ಮಳೆರಾಯ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಮೋಡವನ್ನ ಪ್ರಾರ್ಥಿಸಿದ ಕೂಡಲೇ ಅದು ಮಳೆ ಸುರಿಸುವುದರೊಂದಿಗೆ ಹರುಷ ಹರಿಸಿದ್ದು ಹೇಗೆ ಎಂಬುದನ್ನ ತಿಳಿಯಿರಿ.
ಉದ್ದೇಶಗಳು :
ಈ ಕಥೆಯ ಮೂಲಕ ಮಕ್ಕಳಿಗೆ ಋತುಗಳು ಹಾಗು ಆ ಋತುಗಳ ಗುಣಲಕ್ಷಣಗಳನ್ನು ತಿಳಿಸಿಕೊಡುವುದು.
ಕಥಾ ವಸ್ತು :ಕಥೆಗಾಗಿ ಚಿತ್ರ,ವಿಜ್ಞಾನ,ಭಾವನೆಗಳು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Maleraya.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
- ಬಂತಪ್ಪ ಬಂತು ಮಳೆಗಾಲ - ಹಾಡು
- ಹುಯ್ಯೋ ಹುಯ್ಯೋ ಮಳೆರಾಯ - ಹಾಡು
- ಮಳೆ ಚಪ್ಪಾಳೆ ಹೊಡೆಸುವುದು.
ಆಲಿಸುವ ಪೂರ್ವದ ಚಟುವಟಿಕೆ
ಗುಡ್ಡ ಕುಸಿತದ ದೃಶ್ಯ ಪ್ರದರ್ಶಿಸುವುದು.
ಗುಡ್ಡ ಕುಸಿತಕ್ಕೆ ಕಾರಣಗಳನ್ನು ಚರ್ಚಿಸುವುದು.
ಬರಗಾಲದ ಮತ್ತು ಮಳೆಗಾಲದಲ್ಲಿನ ಚಿತ್ರಗಳನ್ನು ಪ್ರದರ್ಶಿಸಿ ವ್ಯತ್ಯಾಸ ತಿಳಿಸಲು ಹೇಳುವುದು.
ಮನುಷ್ಯನ ಮೂಲಭೂತ ಅಗತ್ಯತೆಗಳನ್ನು ಚರ್ಚಿಸುವುದು.
ಆಲಿಸುವ ಸಮಯದ ಚಟುವಟಿಕೆ
ಬರಗಾಲ
ಬರಗಾಲ ಮತ್ತು ಹಸಿರು ಪರಿಸರದ ಚಿತ್ರಪಟವನ್ನು ಮರುಬಳಕೆ ಮಾಡುವುದು.
ಬರಗಾಲ ಏಕೆ ಬಂತು?
ಬರಗಾಲದಿಂದ ಆಗುವ ಪರಿಣಾಮಗಳೇನು?
ಬರಗಾಲದಿಂದ ಪರಿಸರದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ?
ಬರಗಾಲದಲ್ಲಿ ಎದುರಿಸಬೇಕಾದ ಸಮಸ್ಯೆಗಳೇನು?
ಕರಿಮೋಡ
ಕಾಲಚಕ್ರದ ಪರಿಚಯ
ಬಟ್ಟೆ ಒಣಗಿಸುವುದು
ನೀರು ಆವಿಯಾಗುವುದು
ಪ್ರಾಣಿ ಪಕ್ಷಿಗಳ ಧ್ವನಿ ಅನುಕರಣೆ
ಕೆರೆ
ನೀರಿನ ಮೂಲಗಳ ಪರಿಚಯ
ನೀರಿನ ಅವಶ್ಯಕತೆ ಕುರಿತು ಚರ್ಚೆ
ನೀರಿನಲ್ಲಿ ವಾಸಿಸುವ ಜಲಚವಾಸಿ ಪರಿಚಯ
ರೈತ
ಅನ್ನದಾತನ ಮಹತ್ವ ತಿಳಿಸುವುದು.
ವ್ಯವಸಾಯಕ್ಕೆ ಮಳೆಯ ಅವಶ್ಯಕತೆ.
ಪ್ರತೀ ಬೆಳೆಗೆ ಮಳೆಯ ಅವಶ್ಯಕತೆ.
ರಾಜು
ಮಕ್ಕಳಿಂದ ಕಾಗದದ ದೋಣಿ ತಯಾರಿಕೆ.
ನಿಮ್ಮೂರಲ್ಲಿ ಮಳೆ ಬಾರದಿದ್ದರೆ ಏನು ಮಾಡುತ್ತೀರಾ?
ಬರಗಾಲವಿದ್ದು ಮಳೆ ಬಂದಾಗ ನೀವು ಏನು ಮಾಡುತ್ತೀರ?
ಪ್ರಾಣಿ ಪಕ್ಷಿಗಳಿಗೆ ಮಳೆಯ ಅವಶ್ಯಕತೆ ಮತ್ತು ಅಗತ್ಯತೆ ಏನು?
ಆಲಿಸಿದ ನಂತರದ ಚಟುವಟಿಕೆಗಳು
ಕಥೆಯನ್ನು ನಾಟಕ ರೂಪದಲ್ಲಿ ಅಭಿನಯಿಸುವುದು.
ಬರಗಾಲದ ಬಗ್ಗೆ ಕಿರು ಪ್ರಬಂಧ ಬರೆಸುವುದು.
ಅತಿವೃಷ್ಟಿಯ ದುಷ್ಪರಿಣಾಮಗಳು.
ಬರಗಾಲ ಮತ್ತು ಮಳೆಗಾಲದ ನಡುವಿನ ವ್ಯತ್ಯಾಸವನ್ನು ಸ್ಪಷ್ಟೀಕರಿಸುವ ಚಿತ್ರವನ್ನು ರಚಿಸುವುದು.
ಪಠ್ಯಪುಸ್ತಕಕ್ಕೆ ಸಂಪರ್ಕಿಸಬಹುದು
4 ನೇ ತರಗತಿ
ಪರಿಸರ ಅಧ್ಯಯನ - ಮೋಡಣ್ಣನ ಪಯಣ
ಕನ್ನಡ - ಮಳೆ
6ನೇ ತರಗತಿ
English – Rainbow