ನಡೆದಾಡುವ ಪರ್ವತ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಒಂದು ದಿನ, ಒಂಟೆಯೊಂದು ಮರಳಿನ ಬಿರುಗಾಳಿಯಲ್ಲಿ ಹೂತು ಹೋಗುತ್ತದೆ. ಅದರ ಡುಬ್ಬ ಮಾತ್ರ ಹೊರಗೆ ಕಾಣುತ್ತಿರುತ್ತದೆ. ಎರಡು ಆಮೆಗಳು ಒಂಟೆಯ ಡುಬ್ಬವನ್ನು ಪರ್ವತ ಎಂದು ಭಾವಿಸಿ ಮೇಲೆ ಏರುತ್ತವೆ. ಆದರೆ ‘ಪರ್ವತ’ ನಡೆಯಲು ಆರಂಭಿಸಿದಾಗ ಆಮೆಗಳು ‘ನಡೆದಾಡುವ ಪರ್ವತ’ ಎನ್ನುತ್ತವೆ! ಹೀಗೆ ಎಲ್ಲರೂ ತನ್ನ ಡುಬ್ಬವನ್ನು ಪರ್ವತ ಎನ್ನುವುದು ಕೇಳಿ ಕೇಳಿ ಒಂಟೆ ನಿಜವಾದ ಪರ್ವತವನ್ನು ಹುಡುಕಲು ಹೊರಡುತ್ತದೆ. ಒಂಟೆ ಪರ್ವತವನ್ನು ನೋಡಿ ಏನು ಹೇಳಬಹುದು?
ಉದ್ದೇಶಗಳು :
ಮಕ್ಕಳಿಗೆ ಕಥೆಯ ಮೂಲಕ ಒಂಟೆಯ ಗುಣಲಕ್ಷಣಗಳು ಹಾಗೂ ಪರಿಸರದಲ್ಲಿ ಕಾಣಸಿಗುವ ನದಿ ಬೆಟ್ಟ ಗುಡ್ಡಗಳ ಜೊತೆಗೆ ಹೊಸ ಪದಗಳನ್ನ ಪರಿಚಯಿಸಬಹುದು.
ಕಥಾ ವಸ್ತು : ಪರಿಸರ ಮತ್ತು ವಾತಾವರಣ,ಹಾಸ್ಯ,ಪ್ರಾಣಿ ಮತ್ತು ಪಕ್ಷಿಗಳು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Nadedaduva%20Parvatha.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
- ಬೀಸಿತು ತಂಗಾಳಿ, ಹಕ್ಕಿ ಹಾಡಿತು ಧ್ವನಿಗೂಡಿ, ಹಾರುವ ಹಕ್ಕಿ ನಲಿಯಿತು ಬಾನಾಡಿ.
ಆಲಿಸುವ ಪೂರ್ವದ ಚಟುವಟಿಕೆ
- ಈ ಹಾಡಿನಲ್ಲಿ ಬಂದಿರುವ ಸ್ಥಳಗಳು ಯಾವುವು?
- ಪ್ರಾಣಿಗಳು ಯಾವುವು?
- ಪಕ್ಷಿಗಳು ಯಾವುವು?
- ಆನೆಯಂತೆ ಇರುವ ಇತರೆ ದೊಡ್ಡ ಪ್ರಾಣಿಗಳು ಯಾವುವು?
- ಒಂಟೆ ಎಲ್ಲಿ ವಾಸ ಮಾಡುತ್ತದೆ?
- ಮರುಭೂಮಿ ಎಂದರೇನು?
- ಹಾಗಾದರೇ ಮಕ್ಕಳೇ ಒಂಟೆಯ ಕಥೆ ಕೇಳೋಣವೇ?
ಆಲಿಸುವ ಸಮಯದ ಚಟುವಟಿಕೆ
(ಸೇರುತ್ತಿರಲಿಲ್ಲಾ Pause)
- ವಿವಿಧ ಪ್ರಾಣಿಗಳ ವೈವಿಧ್ಯತೆ ಕುರಿತು ಚರ್ಚಿಸುವುದು.
- ಡುಬ್ಬ ಎಂದರೇನು? ಅದರ ವಿಶೇಷತೆ ಏನು?
- ಡುಬ್ಬದಲ್ಲಿ ಏನಿರಬಹುದು?
- ಒಂಟೆಗೆ ಏಕೆ ಜಂಬ ಬಂದಿತು?
- ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಜಂಬ ಮಾಡುವರೇ? ಏಕೆ?
(ಡುಬ್ಬಗಳು ಮಾತ್ರ ಕಾಣುತ್ತಿದ್ದವು… Pause)
- ವೇಗವಾಗಿ ಬೀಸುವ ಗಾಳಿಯಿಂದ ಉಂಟಾಗುವ ಪರಿಣಾಮಗಳೇನು?
- ಒಂಟೆಗೆ ಯಾರೂ ಏಕೆ ಸಹಾಯ ಮಾಡಲಿಲ್ಲಾ?
- ಹಾಗಾದರೇ ನಾವು ಸ್ನೇಹಿತರ ಬಳಿ ಹೇಗಿರಬೇಕು?
- ಓಡೀ… ಓಡೀ… ಪರ್ವತ ಚಲಿಸುತ್ತಿದೆ Pause
- ಡುಬ್ಬಗಳು ಚಲಿಸುವುದನ್ನು ನೋಡಿ ಆಮೆಗಳು ಏನೆಂದುಕೊಂಡವು?
- ಪರ್ವತಗಳು ನಡೆಯುತ್ತವೆಯೇ?
- ‘ಓಯಾಸೀಸ್" ಎಂದರೇನು?
- ಕಪ್ಪೆಗಳು ಏನು ಮಾಡಿದವು?
- ಚಲನೆ ಇರುವ ಮತ್ತು ಇಲ್ಲದಿರುವ ವಸ್ತುಗಳು ಯಾವುವು?
END
- ಒಂಟೆ ಯಾವೆಲ್ಲಾ ಪ್ರದೇಶಗಳನ್ನು ದಾಟಿ ಬಂತು ಮತ್ತು ಅವುಗಳ ಗುಣಲಕ್ಷಣಗಳೇನು?
- ಹಿಮಾಲಯ ಎಂದರೇನು? ಅದರ ಗುಣಲಕ್ಷಣಗಳನ್ನು ಚರ್ಚಿಸಿ ಭಾರತದ ಭೂಪಟದಲ್ಲಿ ಸ್ಥಳ ಗುರ್ತಿಸುವುದು.
- ಭಾರತದಲ್ಲಿರುವ ಪರ್ವತಗಳನ್ನು ಹೆಸರಿಸುವುದು.
- ಇಲಿಗಳು ಏನು ಮಾಡಿದವು?
- ಒಂಟೆಗೆ ಪರ್ವತದ ಅರಿವು ಬಂದದ್ದು ಹೇಗೆ?
- ವಿವಿಧ ರೀತಿಯ ಭೂ ಸ್ವರೂಪಗಳನ್ನು ಪಟ್ಟಿ ಮಾಡುವುದು.
ಆಲಿಸಿದ ನಂತರದ ಚಟುವಟಿಕೆಗಳು
- ವಿವಿಧ ಪ್ರದೇಶಗಳನ್ನು ಬಿಂಬಿಸುವ ಚಿತ್ರಕಲೆ.
- ಅಭಿನಯ ಮಾಡಿಸುವುದು.
- ಲಾವಣಿ
- ಜಾನಪದ ಕಥೆಗಳು
ಪಠ್ಯಪುಸ್ತಕಕ್ಕೆ ಸಂಪರ್ಕಿಸಬಹುದು
6ನೇ ತರಗತಿ-ಕನ್ನಡ
- ನಮ್ಮ ಮಾತು ಕೇಳಿ
- ಮಂಗಳ ಗ್ರಹದಲ್ಲಿ ಪುಟ್ಟಿ
- ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು