ನಡೆದಾಡುವ ಪರ್ವತ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೨:೩೯, ೬ ಸೆಪ್ಟೆಂಬರ್ ೨೦೨೪ ರಂತೆ Deepak (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗ...)
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಒಂದು ದಿನ, ಒಂಟೆಯೊಂದು ಮರಳಿನ ಬಿರುಗಾಳಿಯಲ್ಲಿ ಹೂತು ಹೋಗುತ್ತದೆ. ಅದರ ಡುಬ್ಬ ಮಾತ್ರ ಹೊರಗೆ ಕಾಣುತ್ತಿರುತ್ತದೆ. ಎರಡು ಆಮೆಗಳು ಒಂಟೆಯ ಡುಬ್ಬವನ್ನು ಪರ್ವತ ಎಂದು ಭಾವಿಸಿ ಮೇಲೆ ಏರುತ್ತವೆ. ಆದರೆ ‘ಪರ್ವತ’ ನಡೆಯಲು ಆರಂಭಿಸಿದಾಗ ಆಮೆಗಳು ‘ನಡೆದಾಡುವ ಪರ್ವತ’ ಎನ್ನುತ್ತವೆ! ಹೀಗೆ ಎಲ್ಲರೂ ತನ್ನ ಡುಬ್ಬವನ್ನು ಪರ್ವತ ಎನ್ನುವುದು ಕೇಳಿ ಕೇಳಿ ಒಂಟೆ ನಿಜವಾದ ಪರ್ವತವನ್ನು ಹುಡುಕಲು ಹೊರಡುತ್ತದೆ. ಒಂಟೆ ಪರ್ವತವನ್ನು ನೋಡಿ ಏನು ಹೇಳಬಹುದು?

ಉದ್ದೇಶಗಳು :

ಮಕ್ಕಳಿಗೆ ಕಥೆಯ ಮೂಲಕ ಒಂಟೆಯ ಗುಣಲಕ್ಷಣಗಳು ಹಾಗೂ ಪರಿಸರದಲ್ಲಿ ಕಾಣಸಿಗುವ ನದಿ ಬೆಟ್ಟ ಗುಡ್ಡಗಳ ಜೊತೆಗೆ ಹೊಸ ಪದಗಳನ್ನ ಪರಿಚಯಿಸಬಹುದು.

ಕಥಾ ವಸ್ತು :ಕುಟುಂಬ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಆರೊಗ್ಯ ಮತ್ತು ಸ್ವಚ್ಚತೆ

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Amma%20Barodu%20Yavaga.mp3