ಮರೆಗುಳಿ ಅಜ್ಜ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಅಜ್ಜ ಹಾಗೇ ಸುಮ್ಮನೆ ಸಂಜೆ ಅಡ್ಡಾಡಲು ಸಿದ್ಧವಾಗುತ್ತಿದ್ದರು. ಆದರೆ, ಕೈ ಚೀಲದಲ್ಲಿ ಏನೆಲ್ಲಾ ಎಂದು ನೆನಪೇ ಇರುತ್ತಿರಲಿಲ್ಲ. ಸದ್ಯ, ಅವರಿಗೆ ಸಹಾಯ ಮಾಡಲು ಸುಜ್ಜು ಇದ್ದಾನಲ್ಲ. ಈ ಪುಸ್ತಕ ವಿರುದ್ಧಾರ್ಥ ಕಲ್ಪನೆಗಳ ಬಗ್ಗೆ ತಿಳಿಸುತ್ತದೆ
ಉದ್ದೇಶಗಳು :
ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಹಾಗೂ ವಾಕ್ಯ ರಚನೆಯ ಬಗ್ಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಕಥಾ ವಸ್ತು : ಶಬ್ದಕೋಶ , ದಿನಚರಿ ಮತ್ತು ದೈನಂದಿನ ಅಭ್ಯಾಸಗಳು ,ಕುಟುಂಬ
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Mareguli%20Ajja%20.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆಗಳು
ಅಭಿನಯ ಗೀತೆ
ತಣ್ಣಿರಂದ್ರೆ ತಣ್ಣಗಾಗುತೈತೀ,
ಬಿಸಿನೀರೆಂದ್ರೆ ಬೆಚ್ಚಗಾಗುತೈ,
ಓದ್ತಾ ಓದ್ತಾ ಶ್ಯಾಣೇರಾಗುತ್ತೀರಿ
ಓದದೇ ಇದ್ರೆ ದಡ್ಡರಾಗುತ್ತಿರಿ.
ಆಲಿಸುವಿಕೆಯ ಪೂರ್ವ ಚಟುವಟಿಕೆಗಳು
- ನಿಮ್ಮ ಮನೆಯಲ್ಲಿ ಎಷ್ಟು ಮಂದಿ ಇದ್ದೀರಾ?
- ಯಾರಲ್ಲಾ ಇದ್ದೀರಾ?
- ನಿಮ್ಮ ಮನೆಯಲ್ಲಿ ತುಂಬಾ ದೊಡ್ಡವರು ಯಾರು?
- ನಿಮ್ಮ ಅಜ್ಜನ ಸ್ವಭಾವದ ಕುರಿತು ಹೇಳೀ?
ಆಲಿಸುವ ಸಂಧರ್ಭದ ಚಟುವಟಿಕೆಗಳು
- ವಾಯು ವಿವಾರಕ್ಕೆ ಹೋಗುತ್ತಿದ್ದ ಅಜ್ಜ ಏಕೆ ಹಿಂತಿರುಗಿ ಬಂದರು?
- ಅಜ್ಜ ಎಲ್ಲೆಲ್ಲಿ ಏನೇನು ಹುಡುಕಿದರು?
- ಅಜ್ಜ ಎಲ್ಲಿ ಮರೆಯಾದರೂ?
- ಅಜ್ಜನ ಕಣ್ಣಿನಿಂದ ಮರೆಯಾದದ್ದು ಏನು?
- ಅಜ್ಜ ಏನನ್ನು ಬೆನ್ನಿಗೆ ಹಾಕಿದ್ದರು?
ಆಲಿಸಿದ ನಂತರದ ಚಟುವಟಿಕೆಗಳು
- ಕಥೆಯನ್ನ ಸರಿಯಾದ ಕ್ರಮದಲ್ಲಿ ಜೋಡಿಸುವುದು
- ಕಥೆಯನ್ನು ಚಿತ್ರ ರೂಪದಲ್ಲಿ ಕ್ರಮಬದ್ದವಾಗಿ ಬರೆಯುವುದು
- ಕಥೆಯನ್ನು ಒಂದೊಮದು ವ್ಯಾಖ್ಯಾನವಾಗಿ ವಿಂಗಡಿಸಿ ಮಕ್ಕಳಿಂದ ಓದಿಸುವುದು