ಅರಸರಾಯನ ಹಲ್ಲು ನೋವು - ಧ್ವನಿ ಕಥೆಯ ಚಟುವಟಿಕೆ ಪುಟ
Jump to navigation
Jump to search
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಕಾಡಿಗೆ ರಾಜನೇ ಆದರೂ ಸಿಂಹಕ್ಕೆ ಹಲ್ಲು ಉಜ್ಜುವುದು ತಪ್ಪಲಿಲ್ಲ. ಕಥೆ ಓದುವ ಮೂಲಕ ಸಿಂಹಕ್ಕೆ ಹಲ್ಲು ಉಜ್ಜುವುದನ್ನ ಹೇಳಿ ಕೊಟ್ಟವರು ಯಾರು ಹಾಗು ಏಕೆ ಎಂಬುದನ್ನ ತಿಳಿದುಕೊಳ್ಳಿ..
ಉದ್ದೇಶಗಳು :
ಈ ಕಥೆಯ ಮೂಲಕ ಮಕ್ಕಳಲ್ಲಿ ಉತ್ತಮ ದೈನಂದಿನ ಅಭ್ಯಾಸಗಳನ್ನು ಮೂಡಿಸಬಹುದಲ್ಲದೇ ಮಾಂಸಾಹಾರಿ ಪ್ರಾಣಿಗಳು ಹಾಗೂ ಶಾಖಾಹಾರಿ ಪ್ರಾಣಿಗಳ ಬಗ್ಗೆ ತಿಳಿಸಬಹುದು.
ಕಥಾ ವಸ್ತು :ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಆರೊಗ್ಯ ಮತ್ತು ಸ್ವಚ್ಚತೆ,ಸಹಾಯ - ಸಹಕಾರ
ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ೧,೨,೩,೪,೫,
ಧ್ವನಿ ಕಥೆ ಲಿಂಕ್:
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
- ಶಿಕ್ಷಕರು ಹಾವಭಾವ ಸಮೇತ ನರಿ ಮತ್ತು ಸಿಂಹದ ಕಥೆಯನ್ನು ಹೇಳುವುದು. ಶಿಕ್ಷಕರು ಹೇಳಿದಂತೆ ವಿದ್ಯಾರ್ಥಿಗಳು ಅಭಿನಯಿಸುವುದು.
ಆಲಿಸುವ ಪೂರ್ವದ ಚಟುವಟಿಕೆ
- ಮಕ್ಕಳೇ ನಿಮಗೆ ಇಷ್ಟವಾಗುವ ಸಿಹಿ ತಿನುಸುಗಳಾವುವು?
- ಹೆಚ್ಚು ಸಿಹಿ ತಿಂಡಿಗಳನ್ನು ತಿನ್ನುವುದರಿಂದ ಏನೆಲ್ಲಾ ಸಮಸ್ಯೆಗಳಾಗಬಹುದು?
- ಹಲ್ಲು ನೋವು ಬಂದಾಗ ನೀವು ಏನೆಲ್ಲಾ ಮನೆಮದ್ದನ್ನು ಬಳಸುತ್ತೀರ?
- ಹಲ್ಲು ನೋವು ಮನೆಮದ್ದಿಗೂ ಜಗ್ಗದಿದ್ದಾಗ ಏನು ಮಾಡುವಿರಿ?
- ಹಲ್ಲಿನ ವಿಧಗಳು ಯಾವುವು?
- ಹಲ್ಲುಗಳ ಉಪಯೋಗವೇನು?
- ದಿನಕ್ಕೆ ಎಷ್ಟು ಬಾರಿ ಹಲ್ಲುಜ್ಜಬೇಕು?
ಆಲಿಸುವ ಸಮಯದ ಚಟುವಟಿಕೆ
- ಸಿಂಹರಾಜ ಎರಡು ದಿನಗಳಿಂದ ಗುಹೆಯಿಂದ ಹೊರಬರದಿರಲು ಕಾರಣವೇನು?
- ಸಿಂಹದ ಸಮಸ್ಯೆಗೆ ಆಲಿಸಿದ ಡಾ ಮಂಗ ಏನೆಂದು ಸಲಹೆ ನೀಡಿರಬಹುದು?
- ಮಂಗ ಸ್ವತಃ ತಾನೇ ಡಾಕ್ಟರ್ ಆಗಿದ್ದರೂ ಸಹ ಸಿಂಹಕ್ಕೆ ಚಿಕಿತ್ಸೆ ನೀಡದಿರಲು ಕಾರಣವೇನು?
- ಡಾ ಮಂಗನಿಗೆ ಅಯ್ಯೋ ತಪ್ಪು ಮಾಡಿದೆ ಎನ್ನುವ ಭಾವನೆ ಮೂಡಲು ಕಾರಣವೇನು?
ಆಲಿಸಿದ ನಂತರದ ಚಟುವಟಿಕೆಗಳು
- ಕಥೆಯನ್ನು ನಾಟಕಾಭಿನಯ ಮಾಡುವುದು.
- ಕಥೆಯ ಕಾಲ್ಪನಿಕ ಚಿತ್ರ ಬರೆಯಲು ತಿಳಿಸುವುದು.
- ವಿವಿಧ ರೀತಿಯ ಚಿಕಿತ್ಸೆಗಳನ್ನು ನೀಡುವ ವೈದ್ಯರ ಪರಿಚಯ.
- ಹಲ್ಲುಜ್ಜುವ ಮತ್ತು ಕೈ ತೊಳೆಯುವ ಪ್ರಾತ್ಯಕ್ಷಿತೆ ನೀಡುವುದು.
- ಹಲ್ಲಿನ ಚಿತ್ರ ಬರೆದು ಭಾಗಗಳನ್ನು ಗುರ್ತಿಸಲು ತಿಳಿಸುವುದು.
- ಹಲ್ಲಿನ ಉಪಯೋಗ ಮತ್ತು ಅದರ ಸಂರಕ್ಷಣೆಯ ಕುರಿತು ಗುಂಪಿನಲ್ಲಿ ಚರ್ಚಿಸುವುದು.
- ಹಲ್ಲಿನ ಸಂರಕ್ಷಣೆ ಮಾಡದಿದ್ದಾಗ ಆಗುವ ದುಷ್ಪರಿಣಾಮಗಳ ಕುರಿತು ಚರ್ಚಿಸುವುದು.
ಪಠ್ಯಪುಸ್ತಕಕ್ಕೆ ಸಂಪರ್ಕಿಸಬಹುದು
6 ನೇ ತರಗತಿ
English - Kings Ministers