ಮೊಸಳೆ ಮತ್ತು ಪಾತರಗಿತ್ತಿ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಮೊಸಳೆ ಹಾಗೂ ಪಾತಾರಗಿತ್ತಿ ಈ ಇಬ್ಬರು ಸ್ನೇಹಿತರು ಬುದ್ದಿವಂತಿಕೆಯಿಂದ ಬೇಟೆಗಾರರನ್ನ ಓಡಿಸಿದ ಕಥೆ. ಸ್ನೇಹಿತರಿಗೆ ಸಂಕಷ್ಟ ಬಂದಾಗ ಒಬ್ಬರು ಇನ್ನೊಬ್ಬರ ಸಹಾಯಕ್ಕೆ ಹೇಗೆ ನಿಂತರೆಂಬುದನ್ನ ಈ ಕಥೆಯ ಮೂಲಕ ತಿಳಿಯೋಣ.

ಉದ್ದೇಶಗಳು :

ಈ ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಮಾಡಿಕೊಡಬಹುದಲ್ಲದೇ ಆಗಿನ ಕಾಲದ ಬೇಟೆ ಪದ್ದತಿ, ವಿಧಾನಗಳು, ಕಾರಣಗಳನ್ನು ತಿಳಿಸಿ ಪ್ರಸ್ತುತ ಬೇಟೆ ನಿಷೇದ ಕಾಯಿದೆ ಹಾಗೂ ಕಾರಣಗಳ ಕುರಿತು ತಿಳಿಸಿಕೊಡಬಹುದು. ಭೂ ವಾಸಿ, ಜಲವಾಸಿ ಹಾಗೂ ಉಭಯವಾಸಿ ಪ್ರಾಣಿಗಳ ಕುರಿತು ತಿಳಿಸಿಕೊಡಬಹುದು.

ಕಥಾ ವಸ್ತು :ಸ್ನೇಹ,ಸಹಾಯ - ಸಹಕಾರ,ಪ್ರಾಣಿ ಮತ್ತು ಪಕ್ಷಿಗಳು

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Mosale%20Mattu%20Pataragitti.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಕಾಡಿನಲ್ಲಿ ಕಂಡುಬರುವ ಪ್ರಾಣಿಪಕ್ಷಿಗಳನ್ನು ಪಟ್ಟಿ ಮಾಡುವಂತೆ ತಿಳಿಸುವುದು.
  2. ಆಗಿನ ಕಾಲದಲ್ಲಿ ಬೇಟೆ ಆಡುವುದರ ಹಿಂದಿನ ಕಾರಣಗಳನ್ನು ಗುಂಪಿನಲ್ಲಿ ಚರ್ಚಿಸಿ, ಪಟ್ಟಿಮಾಡಿ ವಿವರಿಸುವಂತೆ ಹೇಳುವುದು.
  3. ಸರ್ಕಾರ ಬೇಟೆ ಪದ್ದತಿ ನಿಷೇಧ ಮಾಡಿರುವುದು ಸರಿಯೇ ಅಥವಾ ತಪ್ಪೇ ಎಂಬುದನ್ನ ಚಿಂತಿಸಿ ಚರ್ಚಿಸಲು ಹೇಳುವುದು.
  4. ಮೊಸಳೆಯ ಕುರಿತಾಗಿ ಮಕ್ಕಳಿಗೆ ತಿಳಿದಿರುವ ಗುಣಲಕ್ಷಣಗಳನ್ನು ಹೇಳಿಸುವುದು.
  5. ಭೂ ವಾಸಿ, ಜಲವಾಸಿ ಹಾಗೂ ಉಭಯವಾಸಿ ಪ್ರಾಣಿಗಳು ಹಾಗೂ ಅವುಗಳ ಗುಣಲಕ್ಷಣಗಳನ್ನು ಪಟ್ಟಿ ಮಾಡುವಂತೆ ತಿಳಿಸುವುದು.
  6. ಈ ಕಥೆಯಲ್ಲಿ ಮೊಸಳೆ ಮತ್ತು ಪಾತರಗಿತ್ತಿ ಪರಸ್ಪರ ಸಹಾಯ ಮಾಡದಿದ್ದರೆ ಏನಾಗುತ್ತಿತ್ತೆಂದು ಮಕ್ಕಳ ಅಭಿಪ್ರಾಯಗಳನ್ನು ಕೇಳುವುದು.
  7. ಪರಸ್ವರ ಸಹಕಾರ ಮಾಡಿರುವ ಕುರಿತಾಗಿ ಮಕ್ಕಳ ಅನುಭವಗಳನ್ನು ಕೇಳುವುದು

ಸಂಪೂರ್ಣ ದೈಹಿಕ ಚಟುವಟಿಕೆ

  • Butterfly Butterfly Where are you Going
  • Out in a garden - ಹಾಡು ಹಾಡಿಸುವುದು.
  • ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕಾ - ದ.ರಾ ಬೇಂದ್ರೆ ರವರ ಹಾಡು ಹಾಡಿಸುವುದು.

ಆಲಿಸುವ ಪೂರ್ವದ ಚಟುವಟಿಕೆ

  • ಮೊಸಳೆ ಮತ್ತು ಮಂಗನ ಕಥೆ ಹೇಳುವುದು ಹಾಗೂ ಮೊಸಳೆಯ ಗುಣಲಕ್ಷಣ, ದೈಹಿಕ ರಚನೆ, ಆವಾಸ ಸ್ಥಾನದ ಬಗ್ಗೆ ಚರ್ಚಿಸುವುದು.
  • ನೀವು ನೋಡಿರುವಂತಹ ಪ್ರಾಣಿ ಮತ್ತು ಪಕ್ಷಿಗಳನ್ನು ಪಟ್ಟಿ ಮಾಡಿ.

ಆಲಿಸುವ ಸಮಯದ ಚಟುವಟಿಕೆ

  • Pause - ಮೂಸಿ ಅಳುತ್ತಿತ್ತು - ಪ್ರಾಣಿಗಳ ವಾಸ ಸ್ಥಾನಗಳ ಬಗ್ಗೆ ಕೇಳುವುದು?
  • Pause - ಭೇಟೆಯಾಡಿ ಆಹಾರ ಒದಗಿಸುತ್ತಿದ್ದರು - ಬೇಟೆಯಾಡುವುದರ ಅವಶ್ಯಕತೆ ಏನು?
  • ಬೇಟೆಯಾಡುವುದರ ಕಾರಣಗಳೇನು?
  • ಮಕ್ಕಳೇ ನೀವು ಬೇಟೆಯಾಡುವುದರ ಕುರಿತಾಗಿ ಎಂದಾದರೂ ಕೇಳಿರುವಿರೇ?
  • Pause - ಮೂಸಿ ಮತ್ತು ರಾಣಿ ಸ್ನೇಹಿತರಾಗಿದ್ದರು - ನಿಮ್ಮ ಸ್ನೇಹಿತರ ಪರಿಚಯ ಮಾಡಿಕೊಳ್ಳಿ
  • Pause - ಮೊಸಳೆ ಬೇಟೆಗಾರನಿಂದ ತಪ್ಪಿಸಿಕೊಂಡಿದ್ದು
  • ಮೊಸಳೆ ತಪ್ಪಿಸಿಕೊಂಡಿಲ್ಲವಾದರೆ ಏನಾಗುತ್ತಿತ್ತು ಊಹಿಸಿ?
  • ಬೇರೆ ಯಾವ ತಂತ್ರ ಮಾಡಿ ಮೊಸಳೆ ತಪ್ಪಿಸಿಕೊಳ್ಳಬಹುದಾಗಿತ್ತು?
  • ಪರಸ್ಪರ ಸಹಕಾರ ಮಾಡುವುದರಿಂದ ಆಪತ್ತಿನಿಂದ ಹೇಗೆ ಪಾರಾಗಬಹುದು?

ಆಲಿಸಿದ ನಂತರದ ಚಟುವಟಿಕೆಗಳು

(ಮಕ್ಕಳನ್ನು 5 ತಂಡಗಳಾಗಿ ವಿಭಾಗಿಸುವುದು)

  • ಬೇಟೆಯಾಡುವುದರ ಕುರಿತು ಪರ-ವಿರೋಧ ಚರ್ಚಿಸುವುದು.
  • ಕಥೆಯ ಕಾಲ್ಪನಿಕ ಚಿತ್ರವನ್ನು ಬಿಡಿಸುವುದು.
  • ಮೊಸಳೆ ಮತ್ತು ಪಾತರಗಿತ್ತಿ ಕಥೆಯನ್ನು ಇನ್ನಷ್ಟು ಕುತೂಹಲಕಾರಿಯಾಗಿ ರಚಿಸುವುದು.
  • ಕ್ಲೇ ಮೊಡಲಿಂಗ್ ಮಾಡುವುದು.
  • ಜಲವಾಸಿ, ಭೂ ವಾಸಿ ಮತ್ತು ಉಭಯವಾಸಿ ಪ್ರಾಣಿಗಳನ್ನು ಪಟ್ಟಿ ಮಾಡುವುದು.
  • ಕಥೆಯನ್ನು ಕಿರುನಾಟಕವಾಗಿ ಅಭಿನಯಿಸುವುದು.
  • ಕಥೆಯನ್ನು ಬೊಂಬೆಯಾಟವಾಗಿ ಪ್ರದರ್ಶಿಸುವುದು.
  • ಪಾತರಗಿತ್ತಿಯ ಜೀವನ ಚಕ್ರದ ಬಗ್ಗೆ ಚರ್ಚಿಸುವುದು.