿಸುವುದು.
ಇನ್ನೊಮ್ಮೆ ಹಾಕಿ ಅಂದರೆ ಇನ್ನೊಮ್ಮೆ ಪ್ಲೇ ಮಾಡುವುದು.
ಇಲ್ಲವೆಂದರೆ ಈ ರೀತಿಯಾಗಿ ನಮ್ಮ ಪರಿಚಯ ಮಾಡಿಕೊಳ್ಳುವುದು.
ನಾವು IT for Change ಅನ್ನೋ ಸಂಸ್ಥೆಯಿಂದ ಬಂದಿದೀವಿ. IT ಅಂದರೆ information technology ಅಂದರೆ ಮಾಹಿತಿ ಸಂವಹನ ತಂತ್ರಜ್ಞಾನ. ಇದನ್ನ ಬಳಸಿಕೊಂಡು ನಾವು ಬೇರೆ ಬೇರೆ ಶಾಲೆಗಳಲ್ಲಿ, ಬೇರೆ ಬೇರೆ ಜಿಲ್ಲೆಗಳಲ್ಲಿ ನಿಮ್ಮ ವಯಸ್ಸಿನ ಹೆಣ್ಣುಮಕ್ಕಳ ಜೊತೆ ಕೆಲಸ ಮಾಡ್ತೀವಿ. ನಿಮಗೆ ಕೊಟ್ಟಿರೋ ಸ್ಟಿಕರ್ ಅಲ್ಲಿ ಹೊಸ ಹೆಜ್ಜೆ ಹೊಸ ದಿಶೆ ಅಂತ ಇದ್ಯಲ್ಲ. ಅದು ನಮ್ ಪ್ರಾಜೆಕ್ಟ್ ಹೆಸರು. ನಮ್ಮ ಬಗ್ಗೆ ಹೋಗ್ತಾ ಹೋಗ್ತಾ ಇನ್ನೂ ಜಾಸ್ತಿ ಗೊತ್ತಾಗ್ತಾ ಹೋಗುತ್ತೆ. ನಿಮ್ಮ ಶಾಲೆಗೆ ನಾವು ಪ್ರತೀ ವಾರ ಬಂದು ನಿಮ್ಮ ಜೊತೆ ಈಗ ಮಾಡಿದ್ವಲ್ಲ, ಆ ರೀತಿಯ ಚಟುಬಟಿಕೆಗಳನ್ನು ಮಾಡಬಹುದ?
ಸರಿ ಹಾಗಿದ್ರೆ, ಮುಂದಿನ ವಾರ ಸಿಗೋಣ ಎಂದು ಮಾತುಕತೆಯನ್ನು ಮುಗಿಸುವುದು. ೫ ನಿಮಿಷ
ಒಟ್ಟೂ ಸಮಯ
6೦ ನಿಮಿಷಗಳು
ಒಟ್ಟೂ ಫೆಸಿಲಿಟೇಟರ್‌ಗಳು: ೪
ಬೇಕಾಗಿರುವ ಸಂಪನ್ಮೂಲಗಳು
- ಕ್ಯಾಮೆರ
- Tripod
- ಚಾರ್ಟ್ ಶೀಟ್‌ಗಳು - 5
- Picture story pictures - 5 sets
- ಸ್ಕೆಚ್ ಪೆನ್‌ಗಳು
- ಪ್ರೊಜೆಕ್ಟರ್
- Glue
- Speaker
- Recorder
- Headphones
ಇನ್‌ಪುಟ್‌ಗಳು
Audio story
ಔಟ್‌ಪುಟ್‌ಗಳು
Picture stories