ಕಸದ ರಾಶಿ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಕಸದ ರಾಶಿಯ ಮೋಡ ಚೀಕುವಿನ ತಲೆಯ ಮೇಲೆ ತೇಲುತ್ತಿದೆ. ಇದು ಅವಳನ್ನು ಜಗತ್ತಿನ ಅತಿ ದುಃಖಿತ ಹುಡುಗಿಯನ್ನಾಗಿ ಮಾಡಿದೆ. ಆ ಕಸದ ರಾಶಿ ಚೀಕುವಿನ ತಲೆ ಮೇಲೆ ಏಕೆ ತೇಲುತ್ತಿದೆ ಅದರಿಂದ ಚೀಕು ಹೇಗೆ ಮುಕ್ತಗೊಂಡಳು ಎಂಬುದನ್ನ ತಿಳಿಯಿರಿ.
ಉದ್ದೇಶಗಳು :
ಮಕ್ಕಳಿಗೆ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ತಮ್ಮ ಸುತ್ತಲೂ ಸದಾ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವಂತೆ ಪ್ರೇರೇಪಿಸಬಹುದು
ಕಥಾ ವಸ್ತು : ಪರಿಸರ ಮತ್ತು ವಾತಾವರಣ, ಆರೊಗ್ಯ ಮತ್ತು ಸ್ವಚ್ಚತೆ, ತಪ್ಪುಗಳಿಂದ ಕಲಿಯುವುದು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Kasada%20Rashi.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
1. ಮಕ್ಕಳು ಕೋಣೆಯಲ್ಲಿ ಎಲ್ಲಿ ಬೇಕಾದರೂ ಕುಳಿತುಕೊಳ್ಳಲಿ.
2. ಗದ್ದಲವನ್ನು ಕಡಿಮೆ ಮಾಡಲು ಬಾಗಿಲು ಮುಚ್ಚಿದ ನಿಶ್ಯಬ್ದ ಕೋಣೆಯಲ್ಲಿ ತರಗತಿಯನ್ನು ನಡೆಸಿ. 3. ಮಕ್ಕಳ ಜೀವನಕ್ಕೆ ಸಂಬಂಧಿಸಿದಂತೆ ಸಲಹೆಗಳಗಳು ಮತ್ತು ಜ್ಞಾಪನೆಗಳ/ನೆನಪಿಸುವ ಮೂಲಕ ಪ್ರೇರಣೆಯನ್ನು ನೀಡಿದರೆ ಅವರು ತಮ್ಮ ಆಲೋಚನೆಗಳು / ಸಲಹೆಗಳು/ ಕಲ್ಪನೆಗಳು / ಅಭಿಪ್ರಾಯಗಳನ್ನು ತರಗತಿಯ ಸಹಪಾಠಿಗಳ ಮುಂದೆ ಹಂಚಿಕೊಳ್ಳಲು ಯಾವುದೇ ಹಿಂಜರಿಕೆಯಿದ್ದರೆ ಕಡಿಮೆ ಮಾಡಬಹುದು 4. ಕಥೆಯನ್ನು ಬಹು ಭಾಷೆಗಳಲ್ಲಿ ವಿವರಿಸಿ ಮತ್ತು ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗಾಗಿ ಭಾಷಾಂತರಿಸಲು ಪ್ರೋತ್ಸಾಹಿಸಿದರೆ ಬೇರೆ ಬೇರೆ ಮಾತೃ ಭಾಷೆಗಳನ್ನು ಮಾತನಾಡುವವವರು ಭಾಗವಹಿಸಲು ಸಾಧ್ಯವಾಗುತ್ತದೆ 5. ವಿದ್ಯಾರ್ಥಿಗಳನ್ನು ಸಣ್ಣ ಗುಂಪುಗಳಲ್ಲಿ ಕುಳಿತುಕೊಳ್ಳುವಂತೆ ಮಾಡಿ, ಕಥೆಯ ಆಧಾರದ ಮೇಲೆ ಚರ್ಚಿಸಲು ಮತ್ತು ಸಂಭಾಷಣೆ ನಡೆಸಲು ಅವಕಾಶ ಕಲ್ಪಿಸಿ. |
ಈ ಕಥೆಯನ್ನು ನಿಮ್ಮ ತರಗತಿಗೆ ಕೊಂಡೊಯ್ಯುವ ಕೆಲವು ವಿಧಾನಗಳು ಇಲ್ಲಿವೆ:
ಪೂರ್ವ-ಆಲಿಸುವಿಕೆಯ ಚಟುವಟಿಕೆಗಳು
ಧ್ವನಿ ಕಥೆ ಕೇಳಿಸುವ ಮೊದಲು, ವಿದ್ಯಾರ್ಥಿಗಳ ಆಲಿಸುವ ಕೌಶಲ್ಯ ಬೆಳೆಸಲು ಮತ್ತು ಗಮನವನ್ನು ಸೆಳೆಯಲು ಈ/ಇದೇ ರೀತಿಯ ಚಟುವಟಿಕೆಗಳನ್ನು ವಿನ್ಯಾಸಗೊಳಿಸಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಿ.
- ಸಂಪೂರ್ಣ ದೈಹಿಕ ಪ್ರತಿಕ್ರಿಯೆ (TPR) ಚಟುವಟಿಕೆ - ನೀವು ಕಥೆಯಲ್ಲಿ ಬರುವ ವಿಭಿನ್ನ ಸಂದರ್ಭಗಳು ಮತ್ತು ಕ್ರಿಯೆಗಳನ್ನು ನಟಿಸಲು ವಿದ್ಯಾರ್ಥಿಗಳಿಗೆ ಹೇಳಿ - [ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಅದನ್ನು ದೃಶ್ಯೀಕರಿಸಿಕೊಂಡು ಅಭಿವ್ಯಕ್ತಿಸಲು ಲುಅಥವಾ ಭೌತಿಕ ಭಾಷೆಯ ಮೂಲಕ ಅವರ ಭಾವನೆಯನ್ನು ವ್ಯಕ್ತಪಡಿಸಲು ಕೇಳಿ ]
- ಕಥೆ ಕೇಳುವ ಮುನ್ನ ಕಸದ ಕುರಿತು ಮಕ್ಕಳು ಗಮನಿಸಿರುವ ಅಂಶಗಳ ಬಗ್ಗೆ ಚರ್ಚಿಸುವುದು - ಎಲ್ಲೆಲ್ಲಿ ಕಾಣುತ್ತದೆ, ಕಸ ವಿಲೇವರಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳೇನಿರಬಹುದು, ಮುಂತಾದವು.
- ಕಥಾ-ವಸ್ತುಗೆ ಸಂಬಂಧಿಸಿದ ಕೆಲವು ಮೂಲ ಶಬ್ದಕೋಶವನ್ನು ಪರಿಚಯಿಸಿ
ಪೂರ್ವ-ಆಲಿಸುವಿಕೆ ಚಟುವಟಿಕೆಯ ಹೆಚ್ಚಿನ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಲಿಸುವ-ಸಮಯದ ಚಟುವಟಿಕೆಗಳು
ವಿದ್ಯಾರ್ಥಿಗಳು ಧ್ವನಿ ಕಥೆಯನ್ನು ಕೇಳುತ್ತಿದ್ದಾಗ, ಅವರನ್ನು ಈ ಸಂವಾದಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ,
- ಕಥೆ ಆಲಿಸುವಿಕೆಗೆ ವಿರಾಮಗೊಳಿಸಿ ಚರ್ಚಿಸಿ : ಒಂದು ಸಂದರ್ಭದಲ್ಲಿ ಧ್ವನಿ ಕಥೆಯನ್ನು ನಿಲ್ಲಿಸಿ - ಮುಂದೆ ಏನಾಗುತ್ತದೆ, ಕಾರಣ ಏನು ಎಂದು ನೀವು ಯೋಚಿಸುತ್ತೀರಿ? ನೀವು ಚೀಕು ಆಗಿದ್ದರೆ ಏನು ಮಾಡಬೇಕು ಎಂದು ಭಾವಿಸುತ್ತೀರಿ?.
- ಕಥೆಯ ಕೆಲವು ಭಾಗಗಳನ್ನು ಚಿತ್ರಿಸಲು ವಿದ್ಯಾರ್ಥಿಗಳನ್ನು ಕೇಳಿ
ಆಲಿಸುವ-ಸಮಯದ ಚಟುವಟಿಕೆಯ ಹೆಚ್ಚಿನ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಲಿಸಿದ ನಂತರದ ಚಟುವಟಿಕೆಗಳು
ವಿದ್ಯಾರ್ಥಿಗಳು ಧ್ವನಿ ಕಥೆಯನ್ನು ಆಲಿಸಿದ ನಂತರ, ಅವರ ತಿಳುವಳಿಕೆಯನ್ನು ಬಲವರ್ಧಿಸಲು ಮತ್ತು ಈ ಚಟುವಟಿಕೆಗಳೊಂದಿಗೆ ಅವರ ಕಲಿಕೆಯನ್ನು ಹೆಚ್ಚಿಸಿ,
- ಕಥೆ ಮರು-ಹೇಳುವಿಕೆ : ತರಗತಿಯನ್ನು ಸಣ್ಣ ಗುಂಪುಗಳಾಗಿ ವಿಂಗಡಿಸಿ ಮತ್ತು ಪ್ರತಿ ಗುಂಪು ಕಥೆಯನ್ನು ಅವರದೇ ಮಾತುಗಳಲ್ಲಿ ಹೇಳುವಂತೆ ಮಾಡಿ. ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಸಂಯೋಜಿಸಲು ಸಹಾಯ ಮಾಡಲು ಸುಳಿವುಗಳು ಅಥವಾ ಕಥಾ ನಕ್ಷೆಗಳನ್ನು ಒದಗಿಸಿ
- ಕಥೆಗೆ ಪರ್ಯಾಯ ಅಂತ್ಯಗಳು : ಕಥೆಗೆ ಪರ್ಯಾಯ ಅಂತ್ಯಗಳನ್ನು ರಚಿಸಲು ವಿದ್ಯಾರ್ಥಿಗಳನ್ನು ಆಹ್ವಾನಿಸಿ. ಇದಕ್ಕೆ ನೀವು ಆಸಕ್ತಿದಾಯಕ ಸುಳಿವುಗಳನ್ನು ಕೊಡಬಹುದು (ಮರುದಿನ ಅಕ್ಕು ದುಃಖಿತಳಾಗಿದ್ದರೆ? ಏನಾಗಬಹುದು). ವಿದ್ಯಾರ್ಥಿಗಳು ತಮ್ಮ ಪರ್ಯಾಯ ಅಂತ್ಯಗಳನ್ನು ತರಗತಿಯೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ವಿಭಿನ್ನ ಅಂತ್ಯಗಳು ಕಥೆಯಲ್ಲಿನ ಸಂದೇಶ ಅಥವಾ ಕಥಾ ವಸ್ತುವನ್ನು ಹೇಗೆ ಬದಲಾಯಿಸುತ್ತವೆ ಎಂಬುದನ್ನು ಚರ್ಚಿಸಿ. ಹಿರಿಯ ವಿದ್ಯಾರ್ಥಿಗಳಿಗೆ, ಕಥೆಯಲ್ಲಿನ ಪಾತ್ರಗಳ ಕೆಲವು ಪ್ರತಿಕ್ರಿಯೆಗಳು ಅಥವಾ ನಡವಳಿಕೆಗಳ ಹಿಂದಿನ ಕಾರಣಗಳ ಬಗ್ಗೆ ಯೋಚಿಸಲು ನೀವು ಅವರನ್ನು ಪ್ರೋತ್ಸಾಹಿಸಬಹುದು.
- ಕಥಾ-ಪ್ರೇರಿತ ಕಲೆ - ವಿದ್ಯಾರ್ಥಿಗಳಿಗೆ ಯಾವ ಸನ್ನಿವೇಶವು ಒಂದು ನಿರ್ದಿಷ್ಟ ಭಾವನೆಯನ್ನು ಉಂಟುಮಾಡುತ್ತದೆ ಎಂದು ಕೇಳಿ - ಅವರಿಗೆ ಯಾವುದು ಸಂತೋಷವನ್ನುಂಟುಮಾಡುತ್ತದೆಯೆಂದು ಕೇಳಿ. ಬೇರೆ-ಬೇರೆ ಭಾವನೆಗಳನ್ನು ಅನುಭವಿಸಿದಾಗ ಅವರು ಹೇಗೆ ಭಾವಿಸುತ್ತಾರೆ/ಆಲೋಚಿಸುತ್ತಾರೆ ಎಂಬುದನ್ನು ಪ್ರತಿನಿಧಿಸುವ ಚಿತ್ರ/ದೃಶ್ಯವನ್ನು ಚಿತ್ರಿಸಲು ವಿದ್ಯಾರ್ಥಿಗಳನ್ನು ಕೇಳಬಹುದು. ವಿದ್ಯಾರ್ಥಿಗಳು ತರಗತಿಯಲ್ಲಿ ಕಲಾಕೃತಿಯನ್ನು ಪ್ರದರ್ಶಿಸಿ ಅದನ್ನು ವಿವರಿಸಬಹುದು.
ಆಲಿಸಿದ ನಂತರದ ಚಟುವಟಿಕೆಯ ಹೆಚ್ಚಿನ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗಮನಿಸಿ: ಕೆಲವೊಮ್ಮೆ ಭಾವನೆಗಳಿಗೆ ಸಂಬಂಧಿಸಿದಂತೆ ಚರ್ಚಿಸುವುದು ವಿದ್ಯಾರ್ಥಿಗಳಲ್ಲಿ ಕೆಲವು ನಕಾರಾತ್ಮಕ ಆಲೋಚನೆಗಳನ್ನು ಪ್ರಚೋದಿಸಬಹುದು. ವಿದ್ಯಾರ್ಥಿಗಳ ನಡುವೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ನೀವು ಜಾಗೃತರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಅತಿ ಮುಖ್ಯವಾಗಿ, ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಆರೋಗ್ಯಕರ ರೀತಿಯಲ್ಲಿ ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ಕಲಿಯಲು ಸಹಾಯ ಮಾಡಲು ಪ್ರಯತ್ನಗಳನ್ನು ಮಾಡಿ.
ಪಠ್ಯಪುಸ್ತಕಕ್ಕೆ ಸಂಪರ್ಕಿಸಬಹುದು :
ಕಥೆಯು ಪರಿಸರ ಮತ್ತು ಮಾಲಿನ್ಯದ ಪರಿಕಲ್ಪನೆಯ ಬಗ್ಗೆ ಇರುವುದರಿಂದ (ಮತ್ತು ಒಬ್ಬರ ತಪ್ಪುಗಳಿಂದ ಕಲಿಯುವುದು), ನಾವು ಅದನ್ನು ಈ ಕೆಳಗಿನ ಪಾಠಗಳಿಗೆ ಸಂಪರ್ಕಿಸಬಹುದು:
7 ನೇ ತರಗತಿ ಇಂಗ್ಲಿಷ್
- Avoid plastic
- Awareness
- Healthy Life
6ನೇ ತರಗತಿ ಕನ್ನಡ
ನದಿಯ ಅಳಲು
6ನೇ ತರಗತಿ ವಿಜ್ಞಾನ
ತ್ಯಾಜ್ಯ ಉತ್ಪನ್ನಗಳ ನಿರ್ವಹಣೆ
3ನೇ ತರಗತಿ ಪರಿಸರ ಅಧ್ಯಯನ
ತ್ಯಾಜ್ಯ ವಿಂಗಡಣೆ
ಹೆಚ್ಚುವರಿ ಸಂಪನ್ಮೂಲಗಳು :
ಇಂಗ್ಲೀಷ್ ನಲ್ಲಿ ಈ ಧ್ವನಿ ಕಥೆ/ಚಟುವಟಿಕೆ ಪುಟದ ಲಿಂಕ್ - A Cloud of Trash - Audio Story Activity Page
ಕಥೆಗೆ ಸಂಬಂಧಿಸಿದಂತೆ ಕೆಲವು ಇತರ ಪ್ರಶ್ನೆಗಳು :
- ಮಕ್ಕಳಿಗೆ ಗೊತ್ತಿರುವ ಬೇರಾವುದಾದರೂ ಕೆಟ್ಟ ಅಭ್ಯಾಸವನ್ನು ಮತ್ತು ಚೇಕುವಿನ ಕಥೆಯನ್ನು ಆಧಾರವಾಗಿಟ್ಟುಕೊಂಡು ತಮ್ಮದೇ ಆದ ಒಂದು ಕಥೆಯನ್ನು ರಚಿಸಲು ಹೇಳುವುದು.
- ಮಕ್ಕಳು ತಮ್ಮ ಮನೆಯಲ್ಲಿ ಕಸವನ್ನು ಕುರಿತು ಹೇಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಾರೆ ಎಂದು ಚರ್ಚೆಮಾಡುವುದು.
- ನಮ್ಮ ದಿನಚರಿಯಲ್ಲಿ ನಾವು ಉತ್ಪಾದಿಸುವ ಕಸದ ಪ್ರಮಾಣವನ್ನು ಕಡಿಮೆ ಮಾಡಲು ನಾವು ಮಾಡಬಹುದಾದ ಕೆಲವು ಮಾರ್ಗಗಳನ್ನು ಯೋಚಿಸಬಹುದು?
- ನಮ್ಮ ಸುತ್ತಮುತ್ತಲನ್ನು ಸ್ವಚ್ಛವಾಗಿಡುವುದು ಏಕೆ ಮುಖ್ಯವೆಂದು ತೋರುತ್ತದೆ? ನಾವು ಅದನ್ನು ಮಾಡಿದರೆ ಏನಾಗಬಹುದು?
- ಕಥೆಯ ವೇಳೆ ಚೀಕುವಿನ ಭಾವನೆಗಳು ಕಸದ ಮೋಡದ ಬಗ್ಗೆ ಹೇಗೆ ಬದಲಾಗುತ್ತವೆ?