ಸಿಂಹದ ಅಂಬಾರಿ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಕಾಡಿನ ರಾಜನಾದ ಸಿಂಹ ನಾಡಿನ ರಾಜ ಅರಸನನ್ನು ಅನುಕರಣೆ ಮಾಡಲು ಹೊರಟ್ಟಿದ್ದಕ್ಕೆ ಏನಾಯ್ತು ಗೊತ್ತಾ? ಒಳ್ಳೆ ಕುಲುಕಾಟದ ದರ್ಬಾರ್! ಈ ತಮಾಷೆಯ ಕಥೆ ಕೇಳಿದರೆ ಸಮಾಚಾರವೇನೆಂದು ತಿಳಿಯುತ್ತದೆ.
ಉದ್ದೇಶಗಳು :
ಈ ಕಥೆಯಲ್ಲಿ ಬರುವ ಹೊಸ ಪದಗಳನ್ನ ಮಕ್ಕಳಿಗೆ ಪರಿಚಯಿಸುವುದು. ಇನ್ನೊಬ್ಬರನ್ನ ಅನವಶ್ಯಕವಾಗಿ ಅನುಸರಿಸುದಕ್ಕಿಂತ ನಮ್ಮ ಸ್ವಂತ ವ್ಯಕ್ತಿತ್ವ ನಮಗಿರಬೇಕು ಎಂಬ ನೀತಿಯನ್ನ ಮಕ್ಕಳಿಗೆ ಅರ್ಥೈಸುವುದು.
ಕಥಾ ವಸ್ತು : ಹಾಸ್ಯ,ಬುದ್ಧಿವಂತಿಕೆ ಮತ್ತು ಚತುರತೆ,ಸ್ವಾರ್ಥ
ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ೧,೨,೩,೪,೫,
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Simhada%20Ambari_0.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆಗಳು
ಅಭಿನಯದ ಮೂಲಕ ಪ್ರಾಣಿಗಳನ್ನು ಗುರುತಿಸುವುದು.
ಆಲಿಸುವಿಕೆಯ ಪೂರ್ವ ಚಟುವಟಿಕೆಗಳು
ಚಿತ್ರವನ್ನು ತೋರಿಸಿ ಅಂಬಾರಿ ಗುರ್ತಿಸಲು ಹೇಳುವುದು.
ಅಂಬಾರಿಯನ್ನು ಎಲ್ಲಿ ನೋಡಿದ್ದೀರಾ
ಅಂಬಾರಿಯನ್ನು ಯರು ಹೊರುತ್ತಾರೆ?
ಅಂಬಾರಿ ಮೇಲೆ ಯಾರು ಕುಳಿತುಕೊಳ್ಳುತ್ತಾರೆ?
ಹಾಗಾದರೆ ಅಂಬಾರಿಯನ್ನು ಯಾರು ಮಾಡಿದ್ದಾರೆ?
ನಿಮ್ಮ ಸುತ್ತಮುತ್ತಲೂ ಕಂಡುಬರುವ ವಿವಿಧ ವೃತ್ತಿಗಳನ್ನು ಪಟ್ಟಿಮಾಡಿ.
ಆಲಿಸುವ ಸಂಧರ್ಭದ ಚಟುವಟಿಕೆಗಳು
ಆನೆ ಸಿಂಹಕ್ಕೆ ಬೇರೆಯವರನ್ನು ಅನುಕರಿಸಬಾರದೆಂದು ಏಕೆ ಹೇಳಿತು?
ಬೇರೆಯವರನ್ನು ಅನುಸರಿಸುವುದು ಸರಿಯೇ ತಪ್ಪೇ?
ಆಲಿಸಿದ ನಂತರದ ಚಟುವಟಿಕೆಗಳು
ಅಂಬಾರಿ ಚಿತ್ರ
ಮಾದರಿ ತಯಾರಿಕೆ
ಪಾತ್ರಾಭಿನಯ
ಅಂಬಾರಿ ಸವಾರಿ ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಂಡು ಬರೆಯಿರಿ.