ಶ್ಯೂ ನನ್ನ ಹೆಸರಲ್ಲ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಕಂದುಬಣ್ಣದ ನಾಯಿಮರಿ ಕಣ್ಣಿಗೆ ಬಿದ್ದರೆ ಸಾಕು ಎಲ್ಲ ಹೇಳುವ ಮಾತು “ಶ್ಯೂ!” ಪುಟ್ಟ ಹುಡುಗನೊಬ್ಬ ಅದಕ್ಕೆ ತನ್ನ ಊಟದಲ್ಲಿ ಪಾಲು ಕೊಡುತ್ತಿದ್ದ. ಒಂದು ದಿನ ಅದು ಅವನ ಮನೆವರೆಗೆ ಹಿಂಬಾಲಿಸಿಕೊಂಡು ಹೋಯಿತು. “ಶ್ಯೂ!” ಎನ್ನುವುದು ತನ್ನ ಹೆಸರಲ್ಲ ಎನ್ನುವುದು ನಾಯಿಮರಿಗೆ ಆಗ ಗೊತ್ತಾಯಿತು!

ಉದ್ದೇಶಗಳು :

ಪ್ರಸ್ತುತ ಕಥೆಯ ಮೂಲಕ ಮಕ್ಕಳಿಗೆ ಸಾಕು ಪ್ರಾಣಿಗಳು ಯಾವುವು, ಮನುಷ್ಯನೊಂದಿಗೆ ಅವುಗಳ ವರ್ತನೆ ಹೇಗಿರುತ್ತದೆ ಹಾಗೂ ಪ್ರಾಣಿಗಳು ಆಹಾರಕ್ಕಾಗಿ ಪಡುವ ಅವಸ್ಥೆಗಳ ಕುರಿತು ಚರ್ಚಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :

ಕಥಾ ವಸ್ತು : ಪ್ರೀತಿ, ಕರುಣೆ ಮತ್ತು ಕಾಳಜಿ, ಪ್ರಾಣಿ ಮತ್ತು ಪಕ್ಷಿಗಳು

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Shoo%20Nanna%20Hesaralla.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು
  1. ಪ್ರತಿನಿತ್ಯ ನಿಮಗೆ ಕಾಣಸಿಗುವ ಪ್ರಾಣಿಗಳು ಯಾವುವು ತಿಳಿಸಿ.
  2. ಅದರಲ್ಲಿ ಸಾಕು ಪ್ರಾಣಿಗಳಾವುವು ಹಾಗೂ ಅವು ತಮ್ಮ ಆಹಾರಕ್ಕಾಗಿ ಯಾರನ್ನು ಅವಲಂಬಿಸಿರುತ್ತವೆ?
  3. ಒಂದು ವೇಳೆ ಮಾನವ ತಾನು ಸಾಕಿದ ಪ್ರಾಣಿಯನ್ನು ಇದ್ದಕ್ಕಿದಂತೆ ಬೀದಿಗೆ ಬಿಟ್ಟರೆ ಅದರ ಜೀವನ ಶೈಲಿ ಹೇಗಿರುತ್ತದೆ?
  4. ನೀವು ಕಂಡಿರುವ ಹಾಗೆ ಸಾಕು ನಾಯಿಯ ಗುಣಲಕ್ಷಣಗಳೇನು?
  5. ನೀವು ಕಂಡಿರುವ ಹಾಗೆ ಜನರು ಬೀದಿಯಲ್ಲಿರುವ ನಾಯಿಯನ್ನು ಹೇಗೆ ನಡೆಸಿಕೊಳ್ಳುತ್ತಾರೆ.
  6. ಪ್ರಾಣಿಯನ್ನು ಸಾಕಿ ಅದು ಮಾನವನನ್ನು ಅವಲಂಬಿಸಿದ ನಂತರ ಬೀದಿಗೆ ಬಿಟ್ಟುಬಿಡುವ ಕುರಿತು ನಿಮ್ಮ ಅಭಿಪ್ರಾಯವೇನು?
  7. ಮಾನವ ಸ್ನೇಹಿ ಪ್ರಾಣಿಗಳಿಗೆ ಯಾವುವು ಹಾಗೂ ಮಾನವ ಅವುಗಳಿಗೆ ಹೇಗೆ ನೆರವಾಗಲು ನಿಮ್ಮ ಸಲಹೆಗಳೇನು?