ನರಿಯ ಸೋಲು - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಒಂದು ಬುದ್ಧಿವಂತ ಮೊಲ ತನ್ನ ಸ್ನೇಹಿತ ಆಮೆಗೆ ಸಹಾಯ ಮಾಡುತ್ತದೆ. ಅವೆರಡೂ ನರಿಯನ್ನು ಹೇಗೆ ಮೋಸಗೊಳಿಸಿದವು ಎಂಬುದನ್ನು ತಿಳಿಯಿರಿ.
ಉದ್ದೇಶಗಳು :
ಆಹಾರಕ್ಕಾಗಿ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನ ಅವಲಂಬಿಸಿರುವ ಆಹಾರ ಸರಪಳಿಯ ಕುರಿತು ಮಕ್ಕಳಿಗೆ ಈ ಕಥೆಯ ಮೂಲಕ ತಿಳಿಸಿಕೊಡಬಹುದು. ಅಲ್ಲದೇ, ಕಾಡಿನಲ್ಲಿ ಕಾಡುಪ್ರಾಣಿಗಳ ಜೀವನ ಶೈಲಿ ಹೇಗಿರುತ್ತದೆ ಎಂಬುದನ್ನ ಮನವರಿಕೆ ಮಾಡಿ ಕೊಡಬಹುದು. ಬುದ್ದಿವಂತಿಕೆ ಮತ್ತು ಸಂವಹನ ಕೌಶಲ್ಯವು ಸಂಕಷ್ಟದ ಸಂಧರ್ಭದಲ್ಲಿ ಹೇಗೆ ಬಳಕೆಗೆ ಬರುತ್ತದೆ ಎಂಬುದರ ಕುರಿತು ಚರ್ಚಿಸಬಹುದು. ಕಷ್ಟಕಾಲದಲ್ಲಿ ಸ್ನೇಹಿತರು ಪರಸ್ಪರ ನೆರವಾಗಬೇಕೆಂಬ ನೀತಿ ಮಕ್ಕಳಿಗೆ ಮನದಟ್ಟಾಗುವಂತೆ ಮಾಡುಬಹುದು.
ಕಥಾ ವಸ್ತು :ಸ್ನೇಹ,ಬುದ್ಧಿವಂತಿಕೆ ಮತ್ತು ಚತುರತೆ,ಜೀವನ ಕೌಶಲ್ಯ
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Nariya%20Solu.mp3