ನಡೆದಾಡುವ ಪರ್ವತ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಒಂದು ದಿನ, ಒಂಟೆಯೊಂದು ಮರಳಿನ ಬಿರುಗಾಳಿಯಲ್ಲಿ ಹೂತು ಹೋಗುತ್ತದೆ. ಅದರ ಡುಬ್ಬ ಮಾತ್ರ ಹೊರಗೆ ಕಾಣುತ್ತಿರುತ್ತದೆ. ಎರಡು ಆಮೆಗಳು ಒಂಟೆಯ ಡುಬ್ಬವನ್ನು ಪರ್ವತ ಎಂದು ಭಾವಿಸಿ ಮೇಲೆ ಏರುತ್ತವೆ. ಆದರೆ ‘ಪರ್ವತ’ ನಡೆಯಲು ಆರಂಭಿಸಿದಾಗ ಆಮೆಗಳು ‘ನಡೆದಾಡುವ ಪರ್ವತ’ ಎನ್ನುತ್ತವೆ! ಹೀಗೆ ಎಲ್ಲರೂ ತನ್ನ ಡುಬ್ಬವನ್ನು ಪರ್ವತ ಎನ್ನುವುದು ಕೇಳಿ ಕೇಳಿ ಒಂಟೆ ನಿಜವಾದ ಪರ್ವತವನ್ನು ಹುಡುಕಲು ಹೊರಡುತ್ತದೆ. ಒಂಟೆ ಪರ್ವತವನ್ನು ನೋಡಿ ಏನು ಹೇಳಬಹುದು?

ಉದ್ದೇಶಗಳು :

ಮಕ್ಕಳಿಗೆ ಕಥೆಯ ಮೂಲಕ ಒಂಟೆಯ ಗುಣಲಕ್ಷಣಗಳು ಹಾಗೂ ಪರಿಸರದಲ್ಲಿ ಕಾಣಸಿಗುವ ನದಿ ಬೆಟ್ಟ ಗುಡ್ಡಗಳ ಜೊತೆಗೆ ಹೊಸ ಪದಗಳನ್ನ ಪರಿಚಯಿಸಬಹುದು.

ಕಥಾ ವಸ್ತು : ಪರಿಸರ ಮತ್ತು ವಾತಾವರಣ,ಹಾಸ್ಯ,ಪ್ರಾಣಿ ಮತ್ತು ಪಕ್ಷಿಗಳು

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Nadedaduva%20Parvatha.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಮರಳುಗಾಡು ಮತ್ತು ಅದರ ಗುಣಲಕ್ಷಣ ಹಾಗೂ ಅಲ್ಲಿ ಕಂಡುಬರುವ ಪ್ರಾಣಿಗಳ ಕುರಿತು ಚರ್ಚಿಸುವುದು.
  2. ಮರಳುಗಾಡಿನಲ್ಲಿ ಕಾಣಸಿಗುವ ಒಂಟೆಗಳು ಹಾಗೂ ಅವುಗಳು ನೀರನ್ನು ಶೇಖರಿಸುವ ಡುಬ್ಬಗಳ ಅವಶ್ಯಕತೆ ಕುರಿತು ಮಾತನಾಡುವುದು.
  3. ಬಯಲು ಸೀಮೆ ಪರ್ವತ, ಹಿಮಾಲಯ ಪರ್ವತ, ನೀರಿನಲ್ಲಿ ಕಾಣಸಿಗುವ ಪರ್ವತಗಳು ಹಾಗೂ ಅವುಗಳ ಗುಣಲಕ್ಷಣಗಳ ಕುರಿತು ಗುಂಪಿನಲ್ಲಿ ಚರ್ಚಿಸುವುದು.
  4. ಪರ್ವತದಂತಹ ಡುಬ್ಬಗಳನ್ನು ಹೊತ್ತ ಒಂಟೆಯ ಚಿತ್ರವನ್ನು ಬಿಡಿಸುವಂತೆ ಮಕ್ಕಳಿಗೆ ಸೂಚಿಸುವುದು.