ಹುಲಿ ಬಂತು ಹುಲಿ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಹುಲಿರಾಯ ಕಾಡಿಗೆ ಬಂದಿದ್ದು ಅದು ಹೇಗೋ ಎಲ್ಲ ಪ್ರಾಣಿ-ಪಕ್ಷಿಗಳಿಗೂ ಗೊತ್ತಾಯಿತು! ಆಗ ಅವೆಲ್ಲವೂ ಹೇಗೆ ಮಾತ್ನಾಡಿದ್ವು ಅಂಥಾ ತಿಳ್ಕೋಬೇಕಾ ಹಾಗಿದ್ರೆ ಈ ಕಥೆ ಕೇಳಿ.

ಉದ್ದೇಶಗಳು :

ಈ ಕಥೆಯ ಮೂಲಕ ಮಕ್ಕಳಿಗೆ ಕಾಡಿನ ವಿವಿಧ ರೀತಿಯ ಪ್ರಾಣಿಗಳ ಗುಣಲಕ್ಷಣಗಳನ್ನು ತಿಳಿಸಿಕೊಡಬಹುದು ಅಲ್ಲದೇ ಕಾಡಿನಲ್ಲಿ ಪ್ರಾಣಿಗಳಿಗೆ ಆಪತ್ತು ಎದುರಾದ ಸಂದರ್ಭದಲ್ಲಿ ಅವುಗಳ ನಡವಳಿಕೆಯಲ್ಲಿ ಆಗುವ ಬದಲಾವಣೆಗಳ ಹಾಗೂ ಇತರೆ ಪ್ರಾಣಿಗಳನ್ನು ಎಚ್ಚರಿಸುವ ರೀತಿಯನ್ನು ತಿಳಿಸಿಕೊಡಬಹುದು.

ಕಥಾ ವಸ್ತು : ಪ್ರಾಣಿ ಮತ್ತು ಪಕ್ಷಿಗಳು,ಜೀವನ ಕೌಶಲ್ಯ,ಪರಿಸರ ಮತ್ತು ವಾತಾವರಣ

ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ತರಗತಿ ೧, ೨,೩,೪,೫

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Huli%20Bantu%20Huli.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಕಾಡಿನ ಪ್ರಾಣಿಗಳ ಬಗ್ಗೆ ಚರ್ಚಿಸಿ, ಮಕ್ಕಳಿಗೆ ಪರಿಚಯವಿರುವ ಪ್ರಾಣಿಗಳ ಕೂಗುವಿಕೆಯ ಶಬ್ದದಗಳನ್ನು ಅನುಕರಿಸಲು ಹೇಳಬಹುದು
  2. ಕಾಡಿನಲ್ಲಿನ ವಿವಿಧ ಪ್ರಾಣಿಗಳ ದೈನಂದಿನ ಜೀವನ ಹಾಗೂ ಬದುಕಲು ಅನಿವಾರ್ಯವಾದ ಜೀವನ ಕೌಶಲ್ಯಗಳ ಕುರಿತು ಚರ್ಚಿಸಬಹುದು
  3. ಸಿಂಹ ಹಾಗೂ ಹುಲಿಯ ಗುಣಲಕ್ಷಣಗಳನ್ನ ಪಟ್ಟಿ ಮಾಡಿ ಎರಡನ್ನೂ ಹೋಲಿಸಿದಾಗ ಕಾಡಿನ ರಾಜನೆಂದು ಕರೆಸಿಕೊಳ್ಳಲು ಯಾರು ಯೋಗ್ಯರೆಂಬ ಪ್ರಶ್ನೆಗೆ ಮಕ್ಕಳಲ್ಲಿ ಎರಡು ಗುಂಪುಗಳನ್ನು ಮಾಡಿ ವಾಗ್ವಾದ ನಡೆಸಬಹುದು
  4. ಆಹಾರಕ್ಕಾಗಿ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನ ಅವಲಂಬಿಸಿರುವ ಆಹಾರ ಚಕ್ರದ ಕುರಿತಂತೆ ಮಕ್ಕಳು ಪರಿಸರದಲ್ಲಿ ಗಮನಿಸಿರುವ ಅಂಶಗಳನ್ನು ತರಗತಿಯಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು.
  5. ಪ್ರತಿನಿತ್ಯ ತಮ್ಮ ಆಹಾರಕ್ಕಾಗಿ ಹಾಗೂ ಜೀವ ಉಳಿಸಿಕೊಳ್ಳಲು ಪ್ರಾಣಿಗಳು ಮಾಡುವ ಸಾಹಸಗಳ ಕುರಿತಂತೆ ಚರ್ಚಿಸಬಹುದು.