ನರಿಯ ಸೋಲು - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೯:೪೪, ೪ ಅಕ್ಟೋಬರ್ ೨೦೨೪ ರಂತೆ Punith (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಒಂದು ಬುದ್ಧಿವಂತ ಮೊಲ ತನ್ನ ಸ್ನೇಹಿತ ಆಮೆಗೆ ಸಹಾಯ ಮಾಡುತ್ತದೆ. ಅವೆರಡೂ ನರಿಯನ್ನು ಹೇಗೆ ಮೋಸಗೊಳಿಸಿದವು ಎಂಬುದನ್ನು ತಿಳಿಯಿರಿ.

ಉದ್ದೇಶಗಳು :

ಆಹಾರಕ್ಕಾಗಿ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನ ಅವಲಂಬಿಸಿರುವ ಆಹಾರ ಸರಪಳಿಯ ಕುರಿತು ಮಕ್ಕಳಿಗೆ ಈ ಕಥೆಯ ಮೂಲಕ ತಿಳಿಸಿಕೊಡಬಹುದು. ಅಲ್ಲದೇ, ಕಾಡಿನಲ್ಲಿ ಕಾಡುಪ್ರಾಣಿಗಳ ಜೀವನ ಶೈಲಿ ಹೇಗಿರುತ್ತದೆ ಎಂಬುದನ್ನ ಮನವರಿಕೆ ಮಾಡಿ ಕೊಡಬಹುದು. ಬುದ್ದಿವಂತಿಕೆ ಮತ್ತು ಸಂವಹನ ಕೌಶಲ್ಯವು ಸಂಕಷ್ಟದ ಸಂಧರ್ಭದಲ್ಲಿ ಹೇಗೆ ಬಳಕೆಗೆ ಬರುತ್ತದೆ ಎಂಬುದರ ಕುರಿತು ಚರ್ಚಿಸಬಹುದು. ಕಷ್ಟಕಾಲದಲ್ಲಿ ಸ್ನೇಹಿತರು ಪರಸ್ಪರ ನೆರವಾಗಬೇಕೆಂಬ ನೀತಿ ಮಕ್ಕಳಿಗೆ ಮನದಟ್ಟಾಗುವಂತೆ ಮಾಡುಬಹುದು.

ಕಥಾ ವಸ್ತು :ಸ್ನೇಹ,ಬುದ್ಧಿವಂತಿಕೆ ಮತ್ತು ಚತುರತೆ,ಜೀವನ ಕೌಶಲ್ಯ

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Nariya%20Solu.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಈ ಕಥೆಯಲ್ಲಿ ನಿಮಗೆ ಇಷ್ಟವಾದ ಪಾತ್ರ ಯಾವುದು ಮತ್ತು ಏಕೆ?" ಎಂದು ಕೇಳಿರಿ.
  2. ನರಿಯ ಸಂಕಷ್ಟದಲ್ಲಿ ಆಮೆ ನೆರವಾಗುವಂತೆ ಕಥೆಯನ್ನು ನಿಮ್ಮದೇ ಆದ ಕಲ್ಪನೆಯಲ್ಲಿ ಮುಂದುವರೆಸಿ.
  3. ಸಂಕಷ್ಟದ ಸನ್ನಿವೇಶದಲ್ಲಿ ಸ್ನೇಹಿತರು ನೆರವಾಗುವುದಕ್ಕೆ ಸಂಬಂಧಿಸಿದಂತೆ ಮಕ್ಕಳ ಅನುಭವವನ್ನು ಸಂಗ್ರಹಿಸುವುದು.
  4. ಈ ಕಥೆಯಲ್ಲಿ ಕಂಡುಬಂದ ನೀತಿಯನ್ನು ನಿಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುವಿರಿ" ಎಂದು ಮಕ್ಕಳಿಗೆ ಕೇಳಬಹುದು

ಸಂಪೂರ್ಣ ದೈಹಿಕ ಚಟುವಟಿಕೆಗಳು

  • ಪುಣ್ಯಕೋಣಿ ಹಾಡನ್ನು ಹೇಳಿ ಕೊಡುವುದು

ಆಲಿಸಿದ ನಂತರದ ಚಟುವಟಿಕೆಗಳು

(ಮೊದಲು ಕಥೆಯನ್ನು ಪೂರ್ಣವಾಗಿ ಕೇಳೆಸಿಕೊಳ್ಳಿ)

  • ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಯಾವುವು?
  • ನೀರಿನಲ್ಲಿ ವಾಸಿಸುವ ಜೀವಿಗಳು ಯಾವುವು?
  • ನೀರು ಮತ್ತು ನೆಲದ ಮೇಲೆ ವಾಸಿಸುವ ಪ್ರಾಣಿಗಳು ಯಾವುವು?
  • ಅತ್ಯಂತ ವೇಗವಾಗಿ / ನಿಧಾನವಾಗಿ ಓಡುವ ಪ್ರಾಣಿಗಳು ಯಾವುವು?
  • ಮೊಲದ ಜಾಗದಲ್ಲಿ ನೀವಿದ್ದಿದ್ದರೆ ಏನು ಉಪಾಯ ಮಾಡುತ್ತಿದ್ದಿರಿ ?
  • ಚಿಪ್ಪನ್ನು ಹೊಂದಿರುವ ಇತರೆ ಜೀವಿಗಳನ್ನು ಪಟ್ಟಿ ಮಾಡಿ.
  • ಸಾಕು ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳನ್ನು ಪಟ್ಟಿಮಾಡಿ
  • ಕಥೆಯ ಅಂಶಗಳನ್ನು ಕ್ರಮವಾಗಿ ಪಟ್ಟಿಮಾಡಿ
  • ನಿನ್ನ ಸ್ನೇಹಿತನಿಗೆ ಮಾಡಿರುವ ಯಾವುದಾದರೂ ಒಂದು ಸಹಾಯವನ್ನು ತಿಳಿಸಿ.
  • ಮಾಂಸಹಾರಿ. ಸಸ್ಯಹಾರಿ ಮತ್ತು ಮಿಶ್ರಹಾರಿ ಪ್ರಾಣಿಗಳನ್ನು ಪಟ್ಟಿಮಾಡಿ.